ಗುಜರಾತ್‌ನ ಭಾವನಗರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ವಾಸಿಸುವ ಕೃಷಿ ಕಾರ್ಖಾನೆಯಿಂದ ಬಂದು ಹಲವು ಮಂದಿಗೆ ಸ್ಫೂರ್ತಿಯಾಗಿರುವ ಉದ್ಯಮಿ ವಲ್ಲಭಭಾಯಿ ಪಟೇಲ್ ಅವರು. ಭಾರತದಲ್ಲಿನ ಮುಂಚೂಣಿಯ ಉದ್ಯಮಿಗಳ ಸಾಲಿನಲ್ಲಿ ಪಟೇಲ್ ಅವರು ಗುರುತಿಸಿಕೊಂಡಿದ್ದು, ತಮ್ಮ ಉದ್ಯಮ ಕ್ಷೇತ್ರದಲ್ಲಿ ಅಷ್ಟೊಂದು ಎತ್ತರಕ್ಕೆ ಬೆಳೆದು ನಿಲ್ಲುವುದಕ್ಕೆ ಅವರ ಸ್ವಂತ ಪರಿಶ್ರಮವೇ ಕಾರಣ.
ಸುಮಾರು 30 ವರ್ಷಗಳ ಅವಧಿಯಲ್ಲಿ ತಮ್ಮ ಕಂಪನಿಯನ್ನು 17000 ಕೋಟಿ ರೂಪಾಯಿ ವಹಿವಾಟಿನ ಬೃಹತ್ ಉದ್ಯಮವಾಗಿ ಬೆಳೆಸಿದ್ದಾರೆ. ಪಟೇಲ್ ಅವರು ತಮ್ಮ ಸಹೋದರರ ಜತೆ ಸೇರಿಕೊಂಡು ನಡೆಸುತ್ತಿರುವ ಕಿರಣ್ ಜೆಮ್ಸ್ ಎಂಬ ಹೆಸರಿನ ಕಂಪನಿಯು ವಜ್ರಗಳನ್ನು ಕತ್ತರಿಸುವ ಹಾಗೂ ಪಾಲಿಶ್ ಮಾಡುವ ವಿಶ್ವದ ಅತಿದೊಡ್ಡ ಕಂಪನಿಯಾಗಿ ಬೆಳೆದು ನಿಂತಿದೆ.

ಎಲ್ಲಿಯವರೆಗೆ ಅಂದರೆ, ಕಿರಣ್ ಜೆಮ್ಸ್ ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿದಾರ ಕಂಪನಿಗಳಲ್ಲಿ ಮುಂಚೂಣಿಯಲ್ಲಿದ್ದು, ಅಷ್ಟೇ ದೊಡ್ಡ ಪ್ರಮಾಣದ ವಜ್ರ ವ್ಯಾಪಾರದ ವಹಿವಾಟನ್ನು ನಡೆಸುತ್ತಿದೆ. ವಲ್ಲಭಭಾಯಿ ಪಟೇಲ್ ಅವರು 500 ಮಂದಿ ಜನರು ವಾಸಿಸುವ ಹಳ್ಳಿಯೊಂದರಲ್ಲಿ ರೈತನ ಮಗನಾಗಿ ಜನಿಸಿದ್ದರು.
ಅವರು ಕೇವಲ ನಾಲ್ಕನೇ ತರಗತಿವರೆಗೆ ಮಾತ್ರ ಓದಿದ್ದಾರೆ. 1971ರಲ್ಲಿ ಪಟೇಲ್ ಅವರು ವಜ್ರ ಕಟ್ಟರ್ ಕೆಲಸದೊಂದಿಗೆ ತಮ್ಮ ವೃತ್ತಿ ಬದುಕು ಪ್ರಾರಂಭಿಸಿದ್ದರು. ಮುಂಗಾರು ಹಂಗಾಮಿನಲ್ಲಿ ಸಾಮಾನ್ಯವಾಗಿ ತಮ್ಮ ಕುಟುಂಬದ ಜತೆ ಸೇರಿಕೊಂಡು ಕೃಷಿಗೆ ನೆರವಾಗುತ್ತಿದ್ದರು. ವಜ್ರದ ವರ್ಕ್‌ಶಾಪ್‌ನಲ್ಲಿ ಸುಮಾರು 7 ವರ್ಷಗಳ ಕಾಲ ಕೆಲಸ ಮಾಡಿದ ನಂತರ 1978ರಲ್ಲಿ ತಮ್ಮದೇ ಆದ ಸ್ವಂತ ವ್ಯಾಪಾರವನ್ನು ಸ್ಥಾಪಿಸಲು ಪ್ರಯತ್ನಿಸಿದ್ದರು. ಆದರೆ ಅದು ಯಶಸ್ವಿಯಾಗಿರಲಿಲ್ಲ.
ತಮ್ಮ ತಂದೆಯು ನೀಡಿದ್ದ ಸ್ವಲ್ಪ ಪ್ರಮಾಣದ ಹಣದೊಂದಿಗೆ ಪಟೇಲ್ ಅವರು ಭಾವನಗರದಿಂದ ಮುಂಬೈಗೆ ಪ್ರಯಾಣ ಬೆಳೆದಿದ್ದರು. ಅಲ್ಲಿ ಅವರು ಬೊರಿವೆಲಿಯಲ್ಲಿ ವಾಸವಿದ್ದು, 1985ರಲ್ಲಿ ಕಿರಣ್ ಜೆಮ್ಸ್ ಅನ್ನು ಪ್ರಾರಂಭಿಸಿದ್ದರು. ಕೆಲವು ವರ್ಷಗಳ ಬಳಿಕ ತಮ್ಮ ಸಹೋದರ ಮಾವ್ಜಭಾಯಿ ಪಟೇಲ್ ಅವರು ಜತೆ ಸೇರಿಕೊಂಡಿದ್ದು, ಕಂಪನಿಯನ್ನು ಯಶಸ್ವಿನ ಪಥದಲ್ಲಿ ಮುನ್ನಡೆಸುವುದಕ್ಕೆ ನೆರವಾಗಿದ್ದರು. ವಾಣಿಜ್ಯ ಪದವೀಧರರಾಗಿರುವ ಮಾವ್ಜಿಭಾಯಿ ಅವರು ಈಗ ಕಂಪನಿಯಲ್ಲಿ ಎಂಡಿ ಆಗಿದ್ದಾರೆ.
ಈ ರೀತಿ ಸಣ್ಣ ಪ್ರಮಾಣದ ವಜ್ರದ ವ್ಯಾಪಾರದೊಂದಿಗೆ ಪ್ರಾರಂಭವಾದ ಕಿರಣ್ ಜೆಮ್ಸ್‌ನ ಸ್ಥಾಪಕರು ಹಾಗೂ ಅಧ್ಯಕ್ಷರಾಗಿರುವ ವಲ್ಳಭಭಾಯಿ ಪಟೇಲ್ ಅವರು ಕಂಪನಿಯನ್ನು ದೇಶದ ಅತಿದೊಡ್ಡ ಹಾಗೂ ಮುಂಚೂಣಿಯ ಡೈಮಂಡ್ ಕಂಪನಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಗತ್ತಿನ ಮುಂಚೂಣಿಯ ಡೈಮಂಡ್ ಬ್ರಾಂಡ್ ಆಗಿರುವ ಡೀಬೀರ್ಸ್‌ನಲ್ಲಿಯೂ ಹೂಡಿಕೆ ಹೊಂದಿದ್ದಾರೆ. ಕೆಲಸ ಮಾಡುವ ಉದ್ಯೋಗಿಗಳು ಹಾಗೂ ತೆರಿಗೆ ಪಾವತಿ ಲೆಕ್ಕಾಚಾರದಲ್ಲಿಯೂ ಕಿರಣ್ ಜೆಮ್ಸ್ ಭಾರತದ ಅತಿದೊಡ್ಡ ಕಂಪನಿಯಾಗಿದೆ. ಅಷ್ಟೇಅಲ್ಲ; ಸೂರತ್ ಡೈಮಂಡ್ ಬೌರ್ಸ್‌ನ ಹುಟ್ಟು ಹಾಕುವಲ್ಲಿಯೂ ಪಟೇಲ್ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಸುಮಾರು 30 ವರ್ಷಗಳ ಕಾಲ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ವಜ್ರದ ಸಾಮ್ರಾಜ್ಯವನ್ನೇ ವಿಸ್ತರಿಸಿಕೊಂಡಿದ್ದ ವಲ್ಲಭಭಾಯಿ ಪಟೇಲ್ ಅವರು ತಮ್ಮ 17000 ಕೋಟಿ ರೂ. ವ್ಯಾಪಾರವನ್ನು ಸೂರತ್‌ಗೆ ಶಿಫ್ಟ್ ಮಾಡಿದ್ದಾರೆ. ಈ ನಡುವೆ ಪಟೇಲ್ ಅವರು ತಮ್ಮ 2500 ಉದ್ಯೋಗಿಗಳಿಗಾಗಿ 1200 ಅಪಾರ್ಟ್‌ಮೆಂಟ್‌ಗಳ ಪ್ರತ್ಯೇಕ ಟೌನ್‌ಶಿಫ್ ಅನ್ನು ನಿರ್ಮಿಸಿದ್ದಾರೆ.
ಇನ್ನೊಂದೆಡೆ, ಪಟೇಲ್ ಅವರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಕುಟುಂಬವು ಸೂರತ್‌ನಲ್ಲಿ 11000 ಮಕ್ಕಳು ಇರುವ ಶಾಲೆಯನ್ನು ಭಾವನಾನಗರದಲ್ಲಿ ನಡೆಸುತ್ತಿದ್ದು, ಸೂರತ್‌ನಲ್ಲಿ ಆಸ್ಪತ್ರೆಯೊಂದನ್ನು ಕೂಡ ಮುನ್ನಡೆಸುತ್ತಿದ್ದಾರೆ.


Click it and Unblock the Notifications