ಧರ್ಮೇಶ್ ಷಾ ಅವರು 2006ರಲ್ಲಿ ಹಬ್‌ಸ್ಪಾಟ್ ಅನ್ನು ಸ್ಥಾಪಿಸಿದ ಭಾರತ- ಅಮೆರಿಕನ್ ಉದ್ಯಮಿಯಾಗಿದ್ದಾರೆ. ಅವರು OnStartups.com ಎನ್ನುವ ಬ್ಲಾಗ್ ಅನ್ನು ಬರೆಯುತ್ತಿದ್ದು, 900000 ಚಂದಾದಾರರನ್ನು ಹೊಂದಿದ್ದಾರೆ. ಅವರು ಇತ್ತೀಚೆಗಷ್ಟೇ ಡೊಮೇನ್ ಹೆಸರೊಂದನ್ನು 82 ಕೋಟಿ ರೂಪಾಯಿಗೆ ಖರೀದಿಸಿ ನಂತರ ಅದನ್ನು ಮಾರಾಟ ಮಾಡಿ ಲಾಭ ಕೂಡ ಗಳಿಸಿದ್ದರು.
ಆ ಮೂಲಕ ಧರ್ಮೇಶ್ ಅವರು ಬಹಳ ಸುದ್ದಿಯಾಗಿದ್ದರು. ಈ ರೀತಿ ಭಾರೀ ಬೆಲೆಗೆ ಮಾರಾಟಗೊಂಡಿರುವ ಡೊಮೇನ್ ಹೆಸರು Chat.com. ಶಾ ಅವರ ಆಸಕ್ತದಾಯಕ ಬದುಕಿನ ಪಯಣದ ಕಥೆ ಇಲ್ಲಿದೆ.

ಹಬ್‌ಸ್ಪಾಟ್ ಎಂಬುದು ಸಾಫ್ಟ್‌ವೇರ್ ಕಂಪನಿಯಾಗಿದ್ದು, ಇದು ಡಿಜಿಟಲ್ ಮಾರ್ಕೆಟಿಂಗ್, ಸೇಲ್ಸ್ ಹಾಗೂ ಗ್ರಾಹಕರ ಸೇವೆಯನ್ನು ಒದಗಿಸುತ್ತಿದೆ. 2014ರಲ್ಲಿ ಈ ಕಂಪನಿಯು ಅಮೆರಿಕದಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಷಾ ಅವರು ಈ ಕಂಪನಿಯ ಸಿಟಿಒ ಆಗಿದ್ದಾರೆ. ಷಾ ಅವರು ಕಂಪನಿಯಲ್ಲಿ 2021ರಲ್ಲಿ ಶೇ.3.4ರಷ್ಟು ಷೇರು ಹೊಂದಿದ್ದಾರೆ. ಅಂದರೆ ಒಂದು ಬಿಲಿಯನ್ ಡಾಲರ್(8200 ಕೋಟಿ ರೂ.) ಗೂ ಹೆಚ್ಚು ಮೊತ್ತದ ಆಸ್ತಿಯ ಒಡೆಯರಾಗಿದ್ದಾರೆ.
ಫೋರ್ಬ್ಸ್ ವರದಿ ಪ್ರಕಾರ, ಅವರು ಫೇಸ್‌ಬುಕ್ ಷೇರುಗಳಿಂದಲೂ ಹಣ ಗಳಿಸುತ್ತಿದ್ದು, ಅವರ ಆಸ್ತಿ ಮೌಲ್ಯವು ಮತ್ತಷ್ಟು ಜಾಸ್ತಿಯಾಗಿರುತ್ತದೆ. ಅಷ್ಟೇಅಲ್ಲ, ಅವರು ತಮ್ಮ ಮೊದಲ ಸ್ಟಾರ್ಟಪ್ ಅನ್ನು ಕೂಡ 15 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದಾರೆ. 2022ರಲ್ಲಿ ಷಾ ಅವರ ಕಂಪನಿಯ ಒಟ್ಟು ಆದಾಯವು 1.73 ಬಿಲಿಯನ್ ಆಗಿದೆ.
ಷಾ ಅವರು ಹುಟ್ಟಿದ್ದು ಭಾರತದ ಅಂಕಲೇಶ್ವರದಲ್ಲಿ. ಅವರ ಕುಟುಂಬವು ಅಮೆರಿಕಾ ದೇಶಕ್ಕೆ ಸ್ಥಳಾಂತರಗೊಂಡಿದ್ದು, ಅಲ್ಲಿಂದ ಕೆನಡಾಗೆ ಹೋಗಿದ್ದಾರೆ. ಬಳಿಕ ಅವರು ತಮ್ಮ ಅಜ್ಜಿಯನ್ನು ನೋಡಿಕೊಳ್ಳುವುದಕ್ಕಾಗಿ ಭಾರತಕ್ಕೆ ವಾಪಾಸ್ ಬಂದಿದ್ದರು. ಷಾ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆದಿದ್ದರು. ಆದರೆ ಬಳಿಕ ತಮ್ಮ ಕುಟುಂಬದ ಜತೆಗೆ ಅಮೆರಿಕಾಕ್ಕೆ ಸ್ಥಳಾಂತರಗೊಂಡಿದ್ದರು.
ಧರ್ಮೇಶ್ ಷಾ ಅವರು ಅಲಬಾಮಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್ ಪದವಿ ಪಡೆದುಕೊಂಡಿದ್ದಾರೆ. ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಎಂಐಟಿಯಲ್ಲಿ ಷಾ ಅವರು ತಮ್ಮ ಭವಿಷ್ಯದ ಪಾಲುದಾರ ಬ್ರಯಾನ್ ಹ್ಯಾಲಿಗನ್ ಅವರನ್ನು ಭೇಟಿಯಾಗಿದ್ದರು.
ಅವರು 2006ರಲ್ಲಿ ಹಬ್‌ಸ್ಪಾಟ್ ಕಂಪನಿಯನ್ನು ಪ್ರಾರಂಭಿಸಿದ್ದರು. ಅವರು ಬ್ಲಾಗಿಂಗ್ ಮತ್ತು ಮಾರ್ಕೆಟಿಂಗ್ ಈವೆಂಟ್‌ಗಳನ್ನು ಬಳಸಿಕೊಂಡು ಮಾರ್ಕೆಟಿಂಗ್ ಉದ್ಯಮದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿದ್ದಾರೆ. ಷಾ ಅವರ ಪಾಲುದಾರರು ಹಬ್‌ಸ್ಪಾಟ್ ಕಂಪನಿಯಲ್ಲಿ ಶೇ.1.4ರಷ್ಟು ಷೇರು ಹೊಂದಿದ್ದು, ಅದರ ಮೌಲ್ಯವು 441 ಮಿಲಿಯನ್ ಡಾಲರ್ ಆಗಿದೆ.
ಈ ಶ್ರೀಮಂತರುಗಳ ಬಗ್ಗೆಯೂ ತಿಳಿಯಿರಿ
ಶ್ರೀಮಂತರುಗಳ ಹಲವಾರು ಜೀವನ ಕಥೆ, ಯಶೋಗಾಥೆಯನ್ನು ನಾವು ನಿಮಗೆ ವಿವರಿಸುತ್ತಾ ಬಂದಿದ್ದೇವೆ. ಹಲವಾರು ಮಂದಿ ತಮ್ಮ ಏಳಿಗೆಗಾಗಿ ಅತೀ ಕಠಿಣ ಶ್ರಮವನ್ನು ಪಟ್ಟಿದ್ದಾರೆ. ಟೈಲರಿಂಗ್ ಅಂಗಡಿಯನ್ನು ನಡೆಸುತ್ತಿದ್ದ ಇರ್ಫಾನ್ ರಜಾಕ್ ಈಗ ಸುಮಾರು 11,456 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯ ಒಡೆಯರಾಗಿದ್ದಾರೆ. ವೇದಾಂತ್ ಲಂಬಾ ಹಳೆಯ ಶೂಗಳನ್ನು ರೀಸೇಲ್ ಮಾಡುವ ಮೂಲಕವೇ ಕೋಟ್ಯಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡಿದ್ದಾರೆ.
ಸಿಎನ್‌ಬಿಸಿ ಸಂದರ್ಶನ ನೀಡುವ ವೇಳೆ, "ಸ್ನೀಕರ್ಸ್ ಈಗ ಸ್ಟೇಟಸ್ ಸಿಂಬಲ್ ಆಗುತ್ತಿದೆ. ಈ ವ್ಯವಹಾರದಲ್ಲಿ ತಾನು ಮಾತ್ರ ಭಾಗಿಯಾಗಿಲ್ಲ 17-19 ವರ್ಷ ವಯಸ್ಸಿನ ಬಹಳಷ್ಟು ಮಕ್ಕಳು ಹಳೆಯ ಬೂಟುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ರೂಪಾಯಿಗಳನ್ನು ಗಳಿಸುತ್ತೇನೆ," ಎಂದು ವೇದಾಂತ್ ಲಂಬಾ ಹೇಳಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications