ನೂತನ ಸಂಸತ್ ಕಟ್ಟಡದ ಉದ್ಘಾಟನೆ ಸಮಾರಂಭ ಭಾನುವಾರ ನಡೆಯಲಿದ್ದು, ಅದನ್ನು ಡಿಸೈನ್ ಮಾಡಿದವರು ಬಿಮಲ್ ಪಾಟೀಲ್ ಬಗ್ಗೆ ನಿಮಗೆ ತಿಳಿದಿದೆಯೇ?. ಗುಜರಾತ್ ಮೂಲದ ಈ ಪ್ರಸಿದ್ಧ ವಾಸ್ತುಶಿಲ್ಪಯ ಹೆಸರು ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡಿರುವ ಈ ಕ್ಷೇತ್ರದಲ್ಲಿನ ಕೆಲವು ಪ್ರಮುಖ ಯೋಜನೆಗಳ ಹಿಂದೆ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಕಾಶಿ ವಿಶ್ವನಾಥ್ ಕಾರಿಡಾರ್ ಡಿಸೈನ್ ಅನ್ನು ಪಟೇಲ್ ಅವರೇ ಮಾಡಿದ್ದು, ಸಬರಮತಿ ರಿವರ್‌ಫ್ರಂಟ್ ಯೋಜನೆಯು ಬಹಳ ವಿಭಿನ್ನ ಹಾಗೂ ಪ್ರಪ್ರಥಮವೆನಿಸಿಕೊಂಡಿದೆ. ಸೆಂಟ್ರಲ್ ವಿಸ್ತಾದ ಪುನರ್ ಅಭಿವೃದ್ಧಿ ಯೋಜನೆಯು ಬಿಮಲ್ ಅವರ ಪಾಲಿಗೆ ಮುಕುಟಪ್ರಾಯವಾಗಿದೆ. ಬಿಮಲ್ ಪಟೇಲ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಬಿಮಲ್ ಪಟೇಲ್ ಯಾರು?
ಬಿಮಲ್ ಹಸ್ಮುಖ್ ಪಟೇಲ್ ಅವರು ಮೂರು ದಶಕಗಳ ಅನುಭವ ಹೊಂದಿರುವ ಡೆಕೋರೇಟೆಡ್ ವಾಸ್ತುಶಿಲ್ಪಿಯಾಗಿದ್ದಾರೆ. ಅವರು ಅರ್ಬನ್ ಡಿಸೈನ್ ಹಾಗೂ ಪ್ಲ್ಯಾನಿಂಗ್‌ನಲ್ಲಿ ಹೆಚ್ಚು ಪರಿಣತಿಯನ್ನು ಹೊಂದಿದ್ದಾರೆ. ಪ್ರಸ್ತುತ ಪಟೇಲ್ ಅವರು ಅಹಮದಾಬಾದ್‌ನಲ್ಲಿರುವ CEPT ವಿಶ್ವವಿದ್ಯಾಲಯದ (ಹಿಂದಿನ ಪರಿಸರ ಯೋಜನೆ ಮತ್ತು ತಂತ್ರಜ್ಞಾನ ಕೇಂದ್ರ) ಅಧ್ಯಕ್ಷರಾಗಿದ್ದಾರೆ.
ಅವರು ಎಚ್‌ಸಿಪಿ ಡಿಸೈನ್ ಪ್ಲ್ಯಾನಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪ್ರೈವೆಟ್ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದಾರೆ. ಇದನ್ನು ಅವರ ತಂದೆ ಹಸ್ಮುಖ್ ಸಿ. ಪಟೇಲ್ ಅವರು 1960ರಲ್ಲಿ ಸ್ಥಾಪಿಸಿದ್ದರು. ಹಸ್ಮುಖ್ ಪಟೇಲ್ ಅವರು ಕೂಡ ಅನೇಕ ಸಂಪ್ರದಾಯಿಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ ಡೆಕೊರೇಟೆಡ್ ವಾಸ್ತುಶಿಲ್ಪಿಯಾಗಿದ್ದಾರೆ.
