ಸೆಲೆಬ್ರೆಟಿಗಳು ಮತ್ತು ಉದ್ಯಮಿಗಳು ಅಧಿಕ ಆದಾಯವನ್ನು ಹೊಂದಿರುವುದು ಸಾಮಾನ್ಯವಾಗಿದೆ. ಇನ್ನು ದೇಶದಲ್ಲಿರುವ ಉದ್ಯಮಿಗಳು ಭಾರತದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಹೀಗಿರುವಾಗ ವ್ಯಕ್ತಿಯೊಬ್ಬರು ಸೆಲೆಬ್ರೆಟಿಯೂ ಅಲ್ಲ ಹಾಗೆಯೇ, ಉದ್ಯಮಿಯೂ ಅಲ್ಲ, ಆದರೂ ಕೂಡಾ ಸುಮಾರು 6500 ಕೋಟಿ ರೂಪಾಯಿ ನಿವ್ವಳ ಆದಾಯವನ್ನು ಹೊಂದಿದ್ದಾರೆ.
ಇಗ್ನೇಷಿಯಸ್ ನವಿಲ್ ನೊರೊನ್ಹಾ ಯಾವುದೇ ವ್ಯಾಪಾರವನ್ನು ಹೊಂದಿಲ್ಲ. ಆದರೆ ಅನೇಕ ವ್ಯಾಪಾರ ಉದ್ಯಮಿಗಳು ಆಶ್ಚರ್ಯಪಡುವಷ್ಟು ನಿವ್ವಳ ಆದಾಯವನ್ನು ಇಗ್ನೇಷಿಯಸ್ ನವಿಲ್ ನೊರೊನ್ಹಾ ಹೊಂದಿದ್ದಾರೆ. ನವಿಲ್ ನೊರೊನ್ಹಾ ಚಲನಚಿತ್ರ ತಾರೆಯರು ಅಥವಾ ಕ್ರೀಡಾ ಐಕಾನ್‌ಗಳು, ಸೆಲೆಬ್ರಿಟಿಗಳಿಗಿಂತಲೂ ಅಧಿಕ ಶ್ರೀಮಂತರಾಗಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿರುವ ನೊರೊನ್ಹಾ
ಇಗ್ನೇಷಿಯಸ್ ನವಿಲ್ ನೊರೊನ್ಹಾ ಭಾರತದ ಅತ್ಯಂತ ಶ್ರೀಮಂತ ಮ್ಯಾನೇಜರ್ ಮತ್ತು ವೃತ್ತಿಪರ ಸಿಇಒ ಆಗಿದ್ದಾರೆ. ಇತ್ತೀಚಿನ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಪ್ರಕಾರ ನವಿಲ್ ನೊರೊನ್ಹಾ ನಿವ್ವಳ ಆದಾಯವು 6,500 ಕೋಟಿ ರೂಪಾಯಿ ಆಗಿದೆ. ಈ ನಾನ್ ಪ್ರೊಮೊಟರ್ ಸಿಇಒರ ನಿವ್ವಳ ಆದಾಯವು ಈ ವರ್ಷದಲ್ಲಿ ಶೇಕಡ 12ರಷ್ಟು ಏರಿಕೆಯನ್ನು ಕಂಡಿದೆ.
ಖ್ಯಾತ ಹೂಡಿಕೆದಾರ ಮತ್ತು ಬಿಲಿಯನೇರ್ ರಾಧಾಕಿಶನ್ ದಮಾನಿ ಸ್ಥಾಪನೆ ಮಾಡಿರುವಂತಹ ಅತೀ ಜನಪ್ರಿಯವಾದ ಸೂಪರ್‌ಮಾರ್ಕೆಟ್ ಡಿಮಾರ್ಟ್‌ನ ಹಿಂದೆ ಇರುವ ಪ್ರಮುಖ ವ್ಯಕ್ತಿ ಇಗ್ನೇಷಿಯಸ್ ನವಿಲ್ ನೊರೊನ್ಹಾ ಆಗಿದ್ದಾರೆ. ಮಾಧ್ಯಮಗಳ ಮುಂದೆ ಅತೀ ಹೆಚ್ಚು ಕಾಣಸಿಗದ ವ್ಯಕ್ತಿ ನವಿಲ್ ನೊರೊನ್ಹಾ, ಎಫ್‌ಎಂಸಿಜಿ ವಲಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಇಗ್ನೇಷಿಯಸ್ ನವಿಲ್ ನೊರೊನ್ಹಾ ಯಶಸ್ವಿ ವ್ಯಾಪಾರವನ್ನು ಪ್ರಾರಂಭಿಸದಿದ್ದರೂ, ಕೂಡಾ ಅವರ ಕಾರ್ಯತಂತ್ರದ ಪ್ರತಿಭೆಯಿಂದಾಗಿ ನವಿಲ್ ನೊರೊನ್ಹಾ ದೂರದೃಷ್ಟಿ ಮತ್ತು ಅತ್ಯುತ್ತಮ ಸಿಇಒಗಳೆಂದು ಪರಿಗಣಿಸಲ್ಪಟ್ಟಿದ್ದಾರೆ. ನವಿಲ್ ನೊರೊನ್ಹಾರು ಉದ್ಯಮದಲ್ಲಿ ಆಟವನ್ನೇ ಬದಲಾವಣೆ ಮಾಡಿದ ನವೀನ 48-ಗಂಟೆಗಳ ಪೂರೈಕೆದಾರ ಪಾವತಿ ನೀತಿಗೂ ಹೆಸರುವಾಸಿಯಾಗಿದ್ದಾರೆ.
ಇಗ್ನೇಷಿಯಸ್ ನವಿಲ್ ನೊರೊನ್ಹಾ ಅವರು ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಐಪಿಒ ನಂತರ ಒಮ್ಮೆ ಮಾತ್ರ ಕಚೇರಿಯಿಂದ ಹೊರ ಬಂದ ವಿನಮ್ರ ಮತ್ತು ಶ್ರದ್ಧೆಯುಳ್ಳ ವ್ಯಾಪಾರ ನಾಯಕ ಎಂದು ಕರೆಯಲ್ಪಡುತ್ತಾರೆ. ನವಿಲ್ ನೊರೊನ್ಹಾ ಅವರು ಇತ್ತೀಚೆಗೆ ಮುಂಬೈನ ಅತ್ಯಧಿಕ ಮೌಲ್ಯದ ಪ್ರಾಪರ್ಟಿ ಡೀಲ್ ಅನ್ನು ನಡೆಸಿದ್ದಾರೆ, ಪ್ರಾಪರ್ಟಿ ಖರೀದಿ ಮಾಡಿದ್ದಾರೆ.
ಬಾಂದ್ರಾದಲ್ಲಿ (ಪೂರ್ವ) 10 ಕಾರ್ ಪಾರ್ಕಿಂಗ್ ಹೊಂದಿರುವ ಅದ್ದೂರಿ ವಸತಿ ಜಾಗಕ್ಕೆ ಸುಮಾರು 70 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ. ವರದಿ ಪ್ರಕಾರ ಇಗ್ನೇಷಿಯಸ್ ನವಿಲ್ ನೊರೊನ್ಹಾ ವೇತನವು 4.5 ಕೋಟಿ ರೂಪಾಯಿ ಆಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸ್ಟೇಕ್‌ನಿಂದಾಗಿಯೇ ನವಿಲ್ ನೊರೊನ್ಹಾ ತನ್ನ ಅಧಿಕ ಆದಾಯವನ್ನು ಗಳಿಸುತ್ತಾರೆ.
ಡಿಮಾರ್ಟ್‌ನ ರಾಧಾಕಿಶನ್ ದಮಾನಿ
ಫೋರ್ಬ್ಸ್‌ನ 2023ರ ಶ್ರೀಮಂತರ ಭಾರತೀಯರ ಪಟ್ಟಿಯಲ್ಲಿ ಡಿಮಾರ್ಟ್ ಮಾಲೀಕರು ಹಾಗೂ ಹೆಸರಾಂತ ಹೂಡಿಕೆದಾರ ರಾಧಾಕಿಶನ್ ದಮಾನಿ ಅವರು ಎಂಟನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯವು ದಮಾನಿ ಅವರ ಬುದ್ಧಿವಂತ ಹೂಡಿಕೆಗಳು ಹಾಗೂ ಚಿಲ್ಲರೆ ಸ್ಟೋರ್ ಚೈನ್‌ಗೆ ಸಾಕ್ಷಿಯಾಗಿವೆ.
ಭಾರತೀಯ ರಿಟೇಲ್ ಸ್ಟೋರ್ ಕಾರ್ಪೊರೇಷನ್ ಡಿಮಾರ್ಟ್‌ನ ಸಂಸ್ಥಾಪಕರು ಹಾಗೂ ಮಾಲೀಕರಾದ ರಾಧಾಕಿಶನ್ ದಮಾನಿ ಅವರು ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 589 ಕೋಟಿ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಅಂದರೆ 2022ರಲ್ಲಿ ದಿನಕ್ಕೆ 1.6 ಕೋಟಿ ರೂ.ನಷ್ಟು ಲಾಭ ಗಳಿಸಿದ್ದಾರೆ. ಡಿಮಾರ್ಟ್ ಗ್ರೂಪ್ ಗಳಿಸಿದ ನಿರೀಕ್ಷೆಗೂ ಮೀರಿದ ಲಾಭವು ರಾಧಾಕಿಶನ್ ಅವರನ್ನು ಫೋರ್ಬ್ಸ್‌ನ ಭಾರತೀಯರ ಶ್ರೀಮಂತರ ಪಟ್ಟಿಯಲ್ಲಿ 15.3 ಬಿಲಿಯನ್ ಡಾಲರ್‌ನೊಂದಿಗೆ 8ನೇ ಸ್ಥಾನಕ್ಕೇರಿಸಿದೆ.


Click it and Unblock the Notifications