ಮುಕೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ ಹೀಗೆ ಉದ್ಯಮಿಗಳಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳವರೆಗೆ ಅನೇಕರು ಹಲವು ಕಾರುಗಳ ಸಂಗ್ರಹವನ್ನೇ ಹೊಂದಿದ್ದಾರೆ. ಇವರೆಲ್ಲಾ ಆಗಾಗೆ ತಮ್ಮ ಐಷಾರಾಮಿ ಕಾರುಗಳ ವಿಚಾರದಿಂದಲೇ ಸುದ್ದಿಯಾಗುತ್ತಿರುತ್ತಾರೆ.
ಇದೀಗ ಒಬ್ಬರು ಭಾರತದಲ್ಲಿ 2.55 ಕೋಟಿ ರೂಪಾಯಿ (ಎಕ್ಸ್ ಶೋ ರೂಂ) ಮೌಲ್ಯದ ಇವಿ ಕಾರು ಲೋಟಸ್ ಎಲೆಟ್ರೆ ಎಸ್‌ಯುವಿಯನ್ನು ಖರೀದಿಸಿ ಸುದ್ದಿಯಾಗಿದ್ದಾರೆ. ಅವರು ಯಾರು ಗೊತ್ತೆ? ಅವರು ಹೈದರಾಬಾದ್ ನಿವಾಸಿ ಹೆಸರು ಹರ್ಷಿಕಾ ರಾವ್!, ಇವರ ಬಗ್ಗೆ, ಈ ದುಬಾರಿ ಎಸ್‌ಯುವಿ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಎಸ್‌ಯುವಿಯ ಮೊದಲ ಹೆಮ್ಮೆಯ ಮಾಲೀಕರು
ಕಳೆದ ವರ್ಷವಷ್ಟೇ, ಐಷಾರಾಮಿ ಸ್ಪೋರ್ಟ್ಸ್ ಕಾರುಗಳು ಮತ್ತು ಎಲೆಕ್ಟ್ರಿಕ್ ಲೈಫ್ ಸ್ಟೈಲ್ ವಾಹನಗಳ ತಯಾರಕ ಬ್ರಿಟಿಷ್ ಬಹುರಾಷ್ಟ್ರೀಯ ವಾಹನ ತಯಾರಕ ಲೋಟಸ್ ಗ್ರೂಪ್ ಭಾರತದಲ್ಲಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದೆ. ಜನಪ್ರಿಯ ಐಷಾರಾಮಿ ಮತ್ತು ಎಲೆಕ್ಟ್ರಿಕ್ ಕಾರು ತಯಾರಕರು ತಮ್ಮ ಲೋಟಸ್ ಎಲೆಟ್ರೆ ಇ-ಎಸ್‌ಯುವಿ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದರು. ಹರ್ಷಿಕಾ ರಾವ್ ಅವರು ದೇಶದ ಎಲೆಕ್ಟ್ರಿಕ್ ದೈತ್ಯವಾಗಿ ಕಂಡುಬಂದ ಎಸ್‌ಯುವಿಯ ಮೊದಲ ಹೆಮ್ಮೆಯ ಮಾಲೀಕರಾದರು.
ಕಂಪನಿಯು ಎಲೆಟ್ರೆ, ಎಲೆಟ್ರೆ ಎಸ್ ಮತ್ತು ಎಲೆಟ್ರೆ ಆರ್ ಹೀಗೆ ಮೂರು ವೆರಿಯೆಂಟ್‌ಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದು ಹರ್ಷಿಕಾ ರಾವ್ ಐಷಾರಾಮಿ ಗಾಢ ಕೆಂಪು ಬಣ್ಣದ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಕಾರ್ ಕ್ರೇಝಿ ಇಂಡಿಯಾ ಎಂಬ ಇನ್‌ಸ್ಟಾಗ್ರಾಮ್ ಪುಟವೂ ಹಂಚಿಕೊಂಡಿದ್ದು ಇದರಲ್ಲಿ ಕಾರು ಮಾಲೀಕರನ್ನು ಟ್ಯಾಗ್ ಮಾಡಿದೆ.
ಎಲೆಟ್ರೆ ಎಸ್‌ಯುವಿ ಭಾರತದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದುಬಾರಿ ಎಲೆಕ್ಟ್ರಿಕ್ ಎಸ್‌ಯುವಿ ಎಂದು ವರದಿಯಾಗಿದ್ದು ಈ ಕಾರಿನ ಮುಂಭಾಗದ ಪ್ರೊಫೈಲ್ ಫೆರಾರಿಯಿಂದ ಪ್ರೇರಿತವಾಗಿರುವಂತೆ ಕಂಡುಬಂದಿದೆ. ಯಾಕೆಂದರೆ ಇದು ಒಂದೇ ರೀತಿಯ ವಿನ್ಯಾಸದ ಹೆಡ್‌ಲೈಟ್ ಸೆಟಪ್ ಇದರಲ್ಲೂ ಇದೆ.
ಎಲೆಟ್ರೆ ಮತ್ತು ಎಲೆಟ್ರೆ ಎಸ್‌ಗಳು 603hp ಡ್ಯುಯಲ್-ಮೋಟಾರ್ ವ್ಯವಸ್ಥೆಯನ್ನು ಹೊಂದಿದ್ದು, 600km ವೇಗ ಹೊಂದಿದೆ. ಎಲೆಟ್ರೆ ಆರ್ 905hp, ಡ್ಯುಯಲ್-ಮೋಟರ್ ಸೆಟಪ್ ಜೊತೆಗೆ 2-ಸ್ಪೀಡ್ ಟ್ರಾನ್ಸ್ಮಿಷನ್ ಮತ್ತು ಮಾಕ್ಸಿಮಮ್ ರೇಂಜ್ 490km ವೇಗ ಒಳಗೊಂಡಿದೆ. ಮೂರು ವೆರಿಯೆಂಟ್ ಗಳಲ್ಲಿ 112kWh ಬ್ಯಾಟರಿ ಇರಲಿದ್ದು ಇದು ರ್ಯಾಪಿಡ್ ಚಾರ್ಜರ್ ಬಳಸಿಕೊಂಡು 20 ನಿಮಿಷಗಳಲ್ಲಿ 10-80 ಶೇಕಡದವರೆಗೆ ಚಾರ್ಜ್ ಮಾಡಬಹುದು. ಇದರಲ್ಲಿ 22kWh ಎಸಿ ಸ್ಟ್ರಾಂಡರ್ಡ್ ಚಾರ್ಜರ್ ದೊರಕುತ್ತದೆ


Click it and Unblock the Notifications