ಜೀವನದಲ್ಲಿ ಯಶಸ್ವಿಯಾಗಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಇದರಲ್ಲಿ ಕೆಲವರು ಯಶಸ್ವಿಯಾಗಬಹುದು ಮತ್ತೆ ಕೆಲವರು ವಿಫಲರಾಗಬಹುದು. ಟೀ ಮಾರುತ್ತ ಜೀವನ ಸಾಗಿಸುತ್ತಾ ಸಾಮಾನ್ಯ ವ್ಯಕ್ತಿಯೋರ್ವ ಲಕ್ಷಾಂತರ ರೂ. ಸಂಪಾದಿಸುವ ಕೃಷಿಕನಾಗಿ ಪರಿವರ್ತನೆಗೊಂಡ ಯಶಸ್ಸಿನ ಕಥೆ ಇದು.
ರಾಜಸ್ಥಾನದ ಹನುಮಾನ್‌ಗಢದ ಪರ್ಲಿಕಾ ಗ್ರಾಮದ ನಿವಾಸಿ 31 ವರ್ಷದ ಅಜಯ್ ಸ್ವಾಮಿ ಈ ಕಥೆಯ ಹೀರೋ ಆಗಿದ್ದಾರೆ. ರಾಜಸ್ಥಾನದಲ್ಲಿ ಟೀ ಸ್ಟಾಲ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದಅಜಯ್ ಸ್ವಾಮಿ ಅವರು ಒಂದು ದಿನ ದಿನಪತ್ರಿಕೆ ಓದುತ್ತಿದ್ದಾಗ ಹುಟ್ಟಿಕೊಂಡ ಒಂದು ಸಣ್ಣ ಆಲೋಚನೆ ಅವರ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ದಿನಪತ್ರಿಕೆಯಲ್ಲಿ ಓದುತ್ತಿರುವ ಅಲೋವೆರಾ ಕೃಷಿಯ ಬಗ್ಗೆ ತಿಳಿದುಕೊಂಡು ಇದರತ್ತ ಅವರ ಆಸಕ್ತಿ ಹುಟ್ಟಿಕೊಂಡಿತು.

ತಮ್ಮ ತಂದೆ ಆಕಸ್ಮಿಕವಾಗಿ ಮೃತಪಟ್ಟಾಗ ರಾಜಸ್ಥಾನದಲ್ಲಿ ಟೀ ಸ್ಟಾಲ್ ನಡೆಸುತ್ತಾ ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಯತ್ನಿಸುತ್ತಿದ್ದರು. ಟೀ ವ್ಯಾಪಾರವೇನೋ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಒಳ್ಳೆಯ ಜೀವನ ಹೊಂದುವುದು ಹಾಗೂ ಅಭಿವೃದ್ಧಿ ಕಾಣಬೇಕಾದರೆ ಇನ್ನೂ ಹೆಚ್ಚಿನದವನ್ನು ಸಾಧಿಸಬೇಕು ಎಂಬುದಾಗಿ ಅಜಯ್ ಅಂದುಕೊಂಡಿದ್ದರು. ಹೀಗಾಗಿ ಪಿತ್ರಾರ್ಜಿತವಾಗಿ ಒಂದು ಎಕರೆ ಜಮೀನು ಇವರಿಗೆ ದೊರೆತಾಗ , ಕೃಷಿಯಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ ತಮ್ಮ ಜಮೀನನ್ನು ಅಲೋವೆರಾ ಕೃಷಿಗೆ ಬಳಸಿಕೊಳ್ಳಲು ನಿರ್ಧರಿಸಿದರು.
ಅಜಯ್ ಅವರು ಇಂಟರ್ ನೆಟ್ ನಲ್ಲಿ ಅಲೋವೆರಾ ಕೃಷಿಯ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಇದಲ್ಲದೇ ಈ ಕೃಷಿಯ ಬಗ್ಗೆ ತಿಳಿದ ರೈತರ ಅನುಭವ ಕೇಳಿ ತಿಳಿದುಕೊಳ್ಳುತ್ತಿದ್ದರು. ಹಳ್ಳಿಯೊಂದರಿಂದ ಒಂದಷ್ಟು ಅಲೋವೆರಾ ಗಿಡವನ್ನು ಖರೀದಿಸಿ ಉತ್ತಮ ಗೊಬ್ಬರಗಳನ್ನು ಬಳಸಿ ಪೋಷಿಸಿದರು. ಒಂದೂವರೆ ವರ್ಷಗಳ ನಂತರ ಚೆನ್ನಾಗಿ ಬೆಳೆದ ಬೆಳೆಯನ್ನು ಕೊಯ್ಲು ಮಾಡಿದರು. ಆದರೆ ಈ ವೇಳೆ ಅವರು ತಾವು ಬೆಳೆದ ಬೆಳೆಗೆ ಖರೀದಿದಾರರನ್ನು ಹುಡುಕುವುದು ಸುಲಭ ಸಾಧ್ಯವಲ್ಲ ಎಂಬ ಸತ್ಯವನ್ನು ಅರಿತುಕೊಂಡರು.
ಈ ಸವಾಲನ್ನು ಮೆಟ್ಟಿನಿಲ್ಲಲು ಅಜಯ್ ಅವರು ಅಲೋವೆರಾದ ಉಪ ಉತ್ಪನ್ನಗಳನ್ನು ತಯಾರಿಸಲು ನಿರ್ಧರಿಸಿ ಇದರಿಂದ ಆರಂಭಿಕವಾಗಿ ಜ್ಯೂಸ್ ತಯಾರಿಸಲಾರಂಭಿಸಿದರು. ಇವರು ತಯಾರಿಸಿದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಂತೆ, ಅವರು ಸಂಪೂರ್ಣವಾಗಿ ಕೃಷಿಯತ್ತ ಕೇಂದ್ರೀಕರಿಸಲು ತಮ್ಮ ಟೀಸ್ಟಾಲ್ 2002 ರಲ್ಲಿ ಮುಚ್ಚಿದರು. ಆರಂಭದಲ್ಲಿ ಗ್ರಾಮದಲ್ಲಿ ಸಣ್ಣ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದರು. ನಂತರ ಅವರು ಅಲೋವೆರಾ ಜ್ಯೂಸ್ ಅನ್ನು ಮಾರಾಟ ಮಾಡಲು ಇತರ ಕಂಪನಿಗಳೊಂದಿಗೆ ಪಾಲುದಾರರಾಗುತ್ತಾರೆ ಕ್ರಮೇಣ ಇದಾದ ನಂತರ ಇದಕ್ಕೆ ಬೇಡಿಕೆ ಹೆಚ್ಚಾಯಿತು
ಜೊತೆಗೆ "ಕೃಷಿ ವಿಜ್ಞಾನ ಕೇಂದ್ರ"ದಲ್ಲಿ ಸಾಬೂನು, ಶಾಂಪೂ,ಟೂತ್ಪೇಸ್ಟ್. ಕ್ರೀಂ, ಸ್ವೀಟ್ಸ್ ಸೇರಿದಂತೆ ವಿವಿಧ ಅಲೋವೆರಾ ಉತ್ಪನ್ನಗಳನ್ನು ತಯಾರಿಸುವುದನ್ನು ಕಲಿತುಕೊಂಡರು. ಇವರು ತಯಾರಿಸಿದ "ಅಲೋವೆರಾ ಲಡ್ಡು," ಕೆ.ಜಿ.ಗೆ ₹350 ಬೆಲೆಗೆ ಮಾರಾಟವಾಗುತ್ತಿದೆ.
ಅಜಯ್ ತಮ್ಮ ಜಮೀನಿನಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ತಮ್ಮದೇ ಆದ ಬ್ರಾಂಡ್ ಲಾಂಚ್ ಮಾಡಿದರು. ಇಂದು, ಅವರ ಕಂಪನಿಯು 45ಕ್ಕೂ ಹೆಚ್ಚು ವಿವಿಧ ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದು ವಾರ್ಷಿಕವಾಗಿ ₹ 10 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುತ್ತಿದೆ. ಅವರ ಜೀವನ ಯಶೋಗಾಥೆಯು ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮವಿದ್ದರೆ ಯಾರಾದರೂ ತಮ್ಮ ಗುರಿಗಳನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಅಲೋವೆರಾ ಬೆಳೆಯಲು ಸುಲಭವಾಗಿದ್ದು, ಒಂದು ಎಕರೆ ಜಮೀನಿನಲ್ಲಿ ಸುಮಾರು 1200 ಅಲೋವೆರಾ ಗಿಡಗಳನ್ನು ಬೆಳೆಯಬಹುದು ನೀರಿನ ಕೊರತೆಯಿದ್ದರೂ ಈ ಬೆಳೆಯನ್ನು ಸುಲಭವಾಗಿ ಬೆಳೆಯಬಹುದು ಇದರ ವೆಚ್ಚವೂ ಕಡಿಮೆ. ಅಲೋವೆರಾ ಬೆಳೆಯನ್ನು 3 ರಿಂದ 6 ತಿಂಗಳಲ್ಲಿ ಕೊಯ್ಲು ಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಒಂದು ವರ್ಷದವರೆಗೆ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಅಜಯ್.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications