ಯೂಟ್ಯೂಬ್ ನ ಹೆಚ್ಚಿನ ವೀಕ್ಷಕರಿಗೆ ಚಿರಪರಿಚಿತವಾದ ಚಾನೆಲ್ ಟೆಕ್ನಿಕಲ್ ಗುರೂಜಿ. ಹಿಂದಿಯಲ್ಲಿ ತಮ್ಮದೇ ಶೈಲಿಯಲ್ಲಿ, ರಸವತ್ತಾಗಿ ಗ್ಯಾಜೆಟ್‌ಗಳ ರಿವ್ಯೂ ಮತ್ತು ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಮಾಹಿತಿ ನೀಡುವ ಗೌರವ್ ಚೌಧರಿ ತಮ್ಮ ಚಾನೆಲ್ "ಟೆಕ್ನಿಕಲ್ ಗುರೂಜಿ" ಹೆಸರಿನಲ್ಲಿಯೇ ಪ್ರಸಿದ್ದರಾಗಿದ್ದಾರೆ. ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿರುವ ಗೌರವ್ ಚೌಧರಿ ಯಾನೆ ಟೆಕ್ನಿಕಲ್ ಗುರೂಜಿ ಮೂಲತಃ ಭಾರತದವರು.
ಗೌರವ್ ಚೌಧರಿ 1991 ರಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಜನಿಸಿದರು. ಕೇಂದ್ರೀಯ ವಿದ್ಯಾಲಯ ವಿಭ್ಯಾಸದ ಬಳಿಕ ದುಬೈ ಗೆ ತೆರಳಿ, 2012 ರಲ್ಲಿ, ಗೌರವ್ ಚೌಧರಿ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಪಿಲಾನಿ-ದುಬೈ ಕ್ಯಾಂಪಸ್ ಮೈಕ್ರೋಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದರು. ಗೌರವ್ ಚೌಧರಿ ಅವರು ಭಾರತದ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟೆಕ್ ಯೂಟ್ಯೂಬರ್ ಆಗಿದ್ದಾರೆ. ಟೆಕ್ನಿಕಲ್ ಗುರೂಜಿ ಜೊತೆಗೆ ಗೌರವ್ ಚೌಧರಿ ಎಂಬ ತಮ್ಮದೇ ಹೆಸರಿನ ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿದ್ದಾರೆ.

ಟೆಕ್ನಿಕಲ್ ಗುರೂಜಿ ಮತ್ತು ಗೌರವ್ ಚೌಧರಿ ಈ ಎರಡು ಹೆಸರಿನ ಯುಟ್ಯೂಬ್‌ನಲ್ಲಿ ಒಟ್ಟಾರೆಯಾಗಿ 27 ಮಿಲಿಯನ್ (2.7 ಕೋಟಿ) ಫಾಲೋವರ್ಸ್ ಹೊಂದಿದ್ದಾರೆ. ಈ ಪೈಕಿ 22.9 ಮಿಲಿಯನ್ ಫಾಲೋವರ್ಸ್ ಇರುವ, ಟೆಕ್ನಿಕಲ್ ಗುರೂಜಿ ಯುಟ್ಯೂಬ್‌ನಲ್ಲಿ ವಿಶ್ವದ ಅತಿದೊಡ್ಡ ಟೆಕ್ ಚಾನೆಲ್‌ಗಳಲ್ಲಿ ಒಂದಾಗಿದೆ.
ಗೌರವ್ ಚೌಧರಿ ಯೂಟ್ಯೂಬ್‌ನಿಂದ ಭಾರಿ ಮೊತ್ತವನ್ನು ಗಳಿಸುವುದರ ಜೊತೆಗೆ ದುಬೈನಲ್ಲಿ ಉದ್ಯಮಿಯೂ ಆಗಿದ್ದಾರೆ. ವರದಿಗಳ ಪ್ರಕಾರ, ಚೌಧರಿದುಬೈ ಪೊಲೀಸ್ ಮತ್ತು ಇತರ ಸಂಸ್ಥೆಗಳಿಗೆ ಭದ್ರತಾ ಸಾಧನಗಳನ್ನು ಪೂರೈಸುತ್ತಾರೆ. ಮಾತ್ರವಲ್ಲದೆ ದುಬೈ ಪೊಲೀಸ್ ಸರ್ಟಿಫೈಡ್ ಸೆಕ್ಯುರಿಟಿ ಸಿಸ್ಟಮ್ಸ್ ಇಂಜಿನಿಯರ್ ಎಂದು ವರದಿಯಾಗಿದೆ. ಇನ್ನು ಗೌರವ್ ಚೌಧರಿ ತಮ್ಮ ಫ್ಯಾಮಿಲಿ ಬಿಸಿನೆಸ್ ಆದ ಗ್ರೋಸರಿ ಬಿಸಿನೆಸ್ ನಡೆಸುತ್ತಿದ್ದಾರೆ ಎಂದು ಕೆಲವು ಮಾಧ್ಯಮ ವರದಿ ಮಾಡಿದೆ.
"ಟೆಕ್ನಿಕಲ್ ಗುರೂಜಿ" ಮುಖ್ಯವಾಗಿ ಟೆಕ್ ವಿಷಯದ ಬಗ್ಗೆ ಹಾಗೂ ಎರಡನೇ ಚಾನೆಲ್ 'ಗೌರವ್ ಚೌಧರಿ' ತಾಂತ್ರಿಕವಲ್ಲದ ವಿಚಾರದ ಬಗ್ಗೆ ಕೇಂದ್ರೀಕೃತವಾಗಿದೆ. ಗೌರವ್ ತಾಂತ್ರಿಕ ಜ್ಞಾನ, ಸೃಜನಶೀಲತೆ ಮತ್ತು ಗುಣಮಟ್ಟದ ವಿಷಯದ ವಿಡಿಯೋ ಮಾಡುವ ಸಾಮರ್ಥ್ಯವು ಅವರ ಖ್ಯಾತಿಯ ಹಿಂದಿನ ದೊಡ್ಡ ಕಾರಣಗಳಾಗಿವೆ
ಇವರು ದುಬೈನಲ್ಲಿ 60 ಕೋಟಿ ಮೌಲ್ಯದ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಅಂದಾಜು ನಿವ್ವಳ ಮೌಲ್ಯ 45 ಮಿಲಿಯನ್ ಡಾಲರ್ ಆಗಿದೆ. ಈ ಮೊತ್ತವು ಪ್ರಸ್ತುತ 369 ಕೋಟಿ ರೂಪಾಯಿಗೆ ಸಮನಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಕ್ಟಿವ್ ಆಗಿರುವ ಗೌರವ್ ಚೌಧರಿ ಇನ್‌ಸ್ಟಾಗ್ರಾಮ್‌ನಲ್ಲೂ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಗೌರವ್ ಚೌಧರಿ ಸಂಗ್ರಹದಲ್ಲಿಒಟ್ಟು 11 ಕಾರುಗಳಿವೆ. ಈ ಪೈಕಿ ನೀಲಿ ಬಣ್ಣದ ರೋಲ್ಸ್ ರಾಯ್ಸ್ ಘೋಸ್ಟ್ ಇದರ ಮಾರುಕಟ್ಟೆ ಮೌಲ್ಯ ರೂ 8 ಕೋಟಿ ಆಗಿದೆ. ಇನ್ನು 4.75 ಕೋಟಿ ರೂಪಾಯಿ ಮೌಲ್ಯದ McLaren GT ಕಾರನ್ನು ಗೌರವ್ ಚೌಧರಿಯ ಸಹೋದರ ಉಡುಗೊರೆಯಾಗಿ ನೀಡಿದ್ದರು.
ಇದಲ್ಲದೆ 2.10 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ವೋಗ್ , 1.90 ಕೋಟಿ ರೂ. ಮೌಲ್ಯದ Porsche Panamera GTS ಕಾರ್ , 1.89 ಕೋಟಿಯ Porsche Panamera, 1.72 ಕೋಟಿಯ ಮರ್ಸಿಡಿಸ್ ಬೆಂಜ್, 1.42 ಕೋಟಿಯ BMW 750Li ಪ್ರೀಮಿಯಂ ಸೆಡಾನ್, 81.70 ಲಕ್ಷ ರೂ.ಗಳ ಮರ್ಸಿಡಿಸ್ ಬೆಂಜ್ 500ML, 68 ಲಕ್ಷ ರೂ.ಗಳ ಆಡಿ ಎ6 ಕಾರು, 15.54 ಲಕ್ಷ ಬೆಲೆಯ ಮಹೀಂದ್ರ ಥಾರ್‌ನ ಟಾಪ್ ಮಾಡೆಲ್ ಹೊಂದಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications