ಭಾರತದಲ್ಲಿ ಸುಲಭ್ ಶೌಚಾಲಯಗಳ ನಿರ್ಮಾಣದ ಮೂಲಕ ನೈರ್ಮಲ್ಯ ಮತ್ತು ಸ್ವಚ್ಚವಾದ ಪರಿಸರ ನಿರ್ಮಾಣ ಮಾಡುವಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟಿದ್ದ 'ಸುಲಭ್ ಇಂಟರ್‌ನ್ಯಾಷನಲ್' ಸಂಸ್ಥಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ್ ಪಾಠಕ್ ಆಗಸ್ಟ್ 15ರಂದು ನಿಧನರಾಗಿದ್ದಾರೆ.
ಪಾಠಕ್ ಅವರು ನೈರ್ಮಲ್ಯ ಮತ್ತು ಸಾಮಾಜಿಕ ಸುಧಾರಣೆಯ ಕ್ಷೇತ್ರಗಳಲ್ಲಿ ಪ್ರವರ್ತಕರಾಗಿದ್ದು ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸುಧಾರಿಸಲು ಅವರು ಅವಿರತವಾಗಿ ಶ್ರಮಿಸಿದ್ದಾರೆ. ಬಿಂದೇಶ್ವರ್ ಪಾಠಕ್ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಬಿಂದೇಶ್ವರ್ ಪಾಠಕ್ ಅವರು ಸಮುದಾಯದ ಗೌರವಾನ್ವಿತ ಸ್ಥಾನದಲ್ಲಿ ಯೋಗ್ ಮಾಯಾ ದೇವಿ ಮತ್ತು ರಮಾಕಾಂತ್ ಪಾಠಕ್ ದಂಪತಿ ಪುತ್ರನಾಗಿ ಬಿಹಾರದ ರಾಮ್‌ಪುರ ಬಾಘೆಲ್ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
ತಮ್ಮ ಶಾಲಾ ಶಿಕ್ಷಣದ ಬಳಿಕ ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದರು. ಪದವಿ ಪಡೆದ ನಂತರ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸಿದರು. ಬಿಂದೇಶ್ವರ್ ಪಾಠಕ್ ಅವರು 'ಸುಲಭ್ ಇಂಟರ್‌ನ್ಯಾಷನಲ್' ಎಂಬ ಸಂಸ್ಥೆಯ ಮೂಲಕ ಮಾನವ ಹಕ್ಕುಗಳು, ಪರಿಸರ ನೈರ್ಮಲ್ಯ, ಅಸಂಪ್ರದಾಯಕ ಇಂಧನ ಮೂಲಗಳು, ತ್ಯಾಜ್ಯ ನಿರ್ವಹಣೆ, ಶಿಕ್ಷಣದ ಮೂಲಕ ಸುಧಾರಣೆ ಕುರಿತಾಗಿ ಜನರಿಗೆ ಮಾಹಿತಿಗಳನ್ನು ನೀಡುತ್ತಿದ್ದರು.
ಬಿಂದೇಶ್ವರ್ ಪಾಠಕ್ ನಿಧನದ ಕುರಿತು ಪ್ರಧಾನಿ ಮೋದಿ ಟ್ವೀಟ್
ಪ್ರಧಾನಿ ಮೋದಿ "ಡಾ. ಬಿಂದೇಶ್ವರ್ ಪಾಠಕ್‌ಜಿ ಅವರ ನಿಧನದಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಮಾಜದ ಪ್ರಗತಿಗಾಗಿ ಮತ್ತು ದೀನದಲಿತರ ಸಬಲೀಕರಣಕ್ಕಾಗಿ ವ್ಯಾಪಕವಾಗಿ ಶ್ರಮಿಸಿದ ಓರ್ವ ದಾರ್ಶನಿಕರಾಗಿದ್ದರು. ಬಿಂದೇಶ್ವರ್‌ಜಿ ಅವರು ಸ್ವಚ್ಛ ಭಾರತ ನಿರ್ಮಾಣವನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು," ಎಂದಿದ್ದಾರೆ.
"ಅವರು ಸ್ವಚ್ಛ ಭಾರತ್ ಮಿಷನ್‌ಗೆ ಸ್ಮರಣಾರ್ಥವಾಗಿರುವ ಬೆಂಬಲವನ್ನು ನೀಡಿದ್ದರು. ಅವರೊಂದಿಗೆ ನಡೆದ ಹಲವಾರು ಮಾತುಕತೆಯ ಸಂದರ್ಭ ಅವರ ಸ್ವಚ್ಛತೆಯ ಬಗೆಗಿನ ಉತ್ಸಾಹವು ಎಂದೂ ಗೋಚರಿಸುತ್ತಿತ್ತು. ಅವರ ಕೆಲಸಗಳು ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತದೆ. ಇಂತಹ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಓಂ ಶಾಂತಿ," ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಬಿಂದೇಶ್ವರ ಪಾಠಕ್ ಅವರ ಶೈಕ್ಷಣಿಕ ಹಿನ್ನೆಲೆ
ಬಿಂದೇಶ್ವರ್ ಪಾಠಕ್ ಮೂಲತಃ ಮಧ್ಯಪ್ರದೇಶದ ಸಾಗರ್ ವಿಶ್ವವಿದ್ಯಾಲಯದಲ್ಲಿ ಅಪರಾಧ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಯೋಜನೆ ಹಾಕಿಕೊಂಡಿದ್ದರು. ಇದಕ್ಕಾಗಿ ಮಧ್ಯಪ್ರದೇಶದ ಸಾಗರ್ ವಿಶ್ವವಿದ್ಯಾಲಯಕ್ಕೆ ಪ್ರಯಾಣಿಸುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಅವರನ್ನು ಸಂಪರ್ಕಿಸಿ ಗಾಂಧಿ ಶತಮಾನೋತ್ಸವ ಸಮಿತಿಯಲ್ಲಿ ಉತ್ತಮ ಸಂಬಳದ ಕೆಲಸದ ಆಫರ್ ನೀಡಿದರು. ಪಾಠಕ್ ಹಣ ಸಂಪಾದಿಸಲು ಉತ್ಸುಕರಾಗಿದ್ದುದರಿಂದ ಏನನ್ನೂ ಯೋಚಿಸದೆ ಅವರು ಈ ಆಫರ್ ಒಪ್ಪಿಕೊಂಡರು.
ಗಾಂಧಿ ಶತಮಾನೋತ್ಸವ ಸಮಿತಿಗೆ ಆಗಮಿಸಿದಾಗ ಅವರಿಗೆ ನಿರಾಶೆ ಕಾದಿದ್ದು, ಅವರಿಗೆ ಅಲ್ಲಿ ಉದ್ಯೋಗವಿರಲಿಲ್ಲ. ಇನ್ನೊಂದೆಡೆ ಮರಳಿ ಸಾಗರ್ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗೋಣವೆಂದರೆ ಅಲ್ಲಿ ಕಾಲೇಜು ಪ್ರವೇಶಕ್ಕಾಗಿ ಗಡುವು ಮುಗಿದಿತ್ತು. ಹೀಗಾಗಿ ಸಮಿತಿಯೊಂದಿಗೆ ಉಳಿದು ಅಲ್ಲಿ ಸ್ವಯಂಸೇವಕರಾಗಲು ನಿರ್ಧರಿಸಿದ್ದರು.
ಅವರ ಕೊಡುಗೆಗಾಗಿ ಗಾಂಧಿ ಶಾಂತಿ ಪ್ರಶಸ್ತಿ
ಸುಲಭ್ ಇಂಟರ್‌ನ್ಯಾಷನಲ್ ಮೂಲಕ ಪ್ಯಾನ್-ಇಂಡಿಯಾದಲ್ಲಿ ಕಡಿಮೆ ವೆಚ್ಚ ಹಾಗೂ ಅನುಕೂಲಕರವಾದ ಸುಲಭ್ ಶೌಚಾಲಯ ವ್ಯವಸ್ಥೆಯನ್ನು ಜನಪ್ರಿಯಗೊಳಿಸಿದರು. ಕಳೆದ 50 ವರ್ಷಗಳಿಂದ ಅವರು ಕೈಯಿಂದ ಮಲ ಹೊರುವವರ ಹಕ್ಕುಗಳಿಗಾಗಿ ಅವಿರತ ಶ್ರಮಿಸಿದ್ದಾರೆ. ಕೈಯಿಂದ ಮಲ ಹೊರುವ ಪೌರಕಾರ್ಮಿಕರ ಪುನರ್‌ವಸತಿ ಹಾಗೂ ಕೌಶಲ್ಯ ಅಭಿವೃದ್ಧಿ ಮೂಲಕ ಪರ್ಯಾಯ ಉದ್ಯೋಗ ಒದಗಿಸುವ ಅವರ ಸೇವಾ ಕಾರ್ಯಗಳು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ.
ಅವರು ಶಾಲೆಗಳಲ್ಲಿ ಶೌಚಾಲಯದ ಅಗತ್ಯತೆ ಬಗ್ಗೆ ಸಾಕಷ್ಟು ಜಾಗೃತಿಯನ್ನು ಮೂಡಿಸಿದ್ದಾರೆ. ಪಾಠಕ್ ನೇತೃತ್ವದ ಸುಲಭ್ ಇಂಟರ್‌ನ್ಯಾಷನಲ್, ಪ್ರಧಾನಿ ಅವರ ಭಾರತವನ್ನು ಸ್ವಚ್ಛ ದೇಶವನ್ನಾಗಿಸುವ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸ್ವಚ್ಛ ಭಾರತ್ ಅಭಿಯಾನದ ಯಶಸ್ವಿ ಅನುಷ್ಠಾನವನ್ನು ಪರಿಗಣಿಸಿ ಪಾಠಕ್ ಅವರ ಸುಲಭ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ಕೂಡ ಲಭಿಸಿದೆ.
More From GoodReturns

Natural Gas Supply: ದೇಶದಲ್ಲಿ ಅನಿಲ ಕೊರತೆ..ಹೊಸ ಆದೇಶದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಎಂದು ತಿಳಿಯಿರಿ

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Silver Rate Today: ಚಿನ್ನದಂತೆ ಬೆಳ್ಳಿ ದರವೂ ಭಾರೀ ಕುಸಿತ; ಒಂದೇ ದಿನ 10,000 ರೂ. ಇಳಿಕೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Ugadi 2026: ಯುಗಾದಿ ನಂತರ ಈ ರಾಶಿಯವರಿಗೆ ಹಣವೋ ಹಣ; ನೀವೂ ಇದ್ದೀರಾ ನೋಡಿ

YES Bank Rules: ಯೆಸ್ ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ; ಏಪ್ರಿಲ್ 1 ರಿಂದ ಬದಲಾಗಲಿದೆ ನಿಯಮ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ



Click it and Unblock the Notifications