ವಿಎಸ್‌ಎಸ್ ಮಣಿ ಅವರಿಗೆ ಹಣ ಅಥವಾ ಬಿಸಿನೆಸ್ ಬಗ್ಗೆ ಅನುಭವವಿರಲಿಲ್ಲ. ಅದರ ಹೊರತಾಗಿಯೂ ಅವರು ಇಂಡಿಯನ್ ಗೂಗಲ್ ಅನ್ನು ಸಿದ್ಧಪಡಿಸಿದ್ದರು. ಅವರು ಸ್ಥಾಪಿಸಿದ ಕಂಪನಿ ಜಸ್ಟ್ ಡಯಲ್, ಇತ್ತೀಚಿನ ದಿನಗಳಲ್ಲಿ ಅಂಗಡಿಯವರು, ಎಲೆಕ್ಟ್ರೀಷಿಯನ್‌ಗಳು, ಮೆಕ್ಯಾನಿಕ್‌ಗಳು, ರೆಸ್ಟೊರೆಂಟ್ ಹಾಗೂ ಹೋಟೆಲ್ ಮುಂತಾದ ಕ್ಷೇತ್ರಗಳ ಸಂಪರ್ಕ ವಿವರಗಳನ್ನು ಪಡೆಯುವುದಕ್ಕೆ ಇದು ಎಲ್ಲರಿಗೂ ಸಹಾಯ ಮಾಡುತ್ತದೆ. ಇದು ಜನರ ಪ್ರತಿಯೊಂದು ಅಗತ್ಯವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ.
ಮಣಿ ಅವರು ದೊಡ್ಡ ಕನಸು ಕಂಡಿದ್ದರು. ಅವರು ಡಿಜಿಟಲ್ ಡೈರೆಕ್ಟರಿಯನ್ನು ಸಿದ್ಧಪಡಿಸಿದ್ದರು. ಇದು ಜನರ ಎಲ್ಲ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಆ ಕಂಪನಿ ಎಲ್ಲಿಯವರೆಗೆ ಜನಪ್ರಿಯತೆ ಪಡೆದುಕೊಂಡಿತು ಅಂದರೆ ಮುಕೇಶ್ ಅಂಬಾನಿ ಕೂಡ ಅದರ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಿತ್ತು. ಹಾಗಾದರೆ, ಜಸ್ಟ್ ಡಯಲ್‌ನ ಸ್ಟೋರಿ ಇಲ್ಲಿದೆ-

ವಿಎಸ್‌ಎಸ್ ಮಣಿ ಯಾರು?
ವಿಎಸ್‌ಎಸ್ ಮಣಿ ಅವರು ತಮಿಳುನಾಡು ಮೂಲದವರು. ಅವರು ಮಧ್ಯಮ ಕುಟುಂಬದಲ್ಲಿ ಜನಿಸಿದ್ದರು. ಅವರು ದಿಲ್ಲಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. ನಂತರ ಅವರು ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡಿದ್ದರು. ಬಳಿಕ ಅವರು ಚಾರ್ಟೆರ್ಡ್ ಅಕೌಂಟೆಂಟ್ ಆಗಿದ್ದು, ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುವುದಕ್ಕೆ ದುಡಿಯುವುದು ಅನಿವಾರ್ಯವಾಗಿತ್ತು.
1989ರಲ್ಲಿ ಅವರು ಆಸ್ಕ್‌ಮಿ ಎಂಬ ಕಂಪನಿಯನ್ನು ಪ್ರಾರಂಭಿಸಿದ್ದು, ಅದು ಯಶಸ್ವಿಯಾಗಿರಲಿಲ್ಲ. ಮುಂದೆ 1992ರಲ್ಲಿ ಮದುವೆಗೆ ಸಂಬಂಧಿಸಿದ ಮ್ಯಾಗಜಿನ್ ಪ್ರಾರಂಭಿಸಿದ್ದರು. ಅದು ಕೂಡ ಯಶಸ್ವಿಯಾಗಿರಲಿಲ್ಲ. ಅದಾದ ನಂತರ ಅವರು ಯೆಲ್ಲೋ ಪೇಜಸ್ ಹಾಗೂ ಟೆಲಿಫೋನ್ ಡೈರೆಕ್ಟರಿಗೆ ಸಂಬಂಧಿಸಿದ ಕಂಪನಿಯಲ್ಲಿ ಕೆಲಸ ಮಾಡಿದ್ದರು.
ಇದರಿಂದ ಅವರು ಸ್ಫೂರ್ತಿ ಪಡೆದು ಜಸ್ಟ್ ಡಯಲ್ ಎಂಬ ಕಂಪನಿಯನ್ನು ಪ್ರಾರಂಭಿಸಿದ್ದರು. ಅವರು ಈ ಕಂಪನಿ ಪ್ರಾರಂಭಕ್ಕೆ ತಮ್ಮ ಸ್ವಂತ ಬಂಡವಾಳವನ್ನು ಹೂಡಿಕೆ ಮಾಡಿದ್ದರು. ಜಸ್ಟ್ ಡಯಲ್ ಪ್ರಾರಂಭದಲ್ಲಿ ಟೆಲಿಫೋನ್ ಸರ್ವೀಸ್ ನೀಡುತ್ತಿತ್ತು. 1996ರಲ್ಲಿ ಅವರು ಉದಾರೀಕರಣ ನೀತಿಯ ಪ್ರಯೋಜನಗಳನ್ನು ಪಡೆದುಕೊಂಡರು. ಇದು ಜನರ ಫೋನ್ ಸಂಪರ್ಕ ಪಡೆಯುವುದನ್ನು ಸುಲಭಗೊಳಿಸಿತ್ತು.
ಭಾರತದಲ್ಲಿ ಇಂಟರ್ನೆಟ್ ಜನಪ್ರಿಯಗೊಂಡಾಗ ಕಂಪನಿಯು ಇಂಟರ್ನೆಟ್ ಆವೃತ್ತಿಯನ್ನು ಪ್ರಾರಂಭಿಸಿತ್ತು. ಇದು ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. 2007ರಲ್ಲಿ ಕಂಪನಿಯ ಆಸ್ತಿ ಮೌಲ್ಯವು 4000 ಕೋಟಿ ರೂಪಾಯಿ ಆಗಿದ್ದು, ಆ ಮೂಲಕ ಐಪಿಒವನ್ನು ಪ್ರವೇಶಿಸಿತ್ತು.
2021ರಲ್ಲಿ ಮುಕೇಶ್ ಅಂಬಾನಿಯ ರಿಲಯನ್ಸ್ ಜಸ್ಟ್ ಡಯಲ್ ಷೇರು ಪಡೆಯುವುದಕ್ಕೆ 3497 ಕೋಟಿ ರೂಪಾಯಿ ನೀಡಿತ್ತು. ಇದರಿಂದ ಮಣಿಯು 1332 ಕೋಟಿ ರೂಪಾಯಿಯಷ್ಟು ತಮ್ಮ ಷೇರು ಪಡೆದುಕೊಂಡರು.
2021ರಲ್ಲಿ ರಿಲಯನ್ಸ್ ರಿಟೇಲ್ ಜಸ್ಟ್ ಡಯಲ್‌ನ ಶೇಕಡ 67 ಷೇರು ಪಡೆದುಕೊಂಡಿತ್ತು. ವರದಿಗಳ ಪ್ರಕಾರ, ರಿಲಯನ್ಸ್ 2165 ಕೋಟಿ ರೂಪಾಯಿಯನ್ನು ಹೊಸ ಷೇರುಗಳಿಗೆ, 1332 ಕೋಟಿ ರೂಪಾಯಿಯನ್ನು ಮಣಿ ಅವರ ಷೇರು ಮೊತ್ತವಾಗಿ ಹಾಗೂ 2200 ಕೋಟಿ ರೂಪಾಯಿಗಳನ್ನು ಓಪನ್ ಆಫರ್ ಆಗಿ ಪಾವತಿಸಿತ್ತು. 8500 ಕೋಟಿ ರೂಪಾಯಿ ಮೌಲ್ಯದಲ್ಲಿ ಬಹುಪಾಲು ಷೇರು ಮೌಲ್ಯವಾದ 5700 ಕೋಟಿ ರೂಪಾಯಿಯನ್ನು ಪಾವತಿಸಿತ್ತು


Click it and Unblock the Notifications