ತಲ್ಲೀನಗೊಳಿಸುವ ಮತ್ತು ಮೋಡಿ ಮಾಡುವ ಪೌರಾಣಿಕ ಕಥೆಗಳಿಗೆ ಹೆಸರುವಾಸಿಯಾದ ಖ್ಯಾತ ಲೇಖಕರ ಅಮೀಶ್ ತ್ರಿಪಾಠಿ ತಮ್ಮ ಅಭಿಮಾನಿಗಳೊಂದಿ ಸಿಹಿ ಸುದ್ದಿ ಹಂಚಿಕೊಂಡಿದ್ದು, ತಮ್ಮ ಗೆಳತಿ ಶಿವಾನಿ ಜೊತೆ ದಾಂಪತ್ಯ ಜೀವನ ಕಾಲಿರಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು ಮಂಗಳವಾರ ಲಂಡನ್‌ನಲ್ಲಿ ನಡೆದ ಸರಳ ನೋಂದಣಿ ಸಮಾರಂಭದಲ್ಲಿ ಶಿವಾನಿ ಅವರೊಂದಿಗೆ ವಿವಾಹವಾಗಿರುವುದಾಗಿ ಖ್ಯಾತ ಲೇಖಕ ಟ್ವಿಟರ್ ಖಾತೆಯಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಶಿವನ ಕೃಪೆ , ನಿಮ್ಮೆಲ್ಲರ ಪ್ರೀತಿಯೊಂದಿಗೆ ಲಂಡನ್ ನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದೇನೆ ಎಂದಿದ್ದಾರೆ.

ತಲ್ಲೀನಗೊಳಿಸುವ ಕಥೆ ಹೇಳುವ ಲೇಖಕ ಅಮೀಶ್ ತ್ರಿಪಾಠಿ ಯಾರು?
ಅಮೀಶ್ ತ್ರಿಪಾಠಿ ಪ್ರಸಿದ್ಧ ಬರಹಗಾರರಾಗಿದ್ದು, ಅವರು ತಮ್ಮ ಶಿವ ಸರಣಿ ಮತ್ತು ರಾಮ್ ಚಂದ್ರ ಸರಣಿ ಪುಸ್ತಕಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಮುಂಬೈನಲ್ಲಿ ಜನಿಸಿದ್ದ ಅಮೀಶ್ ತ್ರಿಪಾಠಿ ಅಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಅಮೀಶ್ ಅವರದ್ದು ಇದು ಎರಡನೇ ವಿವಾಹವಾಗಿದ್ದು ಪ್ರೀತಿ ವ್ಯಾಸ್ ಅವರ ಮೊದಲ ಪತ್ನಿಯಾಗಿದ್ದಾರೆ. ಮೊದಲ ಮದುವೆಯು ಸುಮಾರು 20 ವರ್ಷಗಳ ಬಳಿಕ ಅಂದರೆ 2020 ರಲ್ಲಿಇಬ್ಬರೂ ಪರಸ್ಪರ ದೂರವಾದರು.
ಅಮೀಶ್ ತ್ರಿಪಾಠಿ ಐಐಎಂ ಕಲ್ಕತ್ತಾದ ಹಳೆಯ ವಿದ್ಯಾರ್ಥಿಯಾಗಿದ್ದು ಅವರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಡೆವಲಪ್ಮೆಂಟ್ ಬ್ಯಾಂಕ್ ಆಫ್ ಸಿಂಗಾಪುರ್ ಸೇರಿದಂತೆ 14 ವರ್ಷಗಳ ಕಾಲ ಮಾರ್ಕೆಟಿಂಗ್ ಮತ್ತು ಪ್ರಾಡಕ್ಟ್ ಮ್ಯಾನೇಜರ್ ಆಗಿ ಫೈನಾನ್ಸಿಯಲ್ ಸರ್ವಿಸಸ್ ಇಂಡಸ್ಟ್ರಿ ಸೇವೆ ಸಲ್ಲಿಸಿದ್ದಾರೆ. ಅವರು ಉದ್ಯೋಗಿಯಾಗಿ IDBI ಫೆಡರಲ್ ಲೈಫ್ ಇನ್ಶುರೆನ್ಸ್‌ನಲ್ಲಿ ಕೊನೆಯದಾಗಿ ಕೆಲಸ ಮಾಡಿದ್ದಾರೆ.
2011 ರಲ್ಲಿ ಅವರ ಎರಡನೇ ಪುಸ್ತಕದ ಬಿಡುಗಡೆಯೊಂದಿಗೆ ಪೂರ್ಣ ಸಮಯದ ಬರವಣಿಗೆಗೆ ಮೀಸಲಿರಿಸಿ ವೃತ್ತಿ ಜೀವನ ತೊರೆದರು. ತಮ್ಮ ಬರವಣಿಗೆಗಳ ಮೂಲಕವೇ ಈಗ ಮಿಲಿಯನ್ ಗಳಲ್ಲಿ ಸಂಪಾದಿಸುತ್ತಾರೆ. ಅವರು ರೇಮಂಡ್ ಕ್ರಾಸ್‌ವರ್ಡ್ ಬುಕ್ ಪ್ರಶಸ್ತಿ ಮತ್ತು ದೈನಿಕ್ ಭಾಸ್ಕರ್ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅವರು ಟಿವಿ ಸಾಕ್ಷ್ಯಚಿತ್ರಗಳಿಗೆ ಹೋಸ್ಟ್ ಆಗಿದ್ದು ಇತ್ತೀಚೆಗೆ ಡಿಸ್ಕವರಿ ಟಿವಿಯ, ಲೆಜೆಂಡ್ಸ್ ಆಫ್ ದಿ ರಾಮಾಯಣದ ಹೋಸ್ಟ್ ಆಗಿದ್ದರು. ಅಮೀಶ್ ಬರಹಗಾರ, ಹೋಸ್ಟ್ ಅಲ್ಲದೇ 2019 ರಲ್ಲಿ ಇಂಗ್ಲೆಡ್ ಲ್ಲಿನ ಭಾರತದ ಹೈ ಕಮಿಷನ್‌ನ ಸಾಂಸ್ಕೃತಿಕ ವಿಭಾಗವಾದ ನೆಹರು ಸೆಂಟರ್ (ಲಂಡನ್) ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿದ್ದಾರೆ.
ಅವರ 'ದಿ ಶಿವ ಟ್ರೈಲಾಜಿ' ಪುಸ್ತಕ ಸರಣಿಯೂಅತ್ಯಂತ ಕಡಿಮೆ ಅವಧಿಯಲ್ಲಿ ಬಹುಬೇಗ ಮಾರಾಟವಾಗಿದೆ. ಅವರ ಪುಸ್ತಕಗಳನ್ನುಒಟ್ಟಾರೆಯಾಗಿ ಭಾರತೀಯ ಮತ್ತು ಅಂತರರಾಷ್ಟ್ರೀಯ 19 ಭಾಷೆಗಳಿಗೆ ಅನುವಾದಿಸಲಾಗಿದೆ. ಅವರ ಚೊಚ್ಚಲ ಕಾದಂಬರಿ ಇಮ್ಮಾರ್ಟಲ್ಸ್ ಆಫ್ ಮೆಲುಹಾ (2010) - ಬಿಡುಗಡೆಯಾದ ಕೆಲವೇ ವಾರಗಳಲ್ಲಿ ದಾಖಲೆಯ ಮಾರಾಟವನ್ನು ಕಂಡಿದೆ..
ಈವರೆಗೆ ದಿ ಇಮ್ಮಾರ್ಟಲ್ಸ್ ಆಫ್ ಮೆಲುಹಾ (2010), ದಿ ಸೀಕ್ರೆಟ್ ಆಫ್ ದಿ ನಾಗಾಸ್ (2011), ಮತ್ತು ದಿ ಓತ್ ಆಫ್ ದಿ ವಾಯುಪುತ್ರಸ್ (2013) ಸೇರಿದಂತೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಇದೆಲ್ಲವೂ ಶಿವ ಸರಣಿ ಪುಸ್ತಕಗಳಾಗಿವೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications