ಈ ಸ್ಪೂರ್ತಿದಾಯ ಕಥೆಯ ನಾಯಕಿ ಐಐಟಿ ಮತ್ತು ಐಐಎಂಗಳಲ್ಲಿ ಓದಲಿಲ್ಲ. ಅಥವಾ ಶ್ರೀಮಂತ ಕುಟುಂಬದಿಂದ ಹಿನ್ನಲೆಯಿಂದ ಬೆಳೆದು ಬಂದವಳಲ್ಲ. ಆಕೆಯ ತಂದೆಯೂ ಉದ್ಯಮಿ ಅಲ್ಲ. ಆದರೆ ಛಲ ಬಿಡದೆ ಕಂಪನಿ ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದ ನೂರಾರು ಜನಕ್ಕೆ ಉದ್ಯೋಗದಾತೆಯಾಗಿದ್ದಾಳೆ. ಈಕೆಯೇ ಅಂಕಿತಾ ನಂದಿ.
ಅಂಕಿತಾ ನಂದಿ ಕಂಪನಿ ಕಟ್ಟಿ ಬೆಳೆಸಿದ ಕಥೆ ಬಹಳ ಕುತೂಹಲಕಾರಿಯಾಗಿದೆ. ಅಂಕಿತಾ ಕೋಲ್ಕತ್ತಾ ಮೂಲದ ಕಂಪನಿ "Tier 5 ಟೆಕ್ನಾಲಜಿ ಸೊಲ್ಯೂಷನ್ಸ್" ಇದರ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರು ತಮ್ಮ ಪತಿಯೊಂದಿಗೆ ಸೇರಿ 2015 ರಲ್ಲಿ ಈ ಕಂಪನಿಯನ್ನು ಸ್ಥಾಪಿಸಿದರು. ಅಂಕಿತಾ ನಂದಿ ಪತಿ ಜಾನ್ ವ್ಯಾನ್ ಅಮೇರಿಕಾ ಮೂಲದವರಾಗಿದ್ದಾರೆ.

ಅಂಕಿತಾ ನಂದಿ ಪ್ರಸ್ತುತ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿ ಕಚೇರಿ ಹೊಂದಿದ್ದು ಇಲ್ಲಿ ನೂರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಅಂಕಿತಾ ನಂದಿ ಹಿನ್ನಲೆಯನ್ನು ಬಗ್ಗೆ ಹೇಳಬೇಕೆಂದರೆ ನಂದಿ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಮೂಲದವರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಂಕಿತಾ ನಂದಿ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದರು.
ಪ್ರಾಥಮಿಕ ಶಿಕ್ಷಣವನ್ನು ಬಂಗಾಳಿ ಮಾಧ್ಯಮದಲ್ಲಿ ಪೂರ್ಣಗೊಳಿದ್ದ ಇವರು ಬಾಲ್ಯದಿಂದಲೇ ತನ್ನದೇ ಆದ ಕಂಪನಿ ಸ್ಥಾಪಿಸುವ ಕನಸು ಕಂಡಿದ್ದರು. ಅಂಕಿತಾ ನಂದಿ ತಮ್ಮ ಊರಿನಲ್ಲೇ ಅಂದರೆ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿಇಂಜಿನಿಯರಿಂಗ್ ಓದುತ್ತಿದ್ದಾಗ ಸಾಫ್ಟ್‌ವೇರ್ ಗಳನ್ನು ಅಭಿವೃದ್ದಿಪಡಿಸುವುದನ್ನು ಆರಂಭಿಸಿದರು.
ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಅವರು ಕಾಲೇಜಿನಲ್ಲಿ ಹಲವಾರು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ತಯಾರಿಸಿ ಮಾರಾಟ ಮಾಡಿದರು. ಇಲ್ಲಿಂದಲೇ ತಾವು ಉದ್ಯಮಿಯಾಗುವ ಕನಸು ಮತ್ತಷ್ಟು ದೃಢಗೊಂಡಿದ್ದು. ಸದ್ಯ ಇವರಕಂಪನಿಯೂ 1500 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.
ಕಂಪನಿಯ ಪ್ರಧಾನ ಕಛೇರಿ ಅಮೇರಿಕದ ಇಂಡಿಯಾನಾದಲ್ಲಿದೆ. ಕೋಲ್ಕತ್ತಾದಲ್ಲಿಯೂ ಇವರ ಕಚೇರಿ ಇದೆ. ಈ ಕಂಪನಿಯು ವ್ಯಾಪಾರ ಉದ್ಯಮಗಳಿಗೆ ತಾಂತ್ರಿಕ ಆವಿಷ್ಕಾರಗಳು ಮತ್ತು 25 ಸಾಫ್ಟ್‌ವೇರ್ ಪ್ರೋಡಕ್ಟ್ಸ್ ನ್ನು ಒದಗಿಸುತ್ತದೆ. ಇದಲ್ಲದೇ ಇವರ ಕಂಪನಿಯ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ಯನ್ನು ಹೊಂದಿದೆ.
ಇನ್ನು ಅಂಕಿತಾ ಅವರಿಗೆ ಪತಿ ಜಾನ್ ಅವರ ಪರಿಚಯವಾಗಿದ್ದು, ಡೇಟಿಂಗ್ ಅಪ್ಲಿಕೇಶನ್ ಮೂಲಕ. ಇವರು ಫ್ಲೋರಿಡಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಡೇಟಿಂಗ್ ಆಪ್ ಟಿಂಡರ್ ಮೂಲಕವಾದ ಪರಿಚಯ ಭಾರತದಲ್ಲಿ ಅವರನ್ನು ಭೇಟಿ ಮಾಡುವಂತೆ ಮಾಡಿತು. ಜಾನ್ ಹಾಗೂ ಅಂಕಿತಾ 2021 ರಲ್ಲಿ ವಿವಾಹವಾದರು. ಆದರೆ ಅದಕ್ಕೂ ಮುಂಚೆ ಅಂದರೆ 2015 ರಲ್ಲಿ ಇಬ್ಬರೂ ಸೇರಿ Tier 5 ಟೆಕ್ನಾಲಜಿ ಸೊಲ್ಯೂಷನ್ಸ್ ಕಂಪನಿಯನ್ನು ಸ್ಥಾಪಿಸಿದರು.
ಅಂಕಿತಾ ನಂದಿ ಕಂಪನಿಯು ಚಂದಾದಾರಿಕೆ ಆಧಾರಿತ ಮಾದರಿ ಅನುಸರಿಸುತ್ತಿದ್ದು ಇತರ ವ್ಯವಹಾರಸ್ಥರು ಅವರ ಶುಲ್ಕ ಪಾವತಿಸಿ ಅಂಕಿತಾ ನಂದಿ ಸಾಫ್ಟ್‌ವೇರ್‌ಗಳಪ್ರಯೋಜನ ಪಡೆಯಬಹುದು. ಅವರ ಕಂಪನಿಯು 2021 ರಲ್ಲಿ 12 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿತ್ತು.
ಆದರೆ ಇದೀಗ ಸುಮಾರು 100 ಕೋಟಿ ಮೌಲ್ಯದ ಆಸುಪಾಸಿನಲ್ಲಿದೆ. ಜೊತೆಗೆ 9 ಕೋಟಿ ರೂಪಾಯಿಗೂ ಅಧಿಕ ಆದಾಯವನ್ನೂ ಹೊಂದಿದೆ. ಅಂಕಿತಾ ನಂದಿ ಕಂಪನಿಯು ಪ್ರಾರಂಭವಾಗಿದ್ದು ಓರ್ವ ಡೆವಲಪರ್ ಮತ್ತು ಹೆಚ್.ಆರ್ ಎಕ್ಸಿಕ್ಯೂಟಿವ್ ಒಳಗೊಂಡ ಇಬ್ಬರು ಸಿಬ್ಬಂದಿ ಹಾಗೂ 2 ಬಾಡಿಗೆ ಕಂಪ್ಯೂಟರ್‌ಗಳ ಮೂಲಕ. ಆದರೆ ಇಂದು ಕಂಪನಿಯು 100ಕ್ಕೂ ಹೆಚ್ಚು ಉದ್ಯೋಗಿಗಳ ಕಂಪನಿಯಾಗಿ ಬೆಳೆದು ನಿಂತಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications