ಗೌತಮ್ ಸಿಂಘಾನಿಯಾ ಭಾರತದ ಖ್ಯಾತ ಉದ್ಯಮಿಗಳಲ್ಲೊಬ್ಬರು. ಇವರು ಸೂಟಿಂಗ್ ಫ್ಯಾಬ್ರಿಕ್‌ನ ವಿಶ್ವದ ಅತಿದೊಡ್ಡ ಉತ್ಪಾದಕ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಗೌತಮ್ ಸಿಂಘಾನಿಯಾ ಅವರು ಮಾರ್ವಾಡಿ ಕೈಗಾರಿಕೋದ್ಯಮ ಕುಟುಂಬದವರಾಗಿದ್ದಾರೆ. ಗೌತಮ್ ಸಿಂಘಾನಿಯಾ ವಿಜಯಪತ್ ಸಿಂಘಾನಿಯಾ ಮತ್ತು ಆಶಾಬಾಯಿ ಸಿಂಘಾನಿಯಾ ದಂಪತಿಯ ಪುತ್ರರಾಗಿ 1965ರ ಸೆಪ್ಟೆಂಬರ್ 9ರಂದು ಜನಿಸಿದರು.
ಸಿಂಘಾನಿಯಾ ಅವರು ಮೊದಲೇ ಹೇಳಿದಂತೆ ಉದ್ಯಮಶೀಲತೆಯ ಸುದೀರ್ಘ ಇತಿಹಾಸವನ್ನು ಹೊಂದಿರುವ ಕುಟುಂಬದಿಂದ ಬಂದಿರುವ ಕಾರಣ ತಾವು ಬೆಳೆದು ದೊಡ್ಡವರಾದ ಬಳಿಕ ಅದೇ ಹಾದಿಯಲ್ಲಿ ಸಾಗಿ ತಮ್ಮ ಕುಟುಂಬದ ಪರಂಪರೆಯನ್ನು ಬೆಳೆಸುವುದನ್ನು ಮುಂದುವರೆಸಿದ್ದಾರೆ. ಸದ್ಯ ನಿವ್ವಳ ಆಸ್ತಿ ಮೌಲ್ಯವೂ 1.4 ಬಿಲಿಯನ್ ಡಾಲರ್ ಆಗಿದೆ.

ಮುಂಬೈನಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬಳಿಕ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾಕ್ಕೆ ತೆರಳಿ ಅಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಪಡೆದರು. ಅವರ ಅಜ್ಜ ಲಾಲಾ ಕೈಲಾಶಪತ್ ಸಿಂಘಾನಿಯಾ 1925 ರಲ್ಲಿ ಪ್ರಾರಂಭಿಸಿದ ಕಂಪನಿಯಾದ ರೇಮಂಡ್ ಗ್ರೂಪ್‌ಗೆ ಕೆಲಸ ಮಾಡಲೆಂದು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಮರಳಿದರು.
ಗೌತಮ್ ಸಿಂಘಾನಿಯಾ ಅವರ ನಾಯಕತ್ವದಲ್ಲಿ, ರೇಮಂಡ್ ಗ್ರೂಪ್ ವರ್ಷಗಳುರುಳಿದಂತೆ ಅದ್ಭುತವಾಗಿ ಬೆಳೆದು ನಿಂತು ಭಾರತದಲ್ಲಿ ಪ್ರಮುಖ ಸಂಘಟಿತ ಸಂಸ್ಥೆಯಾಯಿತು. ರೇಮಂಡ್ ಗ್ರೂಪ್ ಜವಳಿ, ಎಂಜಿನಿಯರಿಂಗ್ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೂ ವಿಸ್ತರಿಸಿಕೊಂಡಿದೆ.
ಜವಳಿ ವಲಯದಲ್ಲಿ, ರೇಮಂಡ್ ವಿಶ್ವದ ಅತ್ಯಂತ ಉತ್ತಮ ಗುಣಮಟ್ಟದ ಉಣ್ಣೆಯ ನೂಲು ಬಳಸಿದ ಸೂಟಿಂಗ್ ಬಟ್ಟೆಗಳನ್ನು ಉತ್ಪಾದಿಸುತ್ತದೆ. ಇಂಜಿನಿಯರಿಂಗ್ ವಿಭಾಗವೂ ತನ್ನದೇ ಆಗಿರುವ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ರಿಯಲ್ ಎಸ್ಟೇಟ್ ಮಾತ್ರ ಭಾರತದಾದ್ಯಂತ ಹಲವಾರು ವಸತಿ ಮತ್ತು ಕಮರ್ಷಿಯಲ್ ಪ್ರಾಪರ್ಟಿ ಅಭಿವೃದ್ಧಿಪಡಿಸಿದೆ.
ಸಿಂಘಾನಿಯಾ ಜೆಕೆ ಹೌಸ್ ನಲ್ಲಿ ವಾಸಿಸುತ್ತಿದ್ದು, ಇದು 6,000 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದು ಮುಖೇಶ್ ಅಂಬಾನಿ ಒಡೆತನದ ಆಂಟಿಲಿಯಾ ನಂತರ ಭಾರತದಲ್ಲಿ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ರೇಮಂಡ್ ಗ್ರೂಪ್‌ನಲ್ಲಿನ ತಮ್ಮ ಹುದ್ದೆಯ ಹೊರತಾಗಿ, ಗೌತಮ್ ಸಿಂಘಾನಿಯಾ ಅವರು ಕಾರು ಮತ್ತು ರೇಸಿಂಗ್‌ನ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ಅವರು ಅತ್ಯಾಸಕ್ತಿಯ ಕಾರು ಉತ್ಸಾಹಿ ಮತ್ತು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಕಾರ್ ರೇಸ್‌ಗಳಲ್ಲಿ ಭಾಗವಹಿಸಿದ್ದಾರೆ.
ಉದ್ಯಮಿಯಾಗಿಯಲ್ಲದೇ ಅವರು ರೇಸಿಂಗ್‌ನಲ್ಲೂ ಕೂಡಾ ಕೆಲವು ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಇತ್ತೀಚಿಗೆ ಗೌತಮ್ ಸಿಂಘಾನಿಯಾ ಕಾಂಡೋಮ್‌ಗಳನ್ನು ಮಾರಾಟ ಮಾಡುವ ಕಾಮಸೂತ್ರ ಬ್ರಾಂಡ್‌ನಿಂದ ನಿರ್ಗಮಿಸುವುದಾಗಿ ಘೋಷಿಸಿ ಸುದ್ದಿಯಾಗಿದ್ದರು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications