37 ವರ್ಷದ ಅಮ್ರಾಪಾಲಿ ಅಮಿ "ಗ್ಯಾನ್" ಅವರು ಪ್ರಮುಖ ತಂತ್ರಜ್ಞಾನ ಆಧಾರಿತ ಕಂಪೆನಿಯಾದ ಓನ್ಲಿಫ್ಯಾನ್ಸ್‌ನ ಸಿಇಒ ಆಗಿದ್ದಾರೆ. ಮುಂಬೈ ಮೂಲದ ಗ್ಯಾನ್ ಅವರು 1984ರಲ್ಲಿ ಜನಿಸಿದ್ದಾರೆ. ಚಂದಾದಾರ ಆಧಾರಿತ ಕಂಟೆಂಟ್ ಸರ್ವೀಸ್ ಕಂಪೆನಿಗೆ 2020ರಲ್ಲಿ ಚೀಫ್ ಮಾರ್ಕೆಟಿಂಗ್ ಹಾಗೂ ಕಮ್ಯೂನಿಕೇಷನ್ ಆಫೀಸರ್ ಆಗಿ ಸೇರ್ಪಡೆಗೊಂಡಿದ್ದರು. ಟಿಮ್ ಸ್ಟೊಕೆಲಿ ಓನ್ಲಿ ಫ್ಯಾನ್ಸ್ ನ ಸ್ಥಾಪಕ ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ ಅಮ್ರಾಪಾಲಿ ಗ್ಯಾನ್ ಅವರು ಅದಕ್ಕೆ ಉತ್ತರಾಧಿಕಾರಿಯಾದರು.
ಮಿಲಿಯನ್ ಡಾಲರ್ ಕಂಪೆನಿಯನ್ನು 2016ರಲ್ಲಿ ಸ್ಥಾಪಿಸಲಾಗಿದ್ದು, ಓನ್ಲಿಫ್ಯಾನ್ಸ್ ವಯಸ್ಕರಿಗೆ ಸಂಬಂಧಿಸಿದ ಕಂಟೆಂಟ್ ಹೋಸ್ಟ್ ಮಾಡುವ ಪ್ಲಾಟ್‌ಫಾರ್ಮ್ ಆಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಸಮಯದಲ್ಲಿ ಇದು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡು ಮುನ್ನೆಲೆಗೆ ಬಂದಿತ್ತು. ಕೊರೊನಾ ಸಮಯದಲ್ಲಿನ ಲಾಕ್‌ಡೌನ್‌ನಲ್ಲಿ ಹಲವು ವಯಸ್ಕರ ಕಂಟೆಂಟ್ ಕ್ರಿಯೇಟರ್ಸ್‌ಗಳು ಈ ಪ್ಲಾಟ್‌ಫಾರ್ಮ್‌ಗೆ ಶಿಫ್ಟ್ ಆಗಿದ್ದರು.

ಗ್ಯಾನ್ ಅವರು ಲಾಸ್ ಎಂಜಲೀಸ್‌ನ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪದವಿ ಪಡೆದುಕೊಂಡ ಬಳಿಕ ಕನ್ಸೂಮರ್ ಗೂಡ್ಸ್ ಅಂಡ್ ಸರ್ವೀಸಸ್ ಉದ್ಯಮಕ್ಕೆ ಪ್ರವೇಶ ಪಡೆದುಕೊಂಡರು.
ಓನ್ಲಿಫ್ಯಾನ್ಸ್ ಪ್ರಾರಂಭಿಸುವುದಕ್ಕೂ ಮೊದಲು ಯುವ ಸಂವಹನ ಪರಿಣತರಾದ ಗ್ಯಾನ್ ಅವರು ಕನ್ಸೂಮರ್ ಗೂಡ್ಸ್ ಅಂಡ್ ಸರ್ವೀಸಸ್ ಉದ್ಯಮದಲ್ಲಿ ಅಪಾರವಾದ ಅನುಭವವನ್ನು ಪಡೆದುಕೊಂಡರು. ಅವರು ಆರ್ಕೇಡ್ ಏಜೆನ್ಸಿಯಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.
2021ರಲ್ಲಿ ಓನ್ಲಿಫ್ಯಾನ್ಸ್‌ನ ಸಿಇಒ ಆಗಿ ನೇಮಕಗೊಳ್ಳುವ ಮೊದಲು ಅಮ್ರಾಪಾಲಿ ಅವರು ಕಂಪೆನಿಯಲ್ಲಿ ಎರಡು ವರ್ಷಗಳ ಕಾಲ ದುಡಿದಿದ್ದರು. ಲಂಡನ್ ಮೂಲದ ಈ ಸೋಷಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ವೃತ್ತಿ ಪ್ರಾರಂಭಿಸಿದ್ದರು. ಆದರೆ ಗ್ಯಾನ್ ಅವರು ಬಹಳ ಕಡಿಮೆ ಅವಧಿಯಲ್ಲಿ ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ಓನ್ಲಿಫ್ಯಾನ್ಸ್ ಸಿಇಒ ಆಗಿ ಆಯ್ಕೆಯಾಗಿದ್ದರು.
ಗ್ಯಾನ್ ಅವರು ಕ್ಯಾನಬಿಸ್ ಕೆಫೆಯಲ್ಲಿ ಮಾರ್ಕೆಟಿಂಗ್ ವಿಭಾಗದ ಉಪಾದ್ಯಕ್ಷೆಯಾಗಿದ್ದರು. ಅಲ್ಲಿ ಅವರು ಅಮೆರಿಕದಲ್ಲಿನ ಮೊದಲ ಕ್ಯಾನಬಿಸ್ ರೆಸ್ಟೊರೆಂಟ್ ಪ್ರಾರಂಭಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಅಲ್ಲದೆ ಅಮಿ ಅವು ಯುನಿಕಾರ್ನ್ ಸ್ಟಾರ್ಟಪ್ ಕ್ವೆಸ್ಟ್ ನ್ಯೂಟ್ರಿಷನ್ ಜತೆಗೆ ಬ್ರಾಂಡ್ ಕಮ್ಯೂನಿಕೇಷನ್ಸ್ ಮುಖ್ಯಸ್ಥರಾಗಿದ್ದರು ಹಾಗೂ ರೆಡ್‌ಬುಲ್ ಮೀಡಿಯಾ ಹೌಸ್‌ನ ಕಮ್ಯೂನಿಕೇಷನ್ ಹಾಗೂ ಆಕ್ಟಿವೇಷನ್‌ನ್ನು ನೋಡಿಕೊಳ್ಳುತ್ತಿದ್ದರು. ಅಮ್ರಾಪಾಲಿ ಅವರು ಪ್ರಸ್ತುತ ಮಿಯಾಮಿಯಲ್ಲಿ ನೆಲೆಸಿದ್ದು, ಅದಕ್ಕೂ ಮೊದಲು ಲಾಸ್ ಎಂಜಲೀಸ್‌ನಲ್ಲಿ ವಾಸಿಸುತ್ತಿದ್ದರು.


Click it and Unblock the Notifications