ಏಷ್ಯನ್ ಪೇಂಟ್ಸ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾದ ಅಶ್ವಿನಿ ದಾನಿ ಅವರು ಭಾರತದ ಶ್ರೀಮಂತ ಬಿಲಿಯನೇರ್‌ಗಳಲ್ಲಿ ಒಬ್ಬರು. ಡೆಟ್ರಾಯಿಟ್ ಮೂಲದ ರಸಾಯನಶಾಸ್ತ್ರಜ್ಞರಿಂದ ಹಿಡಿದು ಉದ್ಯಮದ ನಾಯಕನವರೆಗೆ ದಾನಿಯ ಜೀವನದ ಹಾದಿಯು ಪರಿಶ್ರಮ, ಬದ್ಧತೆ ಹಾಗೂ ಪರಿಪೂರ್ಣತೆಯ ಅನ್ವೇಷಣೆಯ ಮೌಲ್ಯಕ್ಕೆ ಪುರಾವೆಯಾಗಿದೆ.
ದಾನಿಯು ಕಂಪೆನಿಯನ್ನು ಬೆಳೆಸುವುದರ ಜತೆಗೆ ಉದ್ಯಮಿಯಾಗಿ ಸಾಮಾಜಿಕ ಹಾಗೂ ಜನೋಪಕಾರಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡು ಗಮನಸೆಳೆದಿದ್ದಾರೆ. ಅಶ್ವಿನ್ ದಾನಿ ಯಾರು?: 1942ರಲ್ಲಿ ತಮ್ಮ ತಂದೆ ಹಾಗೂ ಇತರೆ ಮೂವರು ಸೇರಿಕೊಂಡು ಪ್ರಾರಂಭಿಸಿದ ಪೇಂಟ್ಸ್ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದು, ಅಶ್ವಿನ್ ದಾನಿ ಅವರು ಏಷ್ಯನ್ ಪೇಂಟ್ಸ್‌ನಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ.

ಅಶ್ವಿನ್ ದಾನಿ ಅವರು ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದಾರೆ. ದಾನಿ ಅವರು 1966ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ವಿಜ್ಞಾನ ಪದವಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ದಾನಿ ಅವರು ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಅಕ್ರಾನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆಯುವುದಕ್ಕೆ ಅಮೆರಿಕಾಕ್ಕೆ ತೆರಳಿದ್ದರು.
ರಸಾಯನಶಾಸ್ತ್ರಜ್ಞರಿಂದ ಬಹುಕೋಟಿ ಡಾಲರ್ ಕಂಪೆನಿ ಕಾರ್ಯನಿರ್ವಾಹಕ ಹುದ್ದೆವರೆಗೆ
ದಾನಿ ಅವರು ಡೆಟ್ರಾಯಿಟ್‌ನಲ್ಲಿ ವಿಜ್ಞಾನಿಯಾಗಿ ತಮ್ಮ ಮೊದಲ ಹುದ್ದೆಯನ್ನು ಪ್ರಾರಂಭಿಸಿದ್ದರು. ನಂತರ ಹಿರಿಯ ಅಧಿಕಾರಿಯಾಗಿ ತಮ್ಮ ಕುಟುಂಬದ ಒಡೆತನದ ಏಷ್ಯನ್ ಪೇಂಟ್ಸ್ ಕಂಪೆನಿಗೆ ಸೇರಿಕೊಂಡರು. ಹಂತ-ಹಂತವಾಗಿ ಕಂಪೆನಿಯ ವಿವಿಧ ಹಂತಗಳಲ್ಲಿ ಪ್ರಗತಿಯನ್ನು ಸಾಧಿಸುತ್ತ ಹೋದರು. 1997ರಲ್ಲಿ ಏಷ್ಯನ್ ಪೇಂಟ್ಸ್‌ನ ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಏರಿದರು.
ಅವರ ನಿರ್ದೇಶನದಲ್ಲಿ ಏಷ್ಯನ್ ಪೇಂಟ್ಸ್ ತನ್ನ ಜಾಗತಿಕ ವ್ಯಾಪಾರ ವಹಿವಾಟನ್ನು ವಿಸ್ತರಿಸುವ ಜತೆಗೆ ಪ್ರಮುಖ ಪೇಂಟ್ಸ್ ತಯಾರಿಕಾ ಕಂಪೆನಿಯಾಗಿ ಬೆಳೆಯಿತು. ದಾನಿ ಅವರು ಕಂಪೆನಿಯ ಆರ್&ಡಿ ವಿಭಾಗದ ನಿರ್ದೇಶಕರಾಗಿ ಮಹತ್ವದ ಸಂಶೋಧನಾ ಹೂಡಿಕೆಗಳನ್ನು ಮಾಡಿದರು. ಇದು ಕಂಪೆನಿಯು ಗಮನಾರ್ಹ ಪ್ರಗತಿ ಸಾಧಿಸುವುದಕ್ಕೆ ನೆರವಾಗಿದೆ.
ಐವತ್ತು ವರ್ಷಗಳ ಮಾರುಕಟ್ಟೆ ಪ್ರಾಬಲ್ಯದೊಂದಿಗೆ ಏಷ್ಯನ್ ಪೇಂಟ್ಸ್ ಪ್ರಸ್ತುತ ಭಾರತದಲ್ಲಿ ಅತಿದೊಡ್ಡ ಪೇಂಟ್ ತಯಾರಿಕಾ ಕಂಪೆನಿಯಾಗಿ ಬೆಳೆದಿದೆ. ಜತೆಗೆ ಏಷ್ಯಾದಲ್ಲಿ ಮೂರನೇ ಅತಿದೊಡ್ಡ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂಬತ್ತನೇ ಅತಿದೊಡ್ಡ ಕಂಪೆನಿಯಾಗಿದೆ. ಇದು ದಾನಿ ಅವರ ಪರಿಣಾಮಕಾರಿ ನಿರ್ವಾಹಣಾ ಕೌಶಲ್ಯ ಹಾಗೂ ಯಶಸ್ವಿ ನಾಯಕತ್ವಕ್ಕೆ ಸಾಕ್ಷಿಯಾಗಿದೆ.
ಅಶ್ವಿನ್ ದಾನಿ ನಿವ್ವಳ ಆಸ್ತಿ: ಫೋರ್ಬ್ಸ್‌ನ 2023ರ ಪ್ರಕಾರ ದಾನಿ ಅವರ ನಿವ್ವಳ ಆಸ್ತಿಯು $7.1 ಬಿಲಿಯನ್(58,000 ಕೋಟಿ ರೂ.) ಆಗಿದೆ. ವರದಿ ಪ್ರಕಾರ 2022ರ ಮೂರನೇ ತ್ರೈಮಾಸಿಕದಲ್ಲಿ ಏಷ್ಯನ್ ಪೇಂಟ್ಸ್ 1,097 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಅದಕ್ಕಿಂತ ಹಿಂದಿನ ವರ್ಷ 1,031 ಲಾಭ ಗಳಿಸಿದ್ದು, ಆ ಮೂಲಕ ಕಳೆದ ಹಣಕಾಸು ವರ್ಷದಲ್ಲಿ 6% ಪ್ರಗತಿ ಸಾಧಿಸಿದೆ.
ಅಶ್ವಿನ್ ದಾನಿ ಕುಟುಂಬ: ಏಷ್ಯನ್ ಪೇಂಟ್ಸ್‌ನ ನಾಲ್ವರು ಸಂಸ್ಥಾಪಕರಲ್ಲಿ ಒಬ್ಬರಾದ ಸೂರ್ಯಕಾಂತ್ ಅವರು ಅಶ್ವಿನ್ ದಾನಿ ಅವರ ತಂದೆ. ಇವರಿಗೆ ಮೂವರು ಮಕ್ಕಳಿದ್ದು, ಇನಾ ದಾನಿಗೆ ಮದುವೆ ಆಗಿದೆ. ದಾನಿಯ ಮಗ ಮಾಲವ್ ಕೂಡ ಕಂಪೆನಿಯ ವ್ಯವಹಾರಗಳನ್ನು ನೋಡುವ ಮೂಲಕ ಆಡಳಿತ ಮಂಡಳಿಯಲ್ಲಿದ್ದಾರೆ.


Click it and Unblock the Notifications