ದೆಹಲಿಯ ಟಾಪ್ ವ್ಯಾಪಾರ ಉದ್ಯಮದ ಉತ್ತರಾಧಿಕಾರಿ, ಸ್ಟೈಲಿಶ್ ಆಯೇಷಾ ಥಾಪರ್ ಅವರು ಈಗ ಅಮೆರಿಕಾದಲ್ಲಿ ಯಶಸ್ವಿ ರೆಸ್ಟೊರೆಂಟರ್ ಆಗಿದ್ದಾರೆ. ಅವರ ಪತಿ, ಬಹು-ಬಿಲಿಯನ್ ಡಾಲರ್ ಸೈಬರ್ ಸೆಕ್ಯುರಿಟಿ ದೈತ್ಯ ಕಂಪನಿಯಾದ ಪಾಲೋ ಆಲ್ಟೊ ನೆಟ್‌ವರ್ಕ್‌ನ ಸಿಇಒ ನಿಕೇಶ್ ಅರೋರಾ ಆಗಿದ್ದು, ಇವರು ಪ್ರಭಾವಿ ಜೋಡಿಯಾಗಿದ್ದಾರೆ.
ಆಯೇಷಾ ಥಾಪರ್ ಅವರು ಭಾರತದ ಪ್ರಮುಖ ಹಾಗೂ ಪ್ರಾಚೀನ ಉದ್ಯಮ ಸಂಸ್ಥೆಯಾದ ಥಾಪರ್ ಗ್ರೂಪ್‌ನ ಕುಡಿಯಾಗಿದ್ದರೆ, ನಿಕೇಶ್ ಅವರು 8,500 ಕೋಟಿ ರೂ.ಗಳ ನಿವ್ವಳ ಆಸ್ತಿ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತ ಭಾರತೀಯ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. ಆಯೇಷಾ ಥಾಪರ್ ಅವರು ದೆಹಲಿಯ ಮಾರ್ಡನ್ ಸ್ಕೂಲ್‌ನಲ್ಲಿ ತಮ್ಮ ಪ್ರಾಥಮಿಕ ಹಂತದ ಶಾಲಾ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.

ಬಳಿಕ ಅವರು ವೆಲ್ಲೆಸ್ಲಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅವರು ರಿಯಲ್ ಎಸ್ಟೇಟ್‌ನ ದೈತ್ಯ ಕಂಪನಿ ಇಂಡಿಯನ್ ಸಿಟಿ ಪ್ರಾಪರ್ಟೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಆಯೇಷಾ ಥಾಪರ್ ಅವರು ಪ್ರಸಿದ್ಧ ವ್ಯಾಪಾರ ಪರಂಪರೆಯಿಂದ ಬಂದವರಾಗಿದ್ದು, ಅವರ ಅಜ್ಜ ಕರಮ್ ಚಂದ್ ಥಾಪರ್ ಅವರು ಈ ಹಿಂದಿನ ದೈತ್ಯ ಉದ್ಯಮಿಯಾಗಿದ್ದಾರೆ.
ಕಲ್ಲಿದ್ದಲು ವ್ಯಾಪಾರದಿಂದ ಪ್ರಾರಂಭವಾದ ಈ ಥಾಪರ್ ಕುಟುಂಬದ ವ್ಯಾಪಾರವು ಜವಳಿ (ಜೆಸಿಟಿ ಲಿಮಿಟೆಡ್), ರಿಯಲ್ ಎಸ್ಟೇಟ್ (ಇಂಡಿಯನ್ ಸಿಟಿ ಪ್ರಾಪರ್ಟೀಸ್), ಶಿಕ್ಷಣ, ಟ್ರೇಡಿಂಗ್ ಹೀಗೆ ವಿವಿಧ ವ್ಯಾಪಾರ ಕ್ಷೇತ್ರಗಳ ಮೂಲಕ ಬೃಹತ್ ಸಂಪತ್ತನ್ನು ಗಳಿಸಿಕೊಂಡಿದೆ. ಅವರು ಒಂದು ಸಮಯದಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಮಾಲಿಕತ್ವವನ್ನು ಕೂಡ ಹೊಂದಿದ್ದರು.
