ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು ಹಣಕಾಸು ವರ್ಷ 2023-24ರ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ, ಹಾಗೆಯೇ ಹಲವಾರು ಬದಲಾವಣೆಗಳನ್ನು ಪ್ರಸ್ತಾಪ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ ಸೇರಿದಂತೆ ಹಲವಾರು ಘೋಷಣೆಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಚಿವೆ ಮಹಿಳಾ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಕೂಡಾ ಘೋಷಣೆ ಮಾಡಿದ್ದಾರೆ.
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದೆ. ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಘೋಷಣೆ ಮಾಡಿದ ಯೋಜನೆಗಳಲ್ಲಿ ಒಂದಾಗಿದೆ. ಈ ಹೊಸ ಹಣ ಉಳಿತಾಯ ಯೋಜನೆಯು ಏಪ್ರಿಲ್ 1, 2023ರಿಂದ ಜಾರಿಗೆ ಬರಲಿದೆ. ಈ ಯೋಜನೆಯಲ್ಲಿ ದೇಶದಲ್ಲಿನ ಅಂಚೆ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಜಾರಿಗೊಳಿಸಲಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈ ನೂತನ ಯೋಜನೆಯನ್ನು ಜನರಿಗೆ ಪರಿಚಯಿಸಬೇಕು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಏನು?
ಬಜೆಟ್ 2023ರಲ್ಲಿ ಜಾರಿ ಮಾಡಲಾದ ಭಾರತ ಸರ್ಕಾರದ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಒಂದು ಸಮಯ ಯೋಜನೆಯಾಗಿದೆ. ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಾರ್ಚ್ 2025ರವರೆಗಿನ ಅಂದರೆ 2 ವರ್ಷದ ಅವಧಿಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ ಸುಮಾರು 2 ಲಕ್ಷ ರೂಪಾಯಿ ಮೊತ್ತವನ್ನು 2 ವರ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ.
ಬಡ್ಡಿದರ ಎಷ್ಟಿದೆ ನೋಡಿ
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಓರ್ವ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ ಡೆಪಾಸಿಟ್ ಮಾಡಲಾಗುವ 2 ಲಕ್ಷ ರೂಪಾಯಿವರೆಗಿನ ಮೊತ್ತದ ಮೇಲೆ 2 ವರ್ಷಗಳ ಅವಧಿಗೆ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 2 ವರ್ಷದ ಬಳಿಕ ಹಣವನ್ನು ವಿತ್‌ಡ್ರಾ ಮಾಡುವಾಗ ಬಡ್ಡಿದರದೊಂದಿಗೆ ಮೊತ್ತವು ಲಭ್ಯವಾಗಲಿದೆ. ಬ್ಯಾಂಕ್ ಬಜಾರ್‌ನ ಸಿಇಒ ಅದಿಲ್ ಶೆಟ್ಟಿ ಪ್ರಕಾರ, "ಈ ಯೋಜನೆಯಲ್ಲಿ ಫಿಕ್ಸಿಡ್ ಡೆಪಾಸಿಟ್‌ಗಿಂತ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ."
ಅರ್ಹತೆ: ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ ಮಾತ್ರ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆಯನ್ನು ತೆರೆಯುವ ಅವಕಾಶವಿದೆ. ಇಲ್ಲಿ ಯಾವುದೇ ವಯೋಮಿತಿಗಳು ಇಲ್ಲ. ಹೆಣ್ಣಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಅನ್ನು ಪಡೆಯುವ ಅವಕಾಶವಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಸಮೀಪದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ
ಹಂತ 2: ಮಹಿಳಾ ಸಮ್ಮಾನ್ ಬಚಾತ್ ಪತ್ರ ಯೋಜನೆಯ ಫಾರ್ಮ್ ಅನ್ನು ಪಡೆಯಿರಿ
ಹಂತ 3: ನಿಮ್ಮ ಹಣಕಾಸು, ವೈಯಕ್ತಿಕ ಹಾಗೂ ನಾಮಿನೇಷನ್ ಮಾಹಿತಿಯಲ್ಲಿ ಈ ಫಾರ್ಮ್‌ನಲ್ಲಿ ಭರ್ತಿ ಮಾಡಿ
ಹಂತ 4: ವಿಳಾಸ ಪುರಾವೆ, ಗುರುತು ಪುರಾವೆಯಂತಹ ಅಗತ್ಯ ದಾಖಲೆಗಳ ಪ್ರತಿಯೊಂದಿಗೆ ಫಾರ್ಮ್ ಅನ್ನು ನೀಡಿ.
ಹಂತ 5: ಎಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತೀರಿ ಎಂದು ನಿರ್ಧಾರ ಮಾಡಿ, ನಗದು ಅಥವಾ ಚೆಕ್ ರೂಪದಲ್ಲಿ ಹಣ ಡೆಪಾಸಿಟ್ ಮಾಡಿ
ಹಂತ 6: ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದ ಪುರಾವೆಯಾಗಿ ನಿಮಗೆ ಪ್ರಮಾಣಪತ್ರವೊಂದು ಲಭ್ಯವಾಗಲಿದೆ.
ಲೆಕ್ಕಾಚಾರ ಹೇಗಿದೆ ನೋಡಿ
ನೀವು ಎರಡು ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ 2,000,000 ಲಕ್ಷ ರೂಪಾಯಿ (2 ಲಕ್ಷ ರೂಪಾಯಿ) ಹೂಡಿಕೆ ಮಾಡುತ್ತೀರಿ ಅಂದುಕೊಳ್ಳಿ, ಅದಕ್ಕೆ ನಿಮಗೆ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಅದರಿಂದಾಗಿ ನೀವು ಮೊದಲ ವರ್ಷದಲ್ಲಿ ಡೆಪಾಸಿಟ್ ಅಥವಾ ಹೂಡಿಕೆ ಮಾಡಿದ ಮೊತ್ತದ ಮೇಲೆ ಬಡ್ಡಿದರ ರೂಪದಲ್ಲಿ 15,000 ರೂಪಾಯಿ ಪಡೆಯುತ್ತೀರಿ, ಎರಡನೇ ವರ್ಷ 16,125 ರೂಪಾಯಿ ಪಡೆಯುತ್ತೀರಿ. ಎರಡು ವರ್ಷಗಳ ಬಳಿಕ ನೀವು 2,31,125 ರೂಪಾಯಿ ಮೊತ್ತವನ್ನು ಪಡೆಯಬಹುದಾಗಿದೆ. ಅಂದರೆ ನೀವು ಹೂಡಿಕೆ ಮಾಡಿದ 2,00,000 ರೂಪಾಯಿ ಹಾಗೂ ಬಡ್ಡಿಯಾಗಿ 31,125 ರೂಪಾಯಿ.


Click it and Unblock the Notifications