ಮೈಕ್ರೋ ಲ್ಯಾಬ್ಸ್‌ನ ಅಧ್ಯಕ್ಷ ಹಾಗೂ ಎಂಡಿ ದಿಲೀಪ್ ಸುರಾನಾ ಬೆಂಗಳೂರಿನಲ್ಲಿ ಅಲ್ಟ್ರಾ ಲಕ್ಸೂರಿ ಆಸ್ತಿಯನ್ನು ಹೊಂದಿದ್ದಾರೆ. ಅವರು 66 ಕೋಟಿ ಬೆಲೆಯ ಜಾಗದಲ್ಲಿ ಬೃಹತ್ ಐಷಾರಾಮಿ ಬಂಗ್ಲೆಯನ್ನು ಹೊಂದಿದ್ದಾರೆ. ಇದು ಬೆಂಗಳೂರು ನಗರದಲ್ಲಿ ಅತ್ಯಂತ ದುಬಾರಿ ಬೆಲೆಯ ಆಸ್ತಿಯ ಡೀಲ್ ಆಗಿರುವುದಾಗಿ ವರದಿಯಾಗಿದೆ.
ಈ ಭೂಮಿಯ ಮಾರಾಟ ಕ್ರಯ ಪತ್ರದ ಪಕಾರ, ಈ ಜಾಗದ ವಿಸ್ತೀರ್ಣವು 12,043 ಚದರ ಅಡಿಯನ್ನು ಹೊಂದಿದೆ. ಆ ಜಾಗದಲ್ಲಿ 8373 ಚದರ ಅಡಿ ವಿಸ್ತೀರ್ಣದ ಬಂಗ್ಲೆಯನ್ನು ನಿರ್ಮಿಸಲಾಗಿದೆ.
ಈ ಜಾಗವನ್ನು ಅವರು ಜಿಜಿ ರಾಜೇಂದ್ರ ಕುಮಾರ್ ಹಾಗೂ ಮನು ಗೌತಮ್ ಅವರಿಂದ ಖರೀದಿಸಿದ್ದಾರೆ. ಸುರಾನಾ ಅವರು ಈ ಜಾಗದ ಖರೀದಿಗೆ 3.36 ಕೋಟಿ ರೂ. ಸ್ಟ್ಯಾಂಪ್ ಡೂಟಿಯನ್ನು ಪಾವತಿ ಮಾಡಿದ್ದಾರೆ. ದಿಲೀಪ್ ಸುರಾನಾ ಅವರು ಮೈಕ್ರೋ ಲ್ಯಾಬ್ಸ್‌ನ ಅಧ್ಯಕ್ಷರಾಗಿದ್ದು, ಅವರ ವಾರ್ಷಿಕ ಆದಾಯವು 4000 ಕೋಟಿ ರೂ. ಆಗಿದೆ. ಈ ಕಂಪೆನಿಯು ಹೃದಯ ಸಂಬಂಧಿ ಮಧುಮೇಹ ಹಾಗೂ ನೋವು ನಿವಾರಕಗಳಿಗೆ ಜೆನರಿಕ್ ಔಷಧಗಳನ್ನು ತಯಾರಿಸುತ್ತಿದೆ. ಈ ಕಂಪೆನಿಯ ಶೇ.60ರಷ್ಟು ಆದಾಯವು ದೇಶೀಯ ಮಾರುಕಟ್ಟೆಯಿಂದ ಬರುತ್ತಿದೆ.

20 ವರ್ಷಗಳ ಹಿಂದೆ ಸುರಾನಾ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಏಕೆಂದರೆ, ದಿಲೀಪ್ ಅವರ ತಂದೆ ಜಿಸಿ ಸುರಾನಾ ಅವರು ಬಹಳ ಮಿತವ್ಯಯವಾದ ಸರಳ ಜೀವನವನ್ನು ನಡೆಸುವ ಬಯಸಿದ್ದರು. ದುಡಿದ ಪ್ರತಿ ಮೊತ್ತವನ್ನು ಕೂಡ ಕಂಪೆನಿಯಲ್ಲಿ ವಿನಿಯೋಗಿಸಬೇಕೆಂದು ಅವರು ನಂಬಿದ್ದರು. ಉತ್ತಮ ಉದ್ಯಮವನ್ನು ಕಟ್ಟಿ ಬೆಳೆಸಬೇಕೆಂಬುದು ಅವರ ಮೊದಲ ಆದ್ಯತೆಯಾಗಿತ್ತು. ಒಳ್ಳೆಯ ಕಾರು ಅಥವಾ ಮನೆಗಳನ್ನು ಖರೀದಿಸುವತ್ತ ಅವರಿಗೆ ಎಂದಿಗೂ ಹೆಚ್ಚಿನ ಆಸಕ್ತಿ ಇರಲಿಲ್ಲ.
ಹೀಗಾಗಿ, ತಮ್ಮ ಸ್ಥಾಪಿಸಿದ್ದ ಕಂಪೆನಿಯನ್ನು ದಿಲೀಪ್ ಹಾಗೂ ಆನಂದ್ ಸುರಾನಾ ಅವರು ಮುನ್ನಡೆಸುತ್ತಿದ್ದಾರೆ. ಈಗ ಈ ಕಂಪೆನಿಯು 17 ಫ್ಯಾಕ್ಟರಿಯೊಂದಿಗೆ 50 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾದ ಸಮಯದಲ್ಲಿ ಈ ಮೈಕ್ರೋ ಲ್ಯಾಬ್ ಕಂಪೆನಿಯು ತನ್ನ ಡೋಲೋ-650 ಮಾತ್ರೆಯಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತು. 2020ರಲ್ಲಿ ಕೇವಲ ಈ ಉತ್ಪನ್ನವನ್ನು ಮಾರಾಟ ಮಾಡುವ ಮೂಲಕ 400 ಕೋಟಿ ರೂ.ವನ್ನು ಸಂಪಾದಿಸಿದ್ದರು.
ಕೊರೊನಾ ಸಾಂಕ್ರಾಮಿಕ ಪಿಡುಗು ಕಾಣಿಸಿಕೊಳ್ಳುವ ಮೊದಲು ಈ ಕಂಪೆನಿಯು 7.5 ಕೋಟಿ ಸ್ಟ್ರಿಪ್ಸ್‌ನಷ್ಟು ಡೋಲೊ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಕೊರೊನಾ ಸಮಯದಲ್ಲಿ ಅದರ ಮಾರಾಟವು ದ್ವಿಗುಣಗೊಂಡಿತ್ತು. ಹೀಗಾಗಿ 2019ರ ಮಾರ್ಚ್ ಹಾಗೂ 2021ರ ಮಾರ್ಚ್ ನಡುವೆ ಈ ಕಂಪೆನಿಯ ಲಾಭವು ಶೇ.244ರಷ್ಟು ಏರಿಕೆಯಾಗಿತ್ತು.
ಕಂಪೆನಿಯ ಸ್ಥಾಪಕರಾದ ಜಿ.ಸಿ. ಖುರಾನಾ ಅವರು ಅಕೌಂಟೆಂಟ್ ಆಗಿದ್ದು, ಉದ್ಯೋಗ ಹುಡುಕಿಕೊಂಡು ಅವರು ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಅವರು ದೆಹಲಿ ಮೂಲದ ಕಂಪೆನಿಯೊಂದಕ್ಕೆ ವಿತರಕರಾಗಿ ಸೇರಿಕೊಂಡಿದ್ದರು. 1973ರಲ್ಲಿ ಅವರು ಕೇವಲ ಐದು ರೀತಿಯ ಉತ್ಪನ್ನದೊಂದಿಗೆ ಮೈಕ್ರೋ ಲ್ಯಾಬ್ಸ್ ಕಂಪೆನಿಯನ್ನು ಪ್ರಾರಂಭಿಸಿದ್ದರು. ಅವರು ತಮ್ಮ ಕಂಪೆನಿಯಲ್ಲಿ ಉತ್ಪನ್ನಗಳ ಗುಣಮಟ್ಟಕ್ಕೆ ಮೊದಲ ಆದ್ಯತೆಯನ್ನು ನೀಡಿದರು. ಹೀಗಾಗಿ, ಅವರ ಉತ್ಪನ್ನಗಳ ಗುಣಮಟ್ಟವೇ ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಪೈಪೋಟಿ ನೀಡುವುದಕ್ಕೆ ಬಹುಮುಖ್ಯ ಕಾರಣವಾಗಿದೆ.
ದಿಲೀಪ್ ಅವರು 1983ರಲ್ಲಿ ಕಂಪೆನಿಗೆ ಸೇರಿಕೊಂಡಿದ್ದು, ಅವರು ಮೈಕ್ರೋ ಲಾಬ್ಸ್ ಕಂಪೆನಿಯನ್ನು ಪ್ಯಾನ್ ಇಂಡಿಯಾ ಸಂಸ್ಥೆಯಾಗಿ ಬೆಳೆಸಿದರು. ಅವರ ಬಳಿಕ ಆನಂದ್ ಅವರು ಕೂಡ ಸೇರ್ಪಡೆಗೊಂಡರು.
ಕಂಪೆನಿಯು ಹೃದ್ರೋಗ, ಮಧುಮೇಹ, ನೇತ್ರ ವಿಜ್ಞಾನ, ಚರ್ಮರೋಗ ಮತ್ತು ಮನೋವೈದ್ಯ ಶಸ್ತ್ರಕ್ಕೆ ಸಂಬಂಧಿಸಿದಂತ ಔಷಧಗಳನ್ನು ತಯಾರಿಸುತ್ತಿವೆ. ಆದರೆ ಈ ಕಂಪೆನಿಯ ಹೀರೋ ಉತ್ಪನ್ನವಾಗಿ ಇವತ್ತಿಗೂ ಡೋಲೊ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಡೋಲೋ ಮಾತ್ರೆಯನ್ನು 1993ರಲ್ಲಿ ಪ್ರಾರಂಭಿಸಲಾಯಿತು. ವ್ಯತ್ಯಾಸವೆಂದರೆ, ಕಂಪೆನಿಯು ಪ್ಯಾರಾಸಿಟಮಾಲ್ ಮಾತ್ರೆಯನ್ನೇ 650 ಎಂಜಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ತಂದರು. ಪ್ಯಾರಾಸಿಟಮಾಲ್‌ನ ಮಿತಿಮೀರಿದ ಡೋಸ್ ಅನ್ನು ಕಡಿಮೆ ಮಾಡುವ ಉದ್ದೇಶ ಇದರ ಹಿಂದೆ ಇತ್ತು. ಕೊರೊನಾ ಸಮಯದಲ್ಲಿ ಡೋಲೋ 650 ಮಾತ್ರೆಯು ಮನೆಮಾತಾಗಿತ್ತು.
ಕೆಲವು ಕಂಪೆನಿಗಳು ಮಾತ್ರ 650ಎಂಜಿ ವಿಭಾಗದಲ್ಲಿ ಪ್ಯಾರಾಸಿಟಮಾಲ್ ಅನ್ನು ತಯಾರಿಸುತ್ತಿವೆ. ಈ ಕಾರಣದಿಂದಾಗಿಯೇ ಡೋಲೋ 650 ಮಾತ್ರೆ ಮಾರಾಟ ದ್ವಿಗುಣಗೊಂಡಿದೆ. ಸುರಾನಾ ಕುಟುಂಬವು 26,600 ಕೋಟಿ ನಿವ್ವಳ ಆದಾಯವನ್ನು ಹೊಂದಿದೆ. 2021ರಲ್ಲಿ ಕಂಪೆನಿಯ ಲಾಭವು ಶೇ.244ರಷ್ಟು ಏರಿಕೆಯಾಗಿತ್ತು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications