ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಹಲವಾರು ಸಣ್ಣ ಹಾಗೂ ದೊಡ್ಡ ಪ್ರಮಾಣದ ಉದ್ಯಮದ ಮೂಲಕ ಯುವ ಮಹಿಳಾ ಉದ್ಯಮಿಗಳು ಉದ್ಯಮಶೀಲತೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಂಥಹ ಯಶಸ್ವಿ ಮಹಿಳಾ ಉದ್ಯಮಿಗಳ ಪೈಕಿ ಅಭಾ ಸಿಂಘಾಲ್ ಅವರು ಕೂಡ ಮುಂಚೂಣಿಯಲ್ಲಿದ್ದಾರೆ.
ಸಾಂಪ್ರದಾಯಿಕವಾಗಿ ಮಹಿಳೆಯರು ಒಂದು ವಯಸ್ಸಿನವರೆಗೆ ಆರ್ಥಿಕವಾಗಿ ಸುರಕ್ಷಿತ ವೃತ್ತಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಕಟ್ಟುಪಾಡುಗಳಿಂದ ಹೊರಗೆ ಬಂದು ಹಲವಾರು ಸವಾಲುಗಳ ನಡುವೆ ಯಶಸ್ವಿ ಉದ್ಯಮಿಯಾದವರು ಅಭಾ ಸಿಂಘಾಲ್.

ಅಭಾ ಅವರು ತಮ್ಮದೇ ಸ್ವಂತ ನಿರ್ಧಾರಗಳ ಮೂಲಕ ಸುಂದರ ಬದುಕನ್ನು ಕಟ್ಟಿಕೊಳ್ಳುವ ಪಣ ತೊಟ್ಟಿದ್ದರು. ಕೇವಲ 23 ವರ್ಷಕ್ಕೆ ಮನೆಯಿಂದ ಹೊರಗೆ ಬರುವ ಆಯ್ಕೆಯನ್ನು ಮಾಡಿಕೊಂಡವರು. ಏಕೆಂದರೆ, ಅಲ್ಲಿ ಅವರಿಗೆ ಕುಟುಂಬದ ಕಂಪನಿಗೆ ಸೇರುವ ಅವಕಾಶ ಮಾತ್ರವಿತ್ತು.
ಈ ರೀತಿ ಮನೆಯಿಂದ ಹೊರಬರುವಾಗ ಕೇವಲ 5000 ಹಣ ಹಾಗೂ ಎಂಬಿಎ ಪದವಿಯನ್ನು ಹೊಂದಿದ್ದು, ಆ ಮೂಲಕ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಮುಂಬೈನ ಮನೆಯೊಂದರಲ್ಲಿ ಸ್ನೇಹಿತೆ ಜತೆಗೆ ನೆಲೆಸಿಕೊಂಡು 22000 ರೂಪಾಯಿ ಮಾಸಿಕ ವೇತನದೊಂದಿಗೆ ವೃತ್ತಿ ಬದುಕನ್ನು ಪ್ರಾರಂಭಿಸಿದರು.
ಸುಮಾರು 10 ವರ್ಷಗಳ ಬಳಿಕ ಖಿಚಿಡಿ ಎಕ್ಸ್‌ಪ್ರೆಸ್ ಎನ್ನುವ ಕ್ಲೌಡ್ ಕಿಚನ್ ಹಾಗೂ ಚೈನ್ ಆಫ್ ರೆಸ್ಟೋರೆಂಟ್‌ಗಳಿಗೆ ಮಾಲೀಕರಾಗುವ ಮೂಲಕ ಮಹಿಳಾ ಉದ್ಯಮಿಯಾಗಿ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಅವರ ಉದ್ಯಮ 50 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದ್ದು, ಗ್ರಾಹಕರಿಗೆ ಹೆಚ್ಚಿನ ಪೋಷಕಾಂಶಯುಕ್ತ ಸ್ವಾಧಿಷ್ಟ ಆಹಾರವನ್ನು ಸರಬರಾಜು ಮಾಡುತ್ತಿದ್ದಾರೆ.
ಅಭಾ ಅವರು ಲಂಡನ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಮಾಡುವಾಗ ಆರ್ಥಿಕವಾಗಿ ಹೆಚ್ಚಿನ ಸಂಪನ್ಮೂಲವನ್ನು ಹೊಂದಿರಲಿಲ್ಲ. ಈ ಕಾರಣಕ್ಕೆ ಅವರು ವಿದ್ಯಾರ್ಥಿವೇತನವನ್ನು ಪಡೆದುಕೊಂಡು ಆ ಮೂಲಕ ಕಲಿಕೆಯನ್ನು ಪೂರ್ಣಗೊಳಿಸಿದರು.
ಎಂಬಿಎ ಕಲಿಯುವ ವೇಳೆ ಖಿಚಿಡಿ ಆಹಾರ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಏಕೆಂದರೆ ಅದು ಅವರಿಗೆ ಆರೋಗ್ಯ ಹಾಗೂ ಆರ್ಥಿಕ ವೆಚ್ಚ ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿತ್ತು. ಓದಿನ ನಡುವೆ ಹಲವು ರೀತಿಯ ಖಿಚಿಡಿ ಅಡುಗೆಯನ್ನು ಮಾಡುತ್ತ ಅದರಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆದುಕೊಂಡರು.
ಭಾರತಕ್ಕೆ ವಾಪಾಸ್ ಬಂದ ಬಳಿಕ ಒಂದು ಅಡುಗೆ ಕೋಣೆ ಹೊಂದಿರುವ ಫ್ಲ್ಯಾಟ್‌ಗೆ ಸ್ನೇಹಿತೆ ಜತೆ ಇದ್ದುಕೊಂಡು 22000 ರೂಪಾಯಿಗೆ ಮಾರ್ಕೆಟಿಂಗ್ ವೃತ್ತಿಯನ್ನು ಪ್ರಾರಂಭಿಸಿದ್ದರು. ಹಣ ಹಾಗೂ ಖರ್ಚು-ವೆಚ್ಚವನ್ನು ಕಡಿಮೆಗೊಳಿಸುವುದಕ್ಕೆ ಆದಷ್ಟು ಏಕಾಂಗಿ ಜೀವನವನ್ನು ನಡೆಸುವುದು ಉತ್ತಮ ಎಂಬುದನ್ನು ಅರ್ಥಮಾಡಿಕೊಂಡಿದ್ದರು.
ಸ್ನೇಹಿತೆಯ ಜತೆ ಖಿಚಿಡಿ ಆಹಾರ ಕ್ರಮಕ್ಕೆ ಒಗ್ಗಿಕೊಂಡಿದ್ದರು. ಅವರು ಬಹಳ ರುಚಿಕರವಾದ ಅಡುಗೆಯನ್ನು ಮಾಡುವುದಕ್ಕೆ ಸುಧೀರ್ಘ ಕಾಲ ಅಡುಗೆ ಕೋಣೆಯಲ್ಲಿರುತ್ತಿದ್ದರು. ಬಳಿಕ ಅವರು ತಮ್ಮನ್ನು ಜಾಹೀರಾತು ನಿರ್ದೇಶಕರೊಬ್ಬರಿಗೆ ಪರಿಚಯಿಸಿಕೊಂಡರು.
ಆ ಜಾಹೀರಾತಿನಲ್ಲಿ ಅಭಿನಯ ಮಾಡಿರುವುದಕ್ಕೆ 40,000 ರೂಪಾಯಿ ಸಂಭಾವಣೆ ಪಡೆದುಕೊಂಡಿದ್ದರು. ಈ ಹಂತದಲ್ಲಿ ಅವರು ಯಶಸ್ವಿ ಮಹಿಳಾ ಉದ್ಯಮಿಯಾಗಬೇಕೆಂಬ ಕನಸುಗಳೊಂದಿಗೆ ರಿಸ್ಕ್ ಅನ್ನು ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದರು.
ನಂತರದಲ್ಲಿ ಅಭಾ ಅವರು ಮಹೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿದ್ದು, ಅವರನ್ನೇ ಮದುವೆ ಕೂಡ ಆದರು. ಆ ಮೂಲಕ ಅಭಾ ಹಾಗೂ ಮಹೇಂದ್ರ ಕುಮಾರ್ ಸೇರಿಕೊಂಡು ಖಿಚಿಡಿ ಎಕ್ಸ್‌ಪ್ರೆಸ್ ಅನ್ನು 2019ರ ಜುಲೈನಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭಿಸಿದರು.
ತಮ್ಮ ವೃತ್ತಿ ಬದುಕಿನಲ್ಲಿ ಸಂಪಾದಿಸಿದ ಸುಮಾರು 3 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡುವ ಮೂಲಕ ಒಂದು ಉದ್ಯೋಗಿಯನ್ನು ಇಟ್ಟುಕೊಂಡು ವರ್ಚುವಲ್ ಕಿಚನ್ ಮೂಲಕ ತಮ್ಮ ಉದ್ಯಮವನ್ನು ಪ್ರಾರಂಭಿಸಿದರು.


Click it and Unblock the Notifications