ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ ಅಜಯ್ ಬಂಗಾ ಅವರು ಜೂನ್ 2ರಿಂದ ವಿಶ್ವಬ್ಯಾಂಕ್‌ನ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಸಂಬಂದ ಹೊರಡಿಸಿರುವ ಪ್ರಕಟಣೆಯಲ್ಲಿ "ವಿಶ್ವಬ್ಯಾಂಕ್ ಗ್ರೂಪ್ ಎವಲ್ಯೂಷನ್ ಪ್ರಕ್ರಿಯೆಯಲ್ಲಿ ಬಂಗಾ ಅವರೊಂದಿಗೆ ಕೆಲಸ ಮಾಡಲು ಮಂಡಳಿಯು ಎದುರು ನೋಡುತ್ತಿದೆ," ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಅಜಯ್ ಬಾಂಗಾ ಅವರ ಶಿಕ್ಷಣ: ಅಜಯ್ ಬಾಂಗಾ ಅವರು ಹೈದರಾಬಾದ್‌ನ ಪಬ್ಲಿಕ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪಡೆದುಕೊಂಡಿದ್ದು, ದಿಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಜತೆಗೆ ಅವರು ಐಐಎಂ-ಎ ಅದರ ಹಳೆವಿದ್ಯಾರ್ಥಿ ಕೂಡ ಆಗಿದ್ದಾರೆ. ಅಜಯ್ ಅವರಿಗೆ 2016ರಲ್ಲಿ ಪದ್ಮಶ್ರೀ ಗೌರವ ಕೂಡ ಲಭಿಸಿದೆ.

ಅಜಯ್ ಬಾಂಗಾ ಅವರು 1981ರಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು, ಪೆಪ್ಸಿಕೋ ಕಂಪೆನಿಯಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಸಿಟಿಗ್ರೂಪ್‌ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅಜಯ್ ಅವರು ಭಾರತದಲ್ಲಿ ಕೆಎಫ್‌ಸಿ ಹಾಗೂ ಪಿಜಾ ಹಟ್ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಜಯ್ ಬಾಂಗಾ ಅವರು 2010ರಲ್ಲಿ ಮಾಸ್ಟರ್‌ಕಾರ್ಡ್‌ನ ಸಿಇಒ ಹಾಗೂ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2020ರಲ್ಲಿ ಅಜಯ್ ಬಾಂಗಾ ಅವರು ಇಂಟರ್‌ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪ್ರಸ್ತುತ ಅಜಯ್ ಬಾಂಗಾ ಅವರು ಪ್ರೈವೆಟ್ ಇಕ್ವಿಟಿ ಕಂಪೆನಿಯಾದ ಜನರಲ್ ಅಟ್ಲಾಂಟಿಕಾದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಅಜಯ್ ಬಂಗಾ ಅವರ ಆಸ್ತಿ ಹಾಗೂ ವೇತನ: ಸಿಎನ್‌ಬಿಸಿ ಪ್ರಕಾರ, 2021ರಲ್ಲಿ ಅಜಯ್ ಬಾಂಗಾ ಅವರ ನಿವ್ವಳ ಆಸ್ತಿ ಮೌಲ್ಯವು 206 ಅಮೆರಿಕನ್ ಡಾಲರ್(17 ಬಿಲಿಯನ್) ಆಗಿದೆ. ಅಜಯ್ ಬಾಂಗಾ ಅವರು ಮಾಸ್ಟರ್ ಕಾರ್ಡ್‌ನಲ್ಲಿ 113,123,489 ಅಮೆರಿಕನ್ ಡಾಲರ್ ಷೇರು ಹೊಂದಿದ್ದಾರೆ. ವರದಿಗಳ ಪ್ರಕಾರ, ಅಜಯ್ ಬಾಂಗಾ ಅವರು 23,250,000(1.92 ಬಿಲಿಯನ್) ಅಮೆರಿಕನ್ ಡಾಲರ್ ಮೊತ್ತದಷ್ಟು ವೇತನವನ್ನು ಹೊಂದಿದ್ದಾರೆ. ಅಂದರೆ ಅವರು ಪ್ರತಿದಿನ ಅವರು 5.2 ಮಿಲಿಯನ್(52 ಲಕ್ಷ ರೂ.) ಸಂಪಾದನೆ ಮಾಡುತ್ತಿದ್ದಾರೆ.
ಅಜಯ್ ಬಾಂಗಾ ಅವರ ಕೌಟುಂಬಿಕ ಹಿನ್ನಲೆ: ಅಜಯ್ ಬಾಂಗಾ ಅವರ ತಂದೆ ಹರ್ಭಜನ್ ಬಾಂಗಾ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದರು. ಅವರ ಕುಟುಂಬವು ಪಂಜಾಬ್‌ನ ಜಲಂದರ್ ಮೂಲದವರು.
ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಘೋಷಣೆ
ವಿಶ್ವ ಬ್ಯಾಂಕ್‌ನ 25 ಸದಸ್ಯರ ಸಮಿತಿಯು ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ, ಭಾರತೀಯ- ಅಮೇರಿಕನ್, ಯುಎಸ್ ನಾಮನಿರ್ದೇಶಿತ ಅಜಯ್ ಬಂಗಾರನ್ನು ವಿಶ್ವಸಂಸ್ಥೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನವನ್ನು ಅಜಯ್ ಬಂಗಾ ಜೂನ್ 2ರಿಂದ ವಹಿಸಿಕೊಳ್ಳಲಿದ್ದಾರೆ ಎಂದು ಬ್ಯಾಂಕ್ ಘೋಷಣೆ ಮಾಡಿದೆ. ಅಜಯ್ ಬಂಗಾ ಭಾರತ ಮೂಲದವರಾಗಿದ್ದು, ಹಣಕಾಸು ಕ್ಷೇತ್ರದಲ್ಲಿ ತಜ್ಞರಾಗಿದ್ದಾರೆ.
ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ 63 ವರ್ಷದ ಅಜಯ್ ಬಂಗಾರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅಜಯ್ ಬಂಗಾರನ್ನು ವಿಶ್ವ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ವಿಶ್ವಬ್ಯಾಂಕ್‌ನ ಮುಖ್ಯಸ್ಥರಾದ ಡೇವಿಡ್ ಮಾಲ್ಪಾಸ್ ಶೀಘ್ರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬಳಿಕ ಯುಎಸ್ ಅಧ್ಯಕ್ಷ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾರನ್ನು ಶಿಫಾರಸು ಮಾಡಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications