ಆ್ಯಪಲ್ ಮಾಜಿ ಕಾರ್ಯನಿರ್ವಾಹಕಿ ಇಪ್ಸಿತಾ ದಾಸ್‌ಗುಪ್ತಾ ಅವರು ಕಳೆದ ತಿಂಗಳಷ್ಟೇ 2,24,811 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯ ಭಾರತದ ವ್ಯವಹಾರಕ್ಕೆ ಹಿರಿಯ ಉಪಾಧ್ಯಕ್ಷ (ಎಸ್‌ವಿಪಿ) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಇದೀಗ ಅವರು ಐಷಾರಾಮಿ ಮನೆ ಖರೀದಿಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು 2023 ರ ಅಕ್ಟೋಬರ್‌ನಲ್ಲಿ ಎಚ್‌ಪಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಇಪ್ಸಿತಾ ದಾಸ್‌ಗುಪ್ತ 22.52 ಕೋಟಿ ರೂಪಾಯಿಗಳ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಪ್ರಾಪ್ ಟೆಕ್ ಸಂಸ್ಥೆ Zapkey.com ನೋಂದಣಿ ದಾಖಲೆಗಳ ಪ್ರಕಾರ, ಇಪ್ಸಿತಾ ಮುಂಬೈನ ವರ್ಲಿ ಪ್ರದೇಶದಲ್ಲಿಬಹುಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

2,964 ಚದರ ಅಡಿ ಫ್ಲಾಟ್ ಅನ್ನು ಕೆ. ರಹೇಜಾ ಕಾರ್ಪ್‌ನ ಗ್ನೆಕ್ಸ್ಟ್ ಹಾರ್ಡ್‌ವೇರ್ ಮತ್ತು ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಈ ಪ್ಲ್ಯಾಟ್ ಖರೀದಿಸಲಾಗಿದೆ. ಫ್ಲಾಟ್ ಖರೀದಿ ಜತೆಗೆ ಇಪ್ಸಿತಾ 100 ಚದರ ಅಡಿ ಬಾಲ್ಕನಿ ಮತ್ತು 3 ಕಾರು ಪಾರ್ಕಿಂಗ್ ಸ್ಲಾಟ್‌ಗಳನ್ನು ಸಹ ಪಡೆಯುತ್ತದೆ. ಅಗ್ರಿಮೆಂಟ್ ಅಕ್ಟೋಬರ್ 26 ರಂದು ರಿಜಿಸ್ಟರ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಎಚ್‌ಪಿ ಕಂಪನಿಯ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಕಾರ್ಯತಂತ್ರ ಮತ್ತು ಹಣಕಾಸಿನ ಕಾರ್ಯಕ್ಷಮತೆಗೆ ಇಪ್ಸಿತಾ ಕಾರಣವಾಗಿದ್ದಾರೆ. 24 ವರ್ಷಗಳ ವೃತ್ತಿಜೀವನ ಅನುಭವ ಹೊಂದಿರುವ ಇಪ್ಸಿತಾ ಜಗತ್ತಿನಾದ್ಯಂತ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.
ವಿಶ್ವದ ಅತ್ಯಂತ ಲಾಭದಾಯಕ ಕಂಪನಿಗಳಲ್ಲಿ ಒಂದಾದ ಆ್ಯಪಲ್ ನಲ್ಲಿ ಆ್ಯಪಲ್ ಸರ್ವೀಸಸ್ ಮಾರ್ಕೆಟಿಂಗ್‌ನ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಅವರು 1997 ರಲ್ಲಿ ಆರ್ಥರ್ ಡಿ. ಲಿಟಲ್‌ನಲ್ಲಿ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.
2002 ರಲ್ಲಿ ಐಟಿ ದೈತ್ಯ ಐಬಿಎಂ ಸೇರ್ಪಡೆಗೊಂಡ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನ. 2011 ರಲ್ಲಿ ಅವರು ಆಪಲ್‌ಗೆ ಸೇರುವ ಮೊದಲು, ಅವರು ಸಿಸ್ಕೋದಲ್ಲಿ ಉದಯೋನ್ಮುಖ ಮಧ್ಯಮ ವರ್ಗದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು.


Click it and Unblock the Notifications