ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಏಕೆಂದರೆ ಅವರು ಪ್ರತಿನಿಧಿಸುವ ಆರ್‌ಸಿಬಿ ತಂಡದ ನಿವ್ವಳ ಆಸ್ತಿ ಮೌಲ್ಯವು 1,000 ಕೋಟಿ ರೂಪಾಯಿ ದಾಟಿದೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ಸಕ್ರಿಯ ಕ್ರಿಕೆಟಿಗರಾಗಿದ್ದಾರೆ.
ಬಿಸಿಸಿಐ ಒಪ್ಪಂದದಲ್ಲಿ ವಿರಾಟ್ ಕೊಹ್ಲಿ ಅವರು ಎ-ಪ್ಲಸ್ ಗ್ರೇಡ್ ಹೊಂದಿದ್ದು, ವಾರ್ಷಿಕ 7 ಕೋಟಿ ರೂಪಾಯಿ ಜತೆಗೆ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ, ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ಮತ್ತು ಟಿ 20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಇನ್ನೊಂದೆಡೆ ಕೊಹ್ಲಿ ಅವರು ತಮ್ಮ ಐಪಿಎಲ್ ಪ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ವಾರ್ಷಿಕವಾಗಿ 15 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ಸಚಿನ್ ತೆಂಡೂಲ್ಕರ್ ಅವರ ನಿವ್ವಳ ಮೌಲ್ಯವು 1,250 ಕೋಟಿ ರೂಪಾಯಿ ಆಗಿದ್ದರೆ, ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ನಿವ್ವಳ ಮೌಲ್ಯವು ಸುಮಾರು 1,040 ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ ಇದುವರೆಗೆ ಕ್ರಿಕೆಟ್ ಆಡಿರುವ ಅತ್ಯಂತ ಶ್ರೀಮಂತ ಭಾರತೀಯ ರಾಜಮನೆತನದ ಸಮರ್ಜಿತ್ ಸಿಂಹ ರಂಜಿತ್ ಸಿಂಗ್ ಗಾಯಕ್ವಾಡ್ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಸಮರ್ಜಿತ್ ಸಿಂಹ ರಂಜಿತ್ ಸಿಂಗ್ ಗಾಯಕ್ವಾಡ್
1967ರ ಏಪ್ರಿಲ್ 25 ರಂದು ಜನಿಸಿದ ಸಮರ್ಜಿತ್ ಸಿಂಹ ಗಾಯಕ್ವಾಡ್ ಗುಜರಾತ್‌ನ ಬರೋಡಾದ ಹಿಂದಿನ ರಾಜ. ಜತೆಗೆ ಅವರು ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದು, ರಣಜಿ ಟ್ರೋಪಿಯಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಅವರು ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.
ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಮರ್ಜಿತ್ ಸಿಂಹ ಗಾಯಕ್ವಾಡ್ ಅವರು ರಂಜಿತ್ ಸಿಂಹ ಪ್ರತಾಪ್ ಸಿಂಹ ಗಾಯಕ್ವಾಡ್ ಹಾಗೂ ಶುಭಾಂಗಿ ನಿರಾಜೆ ಅವರ ಏಕೈಕ ಪುತ್ರ. 2012ರ ಮೇ ನಲ್ಲಿ ಅವರ ತಂದೆಯ ಮರಣದ ನಂತರ ಸಮರ್ಜಿತ್‌ಸಿಂಹ ಗಾಯಕ್ವಾಡ್ ಅವರು ಮಹರಾಜನ ಪಟ್ಟ ಅಲಂಕರಿಸಿದ್ದರು.
ಗಮನಾರ್ಹವೆಂದರೆ, ಸಮರ್ಜಿತ್ ಸಿಂಹ ಗಾಯಕ್ವಾಡ್ ಅವರು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾದ ಲಕ್ಷ್ಮಿ ವಿಲಾಸ್ ಅರಮನೆಯ ಮಾಲೀಕರಾಗಿದ್ದಾರೆ. ಇದು ಬಕಿಂಗ್ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ವಾಂಕನೇರ್ ರಾಜ್ಯದ ರಾಜಮನೆತನದವರಾದ ರಾಧಿಕಾರಾಜೆ ಅವರನ್ನು ಸಮರ್ಜಿತ್ ಸಿಂಹ ಗಾಯಕ್ವಾಡ್ ವಿವಾಹವಾಗಿದ್ದಾರೆ. Housing.com ಪ್ರಕಾರ, ಲಕ್ಷ್ಮಿ ವಿಲಾಸ್ ಅರಮನೆಯು 3,04,92,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಆದರೆ ಮುಕೇಶ್ ಅಂಬಾನಿಯ ಆಂಟಿಲಿಯಾ 48,7800 ಚದರ ಅಡಿ ಪ್ರದೇಶದಲ್ಲಿ ಇದೆ. ಲಕ್ಷ್ಮಿ ವಿಲಾಸ್ ಅರಮನೆಯು 170 ಕೊಠಡಿಗಳನ್ನು ಹೊಂದಿದೆ. ಲಂಡನ್‌ನ ಬಕಿಂಗ್ಹ್ಯಾಮ್ ಅರಮನೆಯು 828,821 ಚದರ ಅಡಿಗಳನ್ನು ಒಳಗೊಂಡಿದೆ. ಲಕ್ಷ್ಮಿ ವಿಲಾಸ್ ಅರಮನೆಯನ್ನು ಮಹಾರಾಜ ಸಯಾಜಿರಾವ್ ಗಾಯಕ್ವಾಡ್ III ಅವರು 1890ರಲ್ಲಿ ನಿರ್ಮಿಸಿದ್ದಾರೆ. ಐಷಾರಾಮಿ ಅರಮನೆಯು ಗಾಲ್ಫ್ ಕೋರ್ಸ್ ಅನ್ನು ಕೂಡ ಹೊಂದಿದೆ.


Click it and Unblock the Notifications