ಅನಂತ್ ನಾರಾಯಣ ಈಗಾಗಲೇ ಪ್ರಮುಖ ಇ-ಕಾಮರ್ಸ್ ಬ್ರಾಂಡ್ ಮಿಂತ್ರಾ ಸಿಇಒ ಆಗಿ ಕಾರ್ಪೊರೇಟ್ ವಲಯದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಆದರೆ, ನಂತರದಲ್ಲಿ ಅವರು ತಮ್ಮದೇ ಉದ್ಯಮವನ್ನು ಪ್ರಾರಂಭಿಸಲು ಮುಂದಾದರು. ಈ ನಡುವೆ ಅನಂತ್ ಅವರು ಪ್ರಾರಂಭಿಸಿದ ಕಂಪೆನಿಯು ಬಿಲಿಯನ್ ಡಾಲರ್ ಆಸ್ತಿ ಮೌಲ್ಯವನ್ನು ಗಳಿಸಿದ್ದು, ಬಹಳ ವೇಗವಾಗಿ ಯೂನಿಕಾರ್ನ್ ಟ್ಯಾಗ್ ಅನ್ನು ಭಾರತದಲ್ಲಿ ಪಡೆದುಕೊಂಡಿದೆ.
ಅನಂತ್ ನಾರಾಯಣ ಅವರು ಮೆನ್ಸಾ ಬ್ರಾಂಡ್‌ನ ಸಂಸ್ಥಾಪಕರಾಗಿದ್ದಾರೆ. ಇದು ಭಾರತದ ಮೊದಲ ಇ-ಕಾಮರ್ಸ್ ರೋಲ್-ಅಪ್ ಕಂಪನಿಯಾಗಿದ್ದು, 1.2 ಬಿಲಿಯನ್ ಡಾಲರ್ (9,900 ಕೋಟಿ) ಆಸ್ತಿ ಮೌಲ್ಯವನ್ನು ಹೊಂದಿದೆ. ದೇಶದಲ್ಲಿ ಕೊರೊನಾ ಕಾಣಿಸಿಕೊಂಡಿದ್ದ ಸಮಯದಲ್ಲಿ ಅಂದರೆ 2021ರಲ್ಲಿ ಅನಂತ್ ಅವರು ತಮ್ಮ ಕಂಪೆನಿಯನ್ನು ಪ್ರಾರಂಭಿಸಿದರು.

ಕೇವಲ ಒಂದು ತಿಂಗಳೊಳಗೆ $50 ಮಿಲಿಯನ್ ಫಂಡ್ ಅನ್ನು ರೈಸ್ ಮಾಡಿದ್ದರು. $135 ಮಿಲಿನಯನ್ ಫಂಡ್ ರೈಸ್ ಮಾಡಿದ ಬಳಿಕ ಮೆನ್ಸಾ ಕಂಪೆನಿ ಮೌಲ್ಯವು ಕೇವಲ ಆರು ತಿಂಗಳಲ್ಲಿ $1 ಬಿಲಯನ್‌ಗೆ ತಲುಪಿದೆ. ವೈನ್ ಪ್ರಿಯರು ಹಾಗೂ ತಮ್ಮದೇ ಆದ ಅಮೂಲ್ಯ ಕಲೆಕ್ಷನ್ ಹೊಂದಿರುವ ಅನಂತ್ ಅವರು ಮದ್ರಾಸ್ ಹಾಗೂ ಮಿಚಿಗನ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರುವ ಎಂಜಿನಿಯರ್ ಆಗಿದ್ದಾರೆ.
ಅವರು ಪ್ರಮುಖ ಎಂಎನ್‌ಸಿ ಮೆಕಿನ್ಸೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದರು. ಬಳಿಕ ಮಿಂತ್ರಾ-ಜಬಾಂಗ್ ಕಂಪೆನಿ ಸಿಇಒ ಆಗಿ ಅದನ್ನು ಮುನ್ನಡೆಸಿದ್ದರು. ನಂತರ ಅತಿಹೆಚ್ಚು ಸಂಬಳ ಪಡೆಯುತ್ತಿದ್ದ ಕಂಪೆನಿಯನ್ನು ತೊರೆದು Medlife.com ಕಂಪೆನಿಯನ್ನು ಸ್ಥಾಪಿಸಿ ಅದರ ಸಿಇಒ ಆಗಿದ್ದರು. Pharmeasyಯು ಅಂತಿಮವಾಗಿ ಅನಂತ್ ಅವರ ಮೊದಲ ಉದ್ಯಮವನ್ನು ಖರೀದಿಸಿತು.
ಮೆನ್ಸಾ ಅನ್ನು ಪ್ರಾರಂಭಿಸುವುದರೊಂದಿಗೆ ಅನಂತ್ ಅವರು ಉತ್ತಮ ಅವಕಾಶವನ್ನು ಕಂಡುಕೊಂಡಿದ್ದು, ಅಮೆರಿಕಾ ಮಾರುಕಟ್ಟೆಯಲ್ಲಿ ವಿಸ್ತರಣೆಗೊಳ್ಳುತ್ತಿದೆ. ಕಂಪೆನಿಯು ಇ-ಕಾಮರ್ಸ್ ಬ್ರಾಂಡ್‌ಗಳನ್ನು ಸ್ವಾಧೀನಪಡಿಸಿಕೊಂಡು ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.
ಆ ಮೂಲಕ ಸಣ್ಣ ವ್ಯಾಪಾರಿಗಳ ಉದ್ಯಮವನ್ನು ಮನೆಮಾತಾಗಿಸಲು ಪ್ರಯತ್ನಿಸುತ್ತಿದೆ. ಅಮೆರಿಕನ್ ಯುನಿಕಾರ್ನ್ ಥ್ರಾಸ್.ಐಒ ಅನ್ನು ಮಾದರಿಯಾಗಿಸಿಕೊಂಡು ಕಂಪೆನಿಯನ್ನು ರೂಪಿಸಿದ್ದು, ಇದು ಸುಮಾರು $5 ಬಿಲಿಯನ್ ಮೌಲ್ಯವನ್ನು ಹೊಂದಿದೆ. ಈ ಕಂಪೆನಿಯು ಅಮೆಜಾನ್‌ನ ಸುಮಾರು ನೂರಕ್ಕೂ ಹೆಚ್ಚು ಥರ್ಡ್ ಪಾರ್ಟಿ ಮಾರಾಟಗಾರರನ್ನು ಹೊಂದಿದೆ.
ಮೆನ್ಸಾ ಎನ್ನುವ ಪದವು ಗ್ರೀಕ್ ಮೂಲದ್ದಾಗಿದ್ದು, ನಕ್ಷತ್ರಪುಂಜ ಎಂದರ್ಥ. ಅಂದರೆ ಒಂದು ಸಂಸ್ಥೆಯಡಿ ಡಿಜಿಟಲ್ ಮೊದಲ ಬ್ರಾಂಡ್‌ಗಳ ಕ್ಲಸ್ಟರ್‌ಗಳ ವ್ಯವಹಾರ ಮಾದರಿಗೆ ಹೋಲಿಸಬಹುದು. ಮೆನ್ಸಾ ಒಂದು ಡಜನ್ ಬ್ರಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 100 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಆ ಮೂಲಕ ಕಂಪೆನಿಯು 1,500 ಕೋಟಿ ರೂ. ಆದಾಯವನ್ನು ತಲುಪಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications