ಕಠಿಣ ಪರಿಶ್ರಮ ಮತ್ತು ಅವಿರತ ಪ್ರಯತ್ನವಿದ್ದರೆ ಮುಂದೊಂದು ದಿನ ಅದು ಯಶಸ್ವಿ ಫಲಿತಾಂಶ ನೀಡುತ್ತದೆ. ಇಂತಹ ಸಂದರ್ಭದಲ್ಲಿ ದಾರಿಯುದ್ದಕ್ಕೂ , ಅಡ್ದಿ ಆತಂಕ, ಪ್ರತಿಕೂಲತೆ ಬಂದಾಗ ಅವುಗಳನ್ನು ಎದುರಿಸುತ್ತಾ ಸಾಗಿದಾಗ ಇಚ್ಚೆಪಟ್ಟ ಗುರಿಗಳನ್ನು ಸಾಧಿಸಲು ಮತ್ತಷ್ಟು ದೃಢತೆ ದೊರಕುತ್ತದೆ.
ಅನಾಮಿಕಾ ಜೋಶಿಯವರ ಯಶಸ್ಸಿನ ಕಥೆಯು ನಂಬಲಾಗದಂತೆ ಕಂಡುಬಂದರೂ ಅವರ ಜೀವನವೇ ಪ್ರೇರಣಾದಾಯಕವಾಗಿದೆ.ಅವರು ಎದುರಿಸಿದಂತಹ ಸವಾಲುಗಳು ಮತ್ತು 50 ಲಕ್ಷ ರೂಪಾಯಿ ಸಾಲದಿಂದ ಹೊರಬಂದ ಬದುಕುಕಟ್ಟಿಕೊಂಡ ರೀತಿ ನಿಜಕ್ಕೂ ಸ್ಪೂರ್ತಿದಾಯಕ.

ಅನಾಮಿಕಾ ಜೋಶಿ ಅವರು ಅನೇಕ ಮಹಾನ್ ಕವಿಗಳು, ಕಾದಂಬರಿಕಾರರು ಹಾಗೂ ರೇಡಿಯೊ ಉದ್ಘೋಷಕರು ಇದ್ದ ಪರಿಸರದ ನಡುವೆ ಬೆಳೆದಿದ್ದರೂ ಕಾವ್ಯ ರಚನೆ ಅವರಿಗೆ ಅನಿರೀಕ್ಷಿತವಾಗಿತ್ತು. ಆದರೆ ತಮ್ಮನ್ನು ಸಂಪೂರ್ಣವಾಗಿ ಕವಿತೆಗಳ ಕಡೆಗೆ ತೊಡಗಿಸಿಕೊಂಡ ಬಳಿಕ ವೃತ್ತಿ ಜೀವನದ ಆಯ್ಕೆಯನ್ನು ಖಚಿತಪಡಿಸಿಕೊಂಡು ಅದರತ್ತ ಹೆಚ್ಚಿನ ಗಮನವನ್ನು ನೀಡುವುದಕ್ಕೆ ನಿರ್ಧರಿಸಿದರು.
ಆದರೆ, ಅನಾಮಿಕಾ ಅವರ ಕುಟುಂಬವು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಹೀಗಿರುವಾಗ, ಅನಾಮಿಕಾ ಜೋಶಿ ಅವರು 12ನೇ ತರಗತಿ ಶಿಕ್ಷಣವನ್ನು ಪೂರ್ಣಗೊಳಿಸಿದಾಗ ಅವರ ತಂದೆಯ ಸಾಲವು ಹೆಚ್ಚಾಗ ತೊಡಗಿತ್ತು. ಈ ಕಾರಣದಿಂದಾಗಿ ಕುಟುಂಬವು ಜೈಪುರಕ್ಕೆ ಸ್ಥಳಾಂತರಗೊಳ್ಳುವುದಕ್ಕೆ ನಿರ್ಧರಿಸಿತ್ತು.
ಇನ್ನು ಜೀವನದಲ್ಲಿ ಉಂಟಾದ ಕಹಿ ಅನುಭವಗಳು ಹಾಗೂ ಸಾಲದ ಪರಿಣಾಮಗಳನ್ನು ನೋಡಿ ಅನಾಮಿಕಾ ಅವರಿಗೆ ಸಣ್ಣ ವಯಸ್ಸಿನಲ್ಲಿಯೇ ಆ ಬಗ್ಗೆ ಭಯ ಆವರಿಸಿತ್ತು. ಕಾಕತಾಳೀಯವೆಂಬಂತೆ ಅವರು ತಮ್ಮ ಸಂಸ್ಥೆಯನ್ನು ಮೊದಲು ಪ್ರಾರಂಭಿಸಿದಾಗಲೂ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು.
ಆದರೂ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದು, ಬರವಣಿಗೆ ಸಹಾಯದಿಂದ ಮತ್ತೊಮ್ಮೆ ತಮ್ಮ ಪರಿಸ್ಥಿತಿಯನ್ನು ಬದಲಾಯಿಸಿಕೊಂಡರು. ಅವರಿಗೆ 30 ವರ್ಷವಿರುವಾಗಲೇ 50 ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು. ದಿಲ್ಲಿ ಮೂಲದ ಶ್ರೀ ಅರಬಿಂದೊ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್‌ನಲ್ಲಿ ಅವರು ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆ ಬಳಿಕ ಸುಮಾರು 6-7 ತಿಂಗಳು ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡಿದ್ದರು. ಮುಂದೆ ಅವರು 24 ವರ್ಷ ಆಗುವ ವೇಳೆಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು.
ಅನಾಮಿಕಾ ಅವರು ತಮ್ಮ ಪತಿ ತರುಣ್ ಅವರ ಪಾಲುದಾರಿಕೆಯಲ್ಲಿ 2009ರಲ್ಲಿ ಸ್ವಂತ ಜಾಹೀರಾತು ಏಜೆನ್ಸಿಯನ್ನು ಪ್ರಾರಂಭಿಸಿದರು. 2015ರವರೆಗೆ ಅವರಿಬ್ಬರು ಜತೆಯಾಗಿ ಉತ್ಪತಾಂಗ್ ಉದ್ಯಮವನ್ನು ಮುನ್ನಡೆಸಿದರು. ಪೋಸ್ಟರ್ ಹಾಗೂ ಮಾರ್ಕ್ಸ್ ಅನ್ನು ಸಿದ್ಧಪಡಿಸುವ ಈ ಕಂಪನಿಯನ್ನು ಸುಮಾರು ಮೂರು ವರ್ಷಗಳ ಕಾಲ ನಡೆಸಿದರು. ಈ ಉದ್ಯಮದ ಮುಂದುವರಿದ ಭಾಗವಾಗಿ ಸಿನಿಮಾ ಸ್ಟುಡಿಯೋ ಹಾಗೂ ಸಂಗೀತ ಕಲಾವಿದರನ್ನು ಗುರಿಯಾಗಿಸಿಕೊಂಡು ಬ್ರಾಂಡೆಂಡ್ ಉತ್ಪನ್ನಗಳನ್ನು ಪರಿಚಯಿಸಿದರು.
ಜನಪ್ರಿಯ ಸಂಗೀತ ಕಲಾವಿದರಾದ ಎಆರ್ ರೆಹಮಾನ್, ಜಸ್ಟಿನ್ ಬೈಬರ್ ಅವರಂಥವರು ಕೂಡ ಅನಾಮಿಕಾ ಅವರ ಕಂಪನಿ ಜತೆಗೆ ಕೆಲಸ ಮಾಡಿದರು. ಈ ಸಂಸ್ಥೆಯು ನಷ್ಟ ಅನುಭವಿಸಿದ ಕಾರಣ 30ನೇ ವಯಸ್ಸಿಗೆ 50 ಲಕ್ಷ ರೂಪಾಯಿ ಸಾಲದ ಸುಳಿಗೆ ಸಿಲುಕಿದರು ಎಂದು ನವ ಭಾರತ್ ಟೈಮ್ಸ್ ವರದಿ ಮಾಡಿದೆ.
ತಮ್ಮ ಈ ವ್ಯವಹಾರದಿಂದ ಕೈಸುಟ್ಟುಕೊಂಡಾಗ ಇಬ್ಬರು ಕೂಡ ದೆಹಲಿಯಿಂದ ಜೈಪುರಕ್ಕೆ ಶಿಫ್ಟ್ ಆದರು. 2018ರಲ್ಲಿ ಅನಾಮಿಕಾ ಅವರು ಮನೆಯೊಂದನ್ನು ಲೀಸ್‌ಗೆ ಪಡೆದುಕೊಂಡರು. ಜೈಪುರಕ್ಕೆ ಸ್ಥಳಾಂತರಗೊಂಡ ಬಳಿಕ ಅರೆಕಾಲಿಕವಾಗಿ ಕೆಲಸ ಮಾಡುವುದಕ್ಕೆ ಪ್ರಾರಂಭಿಸಿದರು. ಪತಿ ತರುಣ್ ಕೂಡ ಈ ನಡುವೆ ಕೆಲಸ ಮಾಡುವುದಕ್ಕೆ ಪ್ರಾರಂಭಿಸಿದರು.
2019ರಲ್ಲಿ ತಾಯಂದಿರ ದಿನಾಚರಣೆ ಹಿನ್ನೆಲೆಯಲ್ಲಿ ಅವರ ಸ್ನೇಹಿತರೆಲ್ಲ ಒಟ್ಟು ಸೇರುವ ಪ್ಲ್ಯಾನ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅನಾಮಿಕಾ ಅವರು ತಮ್ಮ ಜನಪ್ರಿಯ ಕವಿತೆ ಮಾ ತುಮ್ ಭಿ ಗಲತ್ ಹೋ ಸಕ್ತಿ ಹೋ," ಅನ್ನು ವೇದಿಕೆ ಮೇಲೆ ವಾಚಿಸಿದರು. ಈ ಕಾರ್ಯಕ್ರಮದ ಒಂದು ದಿನ ಮೊದಲು ಆಕೆಯ ತಾಯಿಯು ಅನಿರೀಕ್ಷಿತವಾಗಿ ಮನೆಗೆ ಬಂದಿದ್ದರು.
ತಮ್ಮ ಪರಿಶ್ರಮದ ಕುರಿತಂತೆ ಅವರು ಒಂದು ಸುಂದರ ಕವಿಯನ್ನು ರಚಿಸಿದರು. ಬಟ್ಟೋ ಕಿ ಬಕ್ವಾಸ್' ಎನ್ನುವುದು ಅನಾಮಿಕಾ ಅವರ ಇನ್‌ಸ್ಟಾ ಪೇಜ್‌ನ ಹೆಸರು. ತಮ್ಮ ಸಾಲವನ್ನು ತೀರಿಸಿದ ಬಳಿಕ ಅನಾಮಿಕಾ ಅವರು ಬರವಣಿಗೆಯನ್ನು ಮುಂದುವರಿಸಲು ನಿರ್ಧರಿಸಿದರು. ಪ್ರಸ್ತುತ ಅನಾಮಿಕಾ ಅವರು ಸ್ಪೋಕನ್ ವರ್ಡ್ ಕ್ರಾಫ್ ಎಂಬ ಕವಿಗಳ ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಅತ್ಯುತ್ತಮ ಕವಿತೆ ವಾಚಕಿಯಾಗಿದ್ದಾರೆ.


Click it and Unblock the Notifications