ಭಾರತೀಯ-ಅಮೆರಿಕನ್ ಉದ್ಯಮಿ, ಟಿಐಬಿಸಿಒ (TIBCO) ಎಂಬ ಸಾಪ್ಟ್ ವೇರ್ ಸಂಸ್ಥೆ ಸ್ಥಾಪಕ ಹಾಗೂ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ (ಎನ್‌ಬಿಎ) ನ ಸ್ಯಾಕ್ರಮೆಂಟೊ ಕಿಂಗ್ಸ್ ತಂಡದ ಒಡೆಯರಾಗಿರುವ ವಿವೇಕ್ ರಣದಿವ್ ಅವರ ಪುತ್ರಿ ಅಂಜಲಿ ರಣದಿವ್ ಗಾಯಕಿ ಮತ್ತು ಗೀತ ರಚನೆಕಾರಾಗಿದ್ದಾರೆ.
ಇವರು ಅಂಜಲಿ ವರ್ಲ್ಡ್ ಮತ್ತು ನಾನಿ ಎಂಬ ಹೆಸರುಗಳನ್ನೂ ಗುರುತಿಸಿಕೊಂಡಿದ್ದಾರೆ. ಇವರು ಇತ್ತೀಚೆಗೆ ತಮ್ಮ ಆಸಕ್ತಿಯನ್ನು ಪಾಪ್ ಸಂಗೀತದಿಂದ ಬಾಸ್ಕೆಟ್‌ಬಾಲ್‌ಗೆ ಬದಲಾಯಿಸಿಕೊಂಡಿದ್ದಾರೆ. 30ರ ಹರೆಯ ಅಂಜಲಿ ತಮ್ಮ ಮೊದಲ ಸಿಂಗಲ್(ಏಕಗೀತೆ) 'ವಿ ಟರ್ನ್ ಅಪ್' ಅನ್ನು ಏಪ್ರಿಲ್ 2014 ರಲ್ಲಿ ರಚಿಸಿ ಬಿಡುಗಡೆ ಮಾಡಿದರು.

ಇದರ ನಂತರ ಎರಡನೇ ಸಿಂಗಲ್ ಟೈಗಾ ಮತ್ತು ಸೇಜ್ ದಿ ಜೆಮಿನಿ ಅವರನ್ನು ಒಳಗೊಂಡ 'ನೋ ಬಡಿ' ಯನ್ನು ಪ್ರಸ್ತುತಪಡಿಸಿದ್ದರು. ಇವರ ತಂದೆ ಸ್ಯಾಕ್ರಮೆಂಟೊ ಕಿಂಗ್ಸ್ ನ ಮಾಲೀಕರಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಈ ತಂಡವು ಅಕ್ಟೋಬರ್ 2023 ರ ವೇಳೆಯಲ್ಲಿ ಸುಮಾರು 27,720 ಕೋಟಿ ರೂಪಾಯಿ (3.33 ಶತಕೋಟಿ ಯುಎಸ್ ಡಾಲರ್) ಮೌಲ್ಯವನ್ನು ಹೊಂದಿದೆ.
ಅಂಜಲಿ ಅವರು ಸ್ಟಾಕ್ಟನ್ ಕಿಂಗ್ಸ್ ಜಿ ಲೀಗ್ ತಂಡದ ಆಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದಕ್ಕೂ ಮೊದಲು, ಅವರು ಸ್ಯಾಕ್ರಮೆಂಟೊ ಕಿಂಗ್ಸ್‌ನ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಕೋ ಆರ್ಡಿನೇಟರ್ ಆಗಿದ್ದರು. ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ಈ ವರ್ಷದ ಆರಂಭದ ಪ್ಲೇಆಫ್‌ಗಳಲ್ಲಿಅಂಜಲಿ ಅವರ ಉಪಸ್ಥಿತಿಯು ಹೆಚ್ಚಿನ ಗಮನ ಸೆಳೆಯಿತು.
ಅಂಜಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂಜಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 163K ಫಾಲೋವರ್ಸ್ ಹೊಂದಿದ್ದಾರೆ. ಅಂಜಲಿಯವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಿಂದ ಸಾಗರ ವಿಜ್ಞಾನದಲ್ಲಿ ಪದವಿಪಡೆದರು.
ಇದಾದ ಬಳಿಕ ಜಾಸ್ & ಪಾವ್ಸ್ ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಶಾರ್ಕ್, ಹಿಮಕರಡಿಗಳು ಮತ್ತು ಹುಲಿಗಳ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುತ್ತದೆ. ಇದರೊಂದಿಗೆ ಅವರು ಸ್ಯಾಕ್ರಮೆಂಟೊ ಕಿಂಗ್ಸ್ ನ ಬಿಸಿನೆಸ್ ಆಪರೇಷನ್ಸ್ ಗಳನ್ನು ನಿಭಾಯಿಸುತ್ತಿದ್ದಾರೆ.
ಅವರು ತಂಡದ ಸಾಮಾಜಿಕ ಜವಾಬ್ದಾರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಟೋಬರ್ 2015 ರಲ್ಲಿ, ಅವರು ಮಾಂಟೆರಿ ಬೇ ಅಕ್ವೇರಿಯಂನಿಂದ 2015 ರ ಪಾಲ್ ವಾಕರ್ ಓಷನ್ ಲೀಡರ್ಶಿಪ್ ಪ್ರಶಸ್ತಿಯನ್ನು ಪಡೆದರು. ಅವರು 2022 ಎನ್‌ಬಿಎ ಆಲ್-ಸ್ಟಾರ್ ಸೆಲೆಬ್ರಿಟಿ ಗೇಮ್‌ನ ಭಾಗವಾಗಿದ್ದರು.


Click it and Unblock the Notifications