ಆಪಲ್ ಒಂದು ಪ್ರತಿಷ್ಠಿತ ಟೆಕ್ನಾಲಜಿ ಬ್ರಾಂಡ್ ಆಗಿದ್ದು, ಇದು ಸ್ಮಾರ್ಟ್‌ಫೋನ್, ಡಿಜಿಟಲ್ ವಾಚ್‌ಗಳು, ಐಪಾಡ್‌ಗಳು ಹೀಗೆ ಅನೇಕ ಡಿವೈಸ್ ಗಳ ವಿಶಾಲ ಶ್ರೇಣಿಯೊಂದಿಗೆ, ಆಪಲ್ ಜಾಗತಿಕ ಮಾರುಕಟ್ಟೆಯಲ್ಲಿ ವಿಶಿಷ್ಟ ಹೆಜ್ಜೆಗುರುತು ಮೂಡಿಸಿದ್ದು ಜಗತ್ತಿನ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಭಾರತದಲ್ಲಿ ಆಪಲ್ ಉತ್ಪಾದನೆಯು 2020 ರಲ್ಲಿ ಕೇವಲ ಶೇಕಡ 1 ಆಗಿದ್ದು ಅದು ಈಗ ಶೇಕಡ 5 ಕ್ಕೆ ಏರಿಕೆಯಾಗಿದೆ.
ಭಾರತ ಈಗ ಎರಡನೇ ಅತಿದೊಡ್ಡ ಐಫೋನ್ ತಯಾರಕ ದೇಶವಾಗಿ ಹೊರಹೊಮ್ಮಿದ್ದು, ಕಂಪನಿಯು 2023 ರ ಆರ್ಥಿಕ ವರ್ಷದಲ್ಲಿ 40,000 ಕೋಟಿ ರೂಪಾಯಿ ಮೌಲ್ಯದ ಫೋನ್‌ಗಳನ್ನು ರಫ್ತು ಮಾಡಿದೆ. ಇನ್ನು ಕೆಲ ತಿಂಗಳ ಹಿಂದೆ, ಆಪಲ್ ಭಾರತದ ಮೇಲೆ ಹೆಚ್ಚಿನ ಗಮನಹರಿಸುವುದರೊಂದಿಗೆ ಅಂತರರಾಷ್ಟ್ರೀಯ ವ್ಯವಹಾರದ ನಿರ್ವಹಣೆಯನ್ನು ಪುನರ್ ರಚಿಸಿದೆ.

ಈ ಬದಲಾವಣೆಯೊಂದಿಗೆ, ಆಶಿಶ್ ಚೌಧರಿ ಆಪಲ್ ನ ಪ್ರಮುಖ ವ್ಯಕ್ತಿಯಾದರು. ಚೌಧರಿ ಅವರು ಆಪಲ್ ಇಂಡಿಯಾದ ಮುಖ್ಯಸ್ಥರ ಹುದ್ದೆಗೆ ಭಡ್ತಿ ನೀಡಲಾಗಿದ್ದು, ಅವರು ಆಪಲ್ ನ ಜಾಗತಿಕ ಸೇಲ್ಸ್ ಹೆಡ್ ಮೈಕೆಲ್ ಫೆಂಗರ್ ಅವರಿಗೆ ರಿಪೋರ್ಟ್ ಮಾಡುತ್ತಾರೆ.
ಆಶಿಶ್ ಚೌಧರಿ ಯಾರು?
ಆಶಿಶ್ ಚೌಧರಿ 2019 ರಲ್ಲಿ ಕಂಪನಿಯ ರಾಷ್ಟ್ರೀಯ ಮುಖ್ಯಸ್ಥರಾಗಿ ಆಪಲ್ ಗೆ ಸೇರ್ಪಡೆಗೊಂಡಿದ್ದಾರೆ. ಚೌಧರಿ ಅವರು ಆಪಲ್‌ಗೆ ಸೇರುವ ಮೊದಲು ನೋಕಿಯಾದ ಚೀಫ್ ಕಸ್ಟಮರ್ ಆಪರೇಷನ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದೆಹಲಿಯವರಾಗಿರುವ ಆಶಿತ್ 1965 ರಲ್ಲಿ ಜನಿಸಿದ್ದಾರೆ.
ದಿಲ್ಲಿ ಯೂನಿವರ್ಸಿಟಿಯಿಂದ ಗಣಿತಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ Emoryವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಮತ್ತಷ್ಟು ಜ್ಞಾನರ್ಜನೆಗೈಯುವ ಉದ್ದೇಶದಿಂದ ಯುನೈಟೆಡ್ ಸ್ಟೇಟ್ಸ್ ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯ ಅಭ್ಯಾಸಿಸಿದರು. ಅವರು ಈಗ 22,87,563 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಮುಖ್ಯಸ್ಥರಾಗಿದ್ದಾರೆ.
ಆಪಲ್ - ಮುಕೇಶ್ ಅಂಬಾನಿ ಜೊತೆ ಒಪ್ಪಂದವಿದೆಯೇ?
ಆಸಕ್ತಿದಾಯಕ ವಿಚಾರವೆಂದರೆ, ಭಾರತೀಯ ಬ್ಯುಸಿನೆಸ್ ಟೈಕೂನ್ ಆಗಿರುವ ಮುಕೇಶ್ ಅಂಬಾನಿ ಆಪಲ್ ಬ್ರಾಂಡ್ ಜತೆಯಾಗಲಿ ಅಥವಾ ಅದರ ಉತ್ಪಾದನೆಯೊಂದಿಗೆ ಯಾವುದೇ ಸಂಬಂಧ ಹೊಂದಿರದಿದ್ದರೂ ಪ್ರತಿ ವರ್ಷ ಭಾರತದಲ್ಲಿ ಆಪಲ್ ಐಪೋನ್ ಮಾರಾಟದಿಂದ ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ.
ಹೇಗೆಂದರೆ ಆಪಲ್ ಮುಂಬೈನಲ್ಲಿರುವ ರಿಲಯನ್ಸ್ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಕಾರಣ ಅವರು ಕೂಡಾ ಲಾಭಗಳಿಸುತ್ತಿದ್ದಾರೆ. ಆಪಲ್ ಮತ್ತು ಅಂಬಾನಿ ನಡುವಿನ ಒಪ್ಪಂದದ ಪ್ರಕಾರ, ಕಂಪನಿಯು ಕನಿಷ್ಠ ಮಾಸಿಕ ಪಾವತಿ 42 ಲಕ್ಷ ರೂಪಾಯಿ ಪಾವತಿಸುತ್ತಿದ್ದು, ಅಂಬಾನಿ ಮಾಲ್‌ನಲ್ಲಿರುವ ಮಳಿಗೆಯ ಬಾಡಿಗೆ ಮೂರು ವರ್ಷಕ್ಕೊಮ್ಮೆ ಶೇಕಡ 15 ರಷ್ಟು ಹೆಚ್ಚಾಗುತ್ತದೆ.


Click it and Unblock the Notifications