ಬಿಮಲ್ ಪಟೇಲ್ ಅವರು ತಮ್ಮ ಶಾಲ ಶಿಕ್ಷಣವನ್ನು ಅಹಮದಾಬಾದ್‌ನ ಸೇಂಟ್ ಕೇವಿಯರ್ಸ್ ಹೈಸ್ಕೂಲ್‌ನಲ್ಲಿ ಮಾಡಿದರು. ಬಳಿಕ ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಪ್ಲ್ಯಾನಿಂಗ್ ಅಂಡ್(CEPT) ಟೆಕ್ನಾಲಜಿಯ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದರು. ನಂತರ ಅವರು ಅಮೆರಿಕದ ಯುಸಿ ಬರ್ಕ್ಲಿಗೆ ತೆರಳಿದ್ದು, 1995ರಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡರು.
ಮುಂದೆ ಅಂದರೆ 1990ರಲ್ಲಿ ತಮ್ಮ ತಂದೆ ಹಸ್ಮುಖ್ ಪಟೇಲ್ ಅವರ ಸಂಸ್ಥೆಯನ್ನು ಸೇರಿಕೊಂಡರು. ಬಿಮಲ್ ಪಟೇಲ್ ಅವರಿಗೆ 1992ರಲ್ಲಿ ಆಗಾ ಖಾನ್ ಪ್ರಶಸ್ತಿ, 2001ರಲ್ಲಿ ವರ್ಲ್ಡ್ ಆರ್ಕಿಟೆಕ್ಚರ್ ಅವಾರ್ಡ್ ಹಾಗೂ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಬಂದಿದೆ.
ಮಂಕರಿಯಾ ಕೆರೆ ಅಭಿವೃದ್ಧಿ, ಹೈದರಾಬಾದ್‌ನ ಆಗಾ ಖಾನ್ ಅಕಾಡೆಮಿ, ಭುಜ್ ಅಭಿವೃದ್ಧಿ ಯೋಜನೆ, ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಇನ್‌ಸ್ಟಿಟ್ಯೂಟ್ ಕಟ್ಟಡ, ಗುಜರಾತ್ ಹೈಕೋರ್ಟ್, ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಹೊಸ ಕ್ಯಾಂಪಸ್, ಗಾಂಧಿನಗರದ ಸ್ವರ್ಣಿಮ್ ಸಂಕುಲ್ ಸೇರಿದಂತೆ ಹಲವು ಜನಪ್ರಿಯ ಕಟ್ಟಡಗಳ ವಿನ್ಯಾಸವನ್ನು ಮಾಡಿದ ಹೆಗ್ಗಳಿಕೆ ಪಟೇಲ್ ಅವರದ್ದು.
ಸಂಸತ್‌ನ 229 ಕೋಟಿ ಡೀಲ್ ಪಡೆದ ಪಟೇಲ್
ಬಿಮಲ್ ಪಟೇಲ್ ಅವರ ಎಚ್‌ಸಿಪಿ ಡಿಸೈನ್ಸ್ ಸೆಂಟ್ರಲ್ ವಿ ಸಂಸ್ಥೆ ವಿಸ್ತಾ ಯೋಜನೆ ನಿರ್ಮಾಣದ ಸಲಹಾ ಬಿಡ್ ಅನ್ನು ಪಡೆದುಕೊಂಡಿತ್ತು. ಈ ಸಂಸ್ಥೆಯು ನೂತನ ಸಂಸತ್ ಭವನ ಸಲಹಾ ಸೇವೆಗಳಿಗಾಗಿ ಬರೋಬ್ಬರಿ 229.75 ಕೋಟಿ ರೂಪಾಯಿ ಪಡೆಯಲಿದೆ.
ಈ ಭವನದ ನಿರ್ಮಾಣ ಯೋಜನೆಯಲ್ಲಿ ಪಟೇಲ್ ಅವರ ಸಂಸ್ಥೆಯು ವಿಸ್ತಾ ಪ್ರಾಜೆಕ್ಟ್‌ನ ಮಾಸ್ಟರ್ ಪ್ಲ್ಯಾನ್, ಅದರ ಡಿಸೈನಿಂಗ್, ಅಂದಾಜು ವೆಚ್ಚ, ಟ್ರಾಫಿಕ್ ಇಂಟಿಗ್ರೇಷನ್, ಪಾರ್ಕಿಂಗ್ ವ್ಯವಸ್ಥೆ, ಲ್ಯಾಂಡ್‌ಸ್ಕೇಪ್‌ನ ವಿನ್ಯಾಸದ ಸೇವೆಯನ್ನು ಒದಗಿಸಿರುವುದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಕಳೆದ ವರ್ಷ ಬಹಿರಂಗಪಡಿಸಿದ್ದರು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications