Nobel Economics Prize: ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕ್ಲಾಡಿಯಾ ಗೋಲ್ಡಿನ್ ಯಾರು ತಿಳಿದಿದೆಯೇ?

ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥವಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಶಸ್ತಿಯನ್ನು ಅಮೆರಿಕಾದ ಕ್ಲಾಡಿಯಾ ಗೋಲ್ಡಿನ್ ಗೆದ್ದಿದ್ದಾರೆ. ಆರ್ಥಿಕ ವಿಜ್ಞಾನದಲ್ಲಿ ಸ್ವೆರಿಜಸ್ ರಿಕ್ಸ್‌ಬ್ಯಾಂಕ್ ಪ್ರಶಸ್ತಿಯನ್ನು ಈ ಹಿಂದೆ ಗೆದ್ದ 93 ಮಂದಿಯ ಪೈಕಿ ಕ್ಲಾಡಿಯಾ ಗೋಲ್ಡಿನ್ ಮೂರನೇ ಮಹಿಳೆಯಾಗಿದ್ದಾರೆ.

ಹಾರ್ವರ್ಡ್ ಪ್ರೊಫೆಸರ್ ಕ್ಲಾಡಿಯಾ ಗೋಲ್ಡಿನ್ ಅವರನ್ನು "ಮಹಿಳಾ ಕಾರ್ಮಿಕ ಮಾರುಕಟ್ಟೆ ಫಲಿತಾಂಶಗಳ ಕುರಿತಂತೆ ನಮ್ಮ ಜ್ಞಾನವನ್ನು ಹೆಚ್ಚಿಸಿದ್ದಕ್ಕಾಗಿ" ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸಾಯನ್ಸಸ್ ಹೇಳಿದೆ. ಕ್ಲಾಡಿಯಾ ಗೋಲ್ಡಿನ್ ಯಾರು ಎಂಬ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ ಮುಂದೆ ಓದಿ...

 ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕ್ಲಾಡಿಯಾ ಯಾರು?

ಕ್ಲಾಡಿಯಾ ಗೋಲ್ಡಿನ್ ಯಾರು?

ಯುಎಸ್ ಮೂಲದ ಆರ್ಥಿಕ ಇತಿಹಾಸಕಾರರಾದ ಮತ್ತು ಕಾರ್ಮಿಕ ಅರ್ಥಶಾಸ್ತ್ರಜ್ಞರಾದ ಕ್ಲಾಡಿಯಾ ಗೋಲ್ಡಿನ್‌ರ ಸಂಶೋಧನೆಯು ಮಹಿಳಾ ಕಾರ್ಮಿಕ ಶಕ್ತಿ, ಗಳಿಕೆಯಲ್ಲಿನ ಲಿಂಗ ತಾರತಮ್ಯ, ಆದಾಯದ ಅಸಮಾನತೆ, ತಾಂತ್ರಿಕ ಬದಲಾವಣೆ, ಶಿಕ್ಷಣ ಮತ್ತು ವಲಸೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ.

ಗೋಲ್ಡಿನ್ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನ ಪ್ರಕಾರ, "ಗೋಲ್ಡಿನ್ ಹೆಚ್ಚಿನ ಸಂಶೋಧನೆಗಳು ವರ್ತಮಾನವನ್ನು ಹಿಂದಿನ ಸಮಸ್ಯೆಗಳ ಮೂಲಕ ಅರ್ಥೈಸುತ್ತದೆ. ಪ್ರಸ್ತುತ ಅತೀ ಮುಖ್ಯವಾದ ಸಮಸ್ಯೆಗಳ ಮೂಲವನ್ನು ಪರಿಶೋಧಿಸುತ್ತದೆ."

ಯುಎಸ್ ಆರ್ಥಿಕತೆಯಲ್ಲಿ ಮಹಿಳೆಯರ ಮೇಲಿನ ಐತಿಹಾಸಿಕ ಕೆಲಸಕ್ಕೆ ಗೋಲ್ಡಿನ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. 1946 ರಲ್ಲಿ ಯುಎಸ್‌ನ ನ್ಯೂಯಾರ್ಕ್‌ನಲ್ಲಿ ಜನಿಸಿದ ಕ್ಲಾಡಿಯಾ ಗೋಲ್ಡಿನ್ ಬ್ರಾಂಕ್ಸ್ ಹೈ ಸ್ಕೂಲ್ ಆಫ್ ಸೈನ್ಸ್‌ನಲ್ಲಿ ವ್ಯಾಸಂಗ ಮಾಡಿದರು. ಪತ್ತೇದಾರಿ ಕೆಲಸದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮ ಜೀವವಿಜ್ಞಾನವನ್ನು ಅಧ್ಯಯನ ಮಾಡಲು ಯೋಜಿಸಿದರು.

"ಆದರೆ ಅವರಿಗೆ ನಿಜವಾಗಿ ಆಸಕ್ತಿ ಇರುವುದು ಅರ್ಥಶಾಸ್ತ್ರದಲ್ಲಿ ಎಂದು ಕಂಡುಕೊಳ್ಳಲು ಅಧಿಕ ಸಮಯಬೇಕಾಗಿಲ್ಲ. ಅಂದಿನಿಂದ ಆರ್ಥಿಕ ಇತಿಹಾಸಕಾರರಾಗಿ ಹೆಸರುವಾಸಿಯಾಗಿದ್ದಾರೆ. ಗೋಲ್ಡಿನ್ ಸಂಶೋಧನೆಯು ಇಂದಿನ ಪಾಲಿಸಿಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ," ಎಂದು ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ರಿಚ್‌ಮಾಂಡ್ ಹೇಳುತ್ತದೆ.

ಗೋಲ್ಡಿನ್ 1963 ಮತ್ತು 1967 ರ ನಡುವೆ, ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಗೋಲ್ಡಿನ್ ಅರ್ಥಶಾಸ್ತ್ರದಲ್ಲಿ ಬಿಎ ಮಾಡಿದರು. ಇದರ ನಂತರ ತಕ್ಷಣವೇ, 1967 ಮತ್ತು 1972 ರ ನಡುವೆ ಚಿಕಾಗೋ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಪಿಎಚ್‌ಡಿ ಪಡೆದರು.

1976 ರಲ್ಲಿ, ಗೋಲ್ಡಿನ್ ತಮ್ಮ ಮೊದಲ ಪುಸ್ತಕ ಅರ್ಬನ್ ಸ್ಲೇವರಿ ಇನ್ ಅಮೇರಿಕನ್ ಸೌತ್, 1820 ಟು 1860: ಎ ಕ್ವಾಂಟಿಟೇಟಿವ್ ಹಿಸ್ಟರಿ ಬರೆದರು. ಅದಾದ ಬಳಿಕ ಅಂಡರ್‌ಸ್ಟಾಂಡಿಂಗ್ ದಿ ಜಂಡೆರ್ ಗ್ಯಾಪ್: ಆನ್ ಇಕಾನಮಿಕ್ ಹಿಸ್ಟರಿ ಆಫ್ ಅಮೆರಿಕನ್ ವುಮೆನ್ ಎಂಬ ಪುಸ್ತಕವನ್ನು 1990 ರಲ್ಲಿ ಬರೆದರು. ಯುಎಸ್‌ನಲ್ಲಿ ಮಹಿಳಾ ಕಾರ್ಮಿಕ ಬಗ್ಗೆ ಬರೆಯಲಾದ ಮೊದಲ ವಿವರವಾದ ಪುಸ್ತಕ ಇದಾಗಿದೆ.

ಈವರೆಗೆ ಗ ತಾರತಮ್ಯ, ಮಹಿಳೆಯರ ಆರ್ಥಿಕ ಇತಿಹಾಸ, ಆದಾಯ ಅಸಮಾನತೆ, ಭ್ರಷ್ಟಾಚಾರ ಮತ್ತು ಸುಧಾರಣೆಯನ್ನು ಒಳಗೊಂಡ 10 ಪುಸ್ತಕಗಳನ್ನು ಗೋಲ್ಡಿನ್ ಬರೆದಿದ್ದಾರೆ. ಇದಲ್ಲದೆ, ಹಲವಾರು ಲೇಖನಗಳು ಮತ್ತು ಪುಸ್ತಕ ಅಧ್ಯಾಯಗಳನ್ನು ಸಹ ಬರೆದಿದ್ದಾರೆ.

ಗೋಲ್ಡಿನ್ ವೃತ್ತಿಜೀವನ

ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರುವ ಮೊದಲು, ಗೋಲ್ಡಿನ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದದರು. ಹಲವಾರು ಶಿಕ್ಷಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2013-2014 ರಿಂದ ಅಮೇರಿಕನ್ ಎಕನಾಮಿಕ್ ಅಸೋಸಿಯೇಷನ್ ​​(AEA) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರಾಗಿದ್ದಾರೆ. ಜೆಸ್ಸಿ ರೊಮೆರೊ ಡಿಸೆಂಬರ್ 2014 ರಲ್ಲಿ ಕೇಂಬ್ರಿಡ್ಜ್, ಮಾಸ್‌ನಲ್ಲಿರುವ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್‌ನಲ್ಲಿ ಗೋಲ್ಡಿನ್‌ರನ್ನು ಸಂದರ್ಶಿಸಿದರು. 1984 ರಿಂದ 1988 ರವರೆಗೆ ಗೋಲ್ಡಿನ್‌ ಜರ್ನಲ್ ಆಫ್ ಎಕನಾಮಿಕ್ ಹಿಸ್ಟರಿ ಸಂಪಾದಕರಾಗಿದ್ದರು.

ಮೊದಲ ಆರ್ಥಿಕ ನೊಬೆಲ್ ಪ್ರಶಸ್ತಿ

1968 ರಲ್ಲಿ, ಸ್ವೆರಿಜಸ್ ರಿಕ್ಸ್‌ಬ್ಯಾಂಕ್ (ಸ್ವೀಡನ್‌ನ ಕೇಂದ್ರ ಬ್ಯಾಂಕ್) ನೊಬೆಲ್ ಪ್ರಶಸ್ತಿಯ ಸಂಸ್ಥಾಪಕ ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿತು. 1969 ರಲ್ಲಿ ರಾಗ್ನರ್ ಫ್ರಿಶ್ ಮತ್ತು ಜಾನ್ ಟಿನ್‌ಬರ್ಗೆನ್‌ಗೆ ಆರ್ಥಿಕ ವಿಜ್ಞಾನದಲ್ಲಿ ಮೊದಲ ಬಹುಮಾನ ನೀಡಲಾಯಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+