ಬುದ್ದಿವಂತಿಕೆ ಮತ್ತು ಸೌಂದರ್ಯ ಜೊತೆಯಾಗಿ ಇರೋದಿಲ್ಲ ಎಂಬ ಆಡುಮಾತಿದೆ. ಆದರೆ ಇಲ್ಲೊಬ್ಬರು ಇದಕ್ಕೆ ಅಪವಾದದಂತೆ, ಬ್ಯೂಟಿ ವಿತ್ ಬ್ರೈನ್ ಎಂದು ಕರೆಸಿಕೊಳ್ಳುವ ಮಹಿಳೆಯಾಗಿ ಬೆಳೆದುನಿಂತಿದ್ದಾರೆ. ಇವರೇ ಪ್ರಸಿದ್ಧ ಭಾರತೀಯ ಉದ್ಯಮಿ ನತಾಶಾ ಪೂನಾವಾಲಾ.
ಪ್ರಸ್ತುತ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನಾ ಲಸಿಕೆಯನ್ನು ವಿಶ್ವದಾದ್ಯಂತ ಪೂರೈಸಿದ ಅಧಾರ್ ಪೂನಾವಾಲಾ ಅವರ ಪತ್ನಿ. ಬಿಸಿನೆಸ್‌ನಲ್ಲಿ ಹೇಗೆ ಸೂಪರ್‌ವುಮೆನ್ ಆಗಿದ್ದರೋ ಹಾಗೆಯೇ ಫ್ಯಾಷನ್ ಆಂಡ್ ಡಿಸೈನ್‌ನಲ್ಲೂ ಅಷ್ಟೇ ಆಸಕ್ತಿ ಹೊಂದಿರುವವರು.

ನತಾಶಾ ಹೆಚ್ಚಾಗಿ ತಮ್ಮ ಸೊಗಸಾದ ಉಡುಗೆ ಮತ್ತು ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುತ್ತಾರೆ. ಯಾವುದೇ ಬಿಸಿನೆಸ್ ಪಾರ್ಟಿ ಇರಲಿ, ಇತರೆ ಕಾರ್ಯಕ್ರಮಗಳಿರಲ್ಲಿ ಪ್ರತಿಯೊಂದು ಕಡೆಯೂ ಇವರು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಹರ್ಮೆಸ್, ಲೂಯಿ ವಿಟಾನ್, ಗುಸ್ಸಿ ಮತ್ತು ಡಿಯರ್‌ನಂತಹ ಬ್ರ್ಯಾಂಡ್‌ಗಳ ಬೆಲೆಬಾಳುವ ಹ್ಯಾಂಡ್ ಬ್ಯಾಗ್ ಗಳ ಜೊತೆ ಆಗಾಗ್ಗೆ ಫೋಸ್ ಕೊಡುತ್ತಾರೆ.
ನತಾಶಾ ಅವರು ಪುಣೆಯಲ್ಲಿ ಹುಟ್ಟಿ ಬೆಳೆದಿದ್ದು ಅಲ್ಲೇ ಅವರು ಪದವಿಯ ಜೊತೆಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಆರ್ಗನೈಸೇಷನಲ್ ಬಿಹೇವಿಯರ್ (organisational behavior) ಕುರಿತು ಎಂ.ಎಸ್ಸಿ. ಪದವಿ ಪೂರ್ಣಗೊಳಿಸಿದರು. ಸೈರಸ್ ಪೂನಾವಾಲಾ ಕಂಪೆನಿಯಲ್ಲಿ ನತಾಶಾ, ಕ್ರಿಯೇಟಿವ್ ಮತ್ತು ವ್ಯವಹಾರ ವಿಭಾಗವನ್ನು ನಿರ್ವಹಿಸುತ್ತಾರೆ.
ವಾಸ್ತುಶಿಲ್ಪಿ ಬ್ರಿಟಿಷ್ ಕ್ಲೌಡ್ ಬ್ಯಾಟ್ಲಿ 1933ರಲ್ಲಿ ನಿರ್ಮಿಸಿರುವ 750 ಕೋಟಿ ರೂ ಮೌಲ್ಯದ ಮಹಲಾಗಿರುವ "ಲಿಂಕನ್ ಹೌಸ್" ನಲ್ಲಿ ದಂಪತಿಗಳಾದ ನತಾಶಾ ಮತ್ತುಅದಾರ್ ಪೂನಾವಾಲಾ ನೆಲೆಸಿದ್ದಾರೆ. ವಾಂಕನೇರ್‌ನ ಮಹಾರಾಜ ಅಮರಸಿಂಹಜಿ ಬನೇಸಿನ್ಹಜಿ ಮತ್ತು ಅವರ ಮಗ ಪ್ರತಾಪ್‌ಸಿಂಹಜಿ ಝಾಲಾ ಅವರು "ಲಿಂಕನ್ ಹೌಸ್" ನ ಮೂಲ ಮಾಲೀಕರು.
ಬಿಸಿನೆಸ್‌ನಲ್ಲಿ ದಿ ಬೆಸ್ಟ್ ವುಮೆನ್ ಎಂದು ಗುರುತಿಸಿಕೊಂಡಿರೋ ನತಾಶಾ, ಲೈಫ್‌ಸ್ಟೈಲ್‌ನಲ್ಲಿಯೂ ಸಿಕ್ಕಾಪಟ್ಟೆ ಸ್ಟೈಲಿಶ್. ತಮ್ಮ ಸೊಗಸಾದ ಉಡುಗೆ ಮತ್ತು ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಫ್ಯಾಷನ್‌ನಲ್ಲಿ ಅವರು ಹೊಸ ಪ್ರಯತ್ನಗಳನ್ನು ಮಾಡುವುದರಲ್ಲಿ ಸದಾ ಮುಂದು.
ಅಲ್ಲದೇ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ ನತಾಶಾ ಐಷರಾಮಿ ಮನೆ, ದುಬಾರಿ ಕಾರುಗಳು ಮತ್ತು ಡಿಸೈನರ್ ಬ್ಯಾಗ್‌ಗಳೊಂದಿಗೆ ಅದ್ದೂರಿ ಜೀವನ ಶೈಲಿಯನ್ನು ಹೊಂದಿದ್ದಾರೆ. ಮಾತ್ರವಲ್ಲದೇ ಪ್ರಪಂಚದ ಕೆಲವು ಅತ್ಯಮೂಲ್ಯ ವಸ್ತುಗಳ ಮಾಲೀಕರಾಗಿದ್ದಾರೆ. ಪ್ರಸ್ತುತ ಅವರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ, ಇವರ ಒಟ್ಟು ಆಸ್ತಿ ಬರೋಬ್ಬರಿ 1,92,000 ಕೋಟಿ ರೂಪಾಯಿ ಆಗಿದೆ.


Click it and Unblock the Notifications