ಕಾಲೇಜು ಅರ್ಧಕ್ಕೆ ತೊರೆದವರು ಮುಂದೆ ಬಿಲಿಯನ್- ಡಾಲರ್ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಅನೇಕ ಯಶಸ್ಸಿನ ಹಾಗೂ ಸ್ಪೂರ್ತಿದಾಯಕ ಕಥೆಗಳು ನಮ್ಮ ಮುಂದಿದೆ. ಶೈಕ್ಷಣಿಕವಾದ ಯಾವುದೇ ವೃತ್ತಿಪರ ಪದವಿ ಇಲ್ಲದಿದ್ದರೂ, ಇಂದು ಅವರು ಭಾರತ ಮತ್ತು ವಿದೇಶಗಳಲ್ಲಿ ಕೆಲವು ಪ್ರಮುಖ ಕಂಪನಿಗಳ ಮುಖ್ಯಸ್ಥರಾಗುವವರೆಗೆ ಬೆಳೆದು ನಿಂತಿದ್ದಾರೆ.
ಈ ಲೇಖನದಲ್ಲೂ, ಅಂತಹ ವ್ಯಕ್ತಿಯ ಬಗ್ಗೆ ಹೇಳುತ್ತೇವೆ, ಅವರೇ ಆರ್ ಜಿ ಚಂದ್ರಮೋಗನ್. 1970ರಲ್ಲಿ ಐಸ್ ಕ್ರೀಂ ತಯಾರಿಸುವ ಸಣ್ಣ ಉದ್ಯಮವನ್ನು ಆರಂಭಿಸಿದ ಅವರು, ಇದೀಗ 25,527 ಕೋಟಿ ರೂಪಾಯಿ ಮೌಲ್ಯದ ಭಾರತದ ಪ್ರಮುಖ ಖಾಸಗಿ ಡೈರಿ ಕಂಪನಿಗಳಲ್ಲಿ ಒಂದಾದ ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್‌ನ ಅಧ್ಯಕ್ಷರಾಗಿದ್ದಾರೆ.

ಇದೇ ಕಂಪನಿಯು ಖ್ಯಾತ ಐಸ್ ಕ್ರೀಂ ಬ್ರಾಂಡ್ ಅರುಣ್ ಐಸ್‌ಕ್ರಿಮ್ಸ್ ಅನ್ನು ತಯಾರಿಸುತ್ತದೆ. 74 ವರ್ಷ ವಯಸ್ಸಿನವರಾದ ಚಂದ್ರಮೋಗನ್ ಸುಮಾರು 50 ವರ್ಷಗಳಿಗಿಂತಲೂ ಹೆಚ್ಚು ಕಾಲ ಡೈರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
2024 ರ ಜನವರಿಯ ಮೊದಲ ವಾರದಲ್ಲಿ ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ 25,527 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಚಂದ್ರಮೋಗನ್ ಅವರು ಇದನ್ನು ಈಗ ವ್ಯವಸ್ಥಾಪಕ ನಿರ್ದೇಶಕರಾದ ಅವರ ಮಗ ಸಿ ಸತ್ಯನ್ ಅವರ ಸಹಾಯದಿಂದ ನಡೆಸುತ್ತಿದ್ದಾರೆ.
ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್ಸ್ ಶ್ರೇಯಾಂಕದ ಪ್ರಕಾರ, ಅವರು 19,140 ಕೋಟಿ ರೂಪಾಯಿ (2.3 ಬಿಲಿಯನ್ ಯುಎಸ್ ಡಾಲರ್) ನಿವ್ವಳ ಮೌಲ್ಯ ಹೊಂದಿದ್ದಾರೆ. ಅವರ ಕಂಪನಿಯ ಅರುಣ್ ಐಸ್ ಕ್ರೀಮ್, ಆರೋಕ್ಯ ಹಾಲು ಮತ್ತು ಹ್ಯಾಟ್ಸನ್ ಮೊಸರುಗಳ ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಹೊಂದಿದೆ.
ಇದನ್ನು ಅವರ ಕಂಪನಿಯೂ 42 ದೇಶಗಳಿಗೆ ಡೈರಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ವಿಶೇಷ ಅಂದರೆ ಅವರ ತಯಾರಿಸುತ್ತಿದ್ದ ಐಸ್ ಕ್ರೀಮ್‌ಗಳನ್ನು ಮೊದಲು ತಳ್ಳುಗಾಡಿಗಳ ಮೂಲಕ ಮಾರಾಟ ಮಾಡಲಾಗುತ್ತಿತ್ತು.
ಇಂದು ಇವರ ಕಂಪನಿಯೂ ಸುಮಾರು 12,000 ಹಳ್ಳಿಗಳಲ್ಲಿ ನೆಲೆಸಿರುವ 4,50,000 ಕ್ಕೂ ಹೆಚ್ಚು ರೈತರಿಂದ ನೇರವಾಗಿ ಹಾಲನ್ನು ಖರೀದಿಸುತ್ತಿದೆ. ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುತಂಗಲ್‌ನಲ್ಲಿ ಜನಿಸಿದ ಚಂದ್ರಮೊಗನ್ ಅವರು 2018 ರಲ್ಲಿ ಭಾರತೀಯ ಡೈರಿ ಅಸೋಸಿಯೇಷನ್‌ನಿಂದ ಪ್ರತಿಷ್ಠಿತ patronage awardನ್ನು ಪಡೆದಿದ್ದಾರೆ.


Click it and Unblock the Notifications