ಜವಳಿ ಉದ್ಯಮಿ ದೀಪಾಲಿ ಗೋಯೆಂಕಾ ಅವರನ್ನು ಎನ್‌ಡಿಟಿವಿಯ ಸ್ವತಂತ್ರ ನಿರ್ದೇಶಕರಾಗಿ ಮಾರ್ಚ್ 27ರಿಂದ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಇವರೊಂದಿಗೆ ಸೆಬಿಯ ಮಾಜಿ ಅಧ್ಯಕ್ಷ ಯುಕೆ ಸಿನ್ಹಾ ಅವರು ಕೂಡಾ ಆಯ್ಕೆಯಾಗಿದ್ದಾರೆ. ದೀಪಾಲಿ ಗೋಯೆಂಕಾ ಅವರು ವೆಲ್‌ಸ್ಪನ್ ಇಂಡಿಯಾ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ಆಗಿದ್ದಾರೆ.
ವೆಲ್‌ಸ್ಪನ್ ಸಂಸ್ಥೆ ವಿಶ್ವದ ಅತಿದೊಡ್ಡ ಗೃಹ ಜವಳಿ ಕಂಪನಿಗಳಲ್ಲಿ ಒಂದಾಗಿದೆ. 1985ರಲ್ಲಿ ಕಂಪನಿಯ ಪ್ರಾರಂಭವಾಗಿದ್ದು ಈಗ 50 ದೇಶಗಳಲ್ಲಿ ವ್ಯವಹಾರಗಳನ್ನು ಹೊಂದಿದೆ. ದೀಪಾಲಿ ಅವರು ಫೋರ್ಬ್ಸ್ ಏಷ್ಯಾ ಮತ್ತು ಭಾರತದ ಅತ್ಯಂತ "ಪವರ್ ಫುಲ್ ಮಹಿಳೆ" ಎಂದು ಗುರುತಿಸಲ್ಪಟ್ಟಿದ್ದಾರೆ. ಇವರು ಸೈಕಾಲಜಿಯಲ್ಲಿ ಪದವಿ ಪಡೆದಿದ್ದು ಹಾರ್ವರ್ಡ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾರೆ.

ವೆಲ್‌ಸ್ಪನ್ ಗ್ರೂಪ್‌ನ ಚೇರ್ಮೆನ್ ಬಿಕೆ ಗೋಯೆಂಕಾ ಅವರ ಪತ್ನಿಯಾಗಿರುವ ದೀಪಾಲಿ ಅವರು ಕೇವಲ 18 ವರ್ಷದವರಾಗಿದ್ದಾಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರು ಇತ್ತೀಚೆಗೆ ಮುಂಬೈನಲ್ಲಿ 240 ಕೋಟಿ ರೂಪಾಯಿಗೆ ಫ್ಲಾಟ್ ಖರೀದಿಸಿದ್ದಾರೆ. ಈ ಮನೆ ರತನ್ ಟಾಟಾ ಅವರ 150 ಕೋಟಿ ರೂ. ಬೆಳಬಾಳುವ ಮನೆಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ. ದೀಪಾಲಿ ಗೋಯೆಂಕಾ ಅವರ ಲಿಂಕ್ಡ್ ಇನ್ ಖಾತೆಯ ವಿವರ ಪ್ರಕಾರ, ಇವರು ಓರ್ವ ಡೈನಾಮಿಕ್ ನಾಯಕತ್ವದ ವ್ಯಕ್ತಿಯಾಗಿದ್ದಾರೆ.
"ನಾನು ಸಾಂಪ್ರದಾಯಿಕ ಮಾರ್ವಾಡಿ ಕುಟುಂಬದ ಹಿನ್ನೆಲೆಯಿಂದ ಬಂದ ಕಾರಣ ಇಲ್ಲಿ ಚಿಕ್ಕ ವಯಸ್ಸಿನಲ್ಲಿ ವಿವಾಹವಾಗುವುದು ತುಂಬಾ ಸಾಮಾನ್ಯವಾಗಿದೆ," ಎಂದು ತಮ್ಮ ಮದುವೆ ಕುರಿತು ಒಮ್ಮೆ ಹೇಳಿಕೊಂಡಿದ್ದರು. ದೀಪಾಲಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರಿಗೆ 10 ಮತ್ತು 7 ವರ್ಷ ತುಂಬಿದ ಬಳಿಕ ಅವರು ಕೆಲಸಕ್ಕೆ ಸೇರಿದರು. 2003ರಲ್ಲಿ "ಸ್ಪೇಸಸ್" ಬ್ರ್ಯಾಂಡ್ ಬಾತ್ ಸೊಲ್ಯೂಷನ್ಸ್ ಪ್ರೀಮಿಯಂ ಮತ್ತು ಬೆಡ್ ಅನ್ನು ಪ್ರಾರಂಭಿಸಿದರು.
"ಒಬ್ಬ ವ್ಯಕ್ತಿಯಾಗಿ ನಾನು ವಿಕಸನಗೊಳ್ಳಲು ಬಯಸಿದ್ದು ಅದರ ಬಗ್ಗೆ ಸ್ಪಷ್ಟವಾಗಿದ್ದೆ" ಎಂದು ಅವರು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು. ವೆಲ್‌ಸ್ಪನ್ ಇಂಡಿಯಾ ಪ್ರಸ್ತುತ ಅಮೇರಿಕಾಕ್ಕೆ ಹಾಸಿಗೆ, ಸ್ನಾನ ಮತ್ತು ರಗ್ ಉತ್ಪನ್ನಗಳ ಅತಿದೊಡ್ಡ ಪೂರೈಕೆದಾರರಾಗಿದ್ದಾರೆ. ದೀಪಾಲಿ ಅವರು "ಗ್ರಾಹಕ ಮೊದಲು" ಎಂಬ ತತ್ವವನ್ನು ತಮ್ಮ ಕೆಲಸದಲ್ಲಿ ಅನುಸರಿಸುತ್ತಾರೆ. ಅವರ ಪ್ರೋಫೈಲ್ ನಲ್ಲಿ ತಮ್ಮನ್ನು "ಸಿಇಒ ವಿಥ್ ಸೋಲ್" ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ಕಂಪನಿಯೊಳಗೆ ಉತ್ತಮ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಜನೋಪಕಾರಿಯೂ ಆಗಿದ್ದಾರೆ.
ದೀಪಾಲಿ ಗೊಯೆಂಕಾ ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 191ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವುದರಿಂದ ಅವರು ಸೋಶಿಯಮ್ ಮೀಡಿಯಾ ಸ್ಠಾರ್ ಗಿಂತ ಕಡಿಮೆಯಿಲ್ಲ. ಇನ್ನು ವೆಲ್‌ಸ್ಪನ್ ಗ್ರೂಪ್ 25,000 ಉದ್ಯೋಗಿಗಳನ್ನು ಹೊಂದಿದ್ದು ಇದು ಯುಎಸ್ ಡಿ 2.3 ಬಿಲಿಯನ್ ಆದಾಯವನ್ನು ಹೊಂದಿದೆ.


Click it and Unblock the Notifications