ಭಾರತದಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೆಲವೇ ಕೆಲವು ಮಹಿಳಾ ಬ್ಯುಸಿನೆಸ್ ಲೀಡರ್ ಗಳಲ್ಲಿ ಅಂಜಲಿ ಸಿಂಗ್ ಕೂಡಾ ಒಬ್ಬರಾಗಿದ್ದಾರೆ. 1.5 ಶತಕೋಟಿ ಡಾಲರ್ (ರೂ. 12,000 ಕೋಟಿ) ಆದಾಯದ ಆನಂದ್ ಗ್ರೂಪ್‌ನ ಅಧ್ಯಕ್ಷರಾಗಿ, ಅಂಜಲಿ ಅವರು, TAFE ನ ಸಿಇಒ 'ಟ್ರಾಕ್ಟರ್ ಕ್ವೀನ್' ಎಂದೇ ಖ್ಯಾತರಾದ ಮಲ್ಲಿಕಾ ಶ್ರೀನಿವಾಸನ್, ಸುಂದರಂ ಕ್ಲೇಟನ್‌ನ ಎಂಡಿ ಲಕ್ಷ್ಮಿ ವೇಣು, ಮತ್ತು ನೆಟಿಕ್ ಗ್ರೂಪ್.
ಸುಲಜ್ಜ ಫಿರೋಡಿಯಾ ಮೋಟ್ವಾನಿ ಅವರಂತಹ ಭಾರತೀಯ ಮಹಿಳಾ ವಾಣಿಜ್ಯೋದ್ಯಮಿಗಳ ಸರಿಸಮನಾಗಿ ನಿಂತಿದ್ದಾರೆ. ಹಲವು ಕೌಶಲ್ಯಗಳಿರುವ ಅಂಜಲಿ ಸಿಂಗ್ ಅವರನ್ನು ಬ್ಯುಸಿನೆಸ್ ಸರ್ಕಲ್ ನಲ್ಲಿ "ಮಲ್ಟಿ ಟಾಸ್ಕರ್ "ಎಂದೇ ಕರೆಯಲಾಗುತ್ತದೆ. ಯಾಕೆಂದರೆ ಅವರು ಕೇವಲ ಬ್ಯುಸಿನೆಸ್ ಲೀಡರ್ ಮಾತ್ರವಲ್ಲ, ಓರ್ವ ಕಲಾವಿದೆ ಮತ್ತು ಲೇಖಕಿಯೂ ಹೌದು.

ಲಂಡನ್‌ನಲ್ಲಿ ಫೈನ್ ಆರ್ಟ್ ಕುರಿತು ಅಧ್ಯಯನ ಮಾಡಿ ಇದೇ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದವರು. ಅಲ್ಲಿಂದ ಭಾರತಕ್ಕೆ ಹಿಂತಿರುಗುವ ಮೊದಲು ಬಿಸಿನೆಸ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದರು. ಬಳಿಕ 2005 ರಲ್ಲಿ 'ಆನಂದ್ ಗ್ರೂಪ್'ಗೆ ಸೇರ್ಪಡೆಗೊಂಡರು.
2014ರಲ್ಲಿ ಅಂದರೆ ತಮ್ಮ 33ನೇ ವಯಸ್ಸಿನಲ್ಲಿ, ತಂದೆ ದೀಪ್ ಸಿ ಆನಂದ್ ಅವರು ಸ್ಥಾಪಿಸಿದ 'ಆನಂದ್ ಗ್ರೂಪ್' ನ ಕಾರ್ಯನಿರ್ವಾಹಕ ಅಧ್ಯಕ್ಷರಾದರು. ಇದರೊಂದಿಗೆ 2,571 ಕೋಟಿ ರೂ. ಮಾರುಕಟ್ಟೆ ಕ್ಯಾಪ್ ಹೊಂದಿರುವ ಆಟೋ ಬಿಡಿಭಾಗಗಳ ತಯಾರಕರಾದ ಗೇಬ್ರಿಯಲ್ ಇಂಡಿಯಾದ ಮುಖ್ಯಸ್ಥರಾಗಿದ್ದಾರೆ.
ಆನಂದ್ ಗ್ರೂಪ್‌ನ ಆತಿಥ್ಯ ವಿಭಾಗವು 'ಸುಜನ್' ಭಾರತದ ರಣಥಂಬೋರ್, ಜೈಸಲ್ಮೇರ್, ಜವಾಯಿ ಬಂದ್ ಮತ್ತು ಕೀನ್ಯಾದಲ್ಲಿ ಪ್ರಾಪರ್ಟೀಸ್ ಗಳನ್ನು ನಿರ್ವಹಿಸುತ್ತಿದೆ.ಅಂಜಲಿ ಸಿಂಗ್ ಅವರ ನಾಯಕತ್ವದಲ್ಲಿ ಆನಂದ್ ಗ್ರೂಪ್ ಸುಮಾರು 20 ಕಂಪನಿಗಳು ಮತ್ತು 13 ಜಾಯಿಂಟ್ ವೆಂಚರ್ಸ್‌ಗಳನ್ನು ಹೊಂದಿದೆ. ಆನಂದ್ ಗ್ರೂಪ್ ಈಗ 60 ವರ್ಷದ ಐತಿಹಾಸವನ್ನು ಹೊಂದಿದೆ.
ಅಂಜಲಿ ಸಿಂಗ್ ಸಂರಕ್ಷಣಾವಾದಿಯಾಗಿದ್ದು, ಅವರು ತಮ್ಮ ಪತಿ ಜೈಸಲ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸೇರಿ 2011 ರಲ್ಲಿ "ರಣಥಂಬೋರ್ - ದಿ ಟೈಗರ್ಸ್ ರಿಯಲ್ಮ್" ಅನ್ನು ಪ್ರಕಟಿಸಿದರು. 2016 ರಲ್ಲಿ ಪ್ರಕಟವಾದ "ಜವಾಯಿ - ಲ್ಯಾಂಡ್ ಆಫ್ ದಿ ಲೆಪರ್ಡ್" ಬುಕ್ ನ ಸಹ ಲೇಖಕರಾಗಿದ್ದಾರೆ.
ಅಂಜಲಿ ಸಿಂಗ್ 3,450 ಕೋಟಿ ರೂ. ನಿವ್ವಳ ಆಸ್ತಿ ಮೌಲ್ಯದೊಂದಿಗೆ ಕೋಟಕ್ ವೆಲ್ತ್ ಹುರುನ್ ನ 2020ರ ಪ್ರಮುಖ ಶ್ರೀಮಂತ ಮಹಿಳೆಯರ ಪೈಕಿ ಓರ್ವರಾಗಿ ಹೊರಹೊಮ್ಮಿದ್ದಾರೆ.
ಉದ್ಯಮಿಗಳಾಗಿ ಬೆಳೆದ ಮಹಿಳೆಯರು
ಈ ಹಿಂದೆ ಉದ್ಯಮಿಗಳಾಗಿ ಅದರಲ್ಲೂ ಮುಖ್ಯವಾಗಿ ಯಶಸ್ವಿ ಉದ್ಯಮವನ್ನು ನಡೆಸಿದ ಹಲವಾರು ಮಹಿಳೆಯರ ಬಗ್ಗೆ ನಾವು ವಿವರಣೆ ನೀಡಿದ್ದೇವೆ. ಅಮೀರ ಶಾ ತನ್ನ ತಂದೆಯ ಕ್ಲಿನಿಕ್ ಅನ್ನು 6478 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯಾಗಿ ಬೆಳೆಸಿದ್ದಾರೆ. ಭಾರತದ ಟ್ರಾಕ್ಟರ್ ಕ್ವೀನ್ ಆದ ಮಲ್ಲಿಕಾ ಯಶಸ್ವಿ ಉದ್ಯಮಿಯಾಗಿದ್ದಾರೆ.
ಭಾರತದ ಶ್ರೀಮಂತ ಮಹಿಳಾ ಸಿಇಒಗಳಲ್ಲಿ ಒಬ್ಬರಾದ ವಿನಿತಾ ಗುಪ್ತಾ, ಇನ್ಫೋಸಿಸ್‌ನ ನಾರಾಯಣ ಮೂರ್ತಿ ಪುತ್ರಿ ಅಕ್ಷತ ಮೂರ್ತಿ, ಭಾರತದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಜನಪ್ರಿಯಗೊಳಿಸಿದ ಮೋನಿಕಾ ಶೆರ್ಗಿಲ್, ಗೃಹಿಣಿಯಾಗಿ 100 ಮಂದಿ ಉದ್ಯೋಗಿಗಳ 200 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿದ ಹರಿಣಿ ಶಿವಕುಮಾರ್ ಮೊದಲಾದವರುಗಳನ್ನು ನಾವು ಕಾಣಬಹುದಾಗಿದೆ.
ಕ್ರಿಶಾ ಗುಪ್ತಾ ತನ್ನ 24ನೇ ವಯಸ್ಸಿನಲ್ಲಿಯೇ 100 ಕೋಟಿ ರೂಪಾಯಿ ಫಂಡ್ ಸ್ಥಾಪನೆ ಮಾಡಿದ್ದಾರೆ. ಇನ್ನು ಅಮೇರಿಕಾದ ಬಿಲಿಯನ್ ಡಾಲರ್ ಕಂಪನಿಯ ಸಿಇಒ ಅಮ್ರಾಪಾಲಿ ಗ್ಯಾನ್ ಯಶಸ್ವಿ ಉದ್ಯಮಿಯಾಗಿದ್ದಾರೆ. ಇನ್ನು ದೇವಿತಾ ಸರಾಫ್ ತನ್ನ 24ನೇ ವಯಸ್ಸಿನಲ್ಲಿಯೆ ಸಿಇಒ ಆದ ಮಹಿಳೆಯಾಗಿದ್ದಾರೆ.
ದೇಶದ ಯಶಸ್ವಿ ಉದ್ಯಮಿ ಫಲ್ಗುಣಿ ನಾಯರ್ ಪುತ್ರಿ ಅದ್ವೈತ ನಾಯರ್ 36,000 ಕೋಟಿ ರೂ. ಉದ್ಯಮ ಮುನ್ನಡೆಸುತ್ತಿದ್ದಾರೆ. 3200 ರೂಪಾಯಿ ಸಂಬಳ ಪಡೆಯುತ್ತಿದ್ದ ರೇಣು ಗುಜ್ರಾಲ್ 200 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯನ್ನು ಕಟ್ಟಿದ್ದಾರೆ.


Click it and Unblock the Notifications