ಭಾರತೀಯ ಮೂಲದ ದುಬೈನ ಬಿಲಿಯನೇರ್ ಉದ್ಯಮಿ ಯೂಸುಫ್ ಅಲಿ ಎಂಎ ಅವರ ನಾಯಕತ್ವ ಲುಲು ಗ್ರೂಪ್ ಅಹಮದಾಬಾದ್‌ನಲ್ಲಿ ಬೃಹತ್ ಮಾಲ್ ನಿರ್ಮಿಸುವುದಾಗಿ ಘೋಷಿಸಿದೆ. ವಿಶೇಷ ಎಂದರೆ ಸಂಸ್ಥೆಯ ಪ್ರಕಾರ ಇದು ಭಾರತದ ಅತಿದೊಡ್ಡ ಶಾಪಿಂಗ್ ಮಾಲ್ ಇದಾಗಿರಲಿದೆ.
ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯೂಸುಫ್ ಅಲಿ ಅವರು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ, ಸುಮಾರು 4,000 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಾಲ್‌ನ ನಿರ್ಮಾಣ ಕಾರ್ಯ 2024 ರಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಹಾಗಾದರೆ ಯಾರಿವರು ಎಂದು ತಿಳಿಯೋಣ ಮುಂದೆ ಓದಿ...

ಯೂಸುಫ್ ಅಲಿ ಎಂಎ ಯಾರು?
68 ವರ್ಷದವರಾಗಿರುವ ಯೂಸುಫ್ ಅಲಿ ಓರ್ವ ಬಿಲಿಯನೇರ್ ಉದ್ಯಮಿಯಾಗಿದ್ದು, ಅವರು 8.4 ಶತಕೋಟಿ ಯುಎಸ್ ಡಾಲರ್‌ನ (ಆದಾಯ) ಲುಲು ಗ್ರೂಪ್ ಇಂಟರ್ನ್ಯಾಷನಲ್‌ನ ಅಧ್ಯಕ್ಷರಾಗಿದ್ದು, ಮಧ್ಯಪ್ರಾಚ್ಯದ "ರಿಟೇಲ್ ಕಿಂಗ್ " ಎಂದು ಕರೆಯಲ್ಪಡುತ್ತಾರೆ.
ಇವರ ಪೂರ್ಣ ಹೆಸರು ಯೂಸುಫ್ ಅಲಿ ಮುಸಲಿಯಮ್ ವೀಟಿಲ್ ಅಬ್ದುಲ್ ಖಾದರ್. ಇವರ ಮೂಲತಃ ಕೇರಳದ ಪುಟ್ಟ ಹಳ್ಳಿಯವರು. ಚಿಕ್ಕಪ್ಪನ ಸಣ್ಣ ಡಿಸ್ಟಿಬ್ಯೂಷನ್ ವ್ಯವಹಾರಕ್ಕೆ ಸೇರಲೆಂದು ಅವರು 1973ರಲ್ಲಿ ಮೊದಲ ಬಾರಿಗೆ ಅಬುಧಾಬಿಗೆ ತೆರಳಿದರು.
ಫೋರ್ಬ್ಸ್ ಪ್ರಕಾರ ಇವರ ರಿಯಲ್ ಟೈಮ್ ನಿವ್ವಳ ಮೌಲ್ಯ 58950 ಕೋಟಿ ರೂಪಾಯಿ ಆಗಿದ್ದು, ಬಿಸಿನೆಸ್ ಮ್ಯಾನೇಜ್ಮೆಂಟ್ ಅಂಡ್ ಅಡ್ಮಿನಿಸ್ಟ್ರೇಷನ್ ಡಿಪ್ಲೊಮಾ ಪದವಿ ಪಡೆದಿರುವ ಇವರು 1990 ರ ದಶಕದಲ್ಲಿ ತಮ್ಮ ಮೊದಲ ಲುಲು ಹೈಪರ್ಮಾರ್ಕೆಟ್ ಅನ್ನು ತೆರೆದರು.
ಪ್ರಸ್ತುತ, ಲುಲು ಗ್ರೂಪ್ ಕೊಚ್ಚಿ, ತಿರುವನಂತಪುರಂ, ಬೆಂಗಳೂರು, ಲಕ್ನೋ, ಕೊಯಮತ್ತೂರು ಮತ್ತು ಇತ್ತೀಚೆಗೆ ತೆರೆದ ಹೈದರಾಬಾದ್ ಸೇರಿ ಭಾರತದ ಆರು ನಗರಗಳಲ್ಲಿ ಮಾಲ್‌ಗಳನ್ನು ಹೊಂದಿದೆ. ಲುಲು ಗ್ರೂಪ್ ಅಬುಧಾಬಿ, ಯುಎಇಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ಮತ್ತು ಉತ್ತರ ಆಫ್ರಿಕಾ ಪ್ರದೇಶದಲ್ಲಿ ರಿಟೇಲ್ ಉದ್ಯಮದಲ್ಲಿ ಟ್ರೆಂಡ್‌ಸೆಟರ್ ಎಂದು ಹೆಸರುವಾಸಿಯಾಗಿದ್ದು. ಇದು 250 ಹೈಪರ್ ಮಾರ್ಕೆಟ್ ಗಳು ಮತ್ತು ಸೂಪರ್ ಮಾರ್ಕೆಟ್‌ಗಳನ್ನು ನಿರ್ವಹಿಸುತ್ತದೆ.


Click it and Unblock the Notifications