KCT ಗ್ರೂಪ್ ಅನ್ನು ಪ್ರಸ್ತುತ ಆಯೇಷಾ ಅವರ ತಂದೆ ವಿಕ್ರಮ್ ಥಾಪರ್ ಮತ್ತು ಸಹೋದರ ವರುಣ್ ಥಾಪರ್ ಅವರು ಮುನ್ನಡೆಸುತ್ತಿದ್ದಾರೆ. ಆಯೇಷಾ ಅವರು ಕೇವಲ ಕುಟುಂಬ ಬಿಸಿನೆಸ್‌ನ ಕುಡಿಯಷ್ಟೇ ಅಲ್ಲ; ಜತೆಗೆ ತಮ್ಮ ಸ್ವಂತ ನೆಲೆಯಲ್ಲಿಯೂ ಯಶಸ್ವಿ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಅವರು ತಮ್ಮ 12ನೇ ವಯಸ್ಸಿನಿಂದಲೇ ಉದ್ಯಮಿಯಾಗಿ ಬೆಳೆಯುವ ಛಲವನ್ನು ಹೊಂದುವ ಮೂಲಕ ಅದರತ್ತ ಪರಿಶ್ರಮ ಕೂಡ ಹಾಕುತ್ತಿದ್ದರು ಎಂಬುದನ್ನು ಒಂದು ಕಡೆ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಬಿಸಿನೆಸ್ ಮಹಿಳೆಯಾಗಿ ಹಲವು ಫ್ಯಾಷನ್ ಬ್ರಾಂಡ್‌ಗಳನ್ನು ಪರಿಚಯಿಸಿದ್ದು, ಆ ಪೈಕಿ ಸನ್ಸಾರ್ ಹಾಗೂ ಜ್ಯುವೆಲ್ಲರಿ ಲೈನ್ ಕೂಡ ಸೇರಿದೆ. ಅಲ್ಲದೆ ಅವರು ಮಿಯಾಮಿಯಲ್ಲಿ ಟೆಲಿಕಾಂ ಸಂಸ್ಥೆಯನ್ನು ಕೂಡ ನಡೆಸುತ್ತಿದ್ದಾರೆ.
ಅವರು ಮೊದಲು ಟರ್ಕಿಯ ವ್ಯಾಪಾರಿ ಉದ್ಯಮಿ ಇಂಜಿನ್ ಯೆಸಿಲ್ ಅವರನ್ನು ವಿವಾಹವಾಗಿದ್ದರು. ಈ ನಡುವೆ ಆಯೇಷಾ ಅವರು ಕ್ಯಾಲಿಫೋರ್ನಿಯಾದಲ್ಲಿ ಎಟ್ಟನ್ ಅಂಡ್ ಕೊಪ್ರಾ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು, ಜನಪ್ರಿಯ ಬಾಣಸಿಗ ಶ್ರೀಜಿತ್ ಗೋಪಿನಾಥನ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಆಯೇಷಾ ಮತ್ತು ನಿಕೇಶ್ 2014ರಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಈ ಮದುವೆ ಸಮಾರಂಭದಲ್ಲಿ ಆಸ್ಟನ್ ಕಚ್ಚರ್ ಮತ್ತು ಮಿಲಾ ಕುನಿಸ್ ಅವರಂಥಹ ಹಾಲಿವುಡ್ ತಾರೆಯರು ಕೂಡ ಭಾಗವಹಿಸಿದ್ದರು.
ನಿಕೇಶ್ ಅರೋರಾ ಯಾರು?
ನಿಕೇಶ್ ಅರೋರಾ (ಜನನ ಫೆಬ್ರವರಿ 9, 1968) ಒಬ್ಬ ಭಾರತೀಯ-ಅಮೆರಿಕನ್ ವ್ಯಕ್ತಿಯಾಗಿದ್ದಾರೆ. ನಿಕೇಶ್ ಅರೋರಾ ಈ ಹಿಂದೆ ಗೂಗಲ್‌ನಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿದ್ದರು. ಅರೋರಾ ಅಕ್ಟೋಬರ್ 2014 ರಿಂದ ಜೂನ್ 2016 ರವರೆಗೆ ಸಾಫ್ಟ್‌ಬ್ಯಾಂಕ್ ಗ್ರೂಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜೂನ್ 1, 2018 ರಂದು, ಅರೋರಾ ಪಾಲೊ ಆಲ್ಟೊ ನೆಟ್‌ವರ್ಕ್ಸ್‌ನಲ್ಲಿ ಸಿಇಒ ಮತ್ತು ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡರು.
ಅರೋರಾ ತಮ್ಮ ಶಾಲಾ ಶಿಕ್ಷಣವನ್ನು ದಿ ಏರ್ ಫೋರ್ಸ್ ಸ್ಕೂಲ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಭಾರತದ ವಾರಣಾಸಿಯಲ್ಲಿರುವ ಬಿಎಚ್‌ಯುನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದರು. 1989 ರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ತಂತ್ರಜ್ಞಾನ ಪದವಿಯನ್ನು ಮಾಡಿದ್ದಾರೆ.
ಬೋಸ್ಟನ್ ಕಾಲೇಜಿನಲ್ಲಿ ಪದವಿ ಮತ್ತು ನಾರ್ಥ್‌ಈಸ್ಟ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. 1999 ರಿಂದ ಸಿಎಫ್‌ಒ ಹುದ್ದೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ನಿಕೇಶ್ ಅವರು 8,500 ಕೋಟಿ ರೂ.ಗಳ ನಿವ್ವಳ ಆಸ್ತಿ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತ ಭಾರತೀಯ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications