ಭಾರತೀಯರ ನೇತೃತ್ವದಲ್ಲಿದ್ದ ಅನೇಕ ದೊಡ್ಡ - ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ವ್ಯವಹಾರದಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಹಾಗೆಯೇ ಭಾರತದಲ್ಲಿನ ಅತಿದೊಡ್ಡ ಸಂಘಟಿತ ಸಂಸ್ಥೆಯಾದ 'ಟಾಟಾ' ತನ್ನ ಕಂಪನಿಯಲ್ಲಿ, ಸಿಇಒ ಮತ್ತು ಬಹಳಷ್ಟು ಮಂದಿ ಅನುಭವಿ ಕಾರ್ಯನಿರ್ವಾಹಕನ್ನು, ನಾಯಕತ್ವದ ಸ್ಥಾನಗಳಲ್ಲಿ ಹೊಂದಿದೆ. ಹೀಗಾಗಿ ಟಾಟಾ ಸಂಸ್ಥೆಯ ಉದ್ಯಮ ವರ್ಷದಿಂದ ವರ್ಷಕ್ಕೆ ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತಿದೆ.
ಅತ್ಯಂತ ಕಿರಿಯ ವಯಸ್ಸಿನಲ್ಲಿ, ಟಾಟಾ ಗ್ರೂಪ್‌ನ ಉನ್ನತ ಸ್ಥಾನಕ್ಕೇರಿರುವವರಲ್ಲಿ ಅವನಿ ದಾವ್ಡಾ ಕೂಡಾ ಒಬ್ಬರಾಗಿದ್ದಾರೆ. ಟಾಟಾ ಗ್ರೂಪ್‌ನ ಸಿಇಒ ಸ್ಥಾನದಲ್ಲಿರುವವರು ಅವನಿ ದಾವ್ಡಾ. ಈ ಹಿಂದೆ ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗಿ 2023ರಲ್ಲಿ ಕಂಪನಿಯು 1000 ಕೋಟಿ ರೂಪಾಯಿಯ ಆದಾಯದ ಮಿತಿಯನ್ನು ದಾಟಿದಾಗ ವ್ಯವಹಾರದಲ್ಲಿ ದಾಖಲೆಯನ್ನು ಸಾಧಿಸಿ ತಮ್ಮ ನಾಯಕತ್ವದಲ್ಲಿ ಸೈ ಎಣಿಸಿಕೊಂಡರು.

ಹಾಗ್ರಿದೆ ಕಾರ್ಪೊರೇಟ್ ಜಗತ್ತಿನಲ್ಲಿ ವೃತ್ತಿ ಜೀವನ ಆರಂಭಿಸಿ ಅವರು ಟಾಟಾ ಸ್ಟಾರ್‌ಬಕ್ಸ್‌ನಿಂದ 2602 ಕೋಟಿ ರೂಪಾಯಿಯ ಕಂಪನಿಯ ಡೈರೆಕ್ಟರ್ ಆಗುವವರೆಗೆ ಅವರು ಕ್ರಮವಾಗಿ ಬೆಳೆದು ಬಂದ ರೀತಿಯನ್ನೊಮ್ಮೆ ನೋಡೋಣ, ಮುಂದೆ ಓದಿ...
ಅವನಿ ದಾವ್ಡಾ ಯಾರು?
ಮೂಲತಃ ಮುಂಬೈಯವರಾದ ಅವನಿ ತಮ್ಮ ಶಾಲಾ ಶಿಕ್ಷಣದ ಬಳಿಕ ಎಚ್.ಆರ್ ಕಾಲೇಜು ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ ಅವನಿ ಅವರಿಗೆ ಲೀಡರ್ ಶಿಪ್ ಮತ್ತು ಬಿಸಿನೆಸ್‌ನಲ್ಲಿದ್ದ ಉತ್ಸಾಹದ ಕಾರಣಕ್ಕಾಗಿ ಪ್ರತಿಷ್ಠಿತ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.
ಅವನಿ ದಾವ್ಡಾ ಅವರು 2002 ರಲ್ಲಿ ಟಾಟಾ ಅಡ್ಮಿನಿಸ್ಟ್ರೇಟಿವ್ ಸರ್ವೀಸಸ್ (ಟಿಎಎಸ್) ಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ತಾಜ್ ಹೋಟೆಲ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಮತ್ತು ಇನ್ಫಿನಿಟಿ ರಿಟೇಲ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುವ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡರು.
ಅವನಿ ದಾವ್ಡಾ ಅವರಿಗೆ ಆರ್.ಕೆ. ಕೃಷ್ಣ ಕುಮಾರ್ ಎಂಬ ನಿಷ್ಠಾವಂತ ಟಾಟಾ ಉದ್ಯೋಗಿ ಮಾರ್ಗದರ್ಶನ ನೀಡಿದರು. ಅವನಿಯವರ ಸಾಮರ್ಥ್ಯ ಮತ್ತು ಅಸಾಧಾರಣ ಜ್ಞಾನದಿಂದ ಪ್ರಭಾವಿತರಾದ ಕುಮಾರ್ ಅವರು ಟಾಟಾ ಗ್ಲೋಬಲ್ ಬೆವರೇಜಸ್ ಲಿಮಿಟೆಡ್ ಮತ್ತು ಸ್ಟಾರ್‌ಬಕ್ಸ್ ಕಾಫಿ ಕಂಪನಿಯ ನಡುವಿನ ಪ್ರಮುಖ ಸಹಯೋಗವನ್ನು ಮುನ್ನಡೆಸಲು ಅವನಿ ದಾವ್ಡಾ ಅವರನ್ನು ಆಯ್ಕೆ ಮಾಡಿದರು.
ಲಾಭದಾಯಕ ಅವಧಿಗೆ ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗಿ ಸೇವೆ ಸಲ್ಲಿಸಿದ ನಂತರ, ಅವನಿ ದಾವ್ಡಾ ಅವರು ಗೋದ್ರೇಜ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಿಭಾಗವಾದ ಗೋದ್ರೇಜ್ ನೇಚರ್ಸ್ ಬಾಸ್ಕೆಟ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು. 2016 ರಿಂದ ಅವರು ಕಂಪನಿಯ ಮತ್ತಷ್ಟು ಬೆಳವಣಿಗೆಗೆ ಕಾರಣಕರ್ತರಾದರು.


Click it and Unblock the Notifications