ಪ್ರಪಂಚದಾದ್ಯಂತ ಲಭ್ಯವಿರುವ ಎಲ್ಲಾ ಪಾನೀಯಗಳಲ್ಲಿ, ಚಹಾದ ಜನಪ್ರಿಯತೆಯು ಹೆಚ್ಚು. ಇನ್ನು ಭಾರತದಲ್ಲಿ ಚಹಾ ಪ್ರಿಯರ ಸಂಖ್ಯೆ ಅತ್ಯಧಿಕ ಎಂದೇ ಹೇಳಬಹುದು. ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ನೂರಕ್ಕೆ ಶೇಕಡಾ 90 ಹೆಚ್ಚು ಜನರು ಚಹಾ ಕುಡಿಯುತ್ತಾರೆ. ಇಂತಹ ಒಂದು ಸ್ವಾದಿಷ್ಟ ಪಾನೀಯ ಟೀ ಯೊಂದಿಗೆ ಅನೇಕ ಯಶಸ್ಸಿನ ಕಥೆಗಳಿವೆ. ಅನೇಕ ಮಂದಿಯ ಜೀವನವನ್ನೇ ಕಟ್ಟಿಕೊಟ್ಟಿದೆ ಚಹಾ.!
23 ನೇ ವಯಸ್ಸಿನಲ್ಲಿ "ಚಹಾ" ಉದ್ಯಮವನ್ನು ಕಟ್ಟಿ ಯಶಸ್ವಿ ಆಗಿ 150 ಕೋಟಿ ರೂಪಾಯಿಗಳ ವಹಿವಾಟುಗಳನ್ನು ನಡೆಸುವ ಅನುಭವ್ ದುಬೆ ಮತ್ತು ಆನಂದ್ ಎಂಬ ಇಬ್ಬರು ಸ್ನೇಹಿತರಾದ ಯಶಸ್ಸಿನ ಕಥೆಯನ್ನು ಒಂದು ಕಪ್ ಚಹಾ ಸೇವಿಸುತ್ತಾ ಆಸ್ವಾಧಿಸಿ.!

ಈ ಯಶಸ್ವಿನ ಕಥೆಯ ನಾಯಕರೆಂದರೆ ಮಧ್ಯಪ್ರದೇಶದ ರೇವಾ ಮೂಲದ ಅನುಭವ್ ದುಬೆ ಮತ್ತು ಆನಂದ್ ನಾಯಕ್. ಇಬ್ಬರೂ ಬಾಲ್ಯ ಸ್ನೇಹಿತರು. ಈ ಪೈಕಿ ಅನುಭವ್ ಅವರ ತಂದೆ ಉದ್ಯಮಿಯಾಗಿದ್ದು, ಮಗ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರು. ಅವರಿಗೆ ತಮ್ಮ ಪುತ್ರ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದು ಕೊಂಚವೂ ಇಷ್ಟವಿರಲಿಲ್ಲ. ಇದಕ್ಕಾಗಿಯೇ ಅವರು ಅನುಭವ್ ದುಬೆಯನ್ನು ಯುಪಿಎಸ್‌ಸಿಗೆ ತಯಾರಿ ಮಾಡಲು ದೆಹಲಿಗೆ ಕಳುಹಿಸಿದರು.
ಸಿಎ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ, ಅನುಭವ್ ದುಬೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಈ ವೇಳೆ ಅಧಿಕಾರಿಯಾಗುವ ಬದಲು, ತಮ್ಮಲಿ ವ್ಯಾಪಾರದ ಬಗ್ಗೆ ಇರುವ ಆಸಕ್ತಿಯನ್ನು ಕಂಡುಕೊಂಡಿದ್ದಾರೆ. ಇಂದು, ಅನುಭವ್ ದುಬೆ ಬಹುಕೋಟಿ ಕಂಪನಿ ಚಾಯ್ ಸುಟ್ಟಾ ಬಾರ್‌ನ ಸಹ-ಸಂಸ್ಥಾಪಕರಾಗಿದ್ದಾರೆ.
ಅನುಭವ್ ದುಬೆ ಅವರು 2016 ರಲ್ಲಿ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಸ್ಥಗಿತಗೊಳಿಸಿ ವ್ಯವಹಾರದಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದರು. ತಮ್ಮ ಬಾಲ್ಯ ಸ್ನೇಹಿತ ಆನಂದ ನಾಯಕ್ ಜೊತೆ ಈ ಬಗ್ಗೆ ಚರ್ಚಿಸಿದರು. ಆದರೆ ಇಬ್ಬರ ಬಳಿ ವ್ಯವಹಾರ ಬಂಡವಾಳಕ್ಕೆ ಸಾಕಷ್ಟು ಹಣ ಇರಲಿಲ್ಲ. ಹೀಗೆಂದು ಸುಮ್ಮನಿರದ ಇಬ್ಬರೂ ಹೇಗಾದರೂ ಮಾಡಿ 3 ಲಕ್ಷ ರೂಪಾಯಿ ವ್ಯವಸ್ಥೆ ಮಾಡಿ ತಮ್ಮ ಚಹಾ ವ್ಯಾಪಾರ ಪ್ರಾರಂಭಿಸಲು ಯೋಜನೆ ಹಾಕಿಕೊಂಡು ಅನುಭವ್ ದುಬೆ ತಮ್ಮ ಮೊದಲ ಟೀ ಔಟ್ಲೆಟ್ ಅನ್ನು ಗರ್ಲ್ಸ್ ಹಾಸ್ಟೆಲ್ ಮುಂದೆ ತೆರೆದರು.
