ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಆಗುತ್ತಿದ್ದಂತೆ ಜನರಿಗೆ ಕೇಂದ್ರ ಸರ್ಕಾರವು ಕೊಂಚ ರಿಲೀಫ್ ನೀಡಿದೆ. ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುವುದನ್ನು ಕೇಂದ್ರ ಸರ್ಕಾರ ಮತ್ತೆ ಆರಂಭ ಮಾಡಿದೆ. ಸರ್ಕಾರವು ಉಜ್ವಲ ಯೋಜನೆ ಆರಂಭ ಮಾಡಿದ ಬಳಿಕ ಸಬ್ಸಿಡಿಯನ್ನು ಆರಂಭ ಮಾಡಿದೆ.
ವಾರ್ಷಿಕವಾಗಿ ಸರ್ಕಾರವು 12 ಗ್ಯಾಸ್‌ಗೆ ಸಬ್ಸಿಡಿಯನ್ನು ನೀಡುತ್ತದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿಯಂತೆ ವಾರ್ಷಿಕವಾಗಿ 12 ಸಿಲಿಂಡರ್‌ಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಇದು ನೇರವಾಗಿ ಫಲಾನುಭವಿಗಳ ಖಾತೆಗೆ ಬೀಳಲಿದೆ. ನೀವು ಸರ್ಕಾರದ ಈ ಗ್ಯಾಸ್ ಸಬ್ಸಿಡಿ ಪಲಾನುಭವಿಗಳಾಗಬೇಕಾದರೆ, ನಿಮ್ಮಲ್ಲಿ ಆಧಾರ್ ಹಾಗೂ ಎಲ್‌ಪಿಜಿ ಸೌಲಭ್ಯ ಇರುವುದು ಮುಖ್ಯವಾಗಿದೆ.
ಇನ್ನು ಹಲವಾರು ಮಂದಿ ತಮ್ಮ ಖಾತೆಗೆ ಸಬ್ಸಿಡಿ ಹಣ ಬಂದಿದೆಯೇ ಇಲ್ಲವೇ ಎಂಬ ಮಾಹಿತಿಯೇ ಲಭ್ಯವಾಗುವುದಿಲ್ಲ ಎಂಬ ಆರೋಪ ಮಾಡುತ್ತಾರೆ. ನಿಮಗೂ ಕೂಡಾ ಇ ಸಮಸ್ಯೆ ಇದೆಯೇ?, ಹಾಗಿದ್ದರೆ ಆನ್‌ಲೈನ್ ಮೂಲಕ ಈ ಹಂತಗಳನ್ನು ಪಾಲನೆ ಮಾಡಿ ಎಲ್‌ಪಿಜಿ ಸಬ್ಸಿಡಿ ಲಭ್ಯವಾಗಿದೆಯೇ ಎಂದು ತಿಳಿದುಕೊಳ್ಳಬಹುದು. ಎಲ್‌ಪಿಜಿ ಸಬ್ಸಿಡಿಯನ್ನು ನೀವು ಪಡೆಯುತ್ತಿದ್ದೀರಾ ಎಂದು ಚೆಕ್ ಮಾಡಬೇಕಾದರೆ ಅದಕ್ಕೂ ಮುನ್ನ ನೀವು ರಿಜಿಸ್ಟಾರ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ಆನ್‌ಲೈನ್ ಪ್ರಕ್ರಿಯೆಯನ್ನು ನಾವು ಇಲ್ಲಿ ತಿಳಿಯೋಣ ಮುಂದೆ ಓದಿ...

ರಿಜಿಸ್ಟಾರ್ ಮಾಡುವುದು ಹೇಗೆ?
1. http://mylpg.in/ ಗೆ ಭೇಟಿ ನೀಡಿ
2. Join DBT ಗೆ ಕ್ಲಿಕ್ ಮಾಡಿ, ನಿಮ್ಮ ಎಲ್‌ಪಿಜಿ ಪೂರೈಕೆದಾರರನ್ನು ಆಯ್ಕೆ ಮಾಡಿಕೊಳ್ಳಿ
3. ನಿಮ್ಮಲ್ಲಿ ಆಧಾರ್ ಸಂಖ್ಯೆ ಇಲ್ಲವಾದರೆ DBTL ಆಯ್ಕೆ ಮೇಲೆ ಕ್ಲಿಕ್ ಮಾಡಿ
4. ಎಲ್‌ಪಿಜಿ ಪೂರೈಕೆದಾರರ ಅಧಿಕೃತ ವೆಬ್‌ಸೈಟ್ ತೆರೆಯಲಿದೆ
5. ಅಲ್ಲಿ complaint box ಇರಲಿದೆ, ಇಲ್ಲಿ ನೀವು ಸಬ್ಸಿಡಿ ಸ್ಟೇಟಸ್ ಚೆಕ್ ಮಾಡಬಹುದು
6. ಇದಾದ ಬಳಿಕ ನೀವು PAHAL ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
7. ಅದಾದ ಬಳಿಕ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಉಲ್ಲೇಖ ಮಾಡಬೇಕು
8. 17 ಅಂಕಿಗಳ ಎಲ್‌ಪಿಜಿ ಐಡಿಯನ್ನು ಸ್ಪೇಸ್ ನೀಡಿ ಹಾಕಿ
9. ನಿಮ್ಮ ಮೊಬೈಲ್ ಸಂಖ್ಯೆ ಒಟಿಪಿ ಬರಲಿದ್ದು ಅದನ್ನು ನಮೂದಿಸಿ
10. ಈಗ ನೀವು ರಿಜಿಸ್ಟ್ರೇಷನ್ ಸ್ಟೇಟಸ್ ಅನ್ನು ನೋಡಬಹುದು
ಸಬ್ಸಿಡಿಯನ್ನು ನೋಡುವುದು ಹೇಗೆ?
1. ರಿಜಿಸ್ಟೇಷನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಲಿಂಕ್ ಬರಲಿದೆ
2. ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಕು
3. ನೀವು ಆ ಲಿಂಕ್ ಕ್ಲಿಕ್ ಮಾಡಿದರೆ ಮಾತ್ರ ನಿಮ್ಮ ಅಕೌಂಟ್ ಆಕ್ಟಿವೇಟ್ ಆಗಲಿದೆ
4. ಮತ್ತೆ http://mylpg.in ಗೆ ಲಾಗಿನ್ ಆಗಿ
5. Booking History and Subsidy ಆಯ್ಕೆ ಮೇಲೆ ಕ್ಲಿಕ್ ಮಾಡಿ
6. ಇಲ್ಲಿ ನಿಮಗೆ ಸಬ್ಸಿಡಿ ಲಭ್ಯವಾಗಿದೆಯೇ ಇಲ್ಲವೇ ಎಂಬ ಮಾಹಿತಿ ಲಭ್ಯವಾಗಲಿದೆ


Click it and Unblock the Notifications