Devi Shetty: ಸಂತರಿಂದ ಪ್ರೇರಣೆಗೊಂಡು 9,800 ಕೋಟಿ ರೂ. ಆಸ್ತಿಯೊಂದಿಗೆ ದೇಶದ ಶ್ರೀಮಂತ ವೈದ್ಯರಾದ ಡಾ. ದೇವಿ ಶೆಟ್ಟಿ!

ಒಬ್ಬರು ಸಂತರ ಖಾಸಗಿ ವೈದ್ಯರಾಗಿದ್ದ ವ್ಯಕ್ತಿಯೊಬ್ಬರು ಅವರ ಪ್ರೇರಣೆಯಿಂದ ಭಾರತದಲ್ಲಿ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೂ ಸುಲಭದಲ್ಲಿ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ದೇವಿಶೆಟ್ಟಿ ಅವರು ಭಾರತದ ಮುಂಚೂಣಿಯ ವೈದ್ಯರಾಗಿದ್ದು, ಹೃದ್ರೋಗ ತಜ್ಞರಾಗುವ ಜತೆಗೆ ಬಿಲಿಯನೇರ್‌ ಉದ್ಯಮಿ ಹಾಗೂ ಬಹುದೊಡ್ಡ ಸಮಾಜಮುಖಿ ಜನೋಪಕಾರಿ ಕೂಡ ಆಗಿದ್ದಾರೆ.

1984ರಲ್ಲಿ ಮದರ್‌ ತೆರೆಸಾ ಅವರಿಗೆ ಹೃದಯಾಘಾತವಾದಾಗ ಡಾ. ದೇವಿಶೆಟ್ಟಿ ಅವರ ಸಂಪರ್ಕಕ್ಕೆ ಬಂದಿದ್ದರು. ತೆರೆಸಾ ಅವರ ಕೊನೆಯ ಐದು ವರ್ಷಗಳ ಕಾಲ ಡಾ.ದೇವಿಶೆಟ್ಟಿ ಅವರು ಖಾಸಗಿ ವೈದ್ಯರಾಗಿದ್ದರು. "ನಾರಾಯಣ ಹೃದಯಾಲಯವನ್ನು ಪ್ರಾರಂಭಿಸುವುದರ ಹಿಂದಿನ ಶಕ್ತಿಯೇ ಮದರ್‌ ತೆರೆಸಾ" ಎಂದು ಡಾ. ಶೆಟ್ಟಿ ಅವರು ಅಂಕಣವೊಂದರಲ್ಲಿ ಹೇಳಿದ್ದರು. ಬಡವರ ಜೀವನದಲ್ಲಿ ಬದಲಾವಣೆ ತರುವುದಕ್ಕೆ ಅವರು ಹೇಗೆ ಸ್ಪರ್ಶಿಸಿದರು ಹಾಗೂ ಸ್ಫೂರ್ತಿಯಾದರು ಎಂಬುದನ್ನು ನೆನಪಿಸಿಕೊಂಡಿದ್ದರು.

 9,800 ಕೋಟಿ ಆಸ್ತಿಯೊಂದಿಗೆ ದೇಶದ ಶ್ರೀಮಂತ ವೈದ್ಯರಾದ ದೇವಿ ಶೆಟ್ಟಿ!

2001ರಲ್ಲಿ ಅವರು ನಾರಾಯಣ ಹೃದಯಾಲಯವನ್ನು ಪ್ರಾರಂಭಿಸಿದ್ದರು. ಅದು ಬಳಿಕ 47 ಆರೋಗ್ಯ ಸೆಂಟರ್‌ಗಳೊಂದಿಗೆ ನಾರಾಯಣ ಹೆಲ್ತ್‌ ಆಗಿ ದೇಶದ ಅತಿದೊಡ್ಡ ಹಾಸ್ಪಿಟಲ್‌ ಚೈನ್‌ ಆಗಿ ಬದಲಾಗಿದೆ. ಆ ಮೂಲಕ 15,000 ಕೋಟಿ ರೂ. ಗಳ ಮಾರ್ಕೆಟ್‌ ಕ್ಯಾಪ್‌ ಅನ್ನು ಹೊಂದಿದೆ. ತಮ್ಮ ಸುಧೀರ್ಘ ವೃತ್ತಿ ಬದುಕಿನಲ್ಲಿ ದೇವಿಶೆಟ್ಟಿ ಅವರು ದೇಶದ ಆರೋಗ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ಹುಟ್ಟಿದ್ದ ಡಾ. ಶೆಟ್ಟಿ ಅವರು ಬಾಲ್ಯದಲ್ಲೇ ವಿಶ್ವದ ಮೊದಲ ಹೃದಯ ಕಸಿ ಶಸ್ತ್ರಚಿಕಿತ್ಸೆಯ ಬಗ್ಗೆ ಓದಿದ ಬಳಿಕ ಹೃದ್ರೋಗ ಸರ್ಜನ್‌ ಆಗುವ ಕನಸು ಕಂಡಿದ್ದರು. ಮಣಿಪಾಲದ ಕಸ್ತೂರಬಾ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯ ಪದವಿ ಓದಿದ ಬಳಿಕ ಅಮೆರಿಕ ಹಾಗೂ ಇಂಗ್ಲೆಂಡ್‌ನಲ್ಲಿ ಹಾರ್ಟ್‌ ಸರ್ಜನ್‌ ಆಗಿ ಸೇವೆ ಸಲ್ಲಿಸುವ ಮೂಲಕ ಅಲ್ಲಿ ಅವರು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಅಪಾರ ಅನುಭವವನ್ನು ಪಡೆದುಕೊಂಡರು. ಬಳಿಕ ವೈದ್ಯ ಕ್ಷೇತ್ರದ ಆಳ ಅನುಭವದೊಂದಿಗೆ ಭಾರತಕ್ಕೆ ವಾಪಾಸ್ಸಾಗಿದ್ದರು.

ನಾರಾಯಣ ಹೆಲ್ತ್‌ ದೇಶಾದ್ಯಂತ 30 ಆಸ್ಪತ್ರೆಗಳೊಂದಿಗೆ 7,000 ಹಾಸಿಗೆಗಳನ್ನು ಹೊಂದಿವೆ. ಆ ಮೂಲಕ ಅತ್ಯಾಧುನಿಕ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ನೀಡುತ್ತಿದ್ದಾರೆ. 2015ರಲ್ಲಿ ನಾರಾಯಣ ಹೆಲ್ತ್‌ ಐಪಿಒಗೆ ಯಶಸ್ವಿಯಾಗಿ ಪ್ರವೇಶ ಪಡೆದಿದೆ. ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಕಿರಣ್ ಮಜುಂದಾರ್ ಶಾ ಕೂಡ ಅವರ ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆ.

ಡಾ ಶೆಟ್ಟಿ ಅವರು ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (2004) ಮತ್ತು ಪದ್ಮಭೂಷಣ (2012) ಸೇರಿದಂತೆ ಹಲವಾರು ಪುರಸ್ಕಾರಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ. ದೇವಿಶೆಟ್ಟಿ ಅವರು ಟೈಮ್ಸ್‌ ಮ್ಯಾಗಜಿನ್‌ನ ಆರೋಗ್ಯ ಕ್ಷೇತ್ರದ ಅತ್ಯಂತ 50 ಮಂದಿ ಪ್ರಭಾವಿಶಾಲಿ ವ್ಯಕ್ತಿಯಗಳ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದರು.

ಡಾ. ದೇವಿಶೆಟ್ಟಿ ಅವರು ಕರ್ನಾಟಕದ ಮೈಕ್ರೋ ವಿಮಾ ಯೋಜನೆಯಾದ ಯಶಸ್ವಿನಿ ಸ್ಕೀಮ್‌ನ ರೂಪುರೇಷೆ ಸಿದ್ಧಪಡಿಸುವಲ್ಲಿ ನೆರವಾಗಿದ್ದಾರೆ. ಡಾ. ಶೆಟ್ಟಿ ಅವರು 9,800 ಕೋಟಿ ರೂ.($1.2 ಬಿಲಿಯನ್‌) ನಿವ್ವಳ ಆಸ್ತಿ ಹೊಂದಿದ್ದು, ದೇಶದ ಅತ್ಯಂತ ಶ್ರೀಮಂತರಾಗಿ ಬೆಳೆದಿದ್ದಾರೆ.

ವೈದ್ಯರೊಬ್ಬರು ಸಿಇಒ ಆಗಿ ಬದಲಾದ ಕಥೆ

46 ವರ್ಷ ವಯಸ್ಸಿನ ವಸಂತ್‌ ನರಸಿಂಹನ್‌ ಅವರು ಜಾಗತಿಕ ಮಟ್ಟದ ಬಿಸಿನೆಸ್‌ ಲೀಡರ್‌ ಆಗಿದ್ದು, ಸಿಇಒ ಆಗಿ ಕಾರ್ಯನಿರ್ವಹಣೆ ಆರಂಭ ಮಾಡುವುದಕ್ಕೂ ಮೊದಲೇ ಅಂದರೆ 20 ವರ್ಷಗಳ ಹಿಂದೆ ಆ ಗರಿಮೆಯನ್ನು ಸಾಧಿಸಿದ್ದರು. ವಾಸ್‌ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಉದ್ಯಮಿಯು ಜಗತ್ತಿನ ಅತಿದೊಡ್ಡ ಫಾರ್ಮಸೂಟಿಕಲ್‌ ಕಾರ್ಪೊರೇಷನ್‌ನ ಮುಖ್ಯಸ್ಥರಾಗಿದ್ದು, ಜಾಗತಿಕವಾಗಿ ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ ಮೂಲದ ಸಿಇಒಗಳ ಸಾಲಿನಲ್ಲಿದ್ದಾರೆ.

ವಸಂತ್‌ ನರಸಿಂಹನ್‌ ಅವರು 2018ರಲ್ಲಿ ಸ್ವಿಸ್‌ ಎಂಎನ್‌ಸಿ ನೊವಾರ್ಟಿಸ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅಂದಿನಿಂದ 185 ಬಿಲಿಯನ್‌ ಡಾಲರ್ (15,29,000 ಕೋಟಿ ರೂಪಾಯಿ) ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ. ನರಸಿಂಹನ್‌ ಅವರು ಆರೋಗ್ಯ ಕ್ಷೇತ್ರದಲ್ಲಿ ಮ್ಯಾನೇಜರ್‌ ಆಗಿ ವೃತ್ತಿಯನ್ನು ಆರಂಭಿಸಿರಲಿಲ್ಲ, ಬದಲಿಗೆ ಅವರೊಬ್ಬ ನುರಿತ ವೈದ್ಯರಾಗಿ ಆ ವಲಯಕ್ಕೆ ಪ್ರವೇಶ ಪಡೆದಿದ್ದರು. ಹೀಗಾಗಿ, ವೈದ್ಯರು ಸಿಇಒ ಆಗಿ ಬದಲಾಗಿ ಜಗತ್ತಿನ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುತ್ತ ಯುವ ಸಾಧಕರಾಗಿ ಬಹಳ ವೇಗವಾಗಿ ಬೆಳೆದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+