ಇತ್ತೀಚಿನ ದಿನಗಳಲ್ಲಿಉದ್ಯೋಗವೊಂದನ್ನೇ ನಂಬದೇ, ಇತರ ಆದಾಯ ಮೂಲಗಳಿಗಾಗಿ ಬೇರೆ ಬೇರೆ ಉದ್ಯಮ, ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಯುವಕರನ್ನು ನೋಡಬಹುದಾಗಿದೆ. ಇಂದು ಉತ್ತಮ ಉದ್ಯೋಗವೊಂದೇ ಜೀವನೋಪಾಯಕ್ಕೆ ದಾರಿಯಾಗಿ ಉಳಿದಿಲ್ಲ. ಅಲ್ಪಾವಧಿಯಲ್ಲಿ, ಉದ್ಯಮ ಪ್ರಾರಂಭಿಸಿ ಅದು ಆದಾಯದ ವಿಶ್ವಾಸಾರ್ಹ ಮೂಲವಾಗುವುದನ್ನು ನೋಡಿದ್ದೇವೆ.
ಇದಕ್ಕೆ ತಾಜಾ ಉದಾಹರಣೆಯಾಗಿ ನಿಲ್ಲುತ್ತಾರೆ ಗುರ್ಲೀನ್ ಚಾವ್ಲಾ. ಉತ್ತರ ಪ್ರದೇಶದ ಝಾನ್ಸಿ ನಿವಾಸಿಯಾಗಿರುವ ಚಾವ್ಲಾ ಅವರು ಬಂಜರು ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆಯುವ ಮೂಲಕ ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ. ಹಾಗೆಂದು ಚಾವ್ಲಾ ಅವರು ಮೂಲತಃ ಕೃಷಿಕರಲ್ಲ. ಕಾನೂನು ಪದವೀಧರೆಯಾಗಿರುವ ಇವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪುಣೆಯ ಇಂಡಿಯನ್ ಲಾ ಸೊಸೈಟಿಯಿಂದ ಕಾನೂನು ಪದವಿ ಪಡೆದಿರುವ ಚಾವ್ಲಾ, ತಮ್ಮ ಅಧ್ಯಯನ ಪೂರ್ಣಗೊಳಿಸುತ್ತಿರುವಂತೆಯೇ, ಹೊಸದೇನಾದರೂ ಮಾಡಬೇಕು ಎನ್ನುವ ಕನಸು ಕಂಡರು. ಇದೇ ವೇಳೆ ಸ್ಟ್ರಾಬೆರಿ ಬೆಳೆಯುವ ಯೋಚನೆ ಚಾವ್ಲಾ ಅವರಿಗೆ ಬಂತು. ಹೀಗಾಗಿ ಝಾನ್ಸಿಯಲ್ಲಿದ್ದ ಭೂಮಿಯಲ್ಲಿ ಸ್ಟ್ರಾಬೆರಿ ಬೆಳೆಯಲು ಮುಂದಾದರು.
ಸ್ಟ್ರಾಬೆರಿ ಬೆಳೆಯುವ ಯೋಚನೆ ಬಂದಿದ್ದು ಹೇಗೆ?
ಕೊವೀಡ್ ಸಾಂಕ್ರಮಿದ ಸಮಯದಲ್ಲಿ ಲಾಕ್ ಡೌನ್ ಕಾರಣದಿಂದ ಗುರ್ಲೀನ್ ಝಾನ್ಸಿಯಲ್ಲಿರುವ ಮನೆಗೆ ಹಿಂತಿರುಗಬೇಕಾಯಿತು. ಪ್ರಾರಂಭದಲ್ಲಿ ಅವರು ಮನೆಯಲ್ಲೇ ಸ್ಟ್ರಾಬೆರಿ ಬೆಳೆಯಲು ಪ್ರಾರಂಭಿಸಿದರು. ಇದರಿಂದ ಉತ್ತಮ ಫಸಲು ಬರಲು ಪ್ರಾರಂಭವಾಯಿತು. ಇದರಿಂದ ಮತ್ತಷ್ಟು ಉತ್ತೇಜನಗೊಂಡ ಗುರ್ಲೀನ್ ತಮ್ಮ ತಂದೆಯ ಫಾರ್ಮ್ ಹೌಸ್ ನಲ್ಲಿ ಸ್ಟ್ರಾಬೆರಿ ಬೆಳೆಯುವ ನಿರ್ಧಾರ ಕೈಗೊಂಡರು. ಸುಮಾರು 1.5 ಎಕರೆ ಇದ್ದ ಭೂಮಿಯಲ್ಲಿ ಗುರ್ಲೀನ್ ಸ್ಟ್ರಾಬೆರಿ ಕೃಷಿ ಆರಂಭಿಸಿದರು.
ಗುರ್ಲೀನ್ ಅವರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸ್ಟ್ರಾಬೆರಿ ಕೃಷಿಯನ್ನು ಮಾಹಿತಿ ಪಡೆದರು. ಜೊತೆಗೆ ಈ ಕೃಷಿಗಾಗಿ ಸಾಕಷ್ಟು ಶ್ರಮಿಸಿದರು. ಈ ಕಾರ್ಯದಲ್ಲಿ ಗುರ್ಲೀನ್ ಅವರಿಗೆ ಅವರ ತಂದೆ ಕೂಡ ಸಾಕಷ್ಟು ಬೆಂಬಲ ನೀಡಿದರು. ಇನ್ನು ಗುರ್ಲೀನ್ 'ಝಾನ್ಸಿ ಆರ್ಗನಿಕ್ಸ್' ಎಂಬ ವೆಬ್ ಸೈಟ್ ಕೂಡ ರೂಪಿಸಿದರು. ಜನರು ವೆಬ್ ಸೈಟ್ ನಿಂದ ನೇರವಾಗಿ ಸ್ಟ್ರಾಬೆರಿ ಖರೀದಿಸಬಹುದು.
ವರದಿಗಳ ಪ್ರಕಾರ, ಗುರ್ಲೀನ್ ಪ್ರತಿದಿನ ಸುಮಾರು 70 ಕೆಜಿ ಸ್ಟ್ರಾಬೆರಿಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 30,000 ರೂಪಾಯಿ ಆದಾಯ ಗಳಿಸುತ್ತಾರೆ. ಅವರ ಈ ಪರಿಶ್ರಮವನ್ನು ಪ್ರಧಾನಿ ನರೇಂದ್ರ ಮೋದಿ ರೇಡಿಯೋ ಕಾರ್ಯಕ್ರಮ್ 'ಮಾನ್ ಕಿ ಬಾತ್' ನಲ್ಲಿ ಶ್ಲಾಘಿಸಿದ್ದಾರೆ.


Click it and Unblock the Notifications