ನಟಿ ಅಲಿಯಾ ಭಟ್ ತನ್ನ 30ನೇ ವರ್ಷ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಯುಗದ ಅತೀ ಜನಪ್ರಿಯ ನಟಿಯರಲ್ಲಿ ಅಲಿಯಾ ಭಟ್ ಕೂಡಾ ಒಬ್ಬರಾಗಿದ್ದಾರೆ. ಆದರೆ ನಟನೆ ಮಾತ್ರವಲ್ಲದೆ ಅಲಿಯಾ ಭಟ್ ಯಶಸ್ವಿ ಮಹಿಳಾ ಉದ್ಯಮಿ ಎಂಬುವುದು ನಿಮಗೆ ತಿಳಿದಿದೆಯೇ?. ತನ್ನ ಸಂಸ್ಥೆಯಿಂದ ಭಾರೀ ಆದಾಯವನ್ನು ಅಲಿಯಾ ಪಡೆಯುತ್ತಿದ್ದಾರೆ. ಅಲಿಯಾ ಭಟ್‌ನ ಸಂಸ್ಥೆಯು ಆರಂಭವಾದ ಒಂದು ವರ್ಷದಲ್ಲಿ 150 ಕೋಟಿ ರೂಪಾಯಿ ಆದಾಯ ಸೃಷ್ಟಿಸಿದೆ.
ಅಲಿಯಾ ತಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎಡ್-ಅ-ಮಮ್ಮ ಅನ್ನು ಮತ್ತೆ ಆರಂಭ ಮಾಡಿದ್ದಾರೆ. ಇದಾದ ಒಂದು ವರ್ಷದಲ್ಲೇ ಸಂಸ್ಥೆಯ ಮೌಲ್ಯವು 150 ಕೋಟಿ ರೂಪಾಯಿಗೆ ತಲುಪಿದೆ. 12 ತಿಂಗಳಿನಲ್ಲಿ ಸಂಸ್ಥೆಯಲ್ಲಿ 10x ಬೆಳವಣಿಗೆ ಕಂಡು ಬಂದಿದೆ. ಅಂದರೆ 10 ಪಟ್ಟು ಬೆಳವಣಿಗೆ ಕಂಡು ಬಂದಿದೆ. ಇದು ಅತೀ ದೊಡ್ಡ ಬೆಳವಣಿಗೆಯಾಗಿದೆ. ಅಲಿಯಾ ಭಟ್‌ನ ಈ ಸಂಸ್ಥೆಯ ಬಗ್ಗೆ, ಅಲಿಯಾ ಭಟ್ ಬಗ್ಗೆ ತಿಳಿಯೋಣ ಮುಂದೆ ಓದಿ...

ಅಲಿಯಾ ಭಟ್ ಸಂಸ್ಥೆಯ ಬಗ್ಗೆ ಮಾಹಿತಿ
ಅಲಿಯಾ ಭಟ್‌ನ ಎಡ್-ಅ-ಮಮ್ಮ (Ed-a-Mamma) ಸಂಸ್ಥೆಯು 2ರಿಂದ 14 ವರ್ಷದ ಮಕ್ಕಳಿಗೆ ಬಟ್ಟೆಯನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ 800 ವಸ್ತುಗಳ ಆಯ್ಕೆಯಿದೆ. ಇನ್ನು ಈ ಬಗ್ಗೆ ಮಾತನಾಡಿದ ಅಲಿಯಾ ಭಟ್ ನಾನು ಈಗಲೂ ಉದ್ಯಮದ ಬಗ್ಗೆ, ವ್ಯಾಪಾರದ ಬಗ್ಗೆ ಕಲಿಯುತ್ತಿರುವುದಷ್ಟೇ ಎಮದು ಹೇಳಿಕೊಂಡಿದೆ. ಹಾಗೆಯೇ ಸಂಸ್ಥೆಯು ಒಂದು ವರ್ಷದಲ್ಲೇ ಮಾಡಿದ ಸಾಧನಯಿಂದ ಹೆಮ್ಮೆಯಾಗಿದೆ ಎಂದಿದ್ದಾರೆ.
"ಒಂದು ಸಣ್ಣ ಕನಸು ಈಗ 150 ಕೋಟಿ ರೂಪಾಯಿ ಮೌಲ್ಯದ ಉದ್ಯಮವಾಗಿ ಪರಿವರ್ತನೆ ಆಗುತ್ತಿದೆ," ಎಂದು ಕೂಡಾ ಅಲಿಯಾ ಭಟ್ ತಿಳಿಸಿದ್ದಾರೆ. ಈ ಬೆಳವಣಿಗೆಗೆ ತನ್ನ ಸಂಸ್ಥೆಯೇ ಕಾರಣ ಎಂದು ಅಲಿಯಾ ಭಟ್ ಹೇಳಿಕೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಈ ಸಂಸ್ಥೆಯು ಮೊದಲು ಆರಂಭಿಸಲಾಗಿದೆ. ಹಲವಾರು ಸವಾಲುಗಳು ನಡುವೆಯೂ 1 ಕೋಟಿ ಆದಾಯವನ್ನು ಪಡೆದಿದೆ. ಅಲಿಯಾ ಭಟ್‌ರನ್ನು ಕಳೆದ ತಿಂಗಳು ಸಂಸ್ಥೆಯ ಸಹಸಂಸ್ಥಾಪಕರಾಗಿ ಘೋಷಣೆ ಮಾಡಲಾಗಿದೆ.
ಈ ಸಂಸ್ಥೆಯಲ್ಲಿ ಅಧಿಕ ಮೊತ್ತವನ್ನು ಅಲಿಯಾ ಭಟ್ ಹೂಡಿಕೆ ಮಾಡಿದ್ದಾರೆ. ಅಲಿಯಾ ಭಟ್ ನಾಯ್ಕ ಮತ್ತು ಫೂಲ್.ಕಾಮ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ನಾನು ಸಂಸ್ಥೆಯ ಮೇಲೆ ಹೂಡಿಕೆ ಮಾಡಿರುವುದು ಅಲ್ಲ, ನಾನು ವ್ಯಕ್ತಿಗಳು ಮತ್ತು ಅವರ ಐಡಿಯಾದ ಮೇಲೆ ಹೂಡಿಕೆ ಮಾಡಿದ್ದೇನೆ ಎಂದು ಅಲಿಯಾ ಭಟ್ ತಿಳಿಸಿದ್ದಾರೆ. ಅಲಿಯಾ ಭಟ್ ಸ್ಟೈಲ್‌ಕ್ರಾಕರ್ ಮೇಲೆಯೂ ಹೂಡಿಕೆ ಮಾಡಿದ್ದಾರೆ.
ಸಣ್ಣ ವಯಸ್ಸಿನಲ್ಲಿ ಅಲಿಯಾ ಭಟ್ ತನ್ನ ತಂದೆ ಮಹೇಶ್ ಭಟ್‌ರ ಕಾಲಿಗೆ ಕ್ರೀಮ್ ಆಗುವುದಕ್ಕಾಗಿ 500 ರೂಪಾಯಿ ಪಡೆಯುತ್ತಿದ್ದರು. ಅಲಿಯಾ ಭಟ್ ನಿವ್ವಳ ಆದಾಯ 299 ಕೋಟಿ ರೂಪಾಯಿ ಆಗಿದೆ. ಫೋರ್ಬ್ಸ್ ಪ್ರಕಾರ 2017ರಲ್ಲಿ ಅಲಿಯಾ ಭಟ್ ಆದಾಯ 39.88 ಕೋಟಿ ರೂಪಾಯಿ ಆಗಿತ್ತು. 2018ರಲ್ಲಿ ಅಲಿಯಾ ಭಟ್ ಆದಾಯ 58.83 ಕೋಟಿ ರೂಪಾಯಿ ಆಗಿದೆ. 2019ರಲ್ಲಿ ಆದಾಯವು 59.21 ಕೋಟಿ ರೂಪಾಯಿ ಆಗಿದೆ.
ಒಂದು ಪಾತ್ರಕ್ಕೆ 20 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ವರದಿಯಾಗಿದೆ. ಅಲಿಯಾ ಭಟ್ ಎರಡು ಮನೆಗಳನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಅಲಿಯಾ ಭಟ್ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಬಿಎಂಡಬ್ಲ್ಯೂ 7 ಸಿರೀಸ್, ಆಡಿ ಎ6, ಆಡಿ ಕ್ಯೂ7, ರೇಂಜ್ ರೋವರ್ ವಾಗ್ಯೂ ಕಾರುಗಳನ್ನು ಹೊಂದಿದ್ದಾರೆ. ಇದು ಮೂರು ಕೋಟಿ ರೂಪಾಯಿ ಮೌಲ್ಯದ್ದಾಗಿದೆ.


Click it and Unblock the Notifications