ಐಐಟಿ ಪದವೀಧರರು ಪ್ರಸ್ತುತ ಜಗತ್ತಿನಾದ್ಯಂತ ಕೆಲವು ದೊಡ್ಡ ಟೆಕ್ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ. ದೊಡ್ಡ ಟೆಕ್ ಮುಖ್ಯಸ್ಥರಲ್ಲಿ ಜಗತ್ತಿನಾದ್ಯಂತ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳು ಸಹ ಸೇರಿದ್ದಾರೆ. ಆದರೆ ದಿನಕ್ಕೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಅಂತಹ ವ್ಯಕ್ತಿಗಳಲ್ಲಿ ಐಐಟಿ ಕಾನ್ಪುರದಿಂದ ಪದವಿ ಪಡೆದ ಅರವಿಂದ್ ಕೃಷ್ಣ ಕೂಡಾ ಒಬ್ಬರಾಗಿದ್ದಾರೆ. ಅರವಿಂದ್ ಕೃಷ್ಣ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ (ಐಬಿಎಂ)ನ ಸಿಇಒ ಆಗಿದ್ದು, ಪ್ರಸ್ತುತ ಈ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 11.63 ಲಕ್ಷ ಕೋಟಿ ರೂಪಾಯಿ ಆಗಿದೆ. ದಿನಕ್ಕೆ ಈ ವ್ಯಕ್ತಿ ಎಷ್ಟು ಸಂಪಾದನೆ ಮಾಡ್ತಾರೆ ಎಂಬ ವಿವರ ಇಲ್ಲಿದೆ ಮುಂದೆ ಓದಿ...

ಅರವಿಂದ್ ಕೃಷ್ಣ ಯಾರು?
ಸುಮಾರು 30 ವರ್ಷಗಳ ಕಾಲ ಟೆಕ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನಂತರ ಅರವಿಂದ್ ಕೃಷ್ಣ 2020 ರಲ್ಲಿ ಕಂಪನಿಯ ಸಿಇಒ ಆಗಿ ನೇಮಕಗೊಂಡರು. ಅರವಿಂದ್ ಕೃಷ್ಣ ಅವರು ಭಾರತೀಯ ಸೇನೆಯ ಅಧಿಕಾರಿಯ ಮಗ. ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಜನಿಸಿದ ಅವರು ತೆಲುಗು ಮಾತನಾಡುವ ಕುಟುಂಬದ ಭಾಗವಾಗಿದ್ದಾರೆ.
ಅವರ ತಾಯಿ ಆರತಿ ಕೃಷ್ಣ ಅವರು ಸೇನಾ ವಿಧವೆಯರ ಕಲ್ಯಾಣಕ್ಕಾಗಿ ಶ್ರಮಿಸಿದರು. ಐಐಟಿ ಕಾನ್ಪುರದಿಂದ ಪದವಿ ಪಡೆಯುವ ಮೊದಲು, ಅವರು ತಮ್ಮ ಶಾಲಾ ಶಿಕ್ಷಣವನ್ನು ತಮಿಳುನಾಡು ಮತ್ತು ಡೆಹ್ರಾಡೂನ್‌ನಲ್ಲಿ ಮಾಡಿದರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದ ನಂತರ ಅರವಿಂದ್ ಕೃಷ್ಣ ಯುಎಸ್‌ಗೆ ತೆರಳಿದರು.
ಅರವಿಂದ್ ಕೃಷ್ಣ ಅವರು 1990 ರಲ್ಲಿ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ (ಐಬಿಎಂ) ನಲ್ಲಿ ಉದ್ಯೋಗವನ್ನು ಪಡೆದರು. ವರ್ಷಗಳಲ್ಲಿ ಅವರು ಟೆಕ್ ಕಂಪನಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಐಬಿಎಂನ ಸಿಇಒ ಆಗಿ ಆಯ್ಕೆಯಾದಾಗ, ಅವರು ಕಂಪನಿಯ ಹಿರಿಯ ಉಪಾಧ್ಯಕ್ಷರಾಗಿದ್ದರು.
ಕಳೆದ ವರ್ಷ, ಅರವಿಂದ್ ಕೃಷ್ಣ ಅವರು ವಾರ್ಷಿಕ 16.5 ಮಿಲಿಯನ್ ಡಾಲರ್‌ಗಳ ಸಂಪಾದನೆಯನ್ನು ಮಾಡಿದ್ದಾರೆ. ಅಂದರೆ ಭಾರತೀಯ ರೂಪಾಯಿಯಲ್ಲಿ 135 ಕೋಟಿ ರೂಪಾಯಿ ಆಗಿದೆ. ದಿನದ ಲೆಕ್ಕಾಚಾರವನ್ನು ನಾವು ನೋಡಿದಾಗ ಬರೋಬ್ಬರಿ 37 ಲಕ್ಷ ರೂಪಾಯಿ ಆಗಿದೆ.
ಅದಕ್ಕೂ ಒಂದು ವರ್ಷ ಮೊದಲು ಸಿಇಒ 17.5 ಮಿಲಿಯನ್ ಡಾಲರ್ ಗಳಿಸಿದ್ದರು. ಅವರ ವಾರ್ಷಿಕ ವೇತನ 1.5 ಮಿಲಿಯನ್ ಡಾಲರ್ ಆಗಿದೆ. 8.9 ಮಿಲಿಯನ್ ಡಾಲರ್‌ಗಳು ಅವರ ಸ್ಟಾಕ್ ಗಳಿಕೆಯಾಗಿದೆ. ಸ್ಟಾಕ್ ಆಯ್ಕೆಗಳಾಗಿ 2 ಮಿಲಿಯನ್ ಡಾಲರ್‌ಗಳನ್ನು ಪಡೆದರು.
ಅವರ ಹೆಸರಲ್ಲಿ 15 ಪೇಟೆಂಟ್‌ಗಳು ಇದೆ. ಅರವಿಂದ್ ಕೃಷ್ಣ ಸಹ ಲೇಖಕರಾಗಿದ್ದಾರೆ. 34 ಶತಕೋಟಿ ಡಾಲರ್‌ಗಳಿಗೆ ರೆಡ್ ಹ್ಯಾಟ್ ಎಂಬ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಅವರು ನೇತೃತ್ವ ವಹಿಸಿದ್ದರು.


Click it and Unblock the Notifications