ಮುಕೇಶ್ ಅಂಬಾನಿ ಅವರು ದೇಶದಲ್ಲಿ ಮಾತ್ರವಲ್ಲ ಇಡೀ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದು, 853269 ಕೋಟಿ ರೂಪಾಯಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಈ ಪೈಕಿ ತಮ್ಮ ಕೆಲವು ಹೊಸ ಉದ್ಯಮವನ್ನು ಮಕ್ಕಳಾದ ಆಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿ ಅವರು ಮುನ್ನಡೆಸುತ್ತಿದ್ದಾರೆ.
ಇನ್ನು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರಂತೆಯೇ ಪಾಕ್‌ನ ಶ್ರೀಮಂತ ವ್ಯಕ್ತಿ ಶಾಹಿದ್ ಖಾನ್ ಅವರು ಕೂಡ ತಮ್ಮ ಸಮಾಜಮುಖಿ ಕಾರ್ಯ ಹಾಗೂ ಲೈಫ್‌ಸ್ಟೈಲ್ ಹಾಗೂ ಬಿಸಿನೆಸ್‌ಗೆ ಸಂಬಂಧಿಸಿದ ಹೂಡಿಕೆಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ.

ಶಾಹಿದ್ ಖಾನ್ ಅವರ ಮಕ್ಕಳು ಕೂಡ ತಂದೆಯ ವ್ಯಾಪಾರದಲ್ಲಿ ಕೈಜೋಡಿಸಿದ್ದಾರೆ. ಆದರೆ ಶಾಹಿದ್ ಖಾನ್ ಅವರು 97276 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿವ್ವಳ ಆಸ್ತಿ ಹೊಂದಿದ್ದಾರೆ. ಅವರು ನ್ಯಾಷನಲ್ ಫುಟ್‌ಬಾಲ್ ಲೀಗ್ ಜಾಕ್ಸನ್‌ವಿಲ್ಲೆ ಜಾಗ್ವಾರ್ಸ್ ಹಾಗೂ ಪ್ರೀಮಿಯರ್ ಲೀಗ್ ಫುಲ್‌ಹಾಂನ ಮಾಲೀಕರಾಗಿದ್ದಾರೆ.
ಅವರ ಮಗ ಟೋನಿ ಖಾನ್ ಅವರು ಕೂಡ ತಮ್ಮ ನೆಚ್ಚಿನ ಕ್ರೀಡಾ ಉದ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ತಂದೆಯ ಜತೆ ಸೇರಿಕೊಂಡು ಆಲ್ ಎಲೈಟ್ ವ್ರೆಸ್ಲಿಂಗ್‌ನ ಸಹ ಮಾಲೀಕರು ಕೂಡ ಆಗಿದ್ದಾರೆ. ಶಾಹಿದ್ ಖಾನ್ ಹಾಗೂ ಟೋನಿ ಖಾನ್ ಅವರು ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಅವರ ಪುತ್ರಿ ಶಾನ್ನಾ ಖಾನ್ ಬಗ್ಗೆ ಹಾಗೂ ಅವರ ಸಮಾಜಸೇವೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಶಾನ್ನಾ ಖಾನ್ ಬಗ್ಗೆ ನಿಮಗೆಷ್ಟು ಗೊತ್ತು?
ಶಾಹಿದ್ ಮಗಳು ಶಾನ್ನಾ ಜಾಗ್ವಾರ್ಸ್ ಫೌಂಡೇಷನ್ ಮೂಲಕ ಚಾರಿಟಬಲ್ ಉಪಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಯುವಕರು ಹಾಗೂ ಅವರ ಕುಟುಂಬಗಳಿಗೆ ಹೆಚ್ಚಿನ ರೀತಿಯ ನೆರವನ್ನು ನೀಡುತ್ತಿದ್ದಾರೆ. ವುಲ್ಪ್ ಪಾಯಿಂಟ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಸ್ಟಿನ್ ಮ್ಯಾಕ್‌ಕೇಬ್ ಅವರನ್ನು ವಿವಾಹವಾಗಿರುವ ಶಾನ್ನಾ ಅವರು 20 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಇದು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಅಂಬಾನಿ ಹಾಗೂ ಆಕಾಶ್ ಅಂಬಾನಿ ಅವರ ಆಸ್ತಿಗೆ ಹೋಲಿಸಿದರೆ ದೊಡ್ಡ ಮೊತ್ತವಲ್ಲ. ವರದಿಗಳ ಪ್ರಕಾರ, ಶನ್ನಾ ಖಾನ್ ಮತ್ತು ಅವರ ಕುಟುಂಬವು ವಿವಿಗಳಲ್ಲಿ ಆಂಕಾಲಜಿ ಕಾರ್ಯಕ್ರಮ ಆಯೋಜಿಸುವುದಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕಳೆದ ವರ್ಷ ಇಲಿನಾಯ್ಸ್ ಪಶುವೈದ್ಯಕೀಯ ಬೋಧನಾ ಆಸ್ಪತ್ರೆಗೆ 123 ಕೋಟಿ ದೇಣಿಗೆ ನೀಡಿದ್ದಾರೆ.
ಶಾನ್ನಾ ಖಾನ್ ಅವರು ಸಮಾಜ ಸೇವೆಯತ್ತ ಹೆಚ್ಚು ತೊಡಗಿಸಿಕೊಂಡಿದ್ದು, ಲೋಕೋಪಕಾರಿ ಕಾರ್ಯಗಳತ್ತ ಆದ್ಯತೆ ವಹಿಸಿದ್ದಾರೆ. ಶಾನ್ನಾ ಖಾನ್ ಅವರು ಮೂಲತಃ ಪಾಕಿಸ್ತಾನ್‌ನವರಾದರು ಕೂಡ ಅವರ ಸಹೋದರ ಟೋನಿ ಖಾನ್ ಅಮೆರಿಕಾದ ಇಲಿನಾಯ್ಸ್‌ನಲ್ಲಿ ಹುಟ್ಟಿ ಬೆಳೆದಿದ್ದಾರೆ. ವರದಿಗಳ ಪ್ರಕಾರ, ಶಾನ್ನಾ ರಾಜಕೀಯವಾಗಿಯೂ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಅವರು ಪ್ಯಾಕೇಜಿಂಗ್ ಡಿಸೈನ್ ಸಂಸ್ಥೆಯಾದ ಯುನೈಟೆಡ್ ಮಾರ್ಕೆಟಿಂಗ್ ಕಂಪನಿ ಸಹ ಸಂಸ್ಥಾಪಕಿ ಕೂಡ ಆಗಿದ್ದಾರೆ.


Click it and Unblock the Notifications