ಅತ್ಯಂತ ಕಡಿಮೆ ಬಜೆಟ್‌ನಲ್ಲಿ ವ್ಯಾಪಾರ ಪ್ರಾರಂಭಿಸಲು ಯೋಜಿಸಿದ್ದರಿಂದ, ಮಾರ್ಕೆಟಿಂಗ್, ಇಂಟೀರಿಯರ್ ಡಿಸೈನ್ ಮತ್ತು ಬ್ರ್ಯಾಂಡಿಂಗ್‌ನಂತಹ ವ್ಯಾಪಾರದಲ್ಲಿ ಬಹುಮುಖ್ಯವಾಗಿ ಮಾಡಬೇಕಾಗಿದ್ದ ವಿಷಯಗಳಿಗೆ ತಮ್ಮ ಬಳಿ ಹಣವಿಲ್ಲ ಎಂದು ಅನುಭವ್ ಮತ್ತು ಆನಂದ್ ಅರಿತುಕೊಂಡರು.
ಸ್ನೇಹಿತರಿಂದ ಎರವಲು ಪಡೆದ ವಸ್ತುಗಳು ಮತ್ತು ಸೆಕೆಂಡ್ ಹ್ಯಾಂಡ್ ಪೀಠೋಪಕರಣಗಳೊಂದಿಗೆ ವಿನ್ಯಾಸಗೊಳಿಸಿ ತಮ್ಮ ಮೊದಲ ಔಟ್‌ಲೆಟ್ ಅನ್ನು ಇಂದೋರ್‌ನ ಗರ್ಲ್ಸ್ ಹಾಸ್ಟೆಲ್ ಹತ್ತಿರದಲ್ಲಿ ತೆರೆದರು. ಇನ್ನು ತಮ್ಮ ಔಟ್‌ಲೆಟ್ ಹೆಸರು ಬರೆಯಿಸಲು, ಬ್ಯಾನರ್ ಮುದ್ರಿಸಲು ಹಣವಿಲ್ಲದ ಕಾರಣ, ಒಂದು ಉಪಯೋಗವಿಲ್ಲದ ಮರದ ತುಂಡು ಬಳಸಿಕೊಂಡು "ಚಾಯ್ ಸುಟ್ಟಾ ಬಾರ್" ಎಂಬ ತಾವೇ ಕೈಯಿಂದ ಬರೆದರು. ಈ ಹೆಸರು ಮತ್ತು ಥೀಮ್ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಪ್ರಸ್ತುತ ಅನುಭವ್ ಮತ್ತು ಆನಂದ್ ದೇಶದ 195 ನಗರಗಳಲ್ಲಿ ಚಾಯ್ ಸುಟ್ಟಾ ಬಾರ್‌ನ 400 ಕ್ಕೂ ಹೆಚ್ಚು ಔಟ್‌ಲೆಟ್ ಗಳನ್ನು ತೆರೆದಿದ್ದು ಮಾತ್ರವಲ್ಲದೇ ದುಬೈ, ಯುಕೆ, ಕೆನಡಾ ಮತ್ತು ಓಮನ್ ಸೇರಿದಂತೆ ವಿದೇಶಗಳಿಗೂ ಚಾಯ್ ಸುಟ್ಟ ಬಾರ್ ವಿಸ್ತರಿಸಿಕೊಂಡಿದೆ. ಇಂದು ಚಾಯ್ ಸುಟ್ಟಾ ಬಾರ್ ನ ವಾರ್ಷಿಕ ವಹಿವಾಟು ಸುಮಾರು 150 ಕೋಟಿ ರೂ. ತಲುಪಿದ್ದು, ಅನುಭವ್ ದುಬೆ ಅವರ ನಿವ್ವಳ ಮೌಲ್ಯ ಸುಮಾರು 10 ಕೋಟಿ ಎಂದು ಅಂದಾಜಿಸಲಾಗಿದೆ.
ಚಾಯ್ ಸುಟ್ಟಾ ಬಾರ್ ಮಳಿಗೆಗಳಲ್ಲಿ ಟೀ ಸರ್ವ್ ಮಾಡಲು ಮಣ್ಣಿನ ಕಪ್ ಅಥವಾ ಕುಲ್ಹಾದ್ ಬಳಸುವುದರಿಂದ ಇದು ಸುಮಾರು 250 ಕುಂಬಾರ ಕುಟುಂಬಗಳಿಗೆ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಿ ಕೊಟ್ಟಿದೆ. ಎಂಬಿಎ ಮತ್ತು ಇಂಜಿನಿಯರ್‌ಗಳು ಸೇರಿದಂತೆ ಇಂದು ಅನುಭವ್ ಅವರ ತಂಡದಲ್ಲಿ 150 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications