ತನ್ನ 16ನೇ ವಯಸ್ಸಿನಲ್ಲಿಯೇ ಅರ್ಜುನ್ ಪ್ರಶಸ್ತಿ ಶೂಟರ್ ರಾಜ್ಯಶ್ರೀ ಕುಮಾರಿ ಅವರು ಈಗ ಸಿಇಒ ಆಗಿದ್ದು, ಹೆರಿಟೇಜ್ ಹೋಟೆಲ್ ಸೇರಿದಂತೆ ಭಾರತದ ಅತ್ಯಂತ ಐಷಾರಾಮಿ ಅರಮನೆಗೆ ಒಡತಿಯಾಗಿದ್ದಾರೆ. ಬಿಕಾನೇರ್‌ನ ಲಾಲ್‌ಗಢ್ ಅರಮನೆಯ ಮಾಲೀಕರಾಗಿರುವ ಅವರು ಬಿಕಾನೇರ್‌ನ ರಾಜಮನೆತನದ ಕುಡಿ.
ರಾಜಸ್ಥಾನಿ ರಾಜಕುಮಾರಿ ರಾಜ್ಯಶ್ರೀ ಅವರು ಮಹಾರಾಜ ಡಾ. ಕಾರ್ನಿ ಸಿಂಗ್ ಹಾಗೂ ಮಹಾರಾಣಿ ಸುಶೀಲಾ ಕುಮಾರಿ ಅವರ ಪುತ್ರಿ. ಕಾರ್ನಿ ಸಿಂಗ್ ಅವರು ಸುಧೀರ್ಘ ಅವಧಿಗೆ ಅಂದರೆ 1952ರಿಂದ 1977ರವರೆಗೆ ಲೋಕಸಭೆ ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು.

ರಾಜ್ಯಶ್ರೀ ಅವರು 1953ರ ಜೂನ್ 4ರಂದು ಮುಂಬೈನಲ್ಲಿ ಜನಿಸಿದ್ದು, ಭಾರತೀಯ ರಾಜಮನೆತನದ ಪೈಕಿ ಅರಮನೆಯನ್ನು ಹೊಂದಿರುವ ಕೆಲವೇ ವ್ಯಕ್ತಿಗಳ ಪೈಕಿ ಒಬ್ಬರು. ಲಲ್‌ಗಢ ಅರಮನೆಯನ್ನು 1902 ಹಾಗೂ 1926ರ ನಡುವೆ ರಾಜ್ಯಶ್ರೀ ಅವರ ಮುತ್ತಜ್ಜ ಬಿಕನೇರ್‌ನ ಮಹಾರಾಜ ಗಂಗ ಸಿಂಗ್ ಅವರು ನಿರ್ಮಿಸಿದ್ದಾರೆ.
ನಗರದಿಂದ ಕೇವಲ 3 ಕಿಮೀ. ದೂರದಲ್ಲಿರುವ ಈ ಸುಂದರ ಭವ್ಯ ಅರಮನೆಯನ್ನು ಕೆಂಪು ಕಲ್ಲು, ಮಾರ್ಬಲ್ ಫ್ಲೋರ್ ಹಾಗೂ ವಿಶಾಲ ಡೈನಿಂಗ್ ಹಾಲ್ ಅನ್ನು ಒಳಗೊಂಡಿದೆ. ಜತೆಗೆ ಜಗತ್ತಿನ 4ನೇ ಅತಿದೊಡ್ಡ ಖಾಸಗಿ ಲೈಬ್ರರಿ ಮತ್ತು ಒಳಾಂಗಣ ಸ್ವಿಮ್ಮಿಂಗ್ ಪೂಲ್ ಅನ್ನು ಹೊಂದಿರುವ ಅರಮನೆ ಇದಾಗಿದ್ದು, ಬ್ರಿಟೀಷ್ ವಾಸ್ತುಶಿಲ್ಪಿಯೊಬ್ಬರು ಇದನ್ನು ವಿನ್ಯಾಸಗೊಳಿಸಿದ್ದರು.
