ಜಗತ್ತಿನಲ್ಲಿ ಮಾರುಕಟ್ಟೆ ಸ್ಥಿತಿಯು ಬದಲಾವಣೆಯಾಗುತ್ತಾ ಸಾಗುತ್ತಿದೆ. ಬಿಲಿಯನೇರ್‌ಗಳ ಸಂಖ್ಯೆಯೂ ಕೂಡಾ ಅಧಿಕವಾಗುತ್ತಾ ಸಾಗುತ್ತಿದೆ. ಭಾರತದಲ್ಲಿಯೂ ಯುವಕರು ಬಿಲಿಯನೇರ್ ಆಗುತ್ತಿದ್ದಾರೆ. ನವೆಂಬರ್ 2023 ರ ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ ಭಾರತದಲ್ಲಿನ ಟಾಪ್ 10 ಕಿರಿಯ ಬಿಲಿಯನೇರ್‌ಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ.
ಕಿರಿಯ ಬಿಲಿಯನೇರ್‌ಗಳ ನಿವ್ವಳ ಮೌಲ್ಯ, ವಯಸ್ಸು ಮತ್ತು ಸಂಪತ್ತಿನ ಮೂಲದ ವಿವರವನ್ನು ನಾವಿಲ್ಲಿ ನೀಡಿದ್ದೇವೆ. ಭಾರತದ ವ್ಯಾಪಾರ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸುತ್ತಿರುವ ಈ ಟಾಪ್ 10 ಕಿರಿಯ ಬಿಲಿಯನೇರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...

10. ರಾಧಾ ವೆಂಬು (ನಿವ್ವಳ ಆದಾಯ 2.1 ಬಿಲಿಯನ್ ಡಾಲರ್)
ಟಾಪ್ 10 ಕಿರಿಯ ವಯಸ್ಸಿನ ಬಿಲಿಯನೇರ್‌ಗಳ ಪಟ್ಟಿಯಲ್ಲಿ ರುವ ಏಕೈಕ ಮಹಿಳೆ ಮತ್ತು ಜೋಹೊ ಕಾರ್ಪೊರೇಶನ್‌ನ ಸಹ-ಸಂಸ್ಥಾಪಕಿ ರಾಧಾ ವೆಂಬು ಆಗಿದ್ದಾರೆ. ಅವರ ವಯಸ್ಸು 50 ವರ್ಷವಾಗಿದ್ದು ಆದಾಯ 2.1 ಬಿಲಿಯನ್ ಡಾಲರ್ ಆಗಿದೆ. ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.
9. ರಂಜನ್ ಪೈ - (ನಿವ್ವಳ ಆದಾಯ 2.8 ಬಿಲಿಯನ್ ಡಾಲರ್)
ಮಣಿಪಾಲ್ ಗ್ರೂಪ್‌ನ ಅಧ್ಯಕ್ಷರಾದ ರಂಜನ್ ಪೈ ಅವರು 50 ನೇ ವಯಸ್ಸಿನಲ್ಲಿ 2.8 ಬಿಲಿಯನ್ ಡಾಲರ್‌ನೊಂದಿಗೆ ಕಿರಿಯ ವಯಸ್ಸಿನ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಅವರ ಸಂಘಟಿತ ಸಂಸ್ಥೆಯು ಮಣಿಪಾಲ್ ಆಸ್ಪತ್ರೆಗಳಲ್ಲಿ ಶೇಕಡ 59 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ.
8. ಕಾರ್ತಿಕ್ ಶರ್ಮಾ - (ನಿವ್ವಳ ಆದಾಯ 2.9 ಬಿಲಿಯನ್ ಡಾಲರ್)
ಕಾರ್ತಿಕ್ ಶರ್ಮಾ, ಭಾರತೀಯ ವಲಸೆಗಾರ ಮತ್ತು ಹೆಡ್ಜ್ ಫಂಡ್ ಮ್ಯಾನೇಜರ್ ಆಗಿದ್ದಾರೆ. 48 ನೇ ವಯಸ್ಸಿನ ಅವರ ನಿವ್ವಳ ಆದಾಯ 2.9 ಬಿಲಿಯನ್ ಡಾಲರ್ ಆಗಿದ್ದು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಅವರು ಎಸ್‌ಆರ್‌ಎಸ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್‌ನ ಸಂಸ್ಥಾಪಕರಾಗಿದ್ದಾರೆ.
7. ರವಿ ಮೋದಿ - (ನಿವ್ವಳ ಆದಾಯ 3.3 ಬಿಲಿಯನ್ ಡಾಲರ್)
ಹೆಸರಾಂತ ಎಥ್ನಿಕ್ ವೇರ್ ಬ್ರಾಂಡ್ ಆದ ಮಾನ್ಯಾವರ್‌ನ ಹಿಂದಿರುವ ಉದ್ಯಮಿ ರವಿ ಮೋದಿ 7ನೇ ಸ್ಥಾನದಲ್ಲಿದ್ದಾರೆ. 46 ನೇ ವಯಸ್ಸಿನ ಈ ವ್ಯಕ್ತಿ 3.3 ಬಿಲಿಯನ್ ಡಾಲರ್ ಅನ್ನು ಹೊಂದಿದ್ದಾರೆ. ಮೋದಿ ಅವರು ಭಾರತದಾದ್ಯಂತ 662 ಮಳಿಗೆಗಳು ಮತ್ತು 16 ಅಂತರರಾಷ್ಟ್ರೀಯ ಮಳಿಗೆಗಳನ್ನು ಹೊಂದಿರುವ ರಿಟೇಲ್ ಜಾಲವನ್ನು ಹೊಂದಿದ್ದಾರೆ.
6. ಶಂಶೀರ್ ವಯಾಲಿಲ್ - (ನಿವ್ವಳ ಆದಾಯ 3.6 ಬಿಲಿಯನ್ ಡಾಲರ್)
ಬುರ್ಜೀಲ್ ಹೋಲ್ಡಿಂಗ್ಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶಂಶೀರ್ ವಯಾಲಿಲ್ 3.6 ಬಿಲಿಯನ್ ಡಾಲರ್ ಹೊಂದಿದ್ದು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. 46 ನೇ ವಯಸ್ಸಿನ ಶಂಶೀರ್ ವಯಾಲಿಲ್ ಹೆಲ್ತ್‌ಕೇರ್ ಉದ್ಯಮಿಯಾಗಿದ್ದಾರೆ. ಬುರ್ಜೀಲ್ ಹೋಲ್ಡಿಂಗ್ಸ್ ಅಕ್ಟೋಬರ್ 2022 ರಲ್ಲಿ 16 ಆಸ್ಪತ್ರೆಗಳು ಮತ್ತು 24 ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಿದೆ.
5. ವಿಜಯ್ ಶೇಖರ್ ಶರ್ಮಾ - (ನಿವ್ವಳ ಆದಾಯ 1.00 ಬಿಲಿಯನ್ ಡಾಲರ್)
ಪೇಟಿಎಂನ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು 45 ನೇ ವಯಸ್ಸಿನವರಾಗಿದ್ದು ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಭಾರತದ ಫಿನ್‌ಟೆಕ್ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಹೆಸರುವಾಸಿಯಾದವರು ಶರ್ಮಾ. ಆಗಸ್ಟ್ 2018 ರಲ್ಲಿ ವಾರೆನ್ ಬಫೆಟ್ ಅವರ ಬರ್ಕ್‌ಶೈರ್ ಹಾಥ್‌ವೇಯಿಂದ 300 ಮಿಲಿಯನ್ ಡಾಲರ್ ಹೂಡಿಕೆಯನ್ನು ಪಡೆದಿದ್ದಾರೆ.
4. ನಿತಿನ್ ಕಾಮತ್ - (ನಿವ್ವಳ ಆದಾಯ 2.7 ಬಿಲಿಯನ್ ಡಾಲರ್)
ಜೆರೋಧಾದ ಸಹ-ಸಂಸ್ಥಾಪಕ ಮತ್ತು ನಿಖಿಲ್ ಕಾಮತ್ ಅವರ ಸಹೋದರ ನಿತಿನ್ ಕಾಮತ್ ಅವರು 44 ನೇ ವಯಸ್ಸಿನಲ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2.7 ಬಿಲಿಯನ್ ಡಾಲರ್ ನಿವ್ವಳ ಆದಾಯ ಹೊಂದಿದ್ದಾರೆ. ಜೆರೋಧಾ 10 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಮೂಲಕ ಭಾರತದ ಅತಿದೊಡ್ಡ ಬ್ರೋಕರೇಜ್ ಸಂಸ್ಥೆಗಳಲ್ಲಿ ಒಂದಾಗಿದೆ.
3. ಸಚಿನ್ ಬನ್ಸಾಲ್ - (ನಿವ್ವಳ ಆದಾಯ 1.3 ಬಿಲಿಯನ್ ಡಾಲರ್)
ಸಚಿನ್ ಬನ್ಸಾಲ್ 42 ನೇ ವಯಸ್ಸಿನವರಾಗಿದ್ದು 1.3 ಬಿಲಿಯನ್ ಡಾಲರ್ ಹೊಂದಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 6,000 ಡಾಲರ್ ಸಾಧಾರಣ ಹೂಡಿಕೆಯೊಂದಿಗೆ ತಮ್ಮ ಉದ್ಯಮವನ್ನು ಆರಂಭ ಮಾಡಿದ್ದಾರೆ. ಬನ್ಸಾಲ್ ಜೋಡಿಯು ಫ್ಲಿಪ್‌ಕಾರ್ಟ್ ಅನ್ನು ಆನ್‌ಲೈನ್ ಮಾರುಕಟ್ಟೆಯನ್ನಾಗಿ ಮಾಡಿದೆ.
2. ಬಿನ್ನಿ ಬನ್ಸಾಲ್ - (ನಿವ್ವಳ ಆದಾಯ 1.4 ಬಿಲಿಯನ್ ಡಾಲರ್)
ಫ್ಲಿಪ್‌ಕಾರ್ಟ್‌ನ ಸಹ-ಸಂಸ್ಥಾಪಕರಾದ ಬಿನ್ನಿ ಬನ್ಸಾಲ್ ಅವರು 40 ನೇ ವಯಸ್ಸಿನಲ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 1.4 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿದ್ದಾರೆ. ಫ್ಲಿಪ್‌ಕಾರ್ಟ್, ಆರಂಭದಲ್ಲಿ ಆನ್‌ಲೈನ್ ಪುಸ್ತಕದಂಗಡಿ, ಸಮಗ್ರ ಇ-ಕಾಮರ್ಸ್ ವೇದಿಕೆಯಾಗಿತ್ತು. 2018 ರಲ್ಲಿ, ವಾಲ್‌ಮಾರ್ಟ್ ಗಣನೀಯ ಶೇಕಡ 77 ರಷ್ಟು ಅಂದರೆ 16 ಬಿಲಿಯನ್ ಡಾಲರ್ ಪಾಲನ್ನು ಸ್ವಾಧೀನಪಡಿಸಿಕೊಂಡರು.
1. ನಿಖಿಲ್ ಕಾಮತ್ - (ನಿವ್ವಳ ಆದಾಯ 1.1 ಬಿಲಿಯನ್ ಡಾಲರ್)
ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಝೆರೋಧಾ ಸಹ-ಸಂಸ್ಥಾಪಕ 37 ವರ್ಷದ ನಿಖಿಲ್ ಕಾಮತ್ ಇದ್ದಾರೆ. ಬೆಂಗಳೂರು ಮೂಲದ ಈ ಡಿಸ್ಕೌಂಟ್ ಬ್ರೋಕರೇಜ್ ಸಂಸ್ಥೆಯನ್ನು 2010 ರಲ್ಲಿ ಅವರ ಸಹೋದರ ನಿತಿನ್ ಕಾಮತ್ ಜೊತೆಗೆ ಸ್ಥಾಪಿಸಲಾಗಿದೆ. ಝೆರೋಧಾ ಅವರ ಮೌಲ್ಯವು 2021 ರಲ್ಲಿ 1 ಬಿಲಿಯನ್ ಡಾಲರ್ ದಾಟಿದೆ. ಅತೀ ಕಿರಿಯ ಬಿಲಿಯನೇರ್ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications