Ameera Shah: ತಂದೆಯ ಕ್ಲಿನಿಕ್ ಅನ್ನು 6478 ಕೋಟಿ ರೂ. ಮೌಲ್ಯದ ಸಂಸ್ಥೆಯಾಗಿ ಬೆಳೆಸಿದ ಅಮೀರ ಶಾ!

ಮುಂಬೈನ ವೈದ್ಯ ಕುಟುಂಬವೊಂದರಲ್ಲಿ ಜನಿಸಿದ ಅಮೀರ ಶಾ ಅವರು ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್‌ ನ ಪ್ರಮೋಟರ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ . ಈ ಸಂಸ್ಥೆ ಡಯಾಗ್ನೋಸ್ಟಿಕ್ ಸೆಂಟರ್‌ಗಳನ್ನು ನಡೆಸುತ್ತಿದೆ. ಇವರ ತಂದೆ ರೋಗಶಾಸ್ತ್ರಜ್ಞರಾದ ಡಾ| ಸುಶೀಲ್ ಶಾ ಮತ್ತು ತಾಯಿ ಸ್ತ್ರೀರೋಗತಜ್ಞೆ ಡಾ| ದುರು ಶಾ ಆಗಿದ್ದಾರೆ.

ಅಮೀರ ಶಾ ವಿದೇಶದಲ್ಲಿ ವ್ಯಾಸಂಗ ಮಾಡಿದ್ದು, ಫೈನಾನ್ಸ್ ಕ್ಷೇತ್ರದಲ್ಲಿ ವೃತ್ತಿಪರರಾಗಿದ್ದರು. ಉದ್ಯಮಿಯಾಗಿ ಪರಿವರ್ತನೆಯಾಗುವ ಮೊದಲು ಶಾ ಅವರು ಗೋಲ್ಡ್‌ಮ್ಯಾನ್‌ ಸ್ಯಾಚ್ಸ್‌ನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಂದೆಯ ಕ್ಲಿನಿಕ್ ಅನ್ನು ಕೋಟ್ಯಾಂತರ ರೂ. ಸಂಸ್ಥೆಯಾಗಿ ಬೆಳೆಸಿದ ಅಮೀರ!

ತಮ್ಮ ತಂದೆಗಿದ್ದ ವೈದ್ಯಕೀಯ ಪ್ರಾವೀಣ್ಯತೆಯನ್ನು ಹಾಗೂ ತಮ್ಮಲ್ಲಿದ್ದ ವ್ಯವಹಾರ ಜ್ಞಾನವನ್ನು ಬಳಸಿಕೊಂಡು ಡಯಾಗ್ನೋಸ್ಟಿಕ್ ಸೆಂಟರ್‌ ಗಳ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದರು. ಈ ಸಂಸ್ಥೆಯ ಮಾರುಕಟ್ಟೆ ಮೌಲ್ಯ 6478 ಕೋಟಿ ರೂಪಾಯಿಗೆ ತಲುಪಿದೆ.

ಅಮೀರ ಶಾ ಮುಂಬೈನ ಎಚ್. ಆರ್. ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಅಧ್ಯಯನ ಮಾಡಿದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣಿಸಿ ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಫೈನಾನ್ಸ್ ನಲ್ಲಿ ಪದವಿ ಪಡೆದರು. ಇವರ ಸಹೋದರಿ ಅಪರ್ಣಾ ಶಾ ತಳಿವಿಜ್ಞಾನಿಯಾಗಿದ್ದಾರೆ.

ಅವರು ಯಶಸ್ವಿಯಾಗಿ ತಮ್ಮ ಕಂಪನಿಯನ್ನು ಪ್ರಾರಂಭಿಸಿದ ನಂತರ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಓನರ್-ಪ್ರೆಸಿಡೆಂಟ್ ಮ್ಯಾನೇಜ್ಮೆಂಟ್ ಬಗ್ಗೆ ಅಧ್ಯಯನ ಮಾಡಿದರು. ಅಮೀರ ಶಾ ಅವರು ಗೋಲ್ಡ್‌ಮನ್ ಸ್ಯಾಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ತಾನು ಮಾಡುತ್ತಿರುವ ಕೆಲಸವನ್ನು ಆನಂದಿಸುತ್ತಿರಲಿಲ್ಲ ಎಂದು ಹಳೆಯ ಸಂದರ್ಶನದಲ್ಲಿ ಹೇಳಿದ್ದಾರೆ.

ಹಣಕಾಸು ಸೇವೆಗಳ ಉದ್ಯೋಗವನ್ನು ಇಷ್ಟಪಡದೇ ಕೆಲಸವನ್ನು ತೊರೆದು ತನ್ನ ತಂದೆಯ ಸಲಹೆಯ ಮೇರೆಗೆ ಭಾರತಕ್ಕೆ ಬಂದು ಕೇವಲ ಐದು ಜನರ ತಂಡದೊಂದಿಗೆ ಕೆಲಸ ಪ್ರಾರಂಭಿಸಿದರು. ತಮ್ಮ ಸ್ಟಾರ್ಟಪ್‌ಗಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರಿಗೆ ಕೇವಲ 21 ವರ್ಷವಾಗಿತ್ತು.

ಭಾರತಕ್ಕೆ ಬಂದಾಗ ದಕ್ಷಿಣ ಮುಂಬೈನಲ್ಲಿ ಬೃಹತ್ ಲ್ಯಾಬ್ ಆಗಿದ್ದರೂ ತಮ್ಮ ತಂದೆಯ ಲ್ಯಾಬ್‌ನಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಅರ್ಥಮಾಡಿಕೊಂಡರು. ಲ್ಯಾಬ್‌ನಲ್ಲಿ ಇಮೇಲ್‌, ಕಂಪ್ಯೂಟರ್‌ ಇಂತಹ ಯಾವುದೇ ಸೌಲಭ್ಯಗಳಿರಲಿಲ್ಲ. ತಂದೆ ಸರಣಿಯಾಗಿ ಡಯಾಗ್ನೋಸ್ಟಿಕ್ಸ್ ಸೆಂಟರ್ ಗಳನ್ನು ಹುಟ್ಟುಹಾಕಲು ಬಯಸಿದ್ದರೂ ಆ ಬಗ್ಗೆ ಯಾವುದೇ ಯೋಜನೆ ಹಾಕಿಕೊಂಡಿರಲಿಲ್ಲ. ಹೀಗಾಗಿ ತಮ್ಮ ತಂದೆಯ ಕನಸನ್ನು ನನಸಾಗಿಸಲು ಮುಂದಾದರು.

ಲ್ಯಾಬ್‌ನ ಸುಗಮ ಕಾರ್ಯನಿರ್ವಹಣೆಗಾಗಿ ಹಲವು ಯೋಜನೆ ಮತ್ತು ಕಾರ್ಯವಿಧಾನಗಳನ್ನು ರಚಿಸಿ ಯಶಸ್ವಿಯಾದರು. ತಂದೆಯ ಬೆಂಬಲದೊಂದಿಗೆ ಏಕೈಕ ಡಯಾಗ್ನೋಸ್ಟಿಕ್ ಲ್ಯಾಬ್ ಅನ್ನು ಮೆಟ್ರೋಪೊಲಿಸ್ ಹೆಲ್ತ್‌ಕೇರ್ ಆಗಿ ಪರಿವರ್ತಿಸಿದರು. ಅವರು ಒಂದು ರೀತಿ ತನ್ನ ಕಂಪನಿಗೆ ತಾನೇ ಸಿಇಒ ಆದರು. ತಳಮಟ್ಟದಿಂದಲೇ ಕಂಪನಿಯ ಕಾರ್ಯ ವಿಧಾನವನ್ನು ಸರಿಪಡಿಸಿಕೊಂಡು ಬಂದರು.

ಕಸ್ಟಮರ್ ಕೇರ್ ಕೌಂಟರ್ ನಲ್ಲಿ ರೋಗಿಗಳ ಜೊತೆ ತಾವೇ ಖುದ್ದು ಮಾತನಾಡತೊಡಗಿದರು. ಹೀಗೆ ದಿನನಿತ್ಯ ಎದುರಾಗುವ ಸಮಸ್ಯೆ ಪರಿಹರಿಸಲು ಪ್ರಾರಂಭಿಸಿದರು.ಕಂಪನಿಯ ಹೆಸರನ್ನು ಡಾ| ಸುಶೀಲ್ ಶಾ ಲ್ಯಾಬೋರೇಟರಿಯೊಂದ ಮೆಟ್ರೊಪೊಲಿಸ್ ಎಂದು ಬದಲಾಯಿಸಿದರು. ಜೊತೆಗೆ ಪಾಲುದಾರರೊಂದಿಗೆ ಇತರೆಡೆಯೂ ಪ್ರಯೋಗಾಲಯಗಳನ್ನು ಪ್ರಾರಂಭಿಸಿದರು. ಡಾ ಶ್ರೀನಿವಾಸನ್ ಎಂಬ ರೋಗಶಾಸ್ತ್ರಜ್ಞರೊಂದಿಗೆ ಚೆನ್ನೈನಲ್ಲಿ ಇವರ ಮೊದಲ ಟೈ ಅಪ್ ಆಗಿತ್ತು.

ಶೀಘ್ರವಾಗಿ ಕಂಪನಿ ಬೆಳೆಯತೊಡಗಿದಾಗ, 2006ರಲ್ಲಿಅವರು ತಮ್ಮ ಮೊದಲ ಬಾಹ್ಯ ಫಂಡಿಂಗ್ ಪಡೆದುಕೊಂಡರು. ಜೊತೆಗೆ ಉದ್ಯಮದಲ್ಲಿ ಗಳಿಸಿದ ಹಣವನ್ನುಉದ್ಯಮಕ್ಕೆ ಹೂಡಿಕೆ ಮಾಡಿದರು. 2002ರಲ್ಲಿ ಕೇವಲ ಒಂದು ಲ್ಯಾಬ್ ಹೊಂದಿದ್ದ ಅವರ ಆದಾಯವು 7 ಕೋಟಿ ರೂ. ಆಗಿತ್ತು. 2023ರಲ್ಲಿ ಅವರ ಆದಾಯ 1148 ಕೋಟಿ ರೂಪಾಯಿ ತಲುಪಿತು.

ಇಂದು, ಕಂಪನಿಯು 1500 ಪ್ಲಸ್ ಸಂಗ್ರಹಣಾ ಕೇಂದ್ರಗಳನ್ನು ಮತ್ತು 125 ಡಯಾಗ್ನೋಸ್ಟಿಕ್ ಲ್ಯಾಬ್‌ ಹೊಂದಿದ್ದು ಏಳು ದೇಶಗಳಲ್ಲಿ ಕಾರ್ಯಚರಿಸುತ್ತಿದೆ. ಇವರು 2015 ರಲ್ಲಿ ವರ್ಲ್ಡ್ ಎಕನಾಮಿಕ್ ಫೋರಮ್ ಗೌರವಿಸಲ್ಪಟ್ಟಿದ್ದಾರೆ. ಅವರು ಫೋರ್ಬ್ಸ್ ಭಾರತದ ಟೈಕೂನ್‌ಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+