ಭಾರತೀಯ ಸ್ಟಾರ್ಟ್‌ಅಪ್ ಇಕೋಸಿಸ್ಟಮ್‌ನಲ್ಲಿ ಶತಕೋಟಿ ಡಾಲರ್ ಕಂಪೆನಿಯನ್ನು ಕಟ್ಟಿ ಬೆಳೆಸಿದ ಅಭಿನವ್ ಅಸ್ಥಾನ ಅವರ ಪ್ರಯಾಣವು ಅತ್ಯುನ್ನತವಾದ ಯಶಸ್ವಿನ ಕಥೆಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಬಸ್ತಿ ಮತ್ತು ಲಖಿಂಪುರದಂಥಹ ಸಣ್ಣ ಪಟ್ಟಣಗಳಲ್ಲಿ ಬಹಳ ಸರಳ ಬದುಕಿನ ಆರಂಭವನ್ನು ಕಂಡಿದ್ದರು. 5ನೇ ತರಗತಿಯಲ್ಲಿರುವಾಗಲೇ ಕಂಪ್ಯೂಟರ್‌ನಲ್ಲಿ ತಮ್ಮ ಕೈಗಳನ್ನು ಪಳಗಿಸಿಕೊಂಡು ಹದಿಹರೆಯದಲ್ಲೇ ಮೊದಲ ದುಡಿಮೆಯ ಚೆಕ್‌ನ್ನು ಪಡೆದುಕೊಂಡಿದ್ದರು. ಈಗ ಅಸ್ಥಾನ ಅವರು $5.6 ಬಿಲಿಯನ್ ಡಾಲರ್ (46,000 ಕೋಟಿ) ಕಂಪೆನಿಯ ಸಿಇಒ ಆಗಿದ್ದಾರೆ.
ಅಭಿನವ್ ಅಸ್ಥಾನ ಅವರು ಜಾಗತಿಕವಾಗಿ ಜನಪ್ರಿಯತೆ ಗಳಿಸಿಕೊಂಡಿರುವ ಎಪಿಐ ಪ್ಲಾಟ್‌ಫಾರಂ ಪೋಸ್ಟ್‌ಮ್ಯಾನ್ ಹಿಂದಿನ ದೈತ್ಯ ಶಕ್ತಿಯಾಗಿದ್ದಾರೆ. ಮೆಟಾ, ಪೇಪಾಲ್, ಮೈಕ್ರೋಸಾಫ್ಟ್, ಟ್ವಿಟರ್‌ನಂಥ ದೈತ್ಯ ಕಂಪೆನಿಗಳು ಅವರ ಕಸ್ಟಮರ್‌ಗಳಾಗಿವೆ. ಅಷ್ಟೇಅಲ್ಲ ಅದನ್ನು ಬಳಸುವ ಡೆವಲ್ಪರ್‌ಗಳು ಜಗತ್ತಿನಾದ್ಯಂತ ಕುಳಿತಿದ್ದು, ಎಲ್ಲಿಯವರೆಗೆ ಅಂದರೆ ಅಂಟಾರ್ಕ್ಟಿಕಾದಂಥಹ ಬಹಳ ದೂರದ ಖಂಡದಲ್ಲಿಯೂ ಇದ್ದಾರೆ.

ಅಭಿನವ್ ಆಸ್ಥಾನ ಅವರ ಬದುಕಿನ ಜರ್ನಿಯು ಉತ್ತರ ಪ್ರದೇಶದ ಒಂದು ಸಣ್ಣ ಪಟ್ಟಣದಿಂದ ಪ್ರಾರಂಭವಾಗುತ್ತದೆ. ಅಲ್ಲಿ ಅವರು ತಮ್ಮ ಬಾಲ್ಯ ಜೀವನದೊಂದಿಗೆ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿಕೊಂಡರು. ಬಳಿಕ ಗೋವಾದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್(ಬಿಐಟಿಎಸ್) ಕ್ಯಾಂಪಸ್‌ನಿಂದ ಇಂಜಿನಿಯರಿಂಗ್ ಪದವಿ ಪಡೆದುಕೊಂಡರು. ಅವರ ತಂದೆಯು ಸರ್ಕಾರಿ ಉದ್ಯೋಗಿಯಾಗಿದ್ದು, ಅವರು ಕೆಲಸದ ನಿಮಿತ್ತ ವರ್ಗಾವಣೆಗೊಳ್ಳುತ್ತಿದ್ದ ಕಾರಣ ತಮ್ಮ ಕುಟುಂಬವು ಬೇರೆ ಬೇರೆ ನಗರಗಳಿಗೆ ಹೋಗಿ ನೆಲೆಸಬೇಕಾಗಿತ್ತು.
ಅಭಿನವ್ ಅಸ್ಥಾನ ಬಗ್ಗೆ ಅಧಿಕ ಮಾಹಿತಿ ತಿಳಿಯಿರಿ
ಅಭಿನವ್ ಅಸ್ಥಾನ ಅವರು 5ನೇ ತರಗತಿಯಲ್ಲಿರುವಾಗಲೇ ಕಂಪ್ಯೂಟರ್ ಬಗ್ಗೆ ಕಲಿತುಕೊಂಡಿದ್ದರು. ಆ ಯಂತ್ರವು ಅವರನ್ನು ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಅಭಿನವ್ ಅವರು ವೆಬ್‌ಸೈಟ್‌ಗಳನ್ನು ಡಿಸೈನ್ ಮಾಡುವ ಮೂಲಕ ಡಾಲರ್ ರೂಪದಲ್ಲಿ ಹಣ ಸಂಪಾದನೆಯನ್ನು ಮಾಡುತ್ತಿದ್ದರು. ಅಷ್ಟೇಅಲ್ಲ ಅವರು ಯಾಹೂ ಕ್ಲೋನ್ ಅನ್ನು ಕೂಡ ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದರು. ಆದರೆ ಆ ಪ್ರಾಜೆಕ್ಟ್ ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ವಿಯಾಗಿರಲಿಲ್ಲ.
ತಮ್ಮ ಹದಿಹರೆಯದ ಜೀವನದಲ್ಲೇ ವೆಬ್‌ಸೈಟ್‌ಗಳನ್ನು ನಿರ್ಮಿಸಿದ ಬಳಿಕ ಅವರು ಕಾಲೇಜಿನಲ್ಲಿ BITS360 ಎಂಬ ಪ್ರಾಡೆಕ್ಟ್ ಅನ್ನು ಸ್ಥಾಪಿಸಿದ್ದರು. ಅವರು ತಮ್ಮ ವೃತ್ತಿ ಜೀವನವನ್ನು ಯಾಹೂನಲ್ಲಿ ಇಂಟರ್ನಿಯಾಗಿ ಪ್ರಾರಂಭಿಸಿದ್ದರು. ನಂತರ TeliportMe ಎಂಬ ಕಂಪೆನಿಯನ್ನು ಸ್ಥಾಪಿಸಿದರು. ತಾನು ನಿಜವಾಗಿಯೂ ಸಾಧಿಸಬೇಕಾದ ದಾರಿ ಬಹಳ ದೊಡ್ಡದಿದೆ ಅಂದುಕೊಂಡು, ಅದಕ್ಕಾಗಿ ಅಭಿನವ್ ಅವರು 2013ರಲ್ಲಿ CTO ಕೆಲಸವನ್ನು ತೊರೆಯಲು ನಿರ್ಧರಿಸಿದ್ದರು. ತಮ್ಮ ಖರ್ಚು-ವೆಚ್ಚದ ಬಿಲ್‌ಗಳನ್ನು ಪಾವತಿಸುವುದಕ್ಕೆ ತಂದೆಯ ನೆರವು ಪಡೆಯಲು ಬಯಸಿರಲಿಲ್ಲ.
ಅದನ್ನು ಅವರು ಕನ್ಸಲ್ಟಿಂಗ್ ಪ್ರಾಜೆಕ್ಟ್‌ಗಳ ಮೂಲಕ ನಿರ್ವಹಿಸಿದರು. ಈ ನಡುವೆ ಅಭಿನವ್ ಅವರು ಸೈಡ್ ಪ್ರಾಜೆಕ್ಟ್ ಆಗಿ ಪೋಸ್ಟ್‌ಮ್ಯಾನ್ ಅನ್ನು 2012ರಲ್ಲಿ ಪ್ರಾರಂಭಿಸಿದರು. ಅದನ್ನು ಪ್ರಾರಂಭಿಸಿದ ಕೂಡಲೇ ಅದರಲ್ಲಿರುವ ವಿಪುಲ ಅವಕಾಶಗಳನ್ನು ಮನಗಂಡರು. ಬಳಿಕ 2014ರಲ್ಲಿ ಅಭಿನವ್ ಅವರು ಅಭಿಜಿತ್ ಕೇನ್ ಹಾಗೂ ಅಂಕಿತ್ ಸೋಬಿತ್ ಎಂಬ ಇಬ್ಬರು ಸ್ಥಾಪಕರ ಜತೆ ಸೇರಿಕೊಂಡು ಪೂರ್ಣ ಪ್ರಮಾಣದ ಕಂಪೆನಿಯನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಅಭಿಜಿತ್ ಅವರು TeliportMeಯಲ್ಲಿ ಪರಿಚಿತರಾಗಿದ್ದು, ಸೋಬಿತ್ ಅವರನ್ನು ಯಾಹೂನಲ್ಲಿ ಇಂಟರ್ನ್‌ಶಿಫ್ ಮಾಡುವಾಗ ಭೇಟಿಯಾಗಿದ್ದರು.
ಈ ಪೋಸ್ಟ್‌ಮ್ಯಾನ್ ಕಂಪೆನಿಯು ಬಹಳ ವೇಗವಾಗಿ ಬೆಳೆಯಲಾರಂಭಿಸಿತು. ಅದಕ್ಕೆ ಗೂಗಲ್ ಕ್ರೋಮ್ ವೆಬ್ ಸ್ಟೋರ್‌ನಲ್ಲಿ ಲಭಿಸಿದ ಜನಪ್ರಿಯತೆ ಕಾರಣವಾಗಿತ್ತು. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗತೊಡಗಿತ್ತು. ಈ ಯಶಸ್ಸು ಬಂಡವಾಳ ಹೂಡಿಕೆಯನ್ನು ಹುಡುಕಿಕೊಂಡು ಬಂದಿತ್ತು. ಆ ಮೂಲಕ ಅಭಿನವ್ ಅವರ ಪೋಸ್ಟ್‌ಮ್ಯಾನ್ ಕಂಪೆನಿಯು ಕೇವಲ ಆರು ವರ್ಷಗಳಲ್ಲಿ ಬಿಲಿಯನ್ ಡಾಲರ್ ಕಂಪೆನಿಯಾಗಿ ಬಹಳ ಎತ್ತರಕ್ಕೆ ಬೆಳೆಯಿತು.
2022ರ ಏಪ್ರಿಲ್ ತಿಂಗಳ ಮಾಹಿತಿ ಪ್ರಕಾರ ಅಭಿನವ್ ಆಸ್ಥಾನ ಅವರ ಕಂಪೆನಿಯು 20 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಜತೆಗೆ ಇಲ್ಲಿವರೆಗೆ $433 ಮಿಲಿಯನ್ ಬಂಡವಾಳ ಹೂಡಿಕೆಯನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶದ ಬಸ್ತಿ ಹಾಗೂ ಲಖಿಂಪುರದಿಂದ ಬಹಳ ಸರಳ ಜೀವನವನ್ನು ಪ್ರಾರಂಭಿಸಿದ ಆಸ್ಥಾನ ಈಗ ಸಾನ್ ಫ್ರಾನ್ಸಿಸ್ಕೊದಲ್ಲಿ ವಾಸವಾಗಿದ್ದಾರೆ. ಪೋಸ್ಟ್‌ಮ್ಯಾನ್‌ನ ಹೂಡಿಕೆದಾರರಲ್ಲಿ ನೆಕ್ಸಸ್ ವೆಂಚರ್ ಪಾರ್ಟನರ್ಸ್, ಸಿಆರ್‌ವಿ ಹಾಗೂ ಇನ್‌ಸೈಟ್ ಪಾರ್ಟನರ್ಸ್ ಕೂಡ ಸೇರಿವೆ.


Click it and Unblock the Notifications