ನಾವು ಸಾಮಾನ್ಯವಾಗಿ ಭಾರತದ ಬಿಲಿಯನೇರ್‌ಗಳ ವಿಚಾರವನ್ನು ಮಾತನಾಡುವಾಗ ನಮ್ಮ ಮುಂದೆ ಬರುವುದು ಭಾರತದ ಟಾಪ್ ಉದ್ಯಮಿಗಳ ಹೆಸರು ಆಗಿದೆ. ಬಿಲಿಯನೇರ್‌ಗಳ ವಿಚಾರಕ್ಕೆ ಬಂದಾಗ ಮುಕೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ, ಶಿವ ನಾಡರ್, ಲಕ್ಷ್ಮೀ ಮಿತ್ತಲ್ ಹೆಸರುಗಳು ನಮ್ಮ ತಲೆಯಲ್ಲಿ ಬರುತ್ತದೆ. ಆದರೆ ಸ್ವತಂತ್ರ ಭಾರತದ ಮೊದಲ ಬಿಲಿಯನೇರ್ ಯಾರು ಎಂಬುವುದು ನಿಮಗೆ ತಿಳಿದಿದೆಯೇ?
ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾದ ಬಳಿಕದ ಶ್ರೀಮಂತ ಭಾರತೀಯರ ವಿಷಯಕ್ಕೆ ಬಂದಾಗ ಎಂದಿಗೂ ನಮ್ಮ ಮುಂದೆ ಬರುವ ಹೆಸರು ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಯದ್ದಾಗಿದೆ. ಬಿಲಿಯನೇರ್‌ಗಳು ಎಂದರೆ ಟಾಟಾ, ಬಿರ್ಲಾ, ಅದಾನಿ, ಅಂಬಾನಿ ಎಂದೇ ಅಂದುಕೊಳ್ಳುವವರು ಇದ್ದಾರೆ. ಆದರೆ ನಮ್ಮಲ್ಲಿ ಹಲವಾರು ಮಂದಿಗೆ ಸ್ವತಂತ್ರ ಭಾರತದ ಮೊದಲ ಬಿಲಿಯನೇರ್ ಬಗ್ಗೆ ತಿಳಿದಿಲ್ಲ.

ಸ್ವತಂತ್ರ ಭಾರತದ ಮೊದಲ ಬಿಲಿಯನೇರ್
ಮೀರ್ ಒಸ್ಮಾನ್ ಅಲಿ ಖಾನ್ ಸ್ವತಂತ್ರ ಭಾರತದ ಮೊದಲ ಬಿಲಿಯನೇರ್ ಆಗಿದ್ದಾರೆ. ಏಪ್ರಿಲ್ 1886 ರಲ್ಲಿ ಜನಿಸಿದ ಮೀರ್ ಒಸ್ಮಾನ್ ಅಲಿ ಖಾನ್ ಹೈದರಾಬಾದ್ ಪ್ರಾಂತ್ಯದ ರಾಜಪ್ರಭುತ್ವದ ಕೊನೆಯ ನಿಜಾಮ್ ಆಗಿದ್ದರು. ಆ ಸಮಯದಲ್ಲಿ ಇದು ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿನ ಅತಿದೊಡ್ಡ ರಾಜಪ್ರಭುತ್ವದ ರಾಜ್ಯವಾಗಿತ್ತು.
1911 ರಿಂದ 1948 ರವರೆಗೆ ಅಂದರೆ ಸ್ವತಂತ್ರ ಭಾರತದ ಬಳಿಕ ರಾಜ್ಯವು ಭಾರತದ ದೇಶಕ್ಕೆ ಸೇರ್ಪಡೆಯಾಗುವವರೆಗೆ ಮೀರ್ ಒಸ್ಮಾನ್ ಅಲಿ ಖಾನ್ ಹೈದರಾಬಾದ್ ಪ್ರಾಂತ್ಯದ ರಾಜಪ್ರಭುತ್ವದ ಆಡಳಿತವನ್ನು ನಡೆಸಿದ್ದಾರೆ. ಮೀರ್ ಒಸ್ಮಾನ್ ಅಲಿ ಖಾನ್ ಬ್ರಿಟಿಷ್ ನಿಷ್ಠರಾಗಿದ್ದರು. ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಸೇರಿ ಅಲ್ಲಿ ಸ್ವತಂತ್ರ ರಾಜ್ಯವನ್ನು ಆಳುವ ಇರಾದೆಯನ್ನು ಒಸ್ಮಾನ್ ಹೊಂದಿದ್ದರು.
ಸ್ವತಂತ್ರ ಭಾರತದ ಸಂದರ್ಭದಲ್ಲಿ ಮೀರ್ ಒಸ್ಮಾನ್ ಅಲಿ ಖಾನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದರು. 1940 ರ ದಶಕದ ಆರಂಭದಲ್ಲಿ ಮೀರ್ ಒಸ್ಮಾನ್ ಅಲಿ ಖಾನ್ ಸಂಪತ್ತು ಸುಮಾರು 2 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿತ್ತು. ಇದು 2023 ರಲ್ಲಿ ಸುಮಾರು 35.8 ಬಿಲಿಯನ್ ಡಾಲರ್ ಆಗಿದೆ.
ಖಾಸಗಿ ವಿಮಾನವನ್ನು ಕೂಡಾ ಹೊಂದಿದ್ದ ಮೀರ್ ಒಸ್ಮಾನ್ ಅಲಿ ಖಾನ್
ಆಧುನಿಕ ಹೈದರಾಬಾದ್‌ನ ವಾಸ್ತುಶಿಲ್ಪಿ ಎಂದು ಕರೆಯಲ್ಪಡುವ ನಿಜಾಮರು ಭಾರತದ ಮೊದಲ ವಿಮಾನ ನಿಲ್ದಾಣ ಮತ್ತು ವಿಮಾನಯಾನವನ್ನು ಆರಂಭ ಮಾಡಿದ್ದರು. ನಿಜಾಮರ ಅಧಿಕಾರಾವಧಿಯಲ್ಲಿ, ಹೈದರಾಬಾದ್ ರಸ್ತೆಗಳು ಮತ್ತು ರೈಲ್ವೆಗಳನ್ನು ಅಭಿವೃದ್ಧಿಪಡಿಸಲಾಗಿದೆ, ವಿದ್ಯುತ್ ಅನ್ನು ಕೂಡಾ ಈ ಸಂದರ್ಭದಲ್ಲೇ ಆರಂಭ ಮಾಡಲಾಗಿದೆ. ಹೈದರಾಬಾದ್ ಹೈಕೋರ್ಟ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಸೇರಿದಂತೆ ಹಲವಾರು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿಯೂ ನಿಜಾಮನಿಗೆ ಸಲ್ಲುತ್ತದೆ.
ಮೀರ್ ಒಸ್ಮಾನ್ ಅಲಿ ಖಾನ್ 1937 ರಲ್ಲಿ ಹೆಚ್ಚು ಹೆಸರುವಾಗಿದ್ದ ಸಂದರ್ಭದಲ್ಲಿ ಟೈಮ್ ಮ್ಯಾಗಜೀನ್‌ನ ಮುಖಪುಟದಲ್ಲಿಯೂ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ ನಿಜಾಮ ರಾಜ ಮೀರ್ ಒಸ್ಮಾನ್ ಅಲಿ ಖಾನ್ ಎಷ್ಟು ಶ್ರೀಮಂತನಾಗಿದ್ದರೆಂದರೆ 185-ಕ್ಯಾರೆಟ್ ವಜ್ರವಾದ ಜಾಕೋಬ್ ಡೈಮಂಡ್ ಅನ್ನು ಹೊಂದಿದ್ದರು.
ರಾಣಿ ಎಲಿಜಬೆತ್ II ರ ವಿವಾಹದ ಸಂದರ್ಭದಲ್ಲಿ, ಮೀರ್ ಒಸ್ಮಾನ್ ಅಲಿ ಖಾನ್ ರಾಣಿ ಎಲಿಜಬೆತ್ II ಗೆ ವಜ್ರದ ನೆಕ್ಲೇಸ್ ಮತ್ತು ಬ್ರೂಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ರಾಣಿಯೂ ನಿಧನ ಹೊಂದುವವರೆಗೂ ಧರಿಸಿದ್ದರು. ಪ್ರಸ್ತುತ ದೇಶದ ಅತೀ ಶ್ರೀಮಂತ ವ್ಯಕ್ತಿ ಅಂಬಾನಿ ಸಂಸ್ಥೆಗಳ ಮುಕೇಶ್ ಅಂಬಾನಿಯಾಗಿದ್ದಾರೆ. ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಆಗಿದ್ದಾರೆ.


Click it and Unblock the Notifications