ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಗುರಿಯನ್ನು ತಲುಪಲಿದೆ. ಜತೆಗೆ ಕಂಪೆನಿಯು 5,000 ಕೋಟಿ ರೂಪಾಯಿಗಳ ಲಾಭ ಗಳಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಅದಕ್ಕೆ ಈಗಾಗಲೇ ಆಕ್ರಮಣಕಾರಿಯಾದ ಎಫ್‌ಎಂಸಿಜಿ ಕಾರ್ಯತಂತ್ರವನ್ನು ರೂಪಿಸಿಕೊಂಡಿದೆ.
ಈ ಕಂಪನಿಯ ಹೆಸರು ರುಚಿ ಸೋಯಾ. 2019ರಲ್ಲಿ ಇದನ್ನು ಮರುನಾಮಕರಣ ಮಾಡಲಾಗಿದೆ. ಎಫ್‌ಎಂಸಿಜಿ ವಹಿವಾಟನ್ನು ವಿಸ್ತರಿಸುವ ಮೂಲಕ ತಮ್ಮ ಕನಸು ನನಸುಗೊಳಿಸುವತ್ತ ಯೋಜನೆ ರೂಪಿಸುತ್ತಿರುವುದಾಗಿ ಪತಂಜಲಿ ಗ್ರೂಪ್ ಮುಖ್ಯಸ್ಥ ಬಾಬಾ ರಾಮ್‌ದೇವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಕಂಪನಿಯು ಬಿಳಿ ಎಮ್ಮೆಯ ತುಪ್ಪ, ಪ್ರೀಮಿಯಂ ಬಿಸ್ಕೆಟ್, ಕುಕ್ಕೀಸ್, ಡ್ರೈ ಫ್ರೂಟ್ ಮುಂತಾದ ಹೊಸ ಉತ್ಪನ್ನವನ್ನು ಪರಿಚಯಿಸುವುದಾಗಿ ಅವರು ಹೇಳಿದ್ದಾರೆ. ಈ ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ 886.44 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಈ ಕಂಪನಿಯನ್ನು ಯೋಗ ಗುರು ಹಾಗೂ ಆಚಾರ್ಯ ಬಾಲಕೃಷ್ಣ ಅವರು ಸ್ಥಾಪಿಸಿದ್ದಾರೆ. ಹಾಗಾದರೆ ಆಚಾರ್ಯ ಬಾಲಕೃಷ್ಣ ಅವರು ಯಾರು ತಿಳಿಯಿರಿ ಮುಂದೆ ಓದಿ...
ಆಚಾರ್ಯ ಬಾಲಕೃಷ್ಣ ಯಾರು?
ಬಾಬಾ ಗುರುದೇವ್ ಅವರ ಜತೆ ಸೇರಿ ಸ್ಥಾಪಿಸಿರುವ ಬಹುತೇಕ ಕಂಪನಿಗಳಲ್ಲಿ ಆಚಾರ್ಯ ಬಾಲಕೃಷ್ಣ ಅವರು ಮಾಲೀಕರಾಗಿದ್ದಾರೆ. ಆಚಾರ್ಯ ಅವರು ಆಯುರ್ವೇದ ವೈದ್ಯರಾಗಿದ್ದಾರೆ. ಆಚಾರ್ಯ ಅವರು 1972ರಲ್ಲಿ ಹರಿದ್ವಾರದಲ್ಲಿ ಜನಿಸಿದ್ದಾರೆ. ಅವರ ಹೆತ್ತವರು ನೇಪಾಲದ ಸಯಾಂಗ್ಜಾದಿಂದ ವಲಸೆ ಬಂದವರಾಗಿದ್ದಾರೆ. ಹರಿಯಾಣದ ಖಾನ್‌ಪುರ ಗುರುಕುಲದಲ್ಲಿ ರಾಮ್‌ದೇವ್ ಅವರನ್ನು ಭೇಟಿಯಾಗಿದ್ದರು.
ರಾಮ್‌ದೇವ್ ಅವರ ಅನುಯಾಯಿಗಳು ಆಚಾರ್ಯ ಅವರಿಗೆ ಬಿಸಿನೆಸ್ ಪ್ರಾರಂಭಿಸುವುದಕ್ಕೆ ಸಹಾಯ ಮಾಡಿದ್ದರು. ಆಚಾರ್ಯ ಬಾಲಕೃಷ್ಣ ಅವರು ಪ್ರಾರಂಭಿಸಿದ ಕಂಪನಿಯು ರಾಮ್‌ದೇವ್ ಅವರ ಜನಪ್ರಿಯತೆಯಿಂದಾಗಿ ಯಶಸ್ವಿಯಾಗಿ ಬೆಳವಣಿಗೆ ಸಾಧಿಸಿದೆ. ಆ ಮೂಲಕ ಉತ್ತರ ಭಾರತದಲ್ಲಿ ಅವರ ಕಂಪನಿ ಹೆಸರು ಮನೆಮಾತಾಗಿದೆ.
2012ರಲ್ಲಿ ಕಂಪನಿಯು 56 ಮಿಲಿಯನ್ ಡಾಲರ್ ವಹಿವಾಟು ನಡೆಸುತ್ತಿತ್ತು. 2015ರಲ್ಲಿ ಅದು 630 ಮಿಲಿಯನ್ ಡಾಲರ್‌ಗೆ ಏರಿತ್ತು. ಮುಂದೆ 2019-2020ರಲ್ಲಿ ಕಂಪನಿಯ ಆದಾಯವು 9022 ಕೋಟಿ ರೂಪಾಯಿಗೆ ಏರಿದೆ. ಪತಂಜಲಿ ಆಯುರ್ವೇದದಲ್ಲಿ ರಾಮ್‌ದೇವ್ ಅವರು ಯಾವುದೇ ಷೇರುಗಳನ್ನು ಹೊಂದಿಲ್ಲ.
ಪತ್ರಿಕೆಯೊಂದರ ವರದಿ ಪ್ರಕಾರ, ಬಾಲಕೃಷ್ಣ ಅವರು ಕಂಪನಿಯಲ್ಲಿ ಶೇ.94ರಷ್ಟು ಷೇರು ಹೊಂದಿದ್ದು, ಯಾವುದೇ ಸಂಬಳವನ್ನು ತೆಗೆದುಕೊಳ್ಳುತ್ತಿಲ್ಲ. ಅವರು ಪ್ರತಿದಿನ ಸುಮಾರು 15 ತಾಸು ಕೆಲಸ ಮಾಡುತ್ತಿದ್ದಾರೆ. ಫೋರ್ಬ್ಸ್ ವರದಿಗಳ ಪ್ರಕಾರ, ರಾಮ್‌ದೇವ್ ಅವರು 29,680 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.
ಬಾಬಾ ರಾಮ್‌ದೇವ್ ಆದಾಯ ಎಷ್ಟಿದೆ?
ರಾಮ್‌ದೇವ್ ಒಬ್ಬ ಭಾರತೀಯ ಯೋಗ ಗುರು, ಉದ್ಯಮಿ ಮತ್ತು ಪತಂಜಲಿ ಆಯುರ್ವೇದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ರಾಮ್‌ದೇವ್ 2002 ರಿಂದ ದೊಡ್ಡ ಯೋಗ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. 2006 ರಲ್ಲಿ ತಮ್ಮ ಸಹೋದ್ಯೋಗಿ ಬಾಲಕೃಷ್ಣರೊಂದಿಗೆ ಪತಂಜಲಿ ಆಯುರ್ವೇದ ಮತ್ತು ಪತಂಜಲಿ ಯೋಗಪೀಠವನ್ನು ಸಹ-ಸ್ಥಾಪಿಸಿದ್ದಾರೆ.
ಬಾಬಾ ರಾಮ್‌ದೇವ್ ತಮ್ಮ ವೈಯಕ್ತಿಕ ಆಸ್ತಿಯ ನಿವ್ವಳ ಮೌಲ್ಯವನ್ನು 2013ರಲ್ಲಿ 1,100 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದ್ದಾರೆ. ಕಂಪನಿಯು ತನ್ನ ಉತ್ಪನ್ನಗಳ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಸೃಷ್ಟಿಸಿದೆ ಮತ್ತು ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಪ್ರಾರಂಭಿಸುವ ಮೊದಲು ಸರಿಯಾದ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಇನ್ನು ಫ್ಯಾಕ್ಟರಿ ಉದ್ಯೋಗಿಗಳಿಗೂ ಮಾಸಿಕವಾಗಿ ಬರೀ ಆರು ಸಾವಿರ ವೇತನ ನೀಡಲಾಗುತ್ತಿದೆ ಎಂಬ ಆರೋಪವಿದೆ. ಉದ್ಯೋಗಿಗಳು ದಿನದ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications