23 ವರ್ಷದ ಕಾನ್ಪುರದ ಪೊಲೀಸ್ ಅಧಿಕಾರಿ ಮಗನನ್ನು iQOOನ ಮೊದಲ ಮುಖ್ಯ ಗೇಮಿಂಗ್ ಅಧಿಕಾರಿಯನ್ನಾಗಿ ನೇಮಕಗೊಳಿಸಲಾಗಿದೆ. ಇದಕ್ಕಾಗಿ ದೇಶವ್ಯಾಪಿ ಮೂರು ತಿಂಗಳು ಹುಡುಕಾಟ ನಡೆದಿದ್ದು, ಶ್ವೇತಾಂಕ್ ಪಾಂಡೆ ಅವರು 60,000 ಹೆಚ್ಚು ಅರ್ಜಿದಾರರನ್ನು ಹಿಂದಿಕ್ಕಿ ಈ ಅವಕಾಶವನ್ನು ಪಡೆದುಕೊಂಡಿದ್ದಾರೆ. ಗೇಮ್‌ಪ್ಲೇ, ಗೇಮಿಂಗ್ ಪರಿಜ್ಞಾನ, ವ್ಯಕ್ತಿತ್ವ ಹಾಗೂ ಸಂವಹನ ಕೌಶಲ್ಯಗಳ ಮಾನದಂಡವನ್ನು ಆಧರಿಸಿದ ಈ ಆಯ್ಕೆ ಪ್ರಕ್ರಿಯೆಯ ಬಳಿಕ ಶ್ವೇತಾಂಕ್ ಅವರನ್ನು ನೇಮಕಗೊಳಿಸಲಾಗಿದೆ.
ಬಹಳ ಆಸಕ್ತಿಯ ಗೇಮರ್ ಆಗಿರುವ ಶ್ವೇತಾಂಕ್ ಅವರು ಯಾವಾಗಲೂ ಗೇಮಿಂಗ್ ಹಾಗೂ ಇ-ಸೋರ್ಟ್ಸ್‌ನತ್ತ ಒಲವು ತೋರುತ್ತಿದ್ದರು. ಶ್ವೇತಾಂಕ್ ಅವರು ಬದುಕಿನಲ್ಲಿ ತಮ್ಮ ನೆಚ್ಚಿನ BGMI ಗೇಮಿಂಗ್ ಆಡುವುದಕ್ಕಾಗಿ ಹೊಸ ಫೋನ್ ಅನ್ನು ಪಡೆಯುವುದಕ್ಕೆಂದು ಒಂದು ವರ್ಷಗಳ ಕಾಲ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಅವರು ತಮ್ಮ ಸಾಲದ ಇಎಂಐಗಳನ್ನು ಮುಗಿಸಿದ ಬಳಿಕ ಬಡ್ತಿಯ ಜತೆಗೆ ಈಗಿನ ಸಂಬಳದ ಮೂರು ಪಟ್ಟು ಹೆಚ್ಚಿನ ಮೊತ್ತವನ್ನು ನೀಡುವುದಾಗಿ ಹೇಳಿದ್ದರೂ ನಿರ್ಭೀತಿಯಿಂದ ಕೆಲಸವನ್ನು ತೊರೆದಿದ್ದರು. ಗೇಮಿಂಗ್ ಕಡೆಗಿನ ಗೀಳು ಅವರಿಗೆ ಅದನ್ನೇ ತಮ್ಮ ವೃತ್ತಿ ಬದುಕಾಗಿ ಆಯ್ಕೆ ಮಾಡಬೇಕೆಂಬುದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ, ಎಂಬಿಎ ಅಧ್ಯಯನದಿಂದಲೂ ಹಿಂದೆ ಸರಿದಿದ್ದರು.
iQOOನ ಮೊದಲ ಚೀಫ್ ಗೇಮಿಂಗ್ ಆಫೀಸರ್ ಆದ ಬಳಿಕ ಪ್ರತಿಕ್ರಿಯಿಸಿರುವ ಶ್ವೇತಾಂಕ್, ʻಈಗ ನಾನು ಜಗತ್ತಿನ ಅತ್ಯಂತ ತುತ್ತ ತುದಿಯಲ್ಲಿದ್ದೇನೆ ಎನ್ನುವ ಅನುಭವವಾಗುತ್ತಿದೆ. ಆರಂಭದಲ್ಲಿ ನಾನು ಅರ್ಜಿಯನ್ನು ಭರ್ತಿ ಮಾಡಿದಾಗ ನನಗೆ ಅಷ್ಟೊಂದು ಇಷ್ಟವಿರಲಿಲ್ಲ. ಆದರೂ ಅಂತಿಮ ಲಿಸ್ಟ್‌ನಲ್ಲಿ ಇರಬೇಕೆಂದು ಬಯಸಿದ್ದೆ. ಆದರೆ, ಇದು ನನ್ನನ್ನು ಇಲ್ಲಿವರೆಗೆ ಕರೆದೊಯ್ಯುತ್ತದೆ ಹಾಗೂ ಅಂತಿಮವಾಗಿ iQOOನ ಮೊದಲ ಸಿಜಿಒ ಆಗಲು ಕಾರಣವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ," ಎಂದು ಹೇಳಿದ್ದಾರೆ.
"ನಾನು ಮುಂಬೈನಲ್ಲಿ ಭೇಟಿಯಾಗಿದ್ದ ವೇಳೆ ಫೈನಲ್ ಲಿಸ್ಟ್‌ನಲ್ಲಿದ್ದವರೆಲ್ಲರೂ ಉತ್ತಮ ಆಟಗಾರರರು ಹಾಗೂ ದೊಡ್ಡ ವ್ಯಕ್ತಿಗಳಾಗಿದ್ದರು. ಹೀಗಿರುವಾಗ, ಅಷ್ಟೊಂದು ಪ್ರಬಲ ಪೈಪೋಟಿ ನಡುವೆ ಅಂತಿಮವಾಗಿ ನಾನು ಆಯ್ಕೆಯಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ. ಜತೆಗೆ ನನ್ನಂಥ ಮಹತ್ವಾಕಾಂಕ್ಷೆಯ ಗೇಮರ್‌ಗಳಿಗೆ ಇಷ್ಟು ದೊಡ್ಡ ವೇದಿಕೆಯನ್ನು ಒದಗಿಸಿದಕ್ಕಾಗಿ iQOO ಸಂಸ್ಥೆ ಹಾಗೂ ತೀರ್ಪುಗಾರರಿಗೆ ಆಭಾರಿಯಾಗಿದ್ದೇನೆ," ಎನ್ನುತ್ತಾರೆ.
iQOOನ ಮುಖ್ಯ ಗೇಮಿಂಗ್ ಅಧಿಕಾರಿಯನ್ನು ಸ್ವಾಗತಿಸಿದ iQOO ಸಿಇಒ ನಿಪುನ್ ಮರಿಯಾ ಪ್ರತಿಕ್ರಿಯಿಸಿ, "ಇದು ಭಾರತೀಯ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಒಂದು ಅಪ್ರತಿಮ ಕ್ಷಣವಾಗಿದೆ. ಜತೆಗೆ ನಮ್ಮ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿಯ ವ್ಯಕ್ತಿಯನ್ನು ಹುಡುಕುವುದಕ್ಕಾಗಿ ನಾವು ಚಂದ್ರನ ಮೇಲಿದ್ದೇವೆ. iQOOನ ಡಿಎನ್‌ಎ 'ಐ ಕ್ವೆಸ್ಟ್ ಒನ್ ಅಂಡ್ ಒನ್' ಅನ್ನು ತರುವುದು ಹಾಗೂ ಶ್ವೇತಾಂಕ್ ಅವರು ಎಲ್ಲ ರೌಂಡ್‌ಗಳಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ," ಎಂದು ತಿಳಿಸಿದ್ದಾರೆ.
"ಅವರು ನಮ್ಮ ಸಂಸ್ಥೆಯನ್ನು ಸೇರಿಕೊಳ್ಳುವುದರೊಂದಿಗೆ ದೇಶದ ಯುವ ಗೇಮಿಂಗ್ ಉತ್ಸಾಹಿಗಳಿಗೆ ನಮ್ಮ ಉತ್ಪನ್ನ ಹಾಗೂ ಉಪಕ್ರಮಗಳಿಗೆ ಹೆಚ್ಚು ಕ್ರಿಯಾತ್ಮಕ-ತಾಜಾ ದೃಷ್ಟಿಕೋನವನ್ನು ನೀಡುವುದಕ್ಕೆ ಉದ್ದೇಶಿಸಿದ್ದೇವೆ. ಹೀಗಾಗಿ ಶ್ವೇತಾಂಕ್‌ನಂಥ ಪ್ರತಿಭಾನ್ವಿತ ಗೇಮರ್ iQOO ತಂಡ ಸೇರುತ್ತಿರುವುದಕ್ಕೆ ನಾವೆಲ್ಲ ಉತ್ಸುಕರಾಗಿದ್ದು, ಅವರು ವಹಿಸುವ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ," ಎಂದು ಶ್ಲಾಘಿಸಿದ್ದಾರೆ.
ಗೇಮಿಂಗ್ ಸ್ಪರ್ಧೆಗಳ ಹಂತಗಳು, ಗುಂಪು ಚರ್ಚೆಗಳು ಹಾಗೂ ಅಂತಿಮವಾಗಿ ಆಡಿಷನ್ ರೌಂಡ್‌ಗಳ ಮೂಲಕ ಶ್ವೇತಾಂಕ್ ಅವರ ಆಯ್ಕೆ ನಡೆದಿದ್ದು, ಅವರು ಸುಮಾರು 60,000 ಪ್ರತಿಭಾನ್ವಿತ Gen Z ಗೇಮರ್‌ಗಳ ಪೈಕಿ ಮೊದಲಿಗರಾಗಿ ಆಯ್ಕೆಯಾಗಿದ್ದಾರೆ. ಅವರು ಇನ್ನುಮುಂದೆ iQOOನ ಲೀಡರ್‌ಶಿಪ್ ಟೀಮ್‌ಗಳ ಜತೆಗೆ ಕೆಲಸ ಮಾಡಲಿದ್ದಾರೆ. ಜತೆಗೆ, ಗೇಮರ್ಸ್‌ಗೆ ಬೇಕಾಗಿರುವ ಸ್ಮಾರ್ಟ್‌ಫೋನ್ ಪ್ಯಾಕೇಜ್‌ಗಳನ್ನು ತಯಾರಿಸಲಿದ್ದಾರೆ. ಈ ನಡುವೆ ಅವರು ದೇಶದ ಟಾಪ್ ಗೇಮರ್ಸ್ ಜತೆಗೆ ಕೈಜೋಡಿಸಲಿದ್ದು, ಸುಮಾರು 10 ಲಕ್ಷ ರೂಪಾಯಿಗಳ ಸಂಭಾವನೆಯನ್ನು ಪಡೆಯಲಿದ್ದಾರೆ.
ಮುಖ್ಯ ಗೇಮಿಂಗ್ ಅಧಿಕಾರಿ ಜತೆಗೆ iQOOನ ತಂಡಕ್ಕೆ ಇಬ್ಬರು ವಲಯ ಸಿಜಿಒಗಳನ್ನು ಕೂಡ ನೇಮಿಸಲಾಗಿದೆ. ದೆಹಲಿಯ ಅಯೋಜೇಶ್ ಶ್ರೀವಾಸ್ತವ ಮತ್ತು ಬಟ್ಟು ನಿಖಿಲ್ ರೆಡ್ಡಿ ಅವರು ಕೂಡ ಶ್ವೇತಾಂಕ್ ಜತೆಗೆ ಗೇಮಿಂಗ್ ತಯಾರಿಸುವಲ್ಲಿ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ.
ದೆಹಲಿಯಿಂದ ಬಂದಿರುವ ಅಯೋಜೇಶ್ ಶ್ರೀವಾಸ್ತವ ಅವರು ಈ ಪ್ರದೇಶದ ಗೇಮಿಂಗ್ ಲ್ಯಾಂಡ್‌ಸ್ಕೇಪ್ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ.
ಅವರ ಗೇಮಿಂಗ್ ಅನುಭವ ಹಾಗೂ ಉತ್ಸಾಹವನ್ನು ರಾಷ್ಟ್ರ ರಾಜಧಾನಿಯಲ್ಲಿ ಗೇಮಿಂಗ್ ಉದ್ಯಮ ಬೆಳೆಸುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಹಾಗೆಯೇ ನಿಖಿಲ್ ರೆಡ್ಡಿ ಅವರ ಗೇಮಿಂಗ್ ಜ್ಞಾನ, ಅನುಭವನ್ನು ಹೈದರಾಬಾದ್ ವಲಯದ ಸಿಜಿಒ ಜವಾಬ್ದಾರಿ ಮೂಲಕ ಬಳಸಿಕೊಳ್ಳಲಾಗುತ್ತದೆ.


Click it and Unblock the Notifications