ಕಳೆದ ಎರಡು ದಿನಗಳಿಂದ ಧನರಾಜ್ ನತ್ವಾನಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಗುರುವಾರದಂದು ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ಮೊಮ್ಮಗಳು ಜನಿಸಿದ ಬಗ್ಗೆ ಘೋಷಣೆ ಮಾಡಿದ ಬಳಿಕ ಧನರಾಜ್ ನತ್ವಾನಿ ಸುದ್ದಿಯಾಗುತ್ತಿದ್ದಾರೆ. ಅಷ್ಟಕ್ಕೂ ಅಂಬಾನಿ ಕುಟುಂಬದ ಸುದ್ದಿ ಘೋಷಿಸಿರುವ ಧನರಾಜ್ ಯಾರಪ್ಪ?
ಧನರಾಜ್ ನತ್ವಾನಿ ಗುರುವಾರ ಟ್ವಿಟ್ಟರ್‌ನಲ್ಲಿ ಆಕಾಶ್ ಅಂಬಾನಿ ಹಾಗೂ ಶ್ಲೋಕ ಮೆಹ್ತಾ ಅಂಬಾನಿಗೆ ಶುಭಾಶಯವನ್ನು ಕೋರಿದ್ದಾರೆ. "ಆಕಾಶ್ ಹಾಗೂ ಶ್ಲೋಕ ಅಂಬಾನಿಯ ಪುಟ್ಟ ರಾಜಕುಮಾರಿಯ ಆಗಮನಕ್ಕೆ ಸಂತಸದ, ಹೃದಯಪೂರ್ವಕ ಶುಭಾಶಯಗಳು. ಈ ಅಮೂಲ್ಯ ಆಶೀರ್ವಾದವು ನಿಮ್ಮ ಜೀವನದಲ್ಲಿ ಅಪಾರ ಸಂತೋಷ ಮತ್ತು ಪ್ರೀತಿಯನ್ನು ತರಲಿ," ಎಂದು ಧನರಾಜ್ ನತ್ವಾನಿ ಟ್ವೀಟ್ ಮಾಡಿದ್ದಾರೆ.

ಆಕಾಶ್ ಅಂಬಾನಿ ಹಾಗೂ ಶ್ಲೋಕ ಮೆಹ್ತಾ ಅಂಬಾನಿ ಈಗ ಎರಡು ಮಕ್ಕಳ ಪೋಷಕರಾಗಿದ್ದಾರೆ. ದಂಪತಿಯ ಮೊದಲ ಮಗು ಗಂಡಾಗಿದ್ದು, (ಪೃತ್ವಿ ಅಂಬಾನಿ) 2020ರಲ್ಲಿ ಜನಿಸಿದ್ದಾನೆ. ಆಕಾಶ್ ಅಂಬಾನಿ ಮುಕೇಶ್ ಅಂಬಾನಿಯ ಹಿರಿಯ ಪುತ್ರ. ಇತ್ತೀಚೆಗೆ ಆಕಾಶ್ ಅಂಬಾನಿ ಮುಂಬೈನ ಸಿದ್ಧವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ್ದು ಅದು ಸುದ್ದಿಯಾಗಿತ್ತು.
ಪೃತ್ವಿ ಅಂಬಾನಿಯ ಜನನವನ್ನು ಧನರಾಜ್ ನತ್ವಾನಿಯ ತಂದೆ ಪರಿಮಳ್ ನತ್ವಾನಿ ಘೋಷಣೆ ಮಾಡಿದ್ದರು. ಪರಿಮಳ್ ನತ್ವಾನಿ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕರಾಗಿದ್ದಾರೆ. ಹಾಗೆಯೇ ಆಂಧ್ರಪ್ರದೇಶದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈಗ ಮೊಮ್ಮಗಳ ಜನನವನ್ನು ಪುತ್ರ ಧನರಾಜ್ ನತ್ವಾನಿ ಘೋಷಣೆ ಮಾಡಿದ್ದಾರೆ. ಹಾಗಾದರೆ ಧನರಾಜ್ ನತ್ವಾನಿ ಯಾರು ಎಂದು ತಿಳಿಯೋಣ ಮುಂದೆ ಓದಿ...
ಧನರಾಜ್ ನತ್ವಾನಿ ಯಾರು?
37 ವರ್ಷ ಪ್ರಾಯದ ಧನರಾಜ್ ನತ್ವಾನಿಯು ಇಶಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿಯ ಸ್ನೇಹಿತರಾಗಿದ್ದಾರೆ. ಮುಕೇಶ್ ಅಂಬಾನಿಯ ರಿಲಯನ್ಸ್ ಸಂಸ್ಥೆಯಲ್ಲಿನ ಉನ್ನತ ಅಧಿಕಾರಿ ಸ್ಥಾನದಲ್ಲಿಯು ಧನರಾಜ್ ನತ್ವಾನಿ ಇದ್ದಾರೆ. ಲಂಡನ್‌ನಲ್ಲಿರುವ ರೆಜೆಂಟ್ ಬ್ಯುಜಿನೆಸ್ ಸ್ಕೂಲ್‌ನಲ್ಲಿ ಧನರಾಜ್ ತನ್ನ ವಿದ್ಯಾಭ್ಯಾಸ ಮಾಡಿದ್ದಾರೆ.
ಪ್ರಸ್ತುತ ಧನರಾಜ್ ಮುಂಬೈನಲ್ಲಿ ನೆಲೆಸಿದ್ದಾರೆ. ಹಾಗೆಯೇ ರಿಲಯನ್ಸ್ ಇಂಡಸ್ಟ್ರೀಸ್‌ನ ಗ್ರೂಪ್ ಪ್ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಮ್‌ನಗರದ ಉತ್ಪಾದನ ವಲಯವನ್ನು ನೋಡಿಕೊಳ್ಳುವುದು ಕೂಡಾ ಧನರಾಜ್ ನತ್ವಾನಿಯ ಜವಾಬ್ದಾರಿಯಾಗಿದೆ. ವಹಿವಾಟಿನ ತಾಂತ್ರಿಕ ವಿಚಾರಗಳನ್ನು ಧನರಾಜ್ ನಿರ್ವಹಣೆ ಮಾಡುತ್ತಾರೆ.
ಹಣಕಾಸು ಮತ್ತು ಖರ್ಚು ವೆಚ್ಚಗಳು, ಖರೀದಿ ಮತ್ತು ಒಪ್ಪಂದಗಳು, ಮಾನವ ಸಂಪನ್ಮೂಲ, ಮಾಹಿತಿ-ತಂತ್ರಜ್ಞಾನ, ಭದ್ರತೆ, ಕಾರ್ಪೊರೇಟ್ ವ್ಯವಹಾರಗಳ ಇಲಾಖೆ, ಕಂಪನಿಯ ಎರಡೂ ಉತ್ಪಾದನಾ ವಿಭಾಗಗಳ ಸಿಆರ್‌ಎಸ್ ಚಟುವಟಿಕೆಗಳನ್ನು ಧನರಾಜ್ ನತ್ವಾನಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.
ಇನ್ನು ಧನರಾಜ್, ದ್ವಾರಕಾಧೀಶ ದೇವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷರು ಕೂಡಾ ಹೌದು. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಉಪಾಧ್ಯಕ್ಷರು ಮತ್ತು ಅಧ್ಯಕ್ಷ ಹೊಣೆಗಾರಿಯನ್ನು ಧನರಾಜ್ ನತ್ವಾನಿ ಹೊಂದಿದ್ದಾರೆ. ಇನ್ನು ಜಮ್‌ನಗರ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷರು ಕೂಡಾ ಆಗಿದ್ದಾರೆ. ಹೀಗೆ ಹಲವಾರು ಸಂಸ್ಥೆಗಳಲ್ಲಿ ಸ್ಥಾನವನ್ನು ಹೊಂದಿದ್ದಾರೆ.
ಧನರಾಜ್ ನತ್ವಾನಿ ಪ್ರಸ್ತುತ ಮುಕೇಶ್ ಅಂಬಾನಿಯ ರಿಲಯನ್ಸ್ ಸಂಸ್ಥೆಯಲ್ಲಿ ಅತೀ ಹೆಚ್ಚಾಗಿ ಕೇಳಿಬರುವ ಹೆಸರಾಗಿದೆ. ಹಾಗೆಯೇ ಮುಕೇಶ್ ಅಂಬಾನಿ ಹಾಗೂ ಅವರ ಮೂವರು ಮಕ್ಕಳ ಜೊತೆ ಇರುವ ಅತೀ ಆಪ್ತರಲ್ಲಿ ಒಬ್ಬರಾಗಿದ್ದಾರೆ.
ಇನ್ನು ಆಕಾಶ್ ಅಂಬಾನಿ ಪ್ರಸ್ತುತ ರಿಲಯನ್ಸ್ ಜಿಯೋವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ರಿಲಯನ್ಸ್ ನ್ಯೂ ಎನರ್ಜಿ ಸೋಲರ್ ನಿರ್ವಹಣೆ ಮಾಡುತ್ತಿದ್ದಾರೆ. ಧನರಾಜ್ ನತ್ವಾನಿ ರಿಲಯನ್ಸ್ ನ್ಯೂ ಎನರ್ಜಿ ಸೋಲರ್‌ನ ಡೈರೆಕ್ಟರ್ ಆಗಿದ್ದಾರೆ.


Click it and Unblock the Notifications