ರಾಜ್ಯಶ್ರೀ ಅವರು ಈಗ ಇದನ್ನು ಪಾರಂಪರಿಕ ಜಾಗವು ಈಗ ಹೋಟೆಲ್ ಹಾಗೂ ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸಿದ್ದಾರೆ. ಸೋನಂ ಕಪೂರ್- ಫವಾದ್ ಖಾನ್ ಸೂಪರ್ ಹಿಟ್ ಚಿತ್ರ ಖೂಬ್‌ಸೂರತ್ ಚಿತ್ರದ ಚಿತ್ರೀಕರಣವನ್ನು ಇದೇ ಅರಮನೆಯಲ್ಲಿ ಮಾಡಲಾಗಿದೆ.
ಮಾಜಿ ಅಂತಾರಾಷ್ಟ್ರೀಯ ಶೂಟರ್ ಹಾಗೂ ರಾಣಿಯಾಗಿರುವ ರಾಜ್ಯಶ್ರೀಗೆ ರೋಲೆಕ್ಸ್ ವಾಚ್‌ಗಳು, ಹರ್ಮ್ಸ್, ಟಾಮ್ ಫೋರ್ಡ್ ಸುಗಂಧ ದ್ರವ್ಯಗಳನ್ನು ಇಷ್ಟಪಡುತ್ತಾರೆ. ಇವರು ಹಲವಾರು ಟ್ರಸ್ಟ್‌ಗಳನ್ನು ನಡೆಸುತ್ತಿದ್ದು, ಜತೆಗೆ ಪಾರಂಪರಿಕ ತಾಣಗಳ ಸಂರಕ್ಷಣೆ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಾಜಕುಮಾರಿಯ ಜೀವನ ಕೂಡ ಯಾವುದೇ ವರ್ಕಿಂಗ್ ವುಮೆನ್‌ಗಿಂತ ಭಿನ್ನವಾಗಿರುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ರಾಜ್ಯಶ್ರೀ ಹೇಳಿದ್ದರು. ಶೂಟರ್ ಕೂಡ ಆಗಿರುವ ರಾಜ್ಯಶ್ರೀ ಅವರು ಯು-12 ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
ಜತೆಗೆ ತಮ್ಮ 16ನೇ ವಯಸ್ಸಿನಲ್ಲಿಯೇ ಅರ್ಜುನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಲ್ಲದೆ ಅವರು ನ್ಯಾಷನಲ್ ಏರ್ ರೈಫಲ್ ಚಾಂಪಿಯನ್‌ಶಿಪ್, 16ನೇ ಶೂಟಿಂಗ್ ಚಾಂಪಿಯನ್‌ಶಿಪ್ ಹಾಗೂ ಕೊರಿಯಾದಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಫ್ ಅನ್ನು ಗೆದ್ದುಕೊಂಡಿದ್ದರು.
ಅವರು ದಿಲ್ಲಿಯ ಜೀಸಸ್ ಅಂಡ್ ಮೇರಿ ಕಾನ್ವೆಂಟ್‌ನಲ್ಲಿ ಶಿಕ್ಷಣವನ್ನು ಪಡೆದಿದ್ದು ಬಳಿಕ ದಿಲ್ಲಿಯ ಶ್ರೀರಾಮ ಮಹಿಳಾ ಕಾಲೇಜಿನಲ್ಲಿ ಓದು ಮುಂದುವರಿಸಿದ್ದರು. ರಾಜ್ಯಶ್ರೀ ಅವರು ಲೇಖಕಿ ಕೂಡ ಆಗಿದ್ದಾರೆ. ಅವರಿಗೆ ಅನುಪಮಾ ಕುಮಾರಿ ಮತ್ತು ಸಜ್ಜನ್ ಸಿನ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಈ ನಡುವೆ ರಾಜ್ಯಶ್ರೀ ಅವರು ತಮ್ಮ ಅಜ್ಜ ಮಹಾರಾಜ ಸಾದುಲ್ ಸಿಂಗ್ ಹಾಗೂ ಮತ್ತಜ್ಜ ಮಹಾರಾಜ ಗಂಗ ಸಿಂಗ್ ಅವರ ಕಾಲದ ಅಪರೂಪದ ಕಲಾಕೃತಿಗಳ ಸಂಗ್ರಹವನ್ನು ಹೊಂದಿದ್ದಾರೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications