ಪೂಮಾ ಇಂಡಿಯಾ ಹಾಗೂ ಆಗ್ನೇಯ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಈ ವಾರದ ಆರಂಭದಲ್ಲಿ ಕಂಪೆನಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕಳೆದ 9 ವರ್ಷಗಳಲ್ಲಿ ಪೂಮಾದ ಆದಾಯವನ್ನು 3000 ಕೋಟಿ ರೂಪಾಯಿಗೆ ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇವರೊಂದಿಗೆ ಪೂಮಾದ ಮಾರಾಟ ಮತ್ತು ಕಾರ್ಯಾಚರಣೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಅತುಲ್ ಬಜಾಜ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಪ್ರಭು ಅವರು ಕೂಡ ರಾಜೀನಾಮೆ ನೀಡಿದ್ದಾರೆ. ಅವರು ಅಭಿಷೇಕ್ ಗಂಗೂಲಿಗೆ ಜರ್ಮನ್ ಮೂಲದ ಕಂಪೆನಿಯನ್ನು ಬೆಳೆಸಲು ಸಹಾಯ ಮಾಡಿದ್ದರು.

ಅತುಲ್ ಬಜಾಜ್ ಯಾರು?
ಅತುಲ್ ಬಜಾಜ್ ಅವರು ಬೆಂಗಳೂರಿನ ಐಐಎಂನಲ್ಲಿ ಎಕ್ಸಿಕ್ಯೂಟಿವ್ ಎಂಬಿಎ ಮಾಡಿದ್ದಾರೆ. ಅದಕ್ಕೂ ಮೊದಲು ಅವರು 1997 ಹಾಗೂ 1999ರ ನಡುವೆ ಎನ್‌ಐಎಫ್‌ಟಿನಿಂದ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು. ಇನ್ನು 1996ರಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪದವಿಯನ್ನು ಕೂಡ ಪಡೆದುಕೊಂಡಿದ್ದರು. ಅತುಲ್ ಬಜಾಜ್ ಅವರು ಪೂಮಾ ಜತೆಗೆ 16 ವರ್ಷಗಳನ್ನು ಕಳೆದಿದ್ದಾರೆ.
ಅತುಲ್ ಬಜಾಜ್ ಅವರು ಪೂಮಾದಲ್ಲಿ ಮೂರು ವರ್ಷ ಹಾಗೂ ಐದು ತಿಂಗಳುಗಳ ಕಾಲ ದಕ್ಷಿಣ ಏಷ್ಯಾದ ಮಾರಾಟ ಮತ್ತು ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದರು. ಬಳಿಕ ಅಂದರೆ 2013ರಲ್ಲಿ ಅತುಲ್ ಬಜಾಜ್ ಅವರು ಪೂಮಾದ ಕಾರ್ಯ ನಿರ್ವಹಣಾ ನಿರ್ದೇಶಕರಾಗುವ ಮೂಲಕ ಉನ್ನತ ಹುದ್ದೆಯನ್ನು ಕೂಡ ಅಲಂಕರಿಸಿದ್ದರು. ಭಾರತದಲ್ಲಿ ಪೂಮಾ ಕಂಪೆನಿ ಹಾಗೂ ಅದರ ಬ್ರಾಂಡ್ ಅನ್ನು ಎತ್ತರಕ್ಕೆ ಬೆಳೆಸುವಲ್ಲಿ ವಿವಿಧ ಹುದ್ದೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಗಮನಸೆಳೆದ್ದರು.
ಪೂಮಾ ಕಂಪೆನಿಯಲ್ಲಿ ಅತುಲ್ ಬಜಾಜ್ ಅವರು ಉತ್ಪನ್ನ ವಿನ್ಯಾಸ, ಖರೀದಿ, ವ್ಯಾಪಾರೀಕರಣ ಹಾಗೂ ಸಂಪನ್ಮೂಲಗಳ ಕ್ರೋಡೀಕರಣಕ್ಕಾಗಿ ಅತ್ಯುತ್ತಮ ತಂಡವನ್ನು ನಿರ್ಮಿಸಿದ ಹೆಗ್ಗಳಿಕೆಯನ್ನು ಕೂಡ ಪಡೆದುಕೊಂಡಿದ್ದಾರೆ. ಅತುಲ್ ಬಜಾಜ್ ಅವರು 2006ರಲ್ಲಿ ಪೂಮಾ ಕಂಪೆನಿಯಲ್ಲಿ ಹಿರಿಯರ ವಿಭಾಗದಲ್ಲಿ ಮ್ಯಾನೇಜರ್ ಆಗಿ ಸೇರಿದ್ದರು.
ಅಭಿಷೇಕ್ ಗಂಗೂಲಿ, ಅಮಿತ್ ಪ್ರಭು ಹಾಗೂ ಅತುಲ್ ಬಜಾಜ್ ಅವರು ಮುಂದಿನ ಆಗಸ್ಟ್‌ನಲ್ಲಿ ಪೂಮಾ ಕಂಪೆನಿಯಿಂದ ನಿರ್ಗಮಿಸಲಿದ್ದಾರೆ. ಅವರು ಸ್ಟಾರ್ಟಪ್‌ವೊಂದನ್ನು ಪ್ರಾರಂಭಿಸುವುದಕ್ಕೆ 430 ಕೋಟಿ ರೂ. ಫಂಡ್ ಅನ್ನು ರೈಸ್ ಮಾಡಿದ್ದಾರೆ. ಹರ್ಷ ರಾಘವನ್ ನೇತೃತ್ವದ ಕನ್ವರ್ಜೆಂಟ್ ಫೈನಾನ್ಸ್ ಎಲ್‌ಎಲ್‌ಪಿ 400 ಕೋಟಿ ರೂ.ವನ್ನು ಹೂಡಿಕೆ ಮಾಡಿದೆ. 30 ಕೋಟಿ ರೂ. ವ್ಯಕ್ತಿಗಳಿಂದ ಹೂಡಿಕೆಯಾಗಿದೆ.
ಬಜಾಜ್, ಪ್ರಭು ಹಾಗೂ ಗಂಗೂಲಿ ಅವರು ಈ ಕಂಪೆನಿಯ ಸಹ ಸಂಸ್ಥಾಪಕರಾಗಿದ್ದಾರೆ. ಈ ಹೊಸ ಕಂಪೆನಿಯ ಹೆಸರು ಅಜಿಲಿಟಾಸ್ ಸ್ಪೋರ್ಟ್ಸ್. ಇದು ಕ್ರೀಡಾ ವಲಯಕ್ಕೆ ಸಂಬಂಧಿಸಿದ ಕಂಪೆನಿಯಾಗಿದೆ. ಉತ್ಪಾದನೆಯಿಂದ ಹಿಡಿದು ತಂತ್ರಜ್ಞಾನ ಹಾಗೂ ರಿಟೇಲ್‌ವರೆಗಿನ ಸೇವೆಯನ್ನು ಒದಗಿಸುತ್ತದೆ. ಇದು ಪ್ರೀಮಿಯಂ ಕ್ರೀಡಾ ಉಡುಪು ಉತ್ಪನ್ನದ ಕಂಪೆನಿಯಾಗಿದೆ. ಈ ಹೊಸ ಕಂಪನಿಯು ಮಹತ್ವಾಕಾಂಕ್ಷೆಯ ಮೌಲ್ಯವನ್ನು ಹೊಂದಿರುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications