ನಾಸಾದ ಮಾಜಿ ಉದ್ಯೋಗಿ ಅಮಿತಾಭ್ ಸರನ್ ಭಾರತದಲ್ಲಿ ಇವಿ ಸೂಪರ್ ಪವರ್ ಕನಸನ್ನು ನನಸುಗೊಳಿಸುವ ಆಶಯದೊಂದಿಗೆ ಆಲ್ಟಿಗ್ರೀನ್ ಪ್ರೊಪಲ್ಶನ್ ಲ್ಯಾಬ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇದು ಇಲೆಕ್ಟ್ರಿಕ್ ಮೊಬಿಲಿಟಿ ಸೊಲ್ಯೂಷನ್ಸ್‌ಗೆ ಬೇಕಾಗುವ ವಸ್ತು ತಯಾರಿಸುವ ಬೆಂಗಳೂರು ಮೂಲದ ಕಂಪನಿಯಾಗಿದೆ.
2022ರಲ್ಲಿ ಈ ಕಂಪನಿಯು 300 ಕೋಟಿ ರೂ. ಫಂಡಿಂಗ್ ಅನ್ನು ಪಡೆದುಕೊಂಡಿದೆ. ಇದರ ಹೂಡಿಕೆದಾರರಲ್ಲಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ನ್ಯೂ ಎನರ್ಜಿ(ಆರ್‌ಎನ್‌ಇಎಲ್) ಕೂಡ ಸೇರಿದೆ. ಕಂಪನಿಯಲ್ಲಿ ಸರನ್ ಅವರು ಸಿಇಒ ಆಗಿದ್ದು, ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಅವರು 700 ಕೋಟಿ ರೂಪಾಯಿ ($85 ಮಿಲಿಯನ್) ಹೊಸ ಸುತ್ತಿನ ಹಣಕಾಸು ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದಾರೆ.

350 ಮಿಲಿಯನ್ ಡಾಲರ್ ನಿವ್ವಳ ಮೌಲ್ಯ
ವರದಿಗಳು ಹೇಳುವಂತೆ, ಅಂಬಾನಿ ಬೆಂಬಲಿತ ಈ ಇವಿ ಉತ್ಪಾದನಾ ಕಂಪನಿಯು 350 ಮಿಲಿಯನ್ ಡಾಲರ್ (2,891 ಕೋಟಿ ರೂಪಾಯಿ) ನಿವ್ವಳ ಮೌಲ್ಯ ಸಾಧಿಸುವ ಗುರಿಯನ್ನು ಹೊಂದಿದೆ. ಆಲ್ಟಿಗ್ರೀನ್ ಹೊಸ ಹೂಡಿಕೆ ಗಳಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದು, ಅದು ಜುಲೈಗೆ ಕೊನೆಗೊಳ್ಳುವುದಾಗಿ ಬ್ಲೂಮ್‌ಬರ್ಗ್ ನ್ಯೂಸ್‌ಗೆ ಸಿಇಒ ಸರನ್ ಅವರು ಈ ವಿಚಾರವನ್ನು ದೃಢಪಡಿಸಿದ್ದಾರೆ.
2013ರಲ್ಲಿ ಸರನ್ ಅವರು ಆಲ್ಟಿಗ್ರೀನ್ ಪ್ರೊಪಲ್ಶನ್ ಲ್ಯಾಬ್ಸ್ ಹೆಸರಿನ ಇಲೆಕ್ಟ್ರಿಕ್ ವೆಹಿಕಲ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋ ಮೂಲದವರಾದ ಡಾ. ಅಮಿತಾಭ್ ಸರನ್ ಅವರು ಪ್ರಯಾಗರಾಜ್‌ನಲ್ಲಿರುವ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಕಲಿತಿದ್ದಾರೆ.
ಅದಕ್ಕೂ ಮೊದಲು ಅವರು ತಮ್ಮ ತವರೂರು ಹಾಗೂ ಡೆಹ್ರಾಡೂನ್‌ನಲ್ಲಿ ಶಾಲಾ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಬಳಿಕ ಅವರು ಅಮೆರಿಕಾದ ಯುಸಿ ಸಾಂಟಾ ಬಾರ್ಬರಾದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ತಮ್ಮ ಸುದೀರ್ಘ ಕಾರ್ಪೊರೇಟ್ ವೃತ್ತಿಜೀವನದಲ್ಲಿ ಅಮಿತಾಭ್ ಅವರು ಅತ್ಯುನ್ನತವಾದ ಜಾಗತಿಕ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಹೊರತಾಗಿ ಟಿಸಿಎಸ್, ಫಿಲಿಪ್ಸ್ ಮತ್ತು ಎಚ್‌ಪಿಯಂಥಹ ಪ್ರಮುಖ ಎಂಎನ್‌ಸಿ ಕಂಪನಿಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಆಲ್ಟಿಗ್ರೀನ್ ಕಂಪನಿ ಸ್ಥಾಪಿಸುವ ಮೊದಲು ಅವರು Buzzintown.comನ ಸಹ ಸ್ಥಾಪಕರಾಗಿ ಅದನ್ನು ಮುನ್ನಡೆಸಿದ್ದರು. ಬಳಿಕ ಅಂದರೆ 2012ರಲ್ಲಿ ಆ ಕಂಪನಿಯನ್ನು ಯಾತ್ರಾ ಆನ್‌ಲೈನ್ ಸ್ವಾಧೀನಪಡಿಸಿಕೊಂಡಿತ್ತು.
ದಿ ಬೆಟರ್ ಇಂಡಿಯಾ ವರದಿ ಪ್ರಕಾರ, ಯಾವುದೇ ವೆಹಿಕಲ್ ಅನ್ನು ಹೈಬ್ರಿಡ್ ಇಲೆಕ್ಟ್ರಿಕಲ್ ವೆಹಿಕಲ್ ಆಗಿ ಪರಿವರ್ತಿಸುವ 'ಫಿಟ್ ಅಂಡ್ ಫೊರ್ಗೆಟ್' ಕಿಟ್ ಅನ್ನು ಪ್ರಾರಂಭಿಸುವ ಮೂಲಕ ಇವಿ ಉದ್ಯಮಿಯಾಗಿ ಗುರುತಿಸಿಕೊಂಡರು.
ಅವರ ಕಂಪನಿಯು ಕಾರ್ಗೊ ಉದ್ದೇಶಗಳಿಗಾಗಿ ಇವಿ ಮೂರು ವೀಲ್‌ನ ಆಲ್ಟಿಗ್ರೀನ್ neEV ಎಂಬ ವಾಹನವನ್ನು ಪರಿಚಯಿಸಿದೆ. ಇಟಿ ವರದಿಗಳ ಪ್ರಕಾರ ಆಲ್ಟಿಗ್ರೀನ್ ವರ್ಷದಲ್ಲಿ 50,000 ಯೂನಿಟ್‌ಗಳಷ್ಟು ವಾಹನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರೇರಣಾ ಜುಂಜುನ್‌ವಾಲಾ ಬಗ್ಗೆ ತಿಳಿಯಿರಿ
ತಮ್ಮ ಸ್ವಂತ ಬಲದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಲವಾರು ಮಂದಿಯ ನಿದರ್ಶನ ನಮ್ಮ ಕಣ್ಣ ಮುಂದಿದೆ. ಪ್ರೇರಣಾ ಜುಂಜುನ್‌ವಾಲಾ ಎಂಬ ಮಹಿಳೆ ಕೂಡಾ 330 ಕೋಟಿ ರೂ. ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದ್ದಾರೆ. ಶಿಕ್ಷಕಿಯಾಗಿದ್ದ ಪ್ರೇರಣಾ ಈಗ ಒಂದು ಸಂಸ್ಥೆಯ ಒಡಿತಿಯಾಗಿದ್ದಾರೆ.
ಪ್ರೇರಣಾ ಜುಂಜುನ್‌ವಾಲಾ 'ಕ್ರಿಯೇಟಿವ್ ಗೆಲಿಲಿಯೋ' ಹಾಗೂ 'ಲಿಟಲ್ ಸಿಂಗಮ್ - ಕಿಡ್ಸ್ ಅರ್ಲಿ ಲರ್ನ್' ಅಪ್ಲಿಕೇಶನ್ ನ ಸಂಸ್ಥಾಪಕರಾಗಿದ್ದು, ಸಿಂಗಾಪುರದಲ್ಲಿ ಪ್ರೀ - ಸ್ಕೂಲ್ ಹೊಂದಿದ್ದು ಅವರೊಬ್ಬ ಭಾರತೀಯ ಸೀರಿಯಲ್ ಎಂಟ್ರೆಪ್ರೆನಿಯರ್ ಆಗಿದ್ದಾರೆ. ಅವರ ಕ್ರಿಯೇಟಿವ್ ಗೆಲಿಲಿಯೋ ಅಪ್ಲಿಕೇಶನ್ ಮೂರರಿಂದ ಎಂಟು ವರ್ಷಗಳ ನಡುವಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ.


Click it and Unblock the Notifications