ಭಾರತೀಯ ಟೆಲಿಕಾಂ ಸೆಕ್ಟರ್‌ನಲ್ಲಿ ಉನ್ನತ ಸ್ಥಾನ ಪಡೆದ ನಾಯಕರಲ್ಲಿ ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಗೋಪಾಲ್ ವಿಟ್ಟಲ್ ಕೂಡಾ ಓರ್ವರಾಗಿದ್ದಾರೆ.
ಇವರು ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಕೋಲ್ಕತ್ತಾದ ಹಳೆಯ ವಿದ್ಯಾರ್ಥಿಯಾಗಿದ್ದು, ಬಿಲಿಯನೇರ್ ಉದ್ಯಮಿಯಾಗಿರುವ ಹಾಗೂ ಭಾರ್ತಿ ಎಂಟರ್‌ಪ್ರೈಸಸ್ ಸಂಸ್ಥಾಪಕ ಸುನಿಲ್ ಭಾರತಿ ಮಿತ್ತಲ್ ಸ್ಥಾಪಿಸಿದ ಉದ್ಯಮವನ್ನು ವಿಟ್ಟಲ್ ಮುನ್ನಡೆಸುತ್ತಿದ್ದಾರೆ.

ವಿಟ್ಟಲ್ ಅವರ ಸುದೀರ್ಘ ವೃತ್ತಿಜೀವನದ ನೋಡುವುದಾದರೆ, ಇವರು ಕೇವಲ ಎರಡು ಕಂಪನಿ ಅಂದರೆ , ಏರ್‌ಟೆಲ್ ಮತ್ತು ಎಫ್‌ಎಂಸಿಜಿ ದೈತ್ಯ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಮಾತ್ರ ಸೇವೆ ಸಲ್ಲಿಸಿದ್ದಾರೆ. ಈ ಎರಡು ಕಂಪನಿಗಳ ನಡುವೆಯೇ ಹಲವಾರು ಬಾರಿ ಶಿಫ್ಟ್ ಆಗಿದ್ದಾರೆ.
ವಿಟ್ಟಲ್ ಅವರು ಆಂಧ್ರಪ್ರದೇಶದ ರಿಷಿ ವ್ಯಾಲಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದರು. ಇದಾದ ಬಳಿಕ 1990ರಲ್ಲಿ ಐಐಎಂ ನಲ್ಲಿ ಎಂಬಿಎ ಪದವಿ ಪಡೆದು ಬಳಿಕ ಎಚ್‌ಯುಎಲ್ ಗೆ ಸೇರ್ಪಡೆಗೊಂಡರು.
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ನ ಉತ್ಪನ್ನಗಳನ್ನು ಟ್ರೈ ಮಾಡಲು ಜನರನ್ನು ಪ್ರೇರೇಪಿಸುವ ಮೂಲಕ ಗ್ರಾಮೀಣ ಭಾರತಕ್ಕೂ ತಲುಪುವ ತಂತ್ರ "ಪ್ರಾಜೆಕ್ಟ್ ಭಾರತ್" ರೂಪಿಸಿದ್ದು ಇವರ ದೊಡ್ಡ ಹೈಲೈಟ್ ಆಗಿತ್ತು.
ಸುನಿಲ್ ಭಾರ್ತಿ ಮಿತ್ತಲ್ ಅವರು ವಿಟ್ಟಲ್ ಅವರನ್ನು ಮಾರ್ಕೆಟಿಂಗ್ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ಏರ್‌ಟೆಲ್‌ಗೆ ಕರೆತರುವ ಮೊದಲು ಎಚ್‌ಯುಎಲ್ ನ 16 ವರ್ಷಗಳ ಅವಧಿಯಲ್ಲಿ ಅವರು ಫ್ರೆಶರ್‌ನಿಂದ ನಾಯಕತ್ವದ ಹುದ್ದೆಗಳವರೆಗೆ ಹಲವು ಪಾತ್ರಗಳನ್ನು ನಿಭಾಯಿಸಿದ್ದರು.
ವಿಟ್ಟಲ್ ಏರ್‌ಟೆಲ್‌ನ ಮಾಸ್ ಮಾರ್ಕೆಟ್ ಸ್ಟ್ರಾಟೆಜಿಯಲ್ಲಿ ಬದಲಾವಣೆ ಮಾಡಿದ್ದು ಕಂಪನಿಯ ಗ್ರಾಹಕರ ನೆಲೆಯನ್ನು 33 ಮಿಲಿಯನ್‌ನಿಂದ 122 ಮಿಲಿಯನ್‌ಗೆ ನಾಲ್ಕು ಪಟ್ಟು ಹೆಚ್ಚಿಸಿದರು. ಟೈರ್-1 ನಗರಗಳನ್ನು ಹೊರತುಪಡಿಸಿ ಭಾರತದ ಸಣ್ಣ ನಗರಗಳಲ್ಲಿ ಬ್ರ್ಯಾಂಡ್‌ನ ತ್ವರಿತ ವಿಸ್ತರಣೆಯನ್ನು ಮಾಡಿದರು.
ಕೇವಲ 2 ವರ್ಷಗಳಲ್ಲೇ ಅಂದರೆ ಎಚ್‌ಯುಎಲ್ ಸಿಇಒ ನಿತಿನ್ ಪರಂಜ್ಪೆ ಅವರು ವಿಟ್ಟಲ್ ಅವರ ಮನವೊಲಿಸಿದ ನಂತರ ಎಚ್‌ಯುಎಲ್‌ಗೆ ಮರಳಿದರು. ಇಲ್ಲಿ ಅವರೈಗೆ ಹೋಮ್ ಎಂಡ್ ಪರ್ಸನಲ್ ಕೇರ್ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿ FMCG ಗೈಂಟ್ ಬೋರ್ಡ್ ನಲ್ಲಿ ಸ್ಥಾನವನ್ನು ನೀಡಲಾಯಿತು.
ಅವರು ಎಚ್‌ಯುಎಲ್‌ನ ಹೋಮ್ ಎಂಡ್ ಪರ್ಸನಲ್ ಕೇರ್ ವ್ಯವಹಾರವನ್ನೇ ಬದಲಿಸಿ ವಾರ್ಷಿಕ ಬೆಳವಣಿಗೆಯನ್ನು ದ್ವಿಗುಣಗೊಳಿಸಿದರು. ಆದರೆ ನಾಲ್ಕು ವರ್ಷಗಳ ನಂತರ ಮತ್ತೆ ಏರ್ಟೆಲ್ ಗೆ ಸೇರಿಕೊಂಡರು. 2012 ರಲ್ಲಿ ಏರ್‌ಟೆಲ್‌ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ಸ್ ಅಂಡ್ ಇಂಟರ್ನ್ಯಾಷನಲ್ ಬಿಸಿನೆಸ್ ಸ್ಟ್ರಾಟೆಜಿಯ ಡೈರೆಕ್ಟರ್ ಆಗಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು
ಏರ್‌ಟೆಲ್‌ಗೆ ಮರುಸೇರ್ಪಡೆಯಾದ ಒಂದು ವರ್ಷದ ನಂತರ, ಅಂದರೆ 2013 ರಲ್ಲಿ ವಿಟ್ಟಲ್ ಅವರನ್ನು ಬಹು-ಶತಕೋಟಿ ಡಾಲರ್ ಕಂಪನಿಯ ಹೊಸ ಸಿಇಒ ಎಂದು ಘೋಷಿಸಲಾಯಿತು. ಅಂದಿನಿಂದ, ಅವರು ಎರಡು ಬಾರಿ ಐದು ವರ್ಷಗಳ ಅವಧಿಗೆ ಮರುನೇಮಕಗೊಂಡಿದ್ದಾರೆ. ಫೆಬ್ರವರಿ 2023 ರಿಂದ 5 ವರ್ಷಗಳ ಕಾಲ ಎಂಡಿ ಆಗಿ ಮುಂದುವರಿಯಲು ವಿಟ್ಟಲ್ ಅವರಿಗೆ ಏರ್‌ಟೆಲ್ ಮಂಡಳಿಯ ಒಪ್ಪಿಗೆ ನೀಡಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಮಂಡಳಿಯ ಸುಮಾರು 90 ಪ್ರತಿಶತದಷ್ಟು ಜನರು ಅವರ ಪರವಾಗಿ ಮತ ಹಾಕಿದ್ದಾರೆ. 2022-23 ರಲ್ಲಿ ಏರ್‌ಟೆಲ್‌ನಲ್ಲಿ ವಿಟ್ಟಲ್ ಅವರ ಫಿಕ್ಸ್ಡ್ ಪೇ ಪ್ಯಾಕೇಜ್ ವಾರ್ಷಿಕವಾಗಿ 9.6 ಕೋಟಿ ರೂಪಾಯಿ ಆಗಿದೆ. ಇದು ಅವರ 2021-22ರ ನಿಗದಿತ ವೇತನ ರೂ 9.1 ಕೋಟಿಯಿಂದ ರೂ. 50 ಲಕ್ಷ ಹೆಚ್ಚು ಏರಿಕೆಯಾಗಿದೆ. ಮಾತ್ರವಲ್ಲದೇ ಅವರ ಕಂಪೆನ್ಸಷನ್ 6.2 ಕೋಟಿ ರೂಪಾಯಿಗಳ ವೇರಿಯಬಲ್ ಪೇ ಒಳಗೊಂಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications